ವಧುವಿನ ಹೆಗಲಿಗೆ ವರನ ಶಿಕ್ಷಣ ಶುಲ್ಕ, ಇಎಂಐ: ಈಗ ಹೆಣ್ಣಿನ ಸಂಬಳವೇ ವರದಕ್ಷಿಣೆ!

Date:

ಗಂಡಿನ ಹಳೆಯ ಸಾಲ ಬಾಕಿಗಳನ್ನು ಮದುವೆಯಾಗಿ ಬಂದ ಹೆಣ್ಣು ತನ್ನ ದುಡಿಮೆಯಿಂದ ತೀರಿಸುವಂತಾಗಿದೆ. ಇಎಂಐ ಕಟ್ಟಲು ಅಥವಾ ಗಂಡನ ಶಿಕ್ಷಣದ ಫೀಸ್ ನೀಡಲು ಒಪ್ಪದಿದ್ದರೆ, ಆಕೆಗೆ "ಸಂಸಾರದ ಮೇಲೆ ಕಾಳಜಿಯಿಲ್ಲ" ಅಥವಾ "ಗಂಡನ ಬೆಳವಣಿಗೆಗೆ ಬೆಂಬಲ ನೀಡುತ್ತಿಲ್ಲ" ಎಂದು ದೂರಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.

ವರದಕ್ಷಿಣೆ ಪಿಡುಗು ಇಂದಿಗೂ ಜೀವಂತವಾಗಿದೆ. ಜೊತೆಗೆ, ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇಂದಿನ ಆಧುನಿಕ, ಸುಶಿಕ್ಷಿತ ಮತ್ತು ಉನ್ನತ ಮಧ್ಯಮ ವರ್ಗದ ಕುಟುಂಬಗಳಲ್ಲಿ “ನಾವು ವರದಕ್ಷಿಣೆ ಪಡೆದಿಲ್ಲಪ್ಪ” ಎಂದು ಹೇಳಿಕೊಳ್ಳುವವರೇ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವರದಕ್ಷಿಣೆ ಪಡೆಯುತ್ತಿದ್ದಾರೆ. ಹಳೇ ಕಾಲದಂತೆ ಮದುವೆ ಸಮಯದಲ್ಲಿ ನೇರವಾಗಿ ನಗದು, ಚಿನ್ನ ಅಥವಾ ಕಾರುಗಳನ್ನು ಕೇಳಲಾಗುತ್ತಿತ್ತು. ಆದರೆ ಈಗ ವಧು ಮತ್ತು ಆಕೆಯ ಕುಟುಂಬದ ಮೇಲೆ ದೀರ್ಘಾವಧಿಯ ಆರ್ಥಿಕ ಹೊರೆಯನ್ನು ಹೊರಿಸಲಾಗುತ್ತಿದೆ.

- Advertisement -

“ವರದಕ್ಷಿಣೆ ಏನೂ ಬೇಡಪ್ಪ, ನಾವು ವರದಕ್ಷಿಣೆ ತೆಗೆದುಕೊಳ್ಳವುದಿಲ್ಲ. ಮದುವೆ ಆದ ಮೇಲೆ ಮನೆಯ ಇಎಂಐ ಸೊಸೆ ಕಟ್ಟಲ್ಲಿ. ಓದಿ ಉದ್ಯೋಗಕ್ಕೆ ಹೋಗುವವಲು ಅಲ್ಲವೇ. ನಮ್ಮ ಮಗನ ಎಂಬಿಎ ಫೀಸ್ ಒಂದು ಕಟ್ಟಲ್ಲಿ. ಅದು ಆಕೆಯ ಭವಿಷ್ಯಕ್ಕೆ ಅಲ್ಲವೇ” ಇದು ಡಿಜಿಟಲ್ ಯುಗದಲ್ಲಿ ವರದಕ್ಷಿಣೆಯ ಹೊಸ ಮುಖ. ಹೆಣ್ಣಿನ ಸಂಬಳವೇ ಹೊಸ ವರದಕ್ಷಿಣೆ! ಕಾನೂನು ಪ್ರಕಾರವಾಗಿ ಇದು ವರದಕ್ಷಿಣೆಯಂತೆ ಕಾಣಿಸುವುದಿಲ್ಲ. “ಕುಟುಂಬದ ಆರ್ಥಿಕ ಯೋಜನೆ” ಅಥವಾ “ವರನ ಭವಿಷ್ಯಕ್ಕಾಗಿ ಹೂಡಿಕೆ” ಎಂಬ ಮುಖವಾಡ ಮುಂದಿಟ್ಟು ವಧುವಿನ ಕಡೆಯವರಿಂದ ದೋಚಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?

ಡಿಜಿಟಲ್ ಯುಗದ ವರದಕ್ಷಿಣೆ

ಈಗ ಚಿನ್ನ, ಬೆಳ್ಳಿ, ಹಣ, ಕಾರು ಬದಲಾಗಿ ವರನು ಮಾಡುವ ದುಬಾರಿ ಎಂಬಿಎ ಅಥವಾ ಉನ್ನತ ವೈದ್ಯಕೀಯ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವಧು ಅಥವಾ ಆಕೆಯ ಪೋಷಕರೇ ಭರಿಸುವಂತೆ ಕೇಳಲಾಗುತ್ತಿದೆ. ವರ ವೈದ್ಯನಾಗಿದ್ದರೆ ಆತನಿಗಾಗಿ ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆ ಕಟ್ಟಿಸಿ ಎನ್ನಲಾಗುತ್ತಿದೆ ಅಥವಾ ಆತನ ಹೊಸ ಉದ್ಯಮಕ್ಕೆ ಬಂಡವಾಳ ಹೂಡಿ, ಅದು ಹೇಗಿದ್ದರೂ ನಿಮ್ಮ ಮಗಳ ಜೀವನಕ್ಕಾಗಿ ಅಲ್ಲವೇ ಎಂದು ಒತ್ತಾಯಿಸಲಾಗುತ್ತಿದೆ.

ಅದು ಮಾತ್ರವಲ್ಲದೆ ಉದ್ಯೋಗದಲ್ಲಿರುವ ವಧುವಿನ ಮೇಲೆ ಒತ್ತಡ ಹೇರಿ ಆಕೆಯ ಹೆಸರಲ್ಲೇ ವೈಯಕ್ತಿಕ ಅಥವಾ ವೃತ್ತಿಪರ ಸಾಲಗಳನ್ನು ತೆಗೆದುಕೊಳ್ಳುವಂತೆ ಮಾಡಲಾಗುತ್ತಿದೆ. ಸಾಲದ ಮೊತ್ತವನ್ನು ವರನ ಕುಟುಂಬಕ್ಕೆ ನೀಡಲಾಗುತ್ತದೆಯಾದರೂ, ಬ್ಯಾಂಕಿನ ಮಾಸಿಕ ಇಎಂಐ ಅನ್ನು ಮಾತ್ರ ವಧುವೇ ತನ್ನ ಸಂಬಳದಿಂದ ಕಟ್ಟಬೇಕಾಗುತ್ತದೆ. ವಿದೇಶಿ ಹನಿಮೂನ್ ಅಥವಾ ದುಬಾರಿ ಜೀವನಶೈಲಿಯ ವೆಚ್ಚಗಳನ್ನೂ ವರದಕ್ಷಿಣೆ ಎನ್ನದೆ, “ಆಧುನಿಕ ಮದುವೆಯ ಸಾಮಾನ್ಯ ಆಚರಣೆಗಳು” ಎಂಬಂತೆ ಬಿಂಬಿಸಿ ವಧುವಿನ ಕಡೆಯವರಿಂದಲೇ ಖರ್ಚು ಮಾಡಿಸಲಾಗುತ್ತಿದೆ.

ಈ ಬದಲಾವಣೆಗೆ ಕಾರಣವೇನು?

ಪ್ರಮುಖವಾಗಿ ಕಾನೂನಿನಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬುದೇ ಈ ವರದಕ್ಷಿಣೆ ಪಡೆಯುವ ವಿಧಾನ ಬದಲಾಗಲು ಕಾರಣ. 1961ರ ವರದಕ್ಷಿಣೆ ನಿಷೇಧ ಕಾಯ್ದೆಯ ಪ್ರಕಾರ ಸಾಂಪ್ರದಾಯಿಕವಾಗಿ ವರದಕ್ಷಿಣೆ ಕೇಳುವುದು ಮತ್ತು ಕೊಡುವುದು ಶಿಕ್ಷಾರ್ಹ ಅಪರಾಧ. ಆದರೆ ಶಿಕ್ಷಣ ಶುಲ್ಕ, ಸಾಲದ ಮರುಪಾವತಿ ಅಥವಾ ಬಂಡವಾಳದ ಹೆಸರಿನಲ್ಲಿ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಾಗ ಅದು ಕಾನೂನು ಕಣ್ಣಿಗೆ ಅಪರಾಧವಾಗಿ ಕಾಣಿಸಲ್ಲ. ಯಾರಾದರೂ ಪ್ರಶ್ನಿಸಿದರೆ, “ತಮ್ಮ ಸಂಸಾರದ ಬೆಳವಣಿಗೆಗೆ ಪತ್ನಿ ನೀಡಿದ ಹಣ” ಎಂದು ಹೇಳಿ ಸುಲಭವಾಗಿ ನುಣುಚಿಕೊಳ್ಳುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಈಗ ಉತ್ತಮ ಶಿಕ್ಷಣ ಪಡೆದು ದುಡಿಯುವ ಮಹಿಳೆಯೇ ಈ ಮಾರ್ಡನ್ ಯುಗದ ಈ ವರದಕ್ಷಿಣೆ ಪಿಡುಗಿಗೆ ಬಲಿಯಾಗುತ್ತಿರುವುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದನ್ನೇ ಅವರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ. ಕೇವಲ ಮನೆಗೆಲಸ ಮಾಡುವ ಹೆಣ್ಣುಮಕ್ಕಳಿಗಿಂತ, ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಲ್ಲಿ ದುಡಿಯುವ, ಕೈ ತುಂಬ ಸಂಬಳ ಪಡೆಯುವ ಹೆಣ್ಣುಮಕ್ಕಳನೇ ಹುಡುಕಲಾಗುತ್ತಿದೆ. ಆಕೆಯ ಸಂಬಳದಲ್ಲಿ ಇಎಂಐ ಕಟ್ಟಿಸಬಹುದು, ಆಕೆಯ ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಬಳಸಿಕೊಂಡು ಬ್ಯಾಂಕುಗಳಿಂದ ಸಾಲ ಪಡೆಯಬಹುದು ಎಂಬ ದುರಾಸೆ ಅಡಿಗಿರುತ್ತದೆ.

ಇದನ್ನು ಓದಿದ್ದೀರಾ? ರಸ್ತೆಯಲ್ಲೇ ವರದಕ್ಷಿಣೆ ಪ್ರಕರಣ ವಜಾ ಮಾಡಿದ ನ್ಯಾಯಾಧೀಶರು

ಅಷ್ಟಕ್ಕೂ ಮದುವೆಗೆ ಮುಂಚೆಯೇ ಈ ಬೇಡಿಕೆಯನ್ನು ವಧುವಿನ ಕುಟುಂಬಕ್ಕೆ ತಿಳಿಸಲಾಗುತ್ತಿಲ್ಲ. ಬದಲಾಗಿ ಮದುವೆಯಾದ ನಂತರ ಕುಟುಂಬ ನಿರ್ವಹಣೆ ನೆಪದಲ್ಲಿ ದೈನಂದಿನ ಜೀವನದ ಭಾಗವಾಗಿ ಮಹಿಳೆಯಿಂದ ಆಕೆಯ ದುಡಿಮೆಯನ್ನು ದೋಚಲಾಗುತ್ತಿದೆ. ಗಂಡಿನ ಹಳೆಯ ಸಾಲ ಬಾಕಿಗಳನ್ನು ಮದುವೆಯಾಗಿ ಬಂದ ಹೆಣ್ಣು ತನ್ನ ದುಡಿಮೆಯಿಂದ ತೀರಿಸುವಂತಾಗಿದೆ. ಇಎಂಐ ಕಟ್ಟಲು ಅಥವಾ ಗಂಡನ ಶಿಕ್ಷಣದ ಫೀಸ್ ನೀಡಲು ಒಪ್ಪದಿದ್ದರೆ, ಆಕೆಗೆ “ಸಂಸಾರದ ಮೇಲೆ ಕಾಳಜಿಯಿಲ್ಲ” ಅಥವಾ “ಗಂಡನ ಬೆಳವಣಿಗೆಗೆ ಬೆಂಬಲ ನೀಡುತ್ತಿಲ್ಲ” ಎಂದು ದೂರಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.

ವರದಕ್ಷಿಣೆಯು ಈ ಹೊಸ ರೂಪವನ್ನು ಪಡೆದಿರುವುದು ಅತ್ಯಂತ ಅಪಾಯಕಾರಿ. ದುರದೃಷ್ಟವಶಾತ್, ಇಂತಹ ದಾಂಪತ್ಯವು ವಿಚ್ಛೇದನಕ್ಕೆ ತಲುಪಿದಾಗ ಮಹಿಳೆಯು ತಮಗಾದ ಆರ್ಥಿಕ ನಷ್ಟವನ್ನು ಮರಳಿ ಪಡೆಯುವುದೂ ಕಷ್ಟವಾಗುತ್ತದೆ. ಯಾಕೆಂದರೆ ಇಲ್ಲಿ ಎಲ್ಲ ಸಾಲಗಳು ಕಾನೂನುಬದ್ಧವಾಗಿ ಮಹಿಳೆಯ ಹೆಸರಲ್ಲೇ ಇರುತ್ತದೆ. ಆಕೆ ‘ಸ್ವಪ್ರೇರಣೆಯಿಂದ’ ಗಂಡನ ಮನೆಗೆ ಹಣ ನೀಡಿದ್ದಾಳೆ ಎಂಬಂತೆ ಬಿಂಬಿತವಾಗುವುದು ದುರದೃಷ್ಟ.

ಮೂಲ ಮಾಹಿತಿ: ಟೈಮ್ಸ್ ಆಫ್ ಇಂಡಿಯಾ

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...