ನಾಯಿಯ ಜೊತೆಗಿನ ಮನುಷ್ಯ ಸ್ನೇಹಕ್ಕಿದೆ 15000 ವರ್ಷಗಳ ಇತಿಹಾಸ!

Date:

ಹಿಮ ಯುಗದ ಕಂದು ತೋಳಗಳ ಸಂತತಿ ಭೂಮಿಯ ಮೊದಲ ಶ್ವಾನ ಸಂತತಿ. ಇವು ಮನುಷ್ಯ ವಾಸಸ್ಥಳಗಳ ಬಳಿ ಬಂದು ತಂಗುತ್ತಿದ್ದವು. ದಿನಕಳೆದಂತೆ ಅವನ ಬೇಟೆಯ ಅಳಿದುಳಿದ ಭಾಗವನ್ನು ಇವುಗಳಿಗೆ ಕೊಟ್ಟು ನಿಧಾನವಾಗಿ ಈ ತೋಳ ರೂಪದ ನಾಯಿಗಳನ್ನು ಪಳಗಿಸಿಕೊಂಡ ಹಿಮಯುಗದ ಮಾನವ, ಬೇಟೆಗೆ ಈ ನಾಯಿಗಳನ್ನು ಕರೆದೊಯ್ಯುತ್ತಿದ್ದ. ಕಾಲಕಳೆದಂತೆ ಈ ವ್ಯಾಘ್ರಗಳು ಅವನ ಸಹಕರ್ಮಿಗಳಾಗಿ, ಸಾಕುಪ್ರಾಣಿಗಳಾಗಿ ಮಾರ್ಪಟ್ಟವು.

- Advertisement -

ವಿಜ್ಞಾನ ಪ್ರತಿದಿನ ಒಂದಿಲ್ಲೊಂದು ವಿಸ್ಮಯವನ್ನ ನಮಗೆ ಉಣಬಡಿಸುತ್ತಲೇ ಇದೆ. ಈಗ ಇಂತಹದ್ದೇ ಒಂದು ಸಂಶೋಧನೆಯು ಮನುಷ್ಯ ಮತ್ತು ನಾಯಿಯ ನಡುವಿನ ಸ್ನೇಹಕ್ಕೆ15000 ವರುಷಗಳ ಇತಿಹಾಸವಿದೆ ಎಂಬ ವಿಷಯವನ್ನು ಬಹಿರಂಗಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಸೊಮರೆಸ್ಟ್‌ ಎಂಬ ಗುಹೆಯಲ್ಲಿ ದೊರೆತ ದವಡೆ ಮೂಳೆ ಶ್ವಾನದೊಂದಿಗಿನ ಮನುಷ್ಯನ ಸ್ನೇಹದ ಕುರಿತ ಇತಿಹಾಸವನ್ನು ತಿದ್ದಿ ಬರೆಯಲು ಕಾರಣವಾಗಿದೆ. ಡಿಎನ್‌ಎ ಪರೀಕ್ಷೆ ಸುಮಾರು 15000 ವರ್ಷ ಹಿಂದೆಯೇ ನಾಯಿ ಮನುಷ್ಯನ ಒಡನಾಡಿಯಾಗಿತ್ತು ಎಂಬುದನ್ನು ತಿಳಿಸಿದೆ. ಬೆಕ್ಕು ಇನ್ನಿತರೆ ಸಾಕು ಪ್ರಾಣಿಗಳಿಗಿಂತ ಮುಂಚೆಯೇ ನಾಯಿ ಮನುಷ್ಯನ ಮನ ಮನೆಯನ್ನು ಸೇರಿತ್ತು ಎಂದು ಈ ಸಂಶೋಧನೆಯಿಂದ ತಿಳಿದಿದೆ.

96008610 161f 11f1 99c4 070c00c23970.jpg

ನಾಯಿಗಳು ಶಿಲಾಯುಗ ಮಾನವನಿಗೆ ತುಂಬಾ ಹತ್ತಿರದ ಒಡನಾಟವಿದ್ದು, ʼಸಣ್ಣದೊಂದು ಮೂಳೆಯ ತುಣುಕು ಮಾನವ ಹಾಗು ಶ್ವಾನಗಳ ನಡುವೆ ಬೆಳೆದಿದ್ದ ಆತ್ಮೀಯತೆಯ ಕತೆಯನ್ನು ನಮ್ಮ ಮುಂದೆ ತೆರೆದಿಡಲು ಸಹಾಯ ಮಾಡಿದೆʼ ಎಂದು ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದ ವಿಜ್ಞಾನಿ ವಿಲಿಯಂ ಮಾರ್ಶ್‌ ಸಂತಸ ವ್ಯಕ್ತಪಡಿಸಿದರು.

ಹಿಮ ಯುಗದ ಕಂದು ತೋಳಗಳ ಪೂರ್ವಜರು ಭೂಮಿಯ ಮೊದಲ ಶ್ವಾನ ಸಂತತಿ, ಇವು ಮನುಷ್ಯ ವಾಸಸ್ಥಳಗಳ ಬಳಿ ಬಂದು ತಂಗುತ್ತಿದ್ದವು ದಿನಕಳೆದಂತೆ ಅವನ ಬೇಟೆಯ ಅಳಿದುಳಿದ ಭಾಗವನ್ನು ಇವುಗಳಿಗೆ ಕೊಟ್ಟು ನಿಧಾನವಾಗಿ ಈ ತೋಳ ರೂಪದ ನಾಯಿಗಳನ್ನು ಪಳಗಿಸಿಕೊಂಡ ಹಿಮಯುಗದ ಮಾನವ ಬೇಟೆಗೆ ಈ ನಾಯಿಗಳನ್ನು ಕರೆದೊಯ್ಯುತ್ತಿದ್ದ. ಕಾಲಕಳೆದಂತೆ ಈ ವ್ಯಾಘ್ರಗಳು ಅವನ ಸಹಕರ್ಮಿಗಳಾಗಿ, ಸಾಕುಪ್ರಾಣಿಗಳಾಗಿ ಮಾರ್ಪಟ್ಟವು.

DogLoyalty eric ward 610868 unsplash

ಶತಮಾನಗಳ ತಳಿ ರೂಪಾಂತರದ ನಂತರ ಮಡಿಲಲ್ಲಿ ಸಣ್ಣ ಮಗುವಾಗಿ ಮಲಗುವ ನಾಯಿಗಳಿಂದ ಹಿಡಿದು ದೈತ್ಯ ಕಾವಲುನಾಯಿಗಳ ತನಕ ಹಲವು ತಳಿಗಳನ್ನು ನಾವಿಂದು ಕಾಣಬಹುದು. ಡಾಕ್ಟರ್‌ ಸೆಲಿನಾ ಬ್ರೇಸ್‌ ಅಭಿಪ್ರಾಯದಂತೆ ನಮ್ಮ ಶ್ವಾನ ಪೂರ್ವಿಕರು ನಮ್ಮ ಪೂರ್ವಜರ ಜೊತೆಗೆ ಬೆಟ್ಟ ಗುಡ್ಡ ಅಲೆಯುತ್ತಾ ತನ್ನ ಯಜಮಾನ ತಿನ್ನುವ ಆಹಾರವನ್ನೇ ತಾನು ತಿಂದಿದೆ. ಇದು ನಾಯಿಗಳೊಡನೆ ಮನುಷನಿಗಿದ್ದ ಬಾಂಧವ್ಯಕ್ಕೆ ಸಾಕ್ಷಿ ಎಂದಿದ್ದಾರೆ.

images 3 2

15000 ವರುಷಗಳಿಂದ ಇಲ್ಲಿಯವರೆಗೂ ಬೆಳೆದುಬಂದ ಸುಧೀರ್ಘ ಸ್ನೇಹದ ಕುರಿತು ಕುತೂಹಲ ಹಾಗೂ ಅಚ್ಚರಿಯಾಗುತ್ತದೆ. ಜರ್ಮನಿ ಇಟಲಿ ಸ್ವಿಡ್ಜರ್ಲೆಂಡ್‌ನ ಕೆಲ ಗುಹೆಗಳಲ್ಲಿ ಮನುಷ್ಯನ ಸಮಾಧಿಯ ಪಕ್ಕದಲ್ಲಿ ನಾಯಿಯನ್ನು ಹೂಳಲಾಗಿದೆ ಇದು ಮನುಜ ಮತ್ತು ಶ್ವಾನಗಳ ನಡುವಿದ್ದ ಆಳವಾದ ಸಾಂಗತ್ಯಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...