SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

Date:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ ದತ್ತಾಂಶವನ್ನು ವಿಶ್ಲೇಷಿಸಿದಾಗ, ಮತದಾರರ ಪಟ್ಟಿಯಿಂದ ಹೆಸರು ಪರಿಶೀಲಿಸುವ ನೆಪದಲ್ಲಿ ಜಾರಿಯಾಗಿರುವ ನೋಟಿಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಗುರಿಯಾಗಿರುವುದು ಕಂಡುಬಂದಿದೆ. ಇದು ಕೇವಲ ಒಟ್ಟು ಸಂಖ್ಯೆಯ ವ್ಯತ್ಯಾಸವಲ್ಲದೆ, ಒಟ್ಟು ಮಹಿಳಾ ಮತದಾರರ ಶೇಕಡಾವಾರು ದರದಲ್ಲೂ ಎದ್ದುಕಾಣುವ ತಾರತಮ್ಯವನ್ನು ಎತ್ತಿಹಿಡಿದಿದೆ.

- Advertisement -

ರಾಜ್ಯಮಟ್ಟದ ಒಟ್ಟಾರೆ ನೋಟಿಸ್ ವಿವರಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ;...

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ...

ರಾಜ್ಯಮಟ್ಟದ ಒಟ್ಟು ಅಂಕಿಅಂಶಗಳನ್ನು ಗಮನಿಸಿದಾಗ, ಎಸ್‌ಐಆರ್ ನೋಟಿಸ್ ಪಡೆದವರಲ್ಲಿ ಪುರುಷರಿಗಿಂತ ಮಹಿಳೆಯರ ಪಾಲು ಸ್ಪಷ್ಟವಾಗಿ ಹೆಚ್ಚಾಗಿದೆ. ನೋಟಿಸ್‌ ಪಡೆದ ಮಹಿಳೆಯರ ಸಂಖ್ಯೆ ಪುರುಷರಿಗಿಂತ 1,82,791ರಷ್ಟು ಅಧಿಕವಾಗಿದೆ. ರಾಜ್ಯದ 34 ಆಡಳಿತಾತ್ಮಕ ಘಟಕಗಳ ಪೈಕಿ 29 ಘಟಕಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ನೋಟಿಸ್ ಹೋಗಿದ್ದರೆ, ಕೇವಲ 4 ಘಟಕಗಳಲ್ಲಿ ಪುರುಷರ ದರ ಹೆಚ್ಚಾಗಿದೆ ಹಾಗೂ 1 ಘಟಕದಲ್ಲಿ ಉಭಯ ಲಿಂಗಿಗಳ ದರ ಸಮಾನವಾಗಿದೆ.

ವರ್ಗನೋಟಿಸ್‌ ಪಡೆದವರ ಒಟ್ಟು ಸಂಖ್ಯೆಒಟ್ಟು ನೋಟಿಸ್‌ಗಳಲ್ಲಿ ಪಾಲು (%)ನೋಟಿಸ್ ದರ (ಒಟ್ಟು ಮತದಾರರಲ್ಲಿ %)
ಮಹಿಳೆಯರು22,68,36452.09%10.24%
ಪುರುಷರು20,85,57347.89%9.54%
ವ್ಯತ್ಯಾಸ (ಹೆಚ್ಚುವರಿ)1,82,791+4.20%+0.70%

ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ವಲಯದ ಸ್ಥಿತಿ

ರಾಜ್ಯದ ಅತ್ಯಂತ ಹೆಚ್ಚು ನಗರೀಕರಣಗೊಂಡ ಮತ್ತು ಹೆಚ್ಚು ಮತದಾರರು ಇರುವ ರಾಜಧಾನಿ ಬೆಂಗಳೂರಿನಲ್ಲಿಯೂ ಇದೇ ರೀತಿಯ ಲಿಂಗ ಆಧಾರಿತ ತಾರತಮ್ಯ ಎದ್ದು ಕಾಣುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿವಿಧ ವಲಯಗಳು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ನೋಟಿಸ್‌ಗಳಿಗೆ ಗುರಿಯಾಗಿದ್ದಾರೆ.

ಆಡಳಿತಾತ್ಮಕ ವಲಯಮಹಿಳಾ ನೋಟಿಸ್ ದರ (%)ಪುರುಷರ ನೋಟಿಸ್ ದರ (%)ವ್ಯತ್ಯಾಸ (%)
ಬಿಬಿಎಂಪಿ ಸೆಂಟ್ರಲ್45.15%43.31%+1.84%
ಬಿಬಿಎಂಪಿ ನಾರ್ತ್51.69%51.34%+0.35%
ಬಿಬಿಎಂಪಿ ಸೌತ್41.23%39.74%+1.49%
ಬೆಂಗಳೂರು ನಗರ44.56%44.35%+0.21%
ಬೆಂಗಳೂರು ಗ್ರಾಮಾಂತರ7.52%6.61%+0.91%

ಜಿಲ್ಲಾವಾರು ಪ್ರಮುಖ ವ್ಯತ್ಯಾಸಗಳು

ರಾಜ್ಯದ ವಿವಿಧ ಜಿಲ್ಲೆಗಳನ್ನು ವಿಶ್ಲೇಷಿಸಿದಾಗ ಬೀದರ್, ರಾಮನಗರ, ಕಲಬುರಗಿ, ಕೋಲಾರ ಮತ್ತು ಹಾಸನದಂತಹ ಜಿಲ್ಲೆಗಳಲ್ಲಿ ಮಹಿಳೆಯರ ನೋಟಿಸ್ ದರ ಪುರುಷರಿಗಿಂತ ಗಮನಾರ್ಹವಾಗಿ ಹೆಚ್ಚಿರುವುದು ದಾಖಲಾಗಿದೆ.

ಜಿಲ್ಲೆಮಹಿಳಾ ನೋಟಿಸ್ ದರ (%)ಪುರುಷರ ನೋಟಿಸ್ ದರ (%)
ರಾಮನಗರ2.80%2.08%
ಬೀದರ್3.02%2.35%
ಕಲಬುರಗಿ6.24%5.24%
ಶಿವಮೊಗ್ಗ3.87%3.27%
ಹಾಸನ5.54%4.76%
ಕೋಲಾರ13.49%11.90%
ಚಿಕ್ಕಬಳ್ಳಾಪುರ6.24%5.55%
ಕೊಡಗು14.97%14.09%
ದಕ್ಷಿಣ ಕನ್ನಡ9.53%8.92%
ಬಾಗಲಕೋಟೆ3.25%3.45%
ಚಿಕ್ಕಮಗಳೂರು10.41%10.77%
ಮಂಡ್ಯ10.62%10.62%

ನೋಟಿಸ್ ನೀಡಲು ತೋರಿಸಲಾಗಿರುವ ತಾಂತ್ರಿಕ ಕಾರಣಗಳು

ಚುನಾವಣಾ ಆಯೋಗವು ನೀಡಿರುವ ಒಂಬತ್ತು ಪ್ರಮುಖ ನೋಟಿಸ್ ವಿಭಾಗಗಳ ಪೈಕಿ ಏಳು ವಿಭಾಗಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ನೋಟಿಸ್ ಪಡೆದಿದ್ದಾರೆ. ಹಿಂದಿನ ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದಿರುವುದು, ಸ್ವಂತ ಹೆಸರಿನಲ್ಲಿನ ಸ್ಪೆಲ್ಲಿಂಗ್ ಮಿಸ್ಟೇಕ್ ಹಾಗೂ ಪೋಷಕರು ಮತ್ತು ಮತದಾರರ ನಡುವಿನ ವಯಸ್ಸಿನ ವ್ಯತ್ಯಾಸ 15 ವರ್ಷಕ್ಕಿಂತ ಕಡಿಮೆ ಇರುವುದು—ಈ ಎಲ್ಲ ಕಾರಣಗಳಲ್ಲೂ ಮಹಿಳೆಯರಿಗೆ ಜಾರಿಯಾದ ನೋಟಿಸ್‌ಗಳ ಸಂಖ್ಯೆಯೇ ಹೆಚ್ಚಿದೆ. ಆದರೆ, ಪೋಷಕರ ಹೆಸರಿನ ಸೆಲ್ಲಿಂಗ್ ಮಿಸ್ಟೇಕ್‌ ಎಂಬ ವಿಭಾಗದಲ್ಲಿ ಮಾತ್ರ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚಾಗಿದೆ.

ನೋಟಿಸ್ ನೀಡಲು ಮೂಲ ಕಾರಣಮಹಿಳೆಯರು ಪಡೆದ ನೋಟಿಸ್ಪುರುಷರು ಪಡೆದ ನೋಟಿಸ್
ಪೂರ್ವಾಪರ ಮ್ಯಾಪಿಂಗ್ ಆಗದಿರುವುದು12,58,39610,77,892
ಸ್ವಂತ ಹೆಸರಿನಲ್ಲಿನ ಸಣ್ಣ ತಪ್ಪುಗಳು2,99,5672,32,860
ಪೋಷಕರ ವಯಸ್ಸಿನ ಅಂತರ (<15 ವರ್ಷ)2,50,5112,25,630
ಪೋಷಕರ ಹೆಸರಿನ ಸಣ್ಣ ತಪ್ಪುಗಳು1,19,3913,42,476

ಮಹಿಳೆಯರ ವಯೋಮಾನ ಹಾಗೂ ವೈವಾಹಿಕ ಸ್ಥಿತ್ಯಾಧಾರಿತ ವಿಶ್ಲೇಷಣೆ

ಮಹಿಳಾ ಮತದಾರರ ಒಳಗೆಯೇ ದತ್ತಾಂಶವನ್ನು ಪ್ರತ್ಯೇಕಿಸಿ ವಿಶ್ಲೇಷಿಸಿದಾಗ, ವೈವಾಹಿಕ ಸ್ಥಿತಿ ಮತ್ತು ವಯೋಮಾನದ ಆಧಾರದಲ್ಲೂ ನೋಟಿಸ್ ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಬಹಿರಂಗವಾಗಿದೆ. ವಿವಾಹಿತ ಮಹಿಳೆಯರಿಗಿಂತ ಅವಿವಾಹಿತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ನೋಟಿಸ್ ಪಡೆದಿದ್ದಾರೆ. ವಯಸ್ಸಿನ ಆಧಾರದಲ್ಲಿ ಪರಿಶೀಲಿಸಿದಾಗ, 36 ರಿಂದ 45 ವರ್ಷ ವಯೋಮಾನದ ಮಹಿಳೆಯರಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಅಂದರೆ 12.57%ರಷ್ಟು ನೋಟಿಸ್ ದರ ದಾಖಲಾಗಿದೆ.

ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ವರ್ಗೀಕರಣವಿಭಾಗ / ವಯೋಮಾನನೋಟಿಸ್ ದರ (%)
ವೈವಾಹಿಕ ಸ್ಥಿತಿಅವಿವಾಹಿತ ಮಹಿಳೆಯರು13.06%
ವಿವಾಹಿತ ಮಹಿಳೆಯರು9.54%
ವಯೋಮಾನ18 ರಿಂದ 25 ವರ್ಷ8.66%
26 ರಿಂದ 35 ವರ್ಷ9.46%
36 ರಿಂದ 45 ವರ್ಷ12.57%
46 ರಿಂದ 55 ವರ್ಷ10.88%
56 ರಿಂದ 65 ವರ್ಷ9.12%
66 ರಿಂದ 79 ವರ್ಷ9.21%
80 ವರ್ಷ ಮೇಲ್ಪಟ್ಟವರು7.70%

ರಾಷ್ಟ್ರೀಯ ಸನ್ನಿವೇಶವೂ ಕರ್ನಾಟಕಕ್ಕೆ ಹೊರತಾಗಿಲ್ಲ

ಕರ್ನಾಟಕದಲ್ಲಿನ ಇದೇ ಪರಿಸ್ಥಿತಿ ರಾಷ್ಟ್ರೀಯವಾಗಿಯೂ ಕಂಡುಬಂದಿದೆ. ದೇಶಾದ್ಯಂತ ಎಸ್‌ಐಆರ್ ನಡೆದ ಮತ್ತು ನಡೆಯುತ್ತಿರುವ ಇತರ ರಾಜ್ಯಗಳಲ್ಲೂ ಇದೇ ರೀತಿಯ ಪರಿಣಾಮಗಳು ದಾಖಲಾಗಿವೆ. ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಎಸ್‌ಐಆರ್ ನಂತರ ಮತದಾರರ ಪಟ್ಟಿಯಿಂದ ಮಹಿಳೆಯರ ಹೆಸರುಗಳು ಭಾರೀ ಪ್ರಮಾಣದಲ್ಲಿ ಅಳಿಸಲ್ಪಟ್ಟಿವೆ.

ರಾಜ್ಯಎಸ್‌ಐಆರ್ ಪ್ರಕ್ರಿಯೆಯ ಲಿಂಗಾನುಪಾತದ ಪರಿಣಾಮ
ಬಿಹಾರ22.74 ಲಕ್ಷ ಮಹಿಳೆಯರು ಪಟ್ಟಿಯಿಂದ ಅಳಿಸಲ್ಪಟ್ಟಿದ್ದಾರೆ. ಮತದಾರರ ಲಿಂಗಾನುಪಾತ 914ರಿಂದ 892 ಕ್ಕೆ ಕುಸಿದಿದೆ.
ಉತ್ತರ ಪ್ರದೇಶಕರಡು ಪಟ್ಟಿಯಿಂದ ಹೊರಬಿದ್ದ 2.89 ಕೋಟಿ ಹೆಸರುಗಳಲ್ಲಿ 1.55 ಕೋಟಿ ಮಹಿಳೆಯರು (ಲಿಂಗಾನುಪಾತ 824ಕ್ಕೆ ಇಳಿಕೆ).
ತಮಿಳುನಾಡುಪುರುಷರಿಗಿಂತ 2.6 ಲಕ್ಷ ಹೆಚ್ಚು ಮಹಿಳೆಯರ ಹೆಸರುಗಳು ಕರಡು ಪಟ್ಟಿಯಿಂದ ಕಡಿತ.
ಪಶ್ಚಿಮ ಬಂಗಾಳಡಿಲೀಟ್ ಮಾಡಲಾದ ಅಥವಾ ವಿಚಾರಣೆಯಲ್ಲಿರುವ ಒಟ್ಟು ಮತದಾರರಲ್ಲಿ ಮಹಿಳೆಯರ ಪಾಲು 61.8% ಇದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ವಿವಾಹದ ನಂತರ ಮನೆ, ವಿಳಾಸ, ಉಪನಾಮ ಹಾಗೂ ಕುಟುಂಬದ ಹೆಸರುಗಳ ಬದಲಾವಣೆಗೆ ಒಳಗಾಗುವುದು ಸಹಜ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಳೆಯ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದೆ ಅಥವಾ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂಬ ತಾಂತ್ರಿಕ ಕಾರಣ ನೀಡಿ ಅವರ ಹೆಸರುಗಳನ್ನು ಸುಲಭವಾಗಿ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪದ್ಮಭೂಷಣ ಸಣ್ಣ ವಿಷಯ, ಅವರನ್ನೇ ಪಿಎಂ ಮಾಡಿ: ಗ್ಯಾನೇಶ್‌ರನ್ನು ಹೊಗಳಿಸಿ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ...

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಹಾವಳಿ; 19 ಮಂದಿ ಬಲಿ, 3 ಸಾವಿರ ಬಾಟಲಿ ವಶ

ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ...

‘ಮತದಾನದ ಹಕ್ಕು ಕಸಿಯಲು ಯಾರಿಗೂ ಅಧಿಕಾರವಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

"ಈ ದೇಶದಲ್ಲಿ ಹುಟ್ಟಿರುವ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿಯಲು ಯಾರಿಗೂ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...