ಮುಚ್ಚಿಹೋದ ಪ್ರಕರಣಕ್ಕೆ ಮರುಜೀವ; ‘ಆತ್ಮಹತ್ಯೆ’ ನೋಟ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್‌ ಹೆಸರು

Date:

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆಯೇ, ಸುಮಾರು 20 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿತ್ತು ಎನ್ನಲಾದ ಗಂಭೀರ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಕರಾಳ ಅಧ್ಯಾಯವೊಂದು ಮತ್ತೆ ಜೀವಪಡೆದುಕೊಂಡಿದೆ. ಕೇರಳದ ಹಿರಿಯ ಸಿಪಿಎಂ ನಾಯಕ, ಮಾಜಿ ವಿತ್ತ ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಳೆಯ ‘ಆತ್ಮಹತ್ಯೆ’ ಪತ್ರದಲ್ಲಿ ಗ್ಯಾನೇಶ್ ಕುಮಾರ್‌ ಹೆಸರಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

- Advertisement -

ಮೂಲಗಳ ಪ್ರಕಾರ, 2006 ರ ಅವಧಿಯಲ್ಲಿ ಕೇರಳದ ಲೋಕೋಪಯೋಗಿ (PWD) ಇಲಾಖೆಯ ಕಾರ್ಯದರ್ಶಿಯಾಗಿದ್ದ ಗ್ಯಾನೇಶ್ ಕುಮಾರ್ ಅವರ ಹೆಸರು, ಮಲೇಶಷ್ಯಾದ ಯೋಜನಾ ಅಧಿಕಾರಿಯೊಬ್ಬರ ಆತ್ಮಹತ್ಯೆ ಪತ್ರದಲ್ಲಿ ಪ್ರಮುಖ ಆರೋಪಿಯಾಗಿ ಉಲ್ಲೇಖವಾಗಿತ್ತು ಎಂಬ ಸತ್ಯ ಹೊರಬಿದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಮಲೇಶಷ್ಯಾದ ‘ಪಟಿ’ (PATI) ಮತ್ತು ಭಾರತದ ‘ಭಾಗೀರಥ ಕನ್ಸ್ಟ್ರಕ್ಷನ್’ ಜಂಟಿ ಸಹಯೋಗದಲ್ಲಿ ಕೇರಳದಲ್ಲಿ ನಡೆಯುತ್ತಿದ್ದ ಬೃಹತ್ ರಸ್ತೆ ನಿರ್ಮಾಣ ಯೋಜನೆಯ ಮುಖ್ಯಸ್ಥರಾಗಿದ್ದ ಮಲೇಶಷ್ಯಾ ಪ್ರಜೆ ‘ಲೀ ಬೀನ್ ಸಿನ್’ಎಂಬುವವರು ನವೆಂಬರ್ 2006ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಕೇರಳದಿಂದ ವಾಪಸ್ ತೆರಳಿದ ಕೆಲವೇ ದಿನಗಳಲ್ಲಿ ಅವರು ಸಾವಿಗೀಡಾಗಿದ್ದರು. ಈ ಘಟನೆಗೆ ಕೇರಳ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಲಂಚಬಾಕತನ, ಕಿರುಕುಳ ಹಾಗೂ ಅಡಳಿತಾತ್ಮಕ ಹಿಂಸೆಯೇ ಕಾರಣ ಎಂದು ಲೀ ತಮ್ಮ ಡೆತ್ ನೋಟ್‌ನಲ್ಲಿ ನೇರವಾಗಿ ಆರೋಪಿಸಿದ್ದರು ಎನ್ನಲಾಗಿದೆ.

ಆ ಸಮಯದಲ್ಲಿ (2006-11) ಸಚಿವರಾಗಿದ್ದ ಥಾಮಸ್ ಐಸಾಕ್ ಅವರ ವಿವರಣೆಯಂತೆ, ಮೂಲತಃ 216 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿದ್ದ ಈ ರಸ್ತೆ ಯೋಜನೆಯು ಭೂಸ್ವಾಧೀನ ಪ್ರಕ್ರಿಯೆಯ ವಿಳಂಬ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ 330 ಕೋಟಿ ರೂ.ಗೂ ಹೆಚ್ಚು ವೆಚ್ಚದ ಭಾರಿ ಹೊರೆಯಾಗಿ ಮಾರ್ಪಟ್ಟಿತ್ತು. ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರ ಸಂಸ್ಥೆಗೆ ಪಾವತಿಸಬೇಕಿದ್ದ ಹಣವನ್ನು ಬಾಕಿ ಉಳಿಸಿಕೊಂಡು, ನಿರಂತರ ಹಣದ ಬೇಡಿಕೆ ಮತ್ತು ಕಿರುಕುಳ ನೀಡುತ್ತಿದ್ದುದೇ ಲೀ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿತ್ತು. ಲೀ ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್‌ನಲ್ಲಿ ಗ್ಯಾನೇಶ್ ಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳ ಹೆಸರುಗಳು ಪ್ರಮುಖವಾಗಿ ಉಲ್ಲೇಖಗೊಂಡಿದ್ದವು. ಇದು ಅಂದು ಕೇರಳ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಆ ಭಾರೀ ಸಾರ್ವಜನಿಕ ಆಕ್ರೋಶ ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಪ್ರಕರಣವನ್ನು ಅಂದಿನ ಕೇರಳ ಸರ್ಕಾರವು ಜಾಗೃತಿ ದಳ (ವಿಜಿಲೆನ್ಸ್) ತನಿಖೆಗೆ ಆದೇಶಿಸಿತ್ತು. ತನಿಖೆ ಆರಂಭವಾಗುತ್ತಿದ್ದಂತೆಯೇ 2006ರ ಅಂತ್ಯದ ವೇಳೆಗೆ ಗ್ಯಾನೇಶ್ ಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆಯಿಂದ ತಕ್ಷಣವೇ ವರ್ಗಾವಣೆ ಮಾಡಲಾಯಿತು. ತದನಂತರ ಅವರು ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ನಿಯೋಜನೆಗೊಂಡರು. ಈ ಕೇಂದ್ರ ನಿಯೋಜನೆಯೇ ಮುಂದೆ ಅವರು ಪ್ರಸ್ತುತ ಆಡಳಿತಾರೂಢ ಬಿಜೆಪಿ ಸರ್ಕಾರದ ಹತ್ತಿರದ ಬಳಗಕ್ಕೆ ಸೇರಲು ಪ್ರಮುಖ ಹೆಜ್ಜೆಯಾಯಿತು ಎಂದು ಐಸಾಕ್ ತಮ್ಮ ಪೋಸ್ಟ್‌ನಲ್ಲಿ ನೇರವಾಗಿ ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಆದರೆ, ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಜಿಲೆನ್ಸ್ ತನಿಖೆಯು ಯಾವುದೇ ತರ್ಕಬದ್ಧ ಅಂತ್ಯ ಕಾಣದೆ ಹಾದಿ ತಪ್ಪಿತು. ತನಿಖಾ ವ್ಯಾಪ್ತಿಯ ಅಧಿಕಾರ ಕ್ಷೇತ್ರ ಮತ್ತು ಹಿರಿಯ ಅಧಿಕಾರಿಗಳ ನಿರಾಸಕ್ತಿ ಇಂದಾಗಿ ಇಡೀ ಪ್ರಕರಣ ತಣ್ಣಗಾಯಿತು. ಸಾರ್ವಜನಿಕರ ಆಕ್ರೋಶದ ನಡುವೆಯೂ ಸರ್ಕಾರಿ ವ್ಯವಸ್ಥೆಯು ಕೇಸನ್ನು ಮುಚ್ಚಿಹಾಕಲು ಯತ್ನಿಸಿತ್ತು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿರುವುದಾಗಿ ವರದಿಯಾಗಿದೆ.

ಸುಮಾರು 20 ವರ್ಷಗಳಷ್ಟು ಹಳೆಯದಾದ ಈ ದಾಖಲೆಗಳು ವಿಜಿಲೆನ್ಸ್‌ನಲ್ಲಿ ಇವತ್ತಿಗೂ ಲಭ್ಯವಿವೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ಆದರೂ, ಲಂಚದ ಬೇಡಿಕೆ ಮತ್ತು ಮಲೇಶಷ್ಯಾದ ಅಧಿಕಾರಿಯ ಆತ್ಮಹತ್ಯೆಯ ಕರಾಳ ಘಟನೆಯಲ್ಲಿ ಗ್ಯಾನೇಶ್ ಕುಮಾರ್ ಅವರ ಹೆಸರು ಬಲವಾಗಿ ಬೆಸೆದುಕೊಂಡಿತ್ತು ಎಂಬುದು ಸತ್ಯ ಎಂದು ಐಸಾಕ್ ಪುನರುಚ್ಚರಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಳುಗುತ್ತಿರುವ ಬ್ಯಾಂಕಾಕ್: 50 ಜಿಲ್ಲೆಗಳಲ್ಲಿ ‘ವಿಪತ್ತು’ ಘೋಷಣೆ, ಸ್ತಬ್ಧಗೊಂಡ ಜನಜೀವನ

ಸತತ ಮಳೆಯಿಂದಾಗಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಅಕ್ಷರಶಃ ಜಲಾವೃತಗೊಂಡಿದ್ದು, ನಗರದ ಎಲ್ಲಾ...

ಮಮತಾ ಬ್ಯಾನರ್ಜಿ ರ‍್ಯಾಲಿಗೆ ತೆರಳುತ್ತಿದ್ದ TMC ಶಾಸಕನ ಕಾರಿಗೆ ಮೊಟ್ಟೆ, ಕಲ್ಲು ತೂರಾಟ

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸಾರ್ವಜನಿಕ ಸಭೆಯಲ್ಲಿ...

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದೆ. ಪರಿಣಾಮ, ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು...