₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ ನಾಮ ಹಾಕಿದ ಅದಾನಿ ವೃತ್ತಾಂತ

Date:

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ ಅದಾನಿ ಹಾಗೂ ರೇಡಿಯಸ್ ಎಸ್ಟೇಟ್ಸ್‌ನಲ್ಲಿ ಶೇ. 98ರಷ್ಟು ಬೃಹತ್ ಹೇರ್‌ಕಟ್‌ನ ಕರಾಳ ಸತ್ಯ ಬಯಲಾಗಿದ್ದು ಹೇಗೆ? ಹರಾಜಿನಲ್ಲಿ ಹೀಗೆಲ್ಲಾ ನಡೆದಿರುವುದು ಮತ್ತು ನ್ಯಾಯಮಂಡಳಿಗಳು ಸುಮ್ಮನಿರುವುದು ದೇಶದ ದಿವಾಳಿತನ ಕಾನೂನಿನ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡಿಸಿದೆ.

ಭಾಗ- 2

- Advertisement -

‘ನ್ಯೂಸ್‌ಲಾಂಡ್ರಿ’ ವರದಿ ಪ್ರಕಾರ, ಮುಂಬೈನ ರೇಡಿಯಸ್ ಎಸ್ಟೇಟ್ಸ್ ಅಂಡ್‌ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಕೆಲ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಅದಾನಿ ಪ್ರಾಪರ್ಟೀಸ್‌, ಬಿಕೆಸಿ ಇನ್‌ಸ್ಪೈರ್‌ ಮತ್ತು ಶಹಾದ್‌ ಮಹಾರಲ್‌ ಯೋಜನೆಗಳನ್ನು ಒಟ್ಟು ₹68 ಕೋಟಿಗೆ ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಬಿಕೆಸಿ ಇನ್‌ಸ್ಪೈರ್‌ ಯೋಜನೆಯ ಬಿಡ್‌ ಮೊತ್ತ ಕೇವಲ ₹3 ಕೋಟಿಯಾಗಿತ್ತು. ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸುಮಾರು 8.8 ಲಕ್ಷ ಚದರ ಅಡಿ ವಾಣಿಜ್ಯ ಆಸ್ತಿಯಾದ ಬಿಕೆಸಿ ಇನ್‌ಸ್ಪೈರ್‌ ಯೋಜನೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಪ್ರಾಪರ್ಟಿಯ ನ್ಯಾಯಸಮ್ಮತ ಮೌಲ್ಯ ಮತ್ತು ದಿವಾಳಿ ಮಾರಾಟ ಮೌಲ್ಯ ಎರಡನ್ನೂ ಶೂನ್ಯವೆಂದು ದಾಖಲಿಸಲಾಗಿತ್ತು. ಆದರೆ, ಈ ಮೌಲ್ಯಮಾಪನಕ್ಕೆ ಕಾರಣವೇನು ಎಂಬುದನ್ನು ನ್ಯಾಯಮಂಡಳಿಯ (NCLT) ಆದೇಶ ವಿವರಿಸಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಮತ್ತೊಂದೆಡೆ, ಕೆಲವು ಉದ್ಯಮ ತಜ್ಞರು ಈ ಆಸ್ತಿಗಳ ಮೌಲ್ಯ ₹2,000 ಕೋಟಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಿದ್ದಾಗಿ ವರದಿ ಉಲ್ಲೇಖಿಸಿದೆ. ಈ ಯೋಜನೆಯೊಂದಿಗೆ ಅದಾನಿಗೆ ಹಿಂದಿನಿಂದಲೂ ಸಂಬಂಧವಿತ್ತು ಎನ್ನಲಾಗುತ್ತದೆ. ಇನ್ನು ಶಹಾದ್‌ ಮಹಾರಲ್‌ ಯೋಜನೆಗೆ ಅದಾನಿ ಪ್ರಾಪರ್ಟೀಸ್‌ ಮತ್ತು ಕೆಜಿಕೆ ರಿಯಾಲ್ಟಿ ಸ್ಪರ್ಧಿಸಿದ್ದು, ಕೆಜಿಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಾಲದಾತರ ಸಮಿತಿ ‘ಕಾರ್ಯಸಾಧ್ಯ ಮತ್ತು ಸಮರ್ಥನೀಯವಲ್ಲ’ ಎಂದು ಹೇಳಿ ತಿರಸ್ಕರಿಸಿತು. ಅಂತಿಮವಾಗಿ ಅದಾನಿಯ ₹65 ಕೋಟಿ ಪರಿಹಾರ ಯೋಜನೆಗೆ ಅನುಮೋದನೆ ದೊರೆಯಿತು. ಆದರೆ, ಕೆಜಿಕೆ ಪ್ರಸ್ತಾವನೆಯನ್ನು ತಿರಸ್ಕರಿಸಲು ಕಾರಣವೇನು ಎಂಬುದನ್ನು NCLT ಆದೇಶ ವಿವರವಾಗಿ ಚರ್ಚಿಸಿರಲಿಲ್ಲ.

ಮುಂಬೈನ ಬಾಂದ್ರಾದಲ್ಲಿ ಎಂಎಚ್‌ಎಡಿಎ (MHADA) ಮರುಅಭಿವೃದ್ಧಿ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದ ರೇಡಿಯಸ್ ಎಸ್ಟೇಟ್ಸ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಅದಾನಿ ಗ್ರೂಪ್ ಆಗಾಗಲೇ ಅಲ್ಲಿ ನಿರ್ಮಾಣ ನಿರ್ವಹಣಾಧಿಕಾರಿಯಾಗಿ (Construction Manager) ಪ್ರವೇಶಿಸಿತ್ತು. ಪ್ರಾಜೆಕ್ಟ್ ಅರ್ಧಕ್ಕೆ ನಿಂತು ಕಂಪನಿ ಸಂಕಷ್ಟದಲ್ಲಿದ್ದಾಗ ಅದಾನಿ ಗ್ರೂಪ್ ₹1,000 ಕೋಟಿಗೂ ಅಧಿಕ ಸಾಲ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಅಂತಿಮವಾಗಿ ದಿವಾಳಿ ಪ್ರಕ್ರಿಯೆಯಲ್ಲಿ (CIRP) ಅದಾನಿ ಗುಡ್‌ಹೋಮ್ಸ್ ಏಕೈಕ ಅರ್ಹ ಬಿಡ್‌ದಾರನಾಗಿ ಹೊರಹೊಮ್ಮಿತು. ಈ ಪ್ರಕರಣದಲ್ಲಿ ಒಟ್ಟು ₹1,892 ಕೋಟಿ ಸಾಲವಿದ್ದರೂ (Financial Creditors Claims), ಸಾಲದಾತರಿಗೆ ಅಂತಿಮವಾಗಿ ಸಿಕ್ಕಿದ್ದು ಕೇವಲ ₹32 ಕೋಟಿ ಮಾತ್ರ! ಅಂದರೆ ಇಲ್ಲಿ ಬರೋಬ್ಬರಿ ಶೇ. 98.3ರಷ್ಟು ಬೃಹತ್ ‘ಹೇರ್‌ಕಟ್’ ಸಂಭವಿಸಿದ್ದು, ಇದು ದಿವಾಳಿ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ನಷ್ಟಗಳಲ್ಲಿ ಒಂದು ಎನ್ನಲಾಗುತ್ತದೆ.

ಈ ಪ್ರಕರಣದಲ್ಲಿ ಆಸ್ತಿಯ ಬೆಲೆಯನ್ನು ಕಡಿಮೆ ತೋರಿಸಿರುವುದು ಮಾತ್ರವಲ್ಲದೆ, ಆ ಬೆಲೆಯನ್ನು ಹೇಗೆ ನಿಗದಿಪಡಿಸಲಾಯಿತು, ಬಿಡ್‌ಗಳನ್ನು ಯಾವ ಆಧಾರದ ಮೇಲೆ ಪರಿಶೀಲಿಸಲಾಯಿತು ಮತ್ತು ಇತರರ ಬಿಡ್‌ಗಳನ್ನು ಯಾಕೆ ತಿರಸ್ಕರಿಸಲಾಯಿತು ಎಂಬುದಕ್ಕೆ ಸ್ಪಷ್ಟ ಕಾರಣಗಳಿಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಮುಂಬೈನ ಬಾಂದ್ರಾ ಪೂರ್ವದಲ್ಲಿ ‘ಮಡಾ’ (MHADA) ಸಂಸ್ಥೆಗೆ ಸಂಬಂಧಿಸಿದ ವಸತಿ ಪುನರಾಭಿವೃದ್ಧಿ ಯೋಜನೆಯು 2020ರ ಜನವರಿಯಲ್ಲಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಅಲ್ಲಿ ಮನೆ ಖರೀದಿಸಿದ್ದ 200ಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿ, ದೊಡ್ಡ ಅನಿಶ್ಚಿತತೆ ಉಂಟಾಗಿತ್ತು. ಅಧಿಕೃತವಾಗಿ ಬಿಡ್‌ (ಹರಾಜು/ಟೆಂಡರ್) ಪ್ರಕ್ರಿಯೆ ಆರಂಭವಾಗುವ ಮುಂಚೆಯೇ, ಅದಾನಿ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯನ್ನು ಈ ಕಾಮಗಾರಿಯ ನಿರ್ಮಾಣ ನಿರ್ವಹಣಾಕಾರರನ್ನಾಗಿ ನೇಮಿಸುವ ಬಗ್ಗೆ ಚರ್ಚೆ ನಡೆದಿತ್ತು. 2021ರ ಅಕ್ಟೋಬರ್‌ನಲ್ಲಿ ಟೆಂಡರ್‌ ಕರೆಯಲಾಗಿತ್ತು. ಆಗ ‘ಅದಾನಿ ಗುಡ್‌ಹೋಮ್ಸ್‌’ ಮತ್ತು ‘ಆಶ್ಡನ್‌’ ಎಂಬ ಎರಡು ಒಕ್ಕೂಟಗಳು ಸ್ಪರ್ಧಿಸಿದ್ದವು. ಸ್ಪರ್ಧೆಯಲ್ಲಿದ್ದ ಆಶ್ಡನ್‌ ಸಂಸ್ಥೆಯು ಸ್ಪರ್ಧೆಯಿಂದ ಹಿಂದೆ ಸರಿಯಿತು. ಇದರಿಂದಾಗಿ ಕಡೆಯಲ್ಲಿ ‘ಅದಾನಿ ಗುಡ್‌ಹೋಮ್ಸ್‌’ ಮಾತ್ರ ಅರ್ಹ ಬಿಡ್‌ದಾರನಾಗಿ ಉಳಿಯಿತು.

ಎನ್‌ಸಿಎಲ್‌ಟಿ(NCLT – ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ)ಯು 2023ರ ಜನವರಿ 9ರಂದು ಈ ಪರಿಹಾರ ಯೋಜನೆಗೆ (Resolution Plan) ಅಧಿಕೃತವಾಗಿ ಅನುಮೋದನೆ ನೀಡಿತ್ತು. ಆದರೆ, ಅದಾನಿ ಸಮೂಹದ ವಿವಿಧ ಕಂಪನಿಗಳೇ ನಿರ್ಮಾಣ ನಿರ್ವಹಣೆ, ಮಧ್ಯಂತರ ಹಣಕಾಸು ಒದಗಿಸುವುದು ಮತ್ತು ಅಂತಿಮವಾಗಿ ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳುವುದು ಮುಂತಾದ ಎಲ್ಲಾ ಜವಾಬ್ದಾರಿಗಳನ್ನು ಒಂದೇ ಗುಂಪಿನಡಿ ನಿರ್ವಹಿಸಿದಾಗ ಅಲ್ಲಿ ‘ಹಿತಾಸಕ್ತಿ ಸಂಘರ್ಷ’ (Conflict of Interest – ಅಂದರೆ ಒಂದೇ ಕಂಪನಿಗೆ ಎಲ್ಲ ಲಾಭ ಅಥವಾ ಸ್ವಾರ್ಥದ ಅನುಮಾನ) ಉಂಟಾಗುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ನ್ಯಾಯಮಂಡಳಿಯ ಆದೇಶದಲ್ಲಿ ಯಾವುದೇ ಪ್ರತ್ಯೇಕ ಚರ್ಚೆ ಅಥವಾ ಸ್ಪಷ್ಟನೆ ಇರಲಿಲ್ಲ ಎಂದು ‘ನ್ಯೂಸ್‌ಲಾಂಡ್ರಿ’ ವರದಿ ತಿಳಿಸಿದೆ.

ಈ ಪ್ರಕರಣದಲ್ಲಿ ಬ್ಯಾಂಕುಗಳು ಅಥವಾ ಹಣಕಾಸು ಸಾಲದಾತರು (Financial Creditors) ತಮಗೆ ಬರಬೇಕಾದ ಬಾಕಿ ಮೊತ್ತವೆಂದು ಒಟ್ಟು ರೂ. 1,892 ಕೋಟಿಯನ್ನು ಕೋರಿದ್ದರು. ಆದರೆ, ಅದಾನಿ ಸಮೂಹದ ಕಡೆಯಿಂದ ಸಾಲದಾತರಿಗೆ ಅಂತಿಮವಾಗಿ ಸಿಕ್ಕಿದ್ದು ಕೇವಲ ರೂ. 32 ಕೋಟಿ ಮಾತ್ರ. ಇದರಿಂದಾಗಿ, ಬ್ಯಾಂಕುಗಳಿಗೆ ಬರಬೇಕಿದ್ದ ಒಟ್ಟು ಮೊತ್ತದಲ್ಲಿ ಅಂದಾಜು ರೂ. 1,860 ಕೋಟಿಗೂ ಅಧಿಕ ಹಣ ವಾಪಸ್ ಸಿಗದೆ ನಷ್ಟವಾಯಿತು.

IBC ವ್ಯವಸ್ಥೆಯಲ್ಲಿ ಸಾಲದಾತರ ಸಮಿತಿಯ ಅಧಿಕಾರವೇನು?

ಭಾರತದಲ್ಲಿ ಕಂಪನಿಗಳು ಸಾಲ ತೀರಿಸಲು ವಿಫಲವಾದಾಗ, ಅವುಗಳನ್ನು ಮರುಶ್ಚೇತನಗೊಳಿಸಲು ಅಥವಾ ಆಸ್ತಿಗಳನ್ನು ವಿಲೇವಾರಿ ಮಾಡಲು ಇರುವ ಕಾನೂನು ಚೌಕಟ್ಟಿಗೆ ‘ದಿವಾಳಿ ಮತ್ತು ದಿವಾಳಿತನ ಸಂಹಿತೆ’ (IBC) ಎಂದು ಕರೆಯಲಾಗುತ್ತದೆ. ಸಾಲ ನೀಡಿದ ಬ್ಯಾಂಕುಗಳು ಅಥವಾ ಸಂಸ್ಥೆಗಳೇ ‘ಸಾಲದಾತರ ಸಮಿತಿ’ಯನ್ನು ರಚಿಸುತ್ತವೆ. ಇವರು ಯಾವ ಪರಿಹಾರ ಯೋಜನೆಯನ್ನು ಸ್ವೀಕರಿಸಬೇಕು ಎಂದು ತೀರ್ಮಾನಿಸುತ್ತಾರೆ. ಇದಕ್ಕೆ ಶೇ. 66ರಷ್ಟು ಸಾಲದಾತರ ಒಪ್ಪಿಗೆ ಬೇಕಾಗುತ್ತದೆ ಮತ್ತು ಇವರ ನಿರ್ಧಾರಕ್ಕೆ ಕಾನೂನಿನಲ್ಲಿ ಹೆಚ್ಚಿನ ವಾಣಿಜ್ಯ ಸ್ವಾತಂತ್ರ್ಯವಿರುತ್ತದೆ.

ಎನ್‌ಸಿಎಲ್‌ಟಿ (NCLT) ಮತ್ತು ಎನ್‌ಸಿಎಲ್‌ಎಟಿ (NCLAT) ನ್ಯಾಯಮಂಡಳಿಗಳು ಈ ಪ್ರಕ್ರಿಯೆಯನ್ನು ಪರಿಶೀಲಿಸುತ್ತವೆಯಾದರೂ, ಸಾಲದಾತರ ವಾಣಿಜ್ಯ ನಿರ್ಧಾರಗಳಲ್ಲಿ ಸಾಮಾನ್ಯವಾಗಿ ಅವು ಹೆಚ್ಚು ಮೂಗು ತೂರಿಸುವುದಿಲ್ಲ

ಆದರೆ ‘ನ್ಯೂಸ್‌ಲಾಂಡ್ರಿ’ ವರದಿಯ ಪ್ರಕಾರ, ಬಿಡ್‌ ಪ್ರಕ್ರಿಯೆಯನ್ನು ಮರುತೆರೆಯುವುದು, ಹೊಸ ಅವಕಾಶ ನೀಡುವುದು, ನಿಯಮ ಬದಲಾಗುವುದು ಮತ್ತು ಸಾಲದಾತರ ಸಮಿತಿಯಲ್ಲಿ ಪ್ರಭಾವ ಹೊಂದಿದ್ದ ಸಂಸ್ಥೆಯೇ ಗೆಲ್ಲುವುದು ಮುಂತಾದ ಅಸಾಮಾನ್ಯ ಬೆಳವಣಿಗೆಗಳು ಕೆಲವು ಕಡೆ ನಡೆದಿವೆ. ಈ ಬಗ್ಗೆ ನ್ಯಾಯಮಂಡಳಿ ಆದೇಶಗಳಲ್ಲಿ ಸ್ಪಷ್ಟ ಚರ್ಚೆ ಇಲ್ಲದಿರುವುದನ್ನು ವರದಿ ಎತ್ತಿ ತೋರಿಸಿದೆ.

ಈ ಪ್ರಕರಣಗಳಲ್ಲಿ ಎಸ್‌ಬಿಐ (SBI), ಪಿಎನ್‌ಬಿ (PNB), ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌, ಯೂನಿಯನ್ ಬ್ಯಾಂಕ್‌ ಸೇರಿದಂತೆ ಅನೇಕ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು PFC, REC, EXIM ಬ್ಯಾಂಕ್‌ ಮುಂತಾದ ದೊಡ್ಡ ಹಣಕಾಸು ಸಂಸ್ಥೆಗಳು ಸಾಲ ನೀಡಿದ್ದವು. ನ್ಯೂಸ್‌ಲಾಂಡ್ರಿ ವರದಿಯ ಪ್ರಕಾರ, ಅದಾನಿ ಸಮೂಹ ಸ್ವಾಧೀನಪಡಿಸಿಕೊಂಡ 16 ಕಂಪನಿಗಳಲ್ಲಿ ಸಾಲದಾತರಿಗೆ ಬರಬೇಕಿದ್ದ ಒಟ್ಟು ಸಾಲದ ಬೇಡಿಕೆ ರೂ. 1.31 ಲಕ್ಷ ಕೋಟಿ ಇತ್ತು. ಆದರೆ ಅದರಲ್ಲಿ ಮರುಪಾವತಿಯಾಗಿದ್ದು ಕೇವಲ ರೂ. 33,000 ಕೋಟಿ ಮಾತ್ರ! ಅಂದರೆ ಸರಿಸುಮಾರು ರೂ. 97,700 ಕೋಟಿ (ಶೇ. 74.6ರಷ್ಟು) ಹಣ ವಸೂಲಿಯಾಗದೆ ಉಳಿದಿದೆ.

2026ರ ಮಾರ್ಚ್‌ ವೇಳೆಗೆ ದೇಶದ ಒಟ್ಟಾರೆ ದಿವಾಳಿ ಪರಿಹಾರ ಪ್ರಕರಣಗಳಲ್ಲಿ ಸಾಲದಾತರ ಸರಾಸರಿ ಮರುಪಾವತಿ ಪ್ರಮಾಣ ಶೇ. 30.6ರಷ್ಟಿದ್ದರೆ, ಅದಾನಿ ಸ್ವಾಧೀನಪಡಿಸಿಕೊಂಡ ಕಂಪನಿಗಳಲ್ಲಿ ಇದು ಅದಕ್ಕಿಂತಲೂ ಕಡಿಮೆಯಿದೆ. ಈ ವರದಿಯ ಬಗ್ಗೆ ‘ನ್ಯೂಸ್‌ಲಾಂಡ್ರಿ’ ಸಂಸ್ಥೆಯು ಅದಾನಿ ಸಮೂಹ, ಪರಿಹಾರ ವೃತ್ತಿಪರರು ಹಾಗೂ ನ್ಯಾಯಮಂಡಳಿಗಳಿಗೆ ಪ್ರಶ್ನೆಗಳನ್ನು ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅದಾನಿ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್‌ ಸಿಂಗ್‌, “ಮಾರುಕಟ್ಟೆಯ ಚಟುವಟಿಕೆಗಳ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700 ಕೋಟಿ ನಾಮ!

ಲ್ಯಾಂಕೊ ಅಮರ್‌ಕಂಟಕ್, ದಿಘಿ ಬಂದರು, ಕೊರ್ಬಾ ವೆಸ್ಟ್‌ ಪವರ್‌ನಂತಹ ಕೆಲವು ಪ್ರಕರಣಗಳಲ್ಲಿ ಬಿಡ್‌ ಪ್ರಕ್ರಿಯೆಯನ್ನು ಮರುತೆರೆಯುವುದು ಅಥವಾ ನಿಯಮ ಬದಲಾಯಿಸುವಂತಹ ಅಸಾಮಾನ್ಯ ಬೆಳವಣಿಗೆಗಳು ನಡೆದಿವೆ ಎಂದು ವರದಿ ಹೇಳಿದೆ. ಅದೇ ಸಮಯದಲ್ಲಿ, ಕರೈಕಲ್‌ ಬಂದರು ಮತ್ತು ಜೈಪ್ರಕಾಶ್‌ ಅಸೋಸಿಯೇಟ್ಸ್‌ ಮುಂತಾದ ಪ್ರಕರಣಗಳಲ್ಲಿ ಎದ್ದ ಕೆಲವು ಆಕ್ಷೇಪಗಳನ್ನು NCLT ಮತ್ತು NCLAT ನ್ಯಾಯಮಂಡಳಿಗಳು ತಿರಸ್ಕರಿಸಿವೆ.

ಐಬಿಸಿ (IBC) ಕಾಯ್ದೆಯು ಸಾಲದಾತರ ಸಮಿತಿಗೆ (CoC) ವಾಣಿಜ್ಯ ನಿರ್ಧಾರಗಳ ಸ್ವಾತಂತ್ರ್ಯವನ್ನು ನೀಡಿದೆ ಮತ್ತು ನ್ಯಾಯಮಂಡಳಿಗಳು (NCLT/NCLAT) ಈ ನಿರ್ಧಾರಗಳಲ್ಲಿ ಸಾಮಾನ್ಯವಾಗಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಈ ಸ್ವಾತಂತ್ರ್ಯವು ಕೆಲವೊಮ್ಮೆ ಪಾರದರ್ಶಕತೆಯ ಕೊರತೆಯನ್ನು ಮರೆಮಾಚಲು ಅಥವಾ ಕೆಲವು ಆಯ್ದ ಬಿಡ್‌ದಾರರಿಗೆ ಅನುಕೂಲ ಮಾಡಿಕೊಡಲು ಬಳಕೆಯಾಗುತ್ತಿದೆಯೇ ಎಂಬ ಆತಂಕ ಮೂಡಿದೆ. ಪ್ರಕ್ರಿಯೆಗಳು ಕಾನೂನಿನ ಚೌಕಟ್ಟಿನಲ್ಲೇ ನಡೆದಿದ್ದರೂ ಮತ್ತು ನ್ಯಾಯಮಂಡಳಿಗಳು ಆಕ್ಷೇಪಣೆಗಳನ್ನು ತಿರಸ್ಕರಿಸಿದ್ದರೂ, ಅಂತಿಮ ಫಲಿತಾಂಶವು ಬ್ಯಾಂಕುಗಳಿಗೆ ತೀವ್ರ ನಷ್ಟವನ್ನುಂಟುಮಾಡಿರುವುದು ದಿವಾಳಿತನ ಪರಿಹಾರ ವ್ಯವಸ್ಥೆಯ ದಕ್ಷತೆ ಬಗ್ಗೆ ಪ್ರಶ್ನೆಗಳನ್ನೆತ್ತುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಲು ಕೇರಳ ಸರ್ಕಾರ ನಿರ್ಧಾರ; ವಿಧಾನಸಭೆಯಲ್ಲಿ ಇಂದು ನಿರ್ಣಯ ಮಂಡನೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ...

ಕಾಂಗ್ರೆಸ್ ನಾಯಕರ ಭೇಟಿಗೆ ನಕಾರ; ನಾಲ್ಕು ಕಾರಣಗಳು ನೀಡಿದ ಸಿಜೆಐ ಸೂರ್ಯ ಕಾಂತ್

ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್...

ನಾನು ಎಷ್ಟೇ ಮೂರ್ಖತನದ ಮಾತು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ: ಟ್ರಂಪ್

"ನಾನು ಎಷ್ಟೇ ಮೂರ್ಖತನದ ಮಾತುಗಳನ್ನು ಆಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ" ಎಂದು...

ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಗಲಾಟೆ ಬಳಿಕ ವ್ಯಕ್ತಿ ಸಾವು; ಮಾಜಿ ಐಎಎಸ್ ಅಧಿಕಾರಿ, ಪುತ್ರ ಬಂಧನ

ದೆಹಲಿ ಮೆಟ್ರೋದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾದ ಸೀಟಿನಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ನಡೆದ...