ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

Date:

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. 

ಇಂದು ಬೆಳಿಗ್ಗೆ ವಾಟ್ಸ್ಯಾಪ್‌ನಲ್ಲಿ ಎರಡು ಫೋಟೋಗಳು ಬಂದವು. ಒಂದರಲ್ಲಿ ಕೆಂಪು ಶರ್ಟ್, ಕೆಂಪು ಟೋಪಿ ಹಾಕಿ ಮುಷ್ಠಿ ಎತ್ತಿರುವ ಯುವಕ, ಅದರ ಕೆಳಗೆ “ಆತನಿಗೆ ಇವತ್ತಿಗೆ 118 ವರ್ಷ, ಭಾರತದಲ್ಲಿ ಕೇವಲ 23 ವರ್ಷ ಬದುಕಿದರೂ, ಭಾರತೀಯರ ಹೃದಯಗಳಲ್ಲಿ ನಿರಂತರವಾಗಿ ಬದುಕಿದ್ದಾನೆ. ಇನ್ನೂ ಸಾವಿರಾರು ವರ್ಷ ಬದುಕಿರುತ್ತಾನೆ! ವೀರ ಭಗತ್ ಸಿಂಗ್” ಎಂಬ ಬರಹವಿತ್ತು.

- Advertisement -

ಇನ್ನೊಂದರಲ್ಲಿ ತ್ರಿವರ್ಣ ಹಿನ್ನೆಲೆಯಲ್ಲಿ ಅದೇ ಯುವಕನ ಮುಖ, ಜತೆಗೆ ನೇಣುಗಂಬದ ನೆರಳು, ಸಮರ್ಪಣ ಟ್ರಸ್ಟ್‌ನ ಸಂದೇಶ “ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು ಹಚ್ಚಿದ ಅಪ್ರತಿಮ ಕ್ರಾಂತಿಕಾರಿ”.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಈ ಎರಡು ಸಾಲುಗಳೇ ಭಗತ್ ಸಿಂಗ್‌ನ ಇಡೀ ಬದುಕನ್ನು ಹೇಳಿಬಿಡುತ್ತವೆ. ಇಂದು ಅವರ 119ನೇ ಜನ್ಮದಿನ. ಹೌದು, ಅವರು 1907ರ ಸೆಪ್ಟೆಂಬರ್ 28ರಂದು ಪಂಜಾಬಿನ ಬಂಗಾ ಹಳ್ಳಿಯಲ್ಲಿ ಹುಟ್ಟಿದರು. ಈಗ ಅದು ಪಾಕಿಸ್ತಾನದಲ್ಲಿದೆ. ಲೆಕ್ಕ ಹಾಕಿದರೆ 1907 ರಿಂದ 2026ಕ್ಕೆ 119 ವರ್ಷ. ಜನರು 118 ಎಂದು ಬರೆಯುವುದು ಪ್ರೀತಿಯಿಂದ, ಆದರೆ ಇತಿಹಾಸ 119 ಎನ್ನುತ್ತದೆ. ವಯಸ್ಸು ಏನೇ ಇರಲಿ, ಅವರು ಮಾತ್ರ 23 ವರ್ಷದಲ್ಲೇ ನಿಂತುಬಿಟ್ಟರು.

23 ವರ್ಷದಲ್ಲಿ ಏನು ಮಾಡಲು ಸಾಧ್ಯ?

ನಾವು 23ನೇ ವಯಸ್ಸಿನಲ್ಲಿ ಏನು ಮಾಡುತ್ತಿರುತ್ತೇವೆ? ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿರುತ್ತೇವೆ, ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತಿರುತ್ತೇವೆ, ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುತ್ತೇವೆ. ಆದರೆ ಈ ಹುಡುಗ 23ನೇ ವಯಸ್ಸಿನಲ್ಲಿ ದೇಶಕ್ಕಾಗಿ ನಗುನಗುತ್ತ ನೇಣುಗಂಬವನ್ನು ಏರಿದರು.

ಆತನ ಜೀವನವನ್ನು ಮೂರು ಘಟನೆಗಳಲ್ಲಿ ಅಳೆಯಬಹುದು. ಮೊದಲನೆಯದು ಹನ್ನೆರಡು ವರ್ಷದ ಹುಡುಗನಾಗಿದ್ದಾಗ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನೋಡಿ, ಆ ರಕ್ತಸಿಕ್ತ ಮಣ್ಣನ್ನು ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದು. ಎರಡನೆಯದು ಲಾಲಾ ಲಜಪತ್ ರಾಯ್ ಅವರ ಸಾವಿಗೆ ಸೇಡು ತೀರಿಸಲು ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸಾಂಡರ್ಸ್‌ನನ್ನು ಹೊಡೆದುರುಳಿಸಿದ್ದು. ಮೂರನೆಯದು ಬ್ರಿಟಿಷರ ಕಿವಿ ಕೇಳುವಂತೆ ಮಾಡಲು ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು, ಓಡಿಹೋಗದೆ ʼನಮ್ಮನ್ನು ಬಂಧಿಸಿʼ ಎಂದು ಎದೆ ಸೆಟೆದು ನಿಂತಿದ್ದು. ಬಾಂಬ್ ಯಾರನ್ನೂ ಕೊಲ್ಲಲಿಲ್ಲ, ಅದು ಕೇವಲ ಸದ್ದು ಮಾಡಲು ಎಸೆದ ಬಾಂಬ್. ಆದರೆ ಆ ಸದ್ದು ಇಡೀ ಸಾಮ್ರಾಜ್ಯವನ್ನೇ ನಡುಗಿಸಿತ್ತು.

ಸಮರ್ಪಣ ಟ್ರಸ್ಟ್ ಹೇಳುವ ನಿಜವಾದ ಭಗತ್ ಸಿಂಗ್ ಒಂದು ಬಹಳ ಮುಖ್ಯವಾದ ಸಾಲಿದೆ “ಭಗತ್ ಸಿಂಗ್ ಅವರ ಹೋರಾಟ ಕೇವಲ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧವಾಗಿರಲಿಲ್ಲ, ಶೋಷಣೆ, ಅಸಮಾನತೆ ಮತ್ತು ಅನ್ಯಾಯಗಳಿಂದ ಮುಕ್ತವಾದ ಸಮಸಮಾಜದ ನಿರ್ಮಾಣವೂ ಅವರ ಕನಸಾಗಿತ್ತು” ಎಂದು.

ಇದು ನೂರರಷ್ಟು ನಿಜ. ನಾವು ಭಗತ್ ಸಿಂಗ್ ಅವರನ್ನು ಕೇವಲ ಬಂದೂಕು ಹಿಡಿದ ಕ್ರಾಂತಿಕಾರಿ ಎಂದು ತಿಳಿದಿದ್ದೇವೆ. ಆದರೆ ಅವರು ಅದಕ್ಕಿಂತ ದೊಡ್ಡ ವೈಚಾರಿಕ ಕ್ರಾಂತಿಕಾರಿ. ಜೈಲಿನಲ್ಲಿದ್ದಾಗ ಅವರು ಬರೆದ ಪುಸ್ತಕಗಳ ಪಟ್ಟಿ ನೋಡಿ. ಲೆನಿನ್, ಮಾರ್ಕ್ಸ್, ಸಮಾಜವಾದ. ಅವರು ನಾಸ್ತಿಕನಾಗಿದ್ದು, “ನಾನೇಕೆ ನಾಸ್ತಿಕ” ಎಂಬ ಕೃತಿ ಬರೆದರು. ಆ ಕೃತಿ ಇಂದಿಗೂ ಯುವಜನರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ʼಕೇವಲ ಬಿಳಿಯರನ್ನು ಓಡಿಸಿ, ಕಂದು ಬಣ್ಣದ ಶೋಷಕರು ಕುಳಿತರೆ ಅದು ನಿಜವಾದ ಸ್ವಾತಂತ್ರ್ಯವಲ್ಲʼ ಎಂದು ಅವರು ಹೇಳುತ್ತಿದ್ದರು. ಅದಕ್ಕೆ ಅವರು ಕೊಟ್ಟ ಘೋಷಣೆ ʼಇಂಕ್ವಿಲಾಬ್ ಜಿಂದಾಬಾದ್ʼ. ಇದರ ಅರ್ಥ ʼಕ್ರಾಂತಿ ಚಿರಾಯುವಾಗಿರಲಿʼ ಎಂಬುದು. ಇದು ಕೇವಲ ಬ್ರಿಟಿಷರ ವಿರುದ್ಧದ ಘೋಷಣೆಯಲ್ಲ, ಭಾರತೀಯ ವ್ಯವಸ್ಥೆಯ ವಿರುದ್ಧದ ಘೋಷಣೆ. ಇಂದು ನಾವು ಕೆಲಸದಲ್ಲಿ ಅನ್ಯಾಯ ಕಂಡಾಗ, ಭ್ರಷ್ಟಾಚಾರ ಕಂಡಾಗ, ಜಾತಿ ತಾರತಮ್ಯ ಕಂಡಾಗ ಅದೇ ಘೋಷಣೆಯನ್ನು ಕೂಗುತ್ತೇವೆ. ಹಾಗಾಗಿಯೇ ಭಗತ್ ಸಿಂಗ್ ಸಾಯಲಿಲ್ಲ.

23 ವರ್ಷ ಭಾರತದಲ್ಲಿ, ಸಾವಿರ ವರ್ಷ ಹೃದಯದಲ್ಲಿ

ಭಗತ್ 23 ವರ್ಷ ಮಾತ್ರ ದೇಹದಿಂದ ಬದುಕಿದ್ದರು, ಆದರೆ 1931 ಮಾರ್ಚ್ 23ರಂದು ಲಾಹೋರ್ ಜೈಲಿನಲ್ಲಿ ರಾಜಗುರು, ಸುಖದೇವ್ ಜೊತೆ ನೇಣಿಗೇರಿದ ಬಳಿಕ ಆತ ಪ್ರತಿ ಭಾರತೀಯರ ಹೃದಯದಲ್ಲಿ ಬದುಕಲಾರಂಭಿಸಿದರು.

ನೀವು ಯಾವುದೇ ಕಾಲೇಜು, ಹಾಸ್ಟೆಲ್ ಗೋಡೆಗಳ ಮೇಲೆ ಮೇಲೆ ನೋಡಿದರೆ ಭಗತ್ ಸಿಂಗ್ ಫೋಟೋ ಕಾಣಸಿಗುತ್ತದೆ. ಯಾವುದೇ ಪ್ರತಿಭಟನೆಯಲ್ಲಿಯಾದರೂ ಭಗತ್ ಸಿಂಗ್ ಟೋಪಿ ಹಾಕಿಕೊಳ್ಳುತ್ತಾರೆ. ಭಗತ್ 23 ವರ್ಷದ ಯುವಜನರ ಐಕಾನ್. ಏಕೆಂದರೆ ಆತ ಮುದುಕನಾಗಿ ಸಾಯಲಿಲ್ಲ, ಹಾಗಾಗಿ ಯುವಕನಾಗಿಯೇ ಉಳಿದುಬಿಟ್ಟ.

ಇಂದಿನ ಯುವಜನರಿಗೆ ಭಗತ್ ಸಿಂಗ್‌ನಿಂದ ಕಲಿಯಬೇಕಾದದ್ದು ಬಾಂಬ್ ಮಾಡುವುದಲ್ಲ. ಅವರ ಓದು, ಅವರು ಪ್ರಶ್ನೆ ಕೇಳುವ ಗುಣ, ಅವರ ತ್ಯಾಗ. ಅವರು ಜೈಲಿನಲ್ಲಿ 116 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದು, ತನ್ನ ಸ್ವಂತಕ್ಕಾಗಿ ಅಲ್ಲ, ರಾಜಕೀಯ ಕೈದಿಗಳಿಗೆ ಉತ್ತಮ ಹಕ್ಕು ಸಿಗಲಿ ಎಂದು.

ಇದನ್ನೂ ಓದಿದ್ದೀರಾ? ‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಸ್ವಾತಂತ್ರ್ಯ ಬಂದು 80 ವರ್ಷವಾಯಿತು. ನಾವು ಇನ್ನೂ ಶೋಷಣೆಮುಕ್ತ ಸಮಾಜ ಕಟ್ಟಿಲ್ಲ. ಭಗತ್ ಸಿಂಗ್ ಕಂಡ ಕನಸಿನ ಸಮಸಮಾಜ ಇನ್ನೂ ದೂರವಿದೆ. ಅವರ ಜನ್ಮದಿನದಂದು ಕೇವಲ ಫೋಟೋಗೆ ಹಾರ ಹಾಕಿದರೆ ಸಾಲದು. ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ.

WhatsApp Image 2026 07 27 at 18.26.00
ಕೆ ಎಸ್ ಜಯಶಂಕರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...

UPI ವಹಿವಾಟಿನ ಮೇಲಿನ ಶುಲ್ಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ...

‘ದೇಶದ ನೌಕರಶಾಹಿ ಆತ್ಮಸಾಕ್ಷಿಯ ಕರೆಯನ್ನು ಆಲಿಸಬೇಕು.’ ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸ ಹೇಳಿದ ಆತ್ಮಸಾಕ್ಷಿಯ ಕತೆ

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಹಾದಿಯಲ್ಲಿ ನೈತಿಕ ಸಂದಿಗ್ಧತೆಯನ್ನು ಎದುರಿಸಿದಾಗ,...

ವರ್ಷಗಳಿಂದ ನೀರಿಲ್ಲದೆ ಸೊರಗಿದ ಗ್ರಾಮ; ಹತಾಶೆಯಿಂದ ಊರನ್ನೇ ಬಿಕರಿಗಿಟ್ಟ ನಿವಾಸಿಗಳು

ಒಂದೆಡೆ ನೀರಾವರಿ ಯೋಜನೆ, ಇನ್ನೊಂದೆಡೆ ನೀರಿಗಾಗಿ ಪರದಾಡುವ ರೈತರು. ಯೋಜನೆ ಆರಂಭವಾಗಿ...