ಗೋವಾದಲ್ಲೊಬ್ಬ ‘ಪ್ರಜ್ವಲ್ ರೇವಣ್ಣ’ – ಬಿಜೆಪಿ ಕೌನ್ಸಿಲರ್‌ನ 20 ವರ್ಷದ ಮಗನ ಕಾಮತೃಷೆಗೆ ಬಾಲಕಿಯರ ಬಲಿ

Date:

ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳ ವಿರುದ್ಧ ದೂರು ನೀಡಲು ಮಹಿಳೆಯರು ಒದ್ದಾಡಬೇಕಾದಂತಹ ಸ್ಥಿತಿಯ ಬಗ್ಗೆಯೂ ನಾವು ಚಿಂತನೆ ನಡೆಸುವಂತೆ ಮಾಡಿದೆ. ಗೋವಾದ ಪ್ರಕರಣವಾಗಲಿ ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣವಾಗಲಿ, ಸಂತ್ರಸ್ತೆಯರು ದೂರು ನೀಡಲು ಮುಂದೆ ಬರದಂತೆ ತಡೆಯಲು ಬೆದರಿಕೆ, ರಾಜಕೀಯ ಒತ್ತಡಗಳನ್ನು ಬಳಸಲಾಗಿದೆ ಎಂಬುದು ಸ್ಪಷ್ಟ.  

ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಲೈಂಗಿಕ ಹಗರಣ ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ. ಹಾಸನ ಲೋಕಸಭೆ ಚುನಾವಣೆಗೂ ಕೆಲವೇ ದಿನಗಳ ಮುನ್ನ ಪ್ರಜ್ವಲ್ ರೇವಣ್ಣನ ಸಾವಿರಾರು ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ಸಾರ್ವಜನಿಕವಾಗಿ ಪತ್ತೆಯಾದವು. ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹಲವು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ಬಹಿರಂಗವಾಗಿತ್ತು. ಇದೀಗ ಅಂತಹುದ್ದೇ ಪ್ರಕರಣ ಗೋವಾದಲ್ಲಿ ಬಹಿರಂಗವಾಗಿದೆ.

- Advertisement -

ಗೋವಾದ ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಮಗ 20 ವರ್ಷದ ಸೋಹಂ ಸುಶಾಂತ್ ನಾಯಕ್ ಎಂಬಾತನ ಕಾಮತೃಷೆಗೆ 25-30ಕ್ಕೂ ಅಧಿಕ ಬಾಲಕಿಯರು ಬಲಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಗೋವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಜ್ವಲ್ ರೇವಣ್ಣ ತನ್ನ ಕಾಮಕೃತ್ಯದ ವಿಡಿಯೋಗಳನ್ನು ಮಾಡಿಕೊಂಡರೆ ಈ ಸೋಹಂ ಕೂಡಾ ಅಪ್ರಾಪ್ತರ ವಿಡಿಯೋ ಮಾಡಿಕೊಂಡಿದ್ದ. ಅಷ್ಟಕ್ಕೂ ಈ ಕೃತ್ಯ ಬೆಳಕಿಗೆ ಬಂದಿದ್ದು ಸೋಹಂನಿಂದಾಗಿಯೇ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಇದನ್ನು ಓದಿದ್ದೀರಾ? ಪ್ರಜ್ವಲ್ ಬಳಿಕ ಸೂರಜ್ ರೇವಣ್ಣ ಸರದಿ: ಸಲಿಂಗಕಾಮ, ಲೈಂಗಿಕ ದೌರ್ಜನ್ಯದ ಆರೋಪ!

ಇತ್ತೀಚೆಗೆ ನಡೆದ ಪಾರ್ಟಿಯೊಂದರಲ್ಲಿ ಸೋಹಂ ತನ್ನ ಮೊಬೈಲ್‌ನಲ್ಲಿದ್ದ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಸ್ನೇಹಿತರಿಗೆ ತೋರಿಸಿ ತಾನೇನೋ ಘನಂದಾರಿ ಕೆಲಸ ಮಾಡಿದಂತೆ ಕೊಚ್ಚಿಕೊಂಡಿದ್ದ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನಾಗರಿಕರು ಕುಡ್ಚಡೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಇದಾದ ಬಳಿಕ ಸೋಹಂ ಬಂಧನ ಮಾಡಲಾಗಿದೆ.

sonam 7
ಗೋವಾದ ಕರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯಕ್ ಅವರ ಮಗ ಸೋಹಂ ಸುಶಾಂತ್ ನಾಯಕ್

ಪ್ರಜ್ವಲ್ ರೇವಣ್ಣನಂತೆ ಆರೋಪಿ ಸೋಹಂ 30ಕ್ಕೂ ಅಧಿಕ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪವಿದೆ. ಈಗ ಸೋಹಂ ವಯಸ್ಸು 20 ವರ್ಷ. ಕಳೆದ ಮೂರು ವರ್ಷಗಳಿಂದ ಈ ಕೃತ್ಯವನ್ನು ಈತ ನಡೆಸುತ್ತಿದ್ದಾನೆ. ಅಂದರೆ ಅಪ್ರಾಪ್ತನಾಗಿದ್ದಾಗಲೇ ಈ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದ.

ಸೋನಂ ವಿರುದ್ಧ ಪೋಕ್ಸೋ ಕಾಯ್ದೆ, ಗೋವಾ ಮಕ್ಕಳ ಕಾಯ್ದೆ, ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಒಟ್ಟು ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಗೋವಾ ಸರ್ಕಾರವು ಇದರ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ಕ್ರೈಮ್ ಬ್ರಾಂಚ್‌ಗೆ ವರ್ಗಾಯಿಸಿದೆ. ಆರೋಪಿಯ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ನಡೆಯುತ್ತಿದೆ.

ಈ ಘಟನೆಯನ್ನು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಒತ್ತಡದಲ್ಲಿ ‘ರಾಕ್ಷಸರನ್ನು ರಕ್ಷಿಸಬೇಡಿ’ ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಆಕ್ರೋಶ ತೀವ್ರವಾಗಿರುವಾಗ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಆತ ಸಾರ್ವಜನಿಕರಿಗೆ ಅಶ್ಲೀಲ ಸಜ್ಞೆ ಮಾಡಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನು ಓದಿದ್ದೀರಾ? ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣ | ಹಾಸನ ಚಲೋ; ವಿಕೃತ ಕಾಮಿ ಪ್ರಜ್ವಲ್ ಬಂಧನಕ್ಕೆ ಮೊಳಗಿದ ಘೋಷಣೆ

ಈ ಎರಡೂ ಪ್ರಕರಣಗಳದಲ್ಲಿಯೂ ಆರೋಪಿಗಳು ಸಂತ್ರಸ್ತೆಯರ ಅಶ್ಲೀಲ ವಿಡಿಯೋ ಅಥವಾ ಫೋಟೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ದೀರ್ಘಕಾಲದವರೆಗೆ ಶೋಷಣೆ ಮಾಡಿದ್ದಾರೆ. ಕೆ.ಆರ್. ನಗರದ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ರೀತಿ ಕಠಿಣ ಶಿಕ್ಷೆ ದುರುಳ ಸೋಹಂಗೂ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪ್ರಜ್ವಲ್ ರೇವಣ್ಣ ಓರ್ವ ಸಂಸದನಾಗಿ, ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ವ್ಯಕ್ತಿಯಾಗಿ ತನ್ನ ಅಧಿಕಾರವನ್ನು ಜನರ ರಕ್ಷಣೆಗಾಗಿ ಬಳಸುವ ಬದಲು, ಅಸಹಾಯಕ ಮಹಿಳೆಯರನ್ನು ಹತ್ತಿಕ್ಕಲು ಬಳಸಿದ್ದಾನೆ. ಅದೇ ರೀತಿ ಸೋಹಂ ತನ್ನ ತಂದೆಯ ಪ್ರಭಾವವನ್ನು ಬಳಸಿಕೊಂಡಿದ್ದಾನೆ. ಈ ಎರಡೂ ಪ್ರಕರಣಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಕಳಂಕ. ಜತೆಗೆ ಮಹಿಳೆಯರ ಸುರಕ್ಷತೆ ಮತ್ತು ರಾಜಕೀಯ ಪ್ರಭಾವದ ದುರ್ಬಳಕೆಯ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟಿಸಿದೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನೂರಾರು ವಿಡಿಯೋಗಳ ಮೂಲಕ ಮಹಿಳೆಯರ ಖಾಸಗಿತನವನ್ನು ಹರಾಜು ಹಾಕಲಾಗಿದೆ. ಅದೇ ರೀತಿ ಗೋವಾದ ಘಟನೆಯಲ್ಲಿ ಅಧಿಕಾರಸ್ಥರ ಕುಟುಂಬದ ಹಿನ್ನೆಲೆ ಇರುವಾತ ಅಪ್ರಾಪ್ತರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾನೆ. ಇವೆರಡೂ ಪ್ರಕರಣದಲ್ಲಿಯೂ ಮಹಿಳೆಯರನ್ನು, ಹೆಣ್ಣುಮಕ್ಕಳನ್ನು ಮನುಷ್ಯರಂತೆ ಕಾಣದೆ ಅಧಿಕಾರ ಚಲಾಯಿಸುವ ‘ವಸ್ತುಗಳಾಗಿ’ ಬಳಸಲ್ಪಟ್ಟಿರುವುದು ಅತ್ಯಂತ ಖೇದಕರ.

ಹಾಗೆಯೇ ರಾಜಕೀಯ ಪ್ರಭಾವ ಹೊಂದಿರುವ ವ್ಯಕ್ತಿಗಳ ದುಷ್ಕೃತ್ಯಗಳ ವಿರುದ್ಧ ದೂರು ನೀಡಲು ಮಹಿಳೆಯರು ಒದ್ದಾಡಬೇಕಾದಂತಹ ಸ್ಥಿತಿಯ ಬಗ್ಗೆಯೂ ನಾವು ಚಿಂತನೆ ನಡೆಸುವಂತೆ ಮಾಡಿದೆ. ಗೋವಾದ ಪ್ರಕರಣವಾಗಲಿ ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣವಾಗಲಿ, ಸಂತ್ರಸ್ತೆಯರು ದೂರು ನೀಡಲು ಮುಂದೆ ಬರದಂತೆ ತಡೆಯಲು ಬೆದರಿಕೆ, ರಾಜಕೀಯ ಒತ್ತಡಗಳನ್ನು ಬಳಸಲಾಗಿದೆ ಎಂಬುದು ಸ್ಪಷ್ಟ. ‘ಬೇಟಿ ಬಚಾವೋ’ ಎಂಬ ಘೋಷಣೆಗಳ ನಡುವೆಯೂ ವ್ಯವಸ್ಥೆ ಎಷ್ಟು ಪೊಳ್ಳಾಗಿದೆ ಎಂಬುದಕ್ಕೆ ಇದು ಸಾಕ್ಷಿ.

ಯಾವುದೇ ಒಂದು ದೇಶದ ಪ್ರಗತಿಯು ಅಲ್ಲಿನ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಗೋವಾ ಮತ್ತು ಹಾಸನದ ಈ ಘಟನೆಗಳು ಕೇವಲ ಅಪರಾಧಗಳಲ್ಲ, ಅವು ನಮ್ಮ ಸಮಾಜದ ನೈತಿಕ ಅಧಃಪತನದ ಸಂಕೇತಗಳು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜ್ಞಾನೇಶಕುಮಾರ ವಜಾಗೊಳಿಸಿ, ಬಂಧಿಸಲು ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ...

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...