ಅದಾನಿ ಗ್ರೂಪ್‌ಗೆ ಧಾರಾವಿ ಸ್ಲಮ್‌ ಅಭಿವೃದ್ಧಿ ಯೋಜನೆ; ಮುಂಬೈನಲ್ಲಿ ಬೃಹತ್ ಪ್ರತಿಭಟನೆ

Date:

ಧಾರಾವಿ ಕೊಳೆಗೇರಿ ಪ್ರದೇಶವನ್ನು ಮರು ಅಭಿವೃದ್ಧಿ ಮಾಡುವ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡಿರುವುದನ್ನು ವಿರೋಧಿಸಿ ಶನಿವಾರ ಮುಂಬೈನಲ್ಲಿ ವಿರೋಧ ಪಕ್ಷಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಸಾವಿರಾರು ಪ್ರತಿಭಟನಾಕಾರರು ಹಾಜರಿದ್ದ ಪ್ರತಿಭಟನಾ ಮೆರವಣಿಗೆಯು ಧಾರಾವಿ ಸ್ಲಮ್‌ನಿಂದ ಗೌತಮ್ ಅದಾನಿ ಕಚೇರಿವರೆಗೆ ಸಾಗಿತು.

“ಅದಾನಿಯನ್ನು ಹೊರಗೆ ಕಳಿಸಿ, ಧಾರಾವಿಯನ್ನು ಉಳಿಸಿ” ಎಂಬ ಘೋಷಣೆಗಳು ಮೊಳಗಿವೆ. ಎಲ್ಲ ಧಾರವಿ ನಿವಾಸಿಗಳಿಗೆ 500 ಚದರ ಅಡಿ ಮನೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಾತನಾಡಿ, “ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಧಾರಾವಿ ಪುನರಾಭಿವೃದ್ಧಿ ಯೋಜನೆಗೆ (ಡಿಆರ್‌ಪಿ) ಟೆಂಡರ್ ನೀಡಿತ್ತು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ವಾಸ್ತವದಲ್ಲಿ ಈ ಯೋಜನೆಯನ್ನು ಅದಾನಿ ಗ್ರೂಪ್‌ಗೆ ನೀಡುವುದಕ್ಕಾಗಿ ಭಾರತೀಯ ಜನತಾ ಪಕ್ಷವು ಎಂವಿಎ ಸರ್ಕಾರವನ್ನು ಉರುಳಿಸಿತು” ಎಂದು ಅವರು ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಧಾರಾವಿ ನಿವಾಸಿಗಳು ಮಾತ್ರವಲ್ಲದೆ ಪೊಲೀಸರಿಗೆ, ಸ್ವಚ್ಛತಾ ಮತ್ತು ಗಿರಣಿ ಕಾರ್ಮಿಕರಿಗೂ ಧಾರಾವಿಯಲ್ಲಿ ಮನೆ ಸಿಗಬೇಕು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಇದು ಜಗತ್ತಿನ ಅತಿ ದೊಡ್ಡ ಟಿಡಿಆರ್‌ [ಅಭಿವೃದ್ಧಿ ಹಕ್ಕುಗಳ ವರ್ಗಾವಣೆ] ಹಗರಣವಾಗಿದೆ ಎಂದು ದೂರಿದ್ದಾರೆ.

ಅದಾನಿ 1 ಕೋಟಿ ರೂ.ಗಳ ಟಿಡಿಆರ್ ಪಡೆಯುತ್ತಿದ್ದಾರೆ ಎಂದರೆ ಅವರ ಮುಂದಿನ ಪೀಳಿಗೆಗಳು ಸಹ ಕೆಲಸ ಮಾಡದೆ ನೆಮ್ಮದಿಯಿಂದ ಬದುಕಬಹುದು. ಅಷ್ಟರಮಟ್ಟಿಗೆ ಟಿಡಿಆರ್ ಅವರಿಗೆ ಸರ್ಕಾರ ಉಡುಗೊರೆಯಾಗಿ ನೀಡುತ್ತಿದೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಉದ್ಧವ್ ಗುಡುಗಿದ್ದಾರೆ.

“ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2018ರಲ್ಲಿ ಧಾರಾವಿಯನ್ನು ಮರು ಅಭಿವೃದ್ಧಿ ಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದುದರಿಂದ ಈ ಪಾಪ ದೇವೇಂದ್ರ ಫಡ್ನವೀಸ್ ಅವರದ್ದು” ಎಂದಿರುವ ಅವರು, “ಬಿಜೆಪಿಯ ಫಡ್ನವೀಸ್ ಪ್ರಸ್ತುತ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ನನ್ನ ಸರ್ಕಾರವನ್ನು ಪತನಗೊಳಿಸಲು ಯಾರು ಹಣಕಾಸು ಒದಗಿಸಿದ್ದಾರೆಂದು ಈಗ ಯಾರಾದರೂ ಅರ್ಥಮಾಡಿಕೊಳ್ಳಬಹುದು. ಶಿವಸೇನೆ ಬಲವಾಗಿದ್ದರಿಂದ ಬಿಜೆಪಿ ತನ್ನ ಸ್ನೇಹಿತರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ಪಕ್ಷವನ್ನು ಒಡೆಯಲಾಯಿತು. ನನ್ನ ಪಕ್ಷದ ಚಿಹ್ನೆಯನ್ನು ಕದಿಯಲಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಕಾಂಗ್ರೆಸ್ ಮುಖ್ಯಸ್ಥರು ಹಾಗೂ ಧಾರವಿ ಶಾಸಕರಾದ ವರ್ಷಾ ಗಾಯಕ್ವಾಡ್ ಕೂಡ ಹೋರಾಟದಲ್ಲಿ ಭಾಗಿಯಾಗಿದ್ದರು.

ಎಂವಿಎ ಸರ್ಕಾರವೇ ಅದಾನಿ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಮತ್ತು ಅದಾನಿ ಗ್ರೂಪ್ ಹೇಳಿಕೊಂಡಿವೆ. “ಧಾರವಿ ಯೋಜನೆಯನ್ನು ನ್ಯಾಯಯುತ, ಮುಕ್ತ, ಅಂತರ ರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ಮೂಲಕ ಅದಾನಿ ಗ್ರೂಪ್‌ಗೆ ನೀಡಲಾಗಿದೆ” ಎಂದು ಅದಾನಿ ಗ್ರೂಪ್‌ ವಾದಿಸಿದೆ.

ಇದನ್ನೂ ಓದಿರಿ: ಯತ್ನಾಳ್ ಹುಚ್ಚು ನಾಯಿ ಇದ್ದಂತೆ: ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೂಪಾಯಿ ನೋಟುಗಳಲ್ಲಿ ಗಾಂಧೀಜಿ ಚಿತ್ರ ಮೊದಲ ಆಯ್ಕೆಯಾಗಿರಲಿಲ್ಲ; ಮತ್ಯಾರು?

ಇತರೆ ದೇಶಗಳ ಕರೆನ್ಸಿಗಳಂತೆ ಭಾರತದ ರೂಪಾಯಿ - ನೋಟು, ನಾಣ್ಯಗಳು ಕೂಡಾ...

ತಾವು ತೊಂದರೆಗೆ ಸಿಗದಿರಲಿ ಅಂತ ಸಿದ್ದರಾಮಯ್ಯ ಪರ ಜಿ ಟಿ ದೇವೇಗೌಡ ಬ್ಯಾಟ್‌ : ಕುಮಾರಸ್ವಾಮಿ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಎಚ್...

ಇಶಾ ಫೌಂಡೇಶನ್ ವಿರುದ್ಧದ ಪೊಲೀಸ್ ತನಿಖೆಗೆ ಸುಪ್ರೀಂ ತಡೆಯಾಜ್ಞೆ

ಕೊಯಮತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸುತ್ತಿರುವ ಇಶಾ ಫೌಂಡೇಶನ್ ವಿರುದ್ಧ...

ಜಾತಿ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯ ಸಲ್ಲ: ಸುಪ್ರೀಂ ಕೋರ್ಟ್

ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯವನ್ನು ಪ್ರೋತ್ಸಾಹಿಸುತ್ತಿವೆ...