ಯುದ್ಧದ ಕರಾಳ ನೆರಳು: ರಷ್ಯಾ ಕನಸು ನಚ್ಚುನೂರಾಗಿ ಉಕ್ರೇನ್‌ನಲ್ಲಿ ಬಂಧಿಯಾದ ಭಾರತೀಯ ಯುವಕ!

Date:

ಉತ್ತಮ ಜೀವನ ರೂಪಿಸಿಕೊಳ್ಳಬೇಕು, ದೇಶ ವಿದೇಶ ಸುತ್ತಿ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸಬೇಕು ಎಂಬ ಕನಸು ಹೊತ್ತು ವಿದೇಶಕ್ಕೆ ಹಾರುವ ಸಾವಿರಾರು ಭಾರತೀಯ ಯುವಕರಿದ್ದಾರೆ. ಆದರೆ, ಆ ಕನಸೇ ಅವರ ಬದುಕಿನ ದೊಡ್ಡ ದುರಂತವಾಗಿ ಬದಲಾದರೆ? ಇಂತಹದ್ದೇ ಒಂದು ಮನಕಲಕುವ ಕಥೆ ಗುಜರಾತ್‌ನ 23 ವರ್ಷದ ಯುವಕ ಸಾಹಿಲ್ ಮಜೋತಿ ಅವರದ್ದು. 2024ರಲ್ಲಿ ಉದ್ಯೋಗ ಮತ್ತು ಜಾಗತಿಕ ಅನುಭವದ ಕನಸು ಹೊತ್ತು ರಷ್ಯಾಗೆ ಕಾಲಿಟ್ಟ ಈ ಯುವಕ, ಕೆಲವೇ ದಿನಗಳಲ್ಲಿ ಸೇನಾ ಪಡೆಗಳ ಜಾಲಕ್ಕೆ ಸಿಲುಕಿ, ಇಷ್ಟವಿಲ್ಲದಿದ್ದರೂ ಸಮರಭೂಮಿಗೆ ನೂಕಲ್ಪಟ್ಟವರು. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

- Advertisement -

ಯುದ್ಧ ಭೂಮಿಯ ಕ್ರೌರ್ಯ, ಸಾವು-ನೋವುಗಳನ್ನು ಕಣ್ಣಾರೆ ಕಂಡ ಸಾಹಿಲ್, ಪ್ರಾಣ ಉಳಿಸಿಕೊಳ್ಳಲು ಬೇರೆ ದಾರಿಯಿಲ್ಲದೆ ಗಡಿ ದಾಟಿ ಉಕ್ರೇನ್ ಸೇನೆಗೆ ಶರಣಾದರು. ಪ್ರಸ್ತುತ ಅವರು ಉಕ್ರೇನ್‌ನಲ್ಲಿ ‘ಯುದ್ಧ ಕೈದಿ’ ಆಗಿ ದಿನ ದೂಡುತ್ತಿದ್ದಾರೆ. ಇತ್ತ ಭಾರತದಲ್ಲಿ ಅವರ ತಾಯಿ, ತನ್ನ ಮಗನನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಸರ್ಕಾರಗಳ ಬಾಗಿಲು ತಟ್ಟುತ್ತಾ, ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾಹಿಲ್ ಅವರ ಈ ಕಥೆ ಒಬ್ಬ ಯುವಕನ ದುರಂತ ಮಾತ್ರವಲ್ಲ, ಉದ್ಯೋಗ ವಂಚನೆ ಹಾಗೂ ಯುದ್ಧದ ಕರಾಳತೆಗೆ ಸಿಲುಕುತ್ತಿರುವ ನೂರಾರು ಭಾರತೀಯರ ಹತಾಶೆಗೆ ಕನ್ನಡಿ ಹಿಡಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಇದನ್ನೂ ಓದಿ: ಉಕ್ರೇನ್‌-ರಷ್ಯಾ ಸಂಘರ್ಷ | ಮಾತುಕತೆ ವಿಫಲ: ರಷ್ಯಾ ಡ್ರೋನ್ ದಾಳಿಗೆ ಉಕ್ರೇನ್‌ನ 9 ಮಂದಿ ಬಲಿ

ರಷ್ಯಾ ಕನಸಿನಿಂದ ಸಮರಭೂಮಿಯ ಕರಾಳತೆಗೆ

ಸಾಹಿಲ್ ಮಜೋತಿ ರಷ್ಯಾಗೆ ತಲುಪಿದಾಗ ಅವರಿಗೆ ಕಾಯುತ್ತಿದ್ದದ್ದು ಯಾವುದೇ ಕಾರ್ಪೊರೇಟ್ ಉದ್ಯೋಗ ಅಥವಾ ಸುರಕ್ಷಿತ ಕೆಲಸವಲ್ಲ, ಬದಲಿಗೆ ರಷ್ಯಾ ಸೇನೆಯ ಹೆಲ್ಪರ್ ಅಥವಾ ರಕ್ಷಣಾ ಸಿಬ್ಬಂದಿ ಹುದ್ದೆ. ಏಜೆಂಟರ ಭರವಸೆಗಳನ್ನು ನಂಬಿ ಹೋದ ಸಾಹಿಲ್ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂದು ತಿಳಿಯುವಷ್ಟರಲ್ಲಿ ಅವರ ಕೈಗೆ ಬಂದೂಕು ನೀಡಲಾಗಿತ್ತು. ಉಕ್ರೇನ್ ವಿರುದ್ಧದ ಯುದ್ಧ ರಂಗದ ಮುಂಚೂಣಿಗೆ ಅವರನ್ನು ಬಲವಂತವಾಗಿ ನೂಕಲಾಗಿತ್ತು.

ಸುತ್ತಲೂ ಆರ್ಭಟಿಸುವ ಬಾಂಬ್‌ಗಳು, ಕ್ಷಿಪಣಿಗಳು ಮತ್ತು ಸಾಲು ಸಾಲು ಹೆಣಗಳನ್ನು ಕಂಡ ಯುವಕನಿಗೆ ಬದುಕುವ ಆಸೆ ಕ್ಷೀಣಿಸತೊಡಗಿತು. ಅಲ್ಲಿಂದ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂದು ಅರಿತ ಸಾಹಿಲ್, ಅಪಾಯಕಾರಿ ರಷ್ಯಾ-ಉಕ್ರೇನ್ ಗಡಿಯನ್ನು ದಾಟಿ ಉಕ್ರೇನ್ ಪಡೆಗಳಿಗೆ ಶರಣಾದರು. ರಷ್ಯಾದ ಸೇನೆಯಲ್ಲಿದ್ದು ಯುದ್ಧದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಉಕ್ರೇನ್ ಅವರನ್ನು ಯುದ್ಧ ಕೈದಿಯಾಗಿ ಬಂಧಿಸಿತು.

ಯುದ್ಧ ಭೂಮಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರು

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತೀಯರು ಸಿಲುಕಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಏಜೆಂಟರ ಜಾಲ, ನಕಲಿ ಉದ್ಯೋಗ ಭರವಸೆಗಳು ಮತ್ತು ಆರ್ಥಿಕ ಸಂಕಷ್ಟವೇ ಯುವಕರನ್ನು ಈ ಸುಳಿಗೆ ತಳ್ಳುತ್ತಿದೆ. ರಷ್ಯಾ ಸೇನೆಯಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಭಾರತೀಯರು ಸಹಾಯಕ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ ಕನಿಷ್ಠ 8 ರಿಂದ 10 ಭಾರತೀಯರು ಯುದ್ಧ ಭೂಮಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ವಿಪಕ್ಷಗಳ ಆಕ್ರೋಶದ ಬಳಿಕ ಭಾರತ ಸರ್ಕಾರದ ರಾಜತಾಂತ್ರಿಕ ಒತ್ತಡ ಹೆಚ್ಚಿಸಿದ್ದು, ಸುಮಾರು 85ಕ್ಕೂ ಹೆಚ್ಚು ಭಾರತೀಯರನ್ನು ರಷ್ಯಾ ಸೇನೆಯಿಂದ ಬಿಡುಗಡೆಗೊಳಿಸಲಾಗಿದೆ. ಉಕ್ರೇನ್‌ನಲ್ಲಿ ಬಂಧಿಯಾಗಿರುವ ಭಾರತೀಯ ಯುವಕನ ಪ್ರಥಮ ಪ್ರಕರಣಗಳಲ್ಲಿ ಇದು ಒಂದಾಗಿದ್ದು, ಅವರನ್ನು ವಾಪಸ್ ಕರೆತರಲು ಉಕ್ರೇನ್ ಹಾಗೂ ರಷ್ಯಾ ಎರಡೂ ದೇಶಗಳ ಜತೆ ಮಾತುಕತೆ ನಡೆಸಬೇಕಾಗಿದೆ.

ತನ್ನ 23 ವರ್ಷದ ಮಗ ಅಪರಿಚಿತ ದೇಶದ ಜೈಲಿನಲ್ಲಿ ಯುದ್ಧ ಕೈದಿಯಾಗಿ ದಿನ ದೂಡುತ್ತಿದ್ದಾನೆ ಎಂಬ ಸುದ್ದಿ ಕೇಳಿದ ತಾಯಿಯ ಗೋಳು ವಿವರಿಸಲಾಗದ್ದು. “ನನ್ನ ಮಗ ಯುದ್ಧ ಮಾಡಲು ಅಲ್ಲ ಹೋದದ್ದು, ಕೆಲಸಕ್ಕೆ ಹೋದದ್ದು. ಅವನನ್ನು ಬಲವಂತವಾಗಿ ರಕ್ಷಣಾ ಪಡೆಗೆ ಸೇರಿಸಿಕೊಳ್ಳಲಾಗಿದೆ. ದಯವಿಟ್ಟು ಅವನನ್ನು ಭಾರತಕ್ಕೆ ವಾಪಸ್ ಕರೆತನ್ನಿ” ಎಂದು ಸಾಹಿಲ್ ತಾಯಿ ವಿದೇಶಾಂಗ ಸಚಿವಾಲಯ ಹಾಗೂ ಪ್ರಧಾನಿಯವರಿಗೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ರಷ್ಯಾ ದಾಳಿ; 37 ನಾಗರಿಕರ ಸಾವು

ಈ ಘಟನೆಯು ಕೇವಲ ಒಬ್ಬ ಯುವಕನ ಕಥೆಯಾಗಿರದೆ, ಮಾನವ ಕಳ್ಳಸಾಗಣೆ ಮತ್ತು ನಕಲಿ ಉದ್ಯೋಗ ಏಜೆಂಟರ ಜಾಲ ಎಷ್ಟು ಅಪಾಯಕಾರಿ ಎಂಬುದನ್ನು ಎತ್ತಿಹಿಡಿದಿದೆ. ಅಮಾಯಕ ಯುವಕರಿಗೆ ಹೆಚ್ಚಿನ ಸಂಬಳದ ಆಮಿಷ ಒಡ್ಡಿ, ರಷ್ಯಾದಂತಹ ದೇಶಗಳಿಗೆ ಕರೆದೊಯ್ದು ಅವರ ಪಾಸ್‌ಪೋರ್ಟ್ ಜಪ್ತಿ ಮಾಡಿ, ಬಲವಂತವಾಗಿ ಸೇನೆಗೆ ಸೇರಿಸಲಾಗುತ್ತಿದೆ.

ಸರ್ಕಾರದ ಮಟ್ಟದಲ್ಲಿ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಾಹಿಲ್ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಿ ಕರೆತರುವುದು ಈಗಿನ ತಕ್ಷಣದ ಅಗತ್ಯ. ಭಾರತೀಯ ವಿದೇಶಾಂಗ ಸಚಿವಾಲಯವು ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳೊಂದಿಗೆ ಸಮನ್ವಯ ಸಾಧಿಸಿ, ಸಾಹಿಲ್ ಅವರಂತಹ ಅಮಾಯಕರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಮುಖ್ಯವಾಗಿ ಯುದ್ಧ ಎಂಬುದು ಕೇವಲ ಎರಡು ದೇಶಗಳ ನಡುವಿನ ರಾಜಕೀಯ ಸಂಘರ್ಷವಲ್ಲ; ಅದು ಸಾಹಿಲ್ ಅವರಂತಹ ನೂರಾರು ಯುವಕರ ಕನಸುಗಳನ್ನು, ಅವರ ಕುಟುಂಬಗಳ ನೆಮ್ಮದಿಯನ್ನು ಸುಟ್ಟು ಬೂದಿ ಮಾಡುವಂತದ್ದು. ಇಂತಹ ಅಕ್ರಮ ಉದ್ಯೋಗ ಜಾಲಗಳನ್ನು ಮಟ್ಟಹಾಕುವುದು ಮತ್ತು ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ರಕ್ಷಣೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಪದ್ಮಭೂಷಣ ಸಣ್ಣ ವಿಷಯ, ಅವರನ್ನೇ ಪಿಎಂ ಮಾಡಿ: ಗ್ಯಾನೇಶ್‌ರನ್ನು ಹೊಗಳಿಸಿ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪಶ್ಚಿಮ...

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಹಾವಳಿ; 19 ಮಂದಿ ಬಲಿ, 3 ಸಾವಿರ ಬಾಟಲಿ ವಶ

ಕಳ್ಳಭಟ್ಟಿ ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಾಗಾಲ್ಯಾಂಡ್‌ನಲ್ಲಿ...

‘ಮತದಾನದ ಹಕ್ಕು ಕಸಿಯಲು ಯಾರಿಗೂ ಅಧಿಕಾರವಿಲ್ಲ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

"ಈ ದೇಶದಲ್ಲಿ ಹುಟ್ಟಿರುವ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿಯಲು ಯಾರಿಗೂ...