ಆಳುವವರ ಕೋಮು ಕ್ರೌರ್ಯ: ಭಾರತೀಯ ಪೌರತ್ವದ ದಾಖಲೆಗಳಿದ್ದರೂ ‘ಬಾಂಗ್ಲಾದೇಶಿ’ ಹಣೆಪಟ್ಟಿ; 3 ತಿಂಗಳಿಂದ ಜೈಲಿನಲ್ಲಿದ್ದಾರೆ ಜಲೀಲ್

Date:

ಜಲೀಲ್ ಅಖ್ತರ್ – ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಕರಂದಿಘಿ ಬ್ಲಾಕ್ ವ್ಯಾಪ್ತಿಯ ಬಾಗ್ರೋಯಿ ಗ್ರಾಮದ ನಿವಾಸಿ, 66 ವರ್ಷ ವಯಸ್ಸಿನ ಜಮೀನು ರಹಿತ ವೃದ್ಧ. ಅಖ್ತರ್ ಅವರನ್ನು ‘ಅಕ್ರಮ ಬಾಂಗ್ಲಾದೇಶಿ ವಲಸಿಗ’ ಎಂಬ ಶಂಕೆಯ ಮೇಲೆ ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ವಿವಿಧ ಬಂಧನ ಕೇಂದ್ರಗಳು ಮತ್ತು ಜೈಲಿನಲ್ಲಿ ಅವರನ್ನು ಬಂಧಿಸಿಡಲಾಗಿದೆ. ಅವರ ಬಂಧನವು ಬಂಗಾಳದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಅತ್ಯಂತ ಆಶ್ಚರ್ಯಕರ ವಿಷಯವೆಂದರೆ, ಜಲೀಲ್ ಅಖ್ತರ್ ಅವರ ಹೆಸರು 2002ರ ಚುನಾವಣಾ ಆಯೋಗದ ತೀವ್ರ ಪರಿಷ್ಕರಣೆ (IR) ಪಟ್ಟಿ ಮತ್ತು ಇತ್ತೀಚಿನ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪಟ್ಟಿಯಲ್ಲೂ ಸ್ಪಷ್ಟವಾಗಿ ದಾಖಲಾಗಿದೆ. ಭಾರತೀಯ ನಾಗರಿಕತ್ವವನ್ನು ಎತ್ತಿಹಿಡಿಯುವ ಎಲ್ಲ ಅಧಿಕೃತ ಸರ್ಕಾರಿ ದಾಖಲೆಗಳು ಅವರ ಬಳಿಯಿವೆ. ಆದರೂ, ಅವರನ್ನು ಅಕ್ರಮ ವಲಸಿಗನೆಂದು ಚಿತ್ರಿಸಿ ಜೈಲಿಗಟ್ಟಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಜೂನ್ 19 ಮತ್ತು 20ರ ಮಧ್ಯರಾತ್ರಿ ಜಲೀಲ್ ಅಖ್ತರ್ ಅವರು ಪುಟ್ಟ ಮನೆಯ ಎದುರಿನ ಅಂಗಳದಲ್ಲಿದ್ದ ಮಲಗಿದ್ದರು. ಈ ವೇಳೆ, ಡಾಲ್ಖೋಲಾ ಪೊಲೀಸ್ ಠಾಣೆಯ ಸಿಬ್ಬಂದಿ ದಿಢೀರನೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದರು. ಮನೆಯ ಒಳಗಡೆ ಮಲಗಿದ್ದ ಅವರ ಪತ್ನಿ ತೌಫಾ ಬೀವಿ ಮತ್ತು ಕುಟುಂಬಸ್ಥರಿಗೆ ಈ ಬಂಧನದ ಸುಳಿವೇ ಸಿಕ್ಕಿರಲಿಲ್ಲ. ಬೆಳಗ್ಗೆ ಎದ್ದಾಗ, ಅಖ್ತರ್ ಅವರು ನಮಾಜ್‌ಗೆ ಹೋಗಿರಬಹುದೆಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಅವರ ಪತ್ನಿ, ಮನೆಯ ಗೂಡಿನಲ್ಲಿ ಅಖ್ತರ್ ಅವರ ಕುರ್ತಾ ತೂಗಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ, ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಅಖ್ತರ್ ಅವರ ಸೋದರಸಂಬಂಧಿ ಮತಿಯುರ್ ರಹಮಾನ್ ನೇತೃತ್ವದಲ್ಲಿ ಗ್ರಾಮಸ್ಥರು ಇಡೀ ದಿನ ಕಾಡು-ಮೇಡು ಅಲೆದು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಹಿಂದಿನ ರಾತ್ರಿ ಗ್ರಾಮಕ್ಕೆ ಪೊಲೀಸ್ ವಾಹನ ಬಂದಿದ್ದ ಮಾಹಿತಿಯನ್ನಾಧರಿಸಿ, ಕುಟುಂಬಸ್ಥರು ಹೊಸದಾಗಿ ಸ್ಥಾಪಿಸಲಾದ ಬಜಾರ್‌ಗಾಂವ್ ಪೊಲೀಸ್ ಕ್ಯಾಂಪ್‌ಗೆ ಹೋಗಿದ್ದಾರೆ. ಅಲ್ಲಿ ಜಲೀಲ್ ಅಖ್ತರ್ ಅವರು ಅಂಗಿಯಿಲ್ಲದೆ ಅರೆಬಟ್ಟೆಯಲ್ಲಿ ಲಾಕಪ್‌ನಲ್ಲಿ ಕುಳಿತಿರುವುದನ್ನು ಕಂಡಿದ್ದಾರೆ. ಅಲ್ಲಿ, ‘ಬಂದೂಕು ಹಿಡಿದಿದ್ದ ಪೊಲೀಸರು ತಮ್ಮನ್ನು ಬೆದರಿಸಿ, ಕುರ್ತಾ ಧರಿಸಲು ಸಹ ಅವಕಾಶ ನೀಡದೆ ಬಂಧಿಸಿ ಕರೆತಂದಿದ್ದಾರೆ’ ಎಂದು ಅಖ್ತರ್ ತಮ್ಮ ಕುಟುಂಬಕ್ಕೆ ತಿಳಿಸಿದ್ದಾರೆ.

ಜಲೀಲ್ ಅಖ್ತರ್ ಒಬ್ಬ ಅತ್ಯಂತ ಬಡ, ಭೂಮೀರಹಿತ ವ್ಯಕ್ತಿಯಾಗಿದ್ದು, ವಿದೇಶಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿ ಕೂಲಿ ಕೆಲಸ ಮಾಡುವ ತಮ್ಮ ಇಬ್ಬರು ಮಕ್ಕಳ ಆಸರೆಯಲ್ಲಿ ಜೀವನ ನಡೆಸುತ್ತಿದ್ದರು. ಅವರನ್ನು ಬಿಡುಗಡೆಗೊಳಿಸಲು ಕುಟುಂಬಸ್ಥರು ಎಲ್ಲ ದಾಖಲೆಗಳನ್ನು ಕಲೆಹಾಕಿದರು. ಅವರ ಬಳಿ 1995ರ ಮತದಾರರ ಪಟ್ಟಿ, 2002ರ ಮತಪರಿಷ್ಕರಣೆಯ IR ಪಟ್ಟಿ, 2026ರ ವಿಧಾನಸಭಾ ಚುನಾವಣೆಯ ವೋಟರ್ ಸ್ಲಿಪ್, ತಂದೆ ರೌಶನ್ ಅಲಿ ಅವರ ಹೆಸರಿನಲ್ಲಿದ್ದ ಜಮೀನಿನ ಹಕ್ಕುಪತ್ರಗಳು ಹಾಗೂ ಬಜಾರ್‌ಗಾಂವ್-2 ಪಂಚಾಯತ್ ನೀಡಿರುವ ಖಾಯಂ ನಿವಾಸಿ ಪ್ರಮಾಣಪತ್ರ – ಎಲ್ಲವೂ ಇವೆ.

Img

ಜುಲೈ 9 ರಂದು ಈ ಎಲ್ಲ ದಾಖಲೆಗಳನ್ನು ಡಾಲ್ಖೋಲಾ ಪೊಲೀಸ್ ಠಾಣೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿಗೆ ಕುಟುಂಬಸ್ಥರು ಸಲ್ಲಿಸಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ದಿನಗಳನ್ನು ದೂಡಿದ ಪೊಲೀಸರು, “ಮೇಲಾಧಿಕಾರಿಗಳಿಂದ ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ಗಡಿಪಾರು ಮಾಡಲು ತೀವ್ರ ಒತ್ತಡವಿದೆ, ನಾವು ಮೇಲಿನ ಆದೇಶವನ್ನು ಪಾಲಿಸುತ್ತಿದ್ದೇವೆ” ಎಂದು ಹೇಳಿ ಬಿಡುಗಡೆ ಮಾಡಲು ನಿರಾಕರಿಸಿದ್ದಾರೆ.

ಪೊಲೀಸರ ಈ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಖ್ತರ್ ಅವರ ಸಹೋದರ ಮತಿಯುರ್ ರಹಮಾನ್, “ನಾವು ಮುಸ್ಲಿಮರಾಗಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಗಡಿ ಜಿಲ್ಲೆಯಲ್ಲಿ ವಾಸಿಸುತ್ತಿರುವುದೇ ನಮ್ಮ ಅಣ್ಣನ ಬಂಧನಕ್ಕೆ ಕಾರಣವೇ” ಎಂದು ಪ್ರಶ್ನಿಸಿದ್ದಾರೆ.

ಅಖ್ತರ್ ಅವರನ್ನು ನಿಜಾಮ್‌ಪುರ ಮತ್ತು ಸಿಲಿಗುರಿ ಸಮೀಪದ ಫುಲ್‌ಬಾರಿ ಗಡಿಯ ಬಂಧನ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯ ಪೊಲೀಸರು ಇವರನ್ನು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಿ, ಬಾಂಗ್ಲಾದೇಶಕ್ಕೆ ‘ಪುಶ್‌ಬ್ಯಾಕ್’ (ಬಲವಂತವಾಗಿ ಗಡಿಯಾಚೆ ದೂಡುವುದು) ಮಾಡಲು ಎರಡು ಬಾರಿ ಯತ್ನಿಸಿದ್ದರು. ‘ಮತಧಿಕಾರ ಸುರಕ್ಷಾ ಸಮನ್ವಯ ಸಮಿತಿ’ಯ ಸಂಘಟಕರಾದ ದುಲಾಲ್ ರಾಜ್‌ಬಂಶಿ ಮತ್ತು ಸ್ಥಳೀಯರ ಸಮಯೋಚಿತ ಹಸ್ತಕ್ಷೇಪ ಮತ್ತು ರಾಯ್‌ಗಂಜ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಫಲವಾಗಿ ಈ ಗಡಿಪಾರು ಯತ್ನ ವಿಫಲವಾಗಿದೆ.

ವಿಶೇಷವೆಂದರೆ, ಬಿಎಸ್‌ಎಫ್ ತಂಡವು ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಸಿ, “ನಾವು ಯಾವುದೇ ಕಾರಣಕ್ಕೂ ಭಾರತೀಯ ನಾಗರಿಕನನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವುದಿಲ್ಲ” ಎಂದು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಬಂಧನ ಕೇಂದ್ರದಲ್ಲಿದ್ದಾಗ ಅಖ್ತರ್ ಸಂಪೂರ್ಣವಾಗಿ ಕುಗ್ಗಿಹೋಗಿದ್ದಾರೆ. “ನನಗೆ ಬಾಂಗ್ಲಾದೇಶದಲ್ಲಿ ಯಾರೂ ಗೊತ್ತಿಲ್ಲ, ನಾನು ಆ ದೇಶವನ್ನು ನೋಡಿಯೂ ಇಲ್ಲ. ಅಲ್ಲಿ ಭಿಕ್ಷೆ ಬೇಡಲೂ ನನ್ನಿಂದ ಸಾಧ್ಯವಿಲ್ಲ. ನನ್ನನ್ನು ಅಲ್ಲಿಗೆ ತಳ್ಳುವ ಬದಲು ಇಲ್ಲೇ ಕೊಂದುಬಿಡಿ” ಎಂದು ಕಣ್ಣೀರಿಟ್ಟಿದ್ದರು.

ಗಮನಾರ್ಹವೆಂದರೆ, ಪೋಲಿಸರು ದಾಖಲಿಸಿದ ಎಫ್‌ಐಆರ್‌ನಲ್ಲಿ, ಅಖ್ತರ್ 24 ವರ್ಷಗಳ ಹಿಂದೆ ಹಿಲಿ-ಮಾಲ್ಡಾ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಕುಟುಂಬ ಸಲ್ಲಿಕೆ ಮಾಡಿದ ದಾಖಲೆಗಳ ಪ್ರಕಾರ 1995ರ ಅಂದರೆ 31 ವರ್ಷಗಳ ಹಿಂದಿನ ಮತದಾರರ ಪಟ್ಟಿಯಲ್ಲೇ ಅವರ ಹೆಸರಿದೆ. ಹೀಗಿರುವಾಗ 24 ವರ್ಷಗಳ ಹಿಂದೆ ಬಂದಿದ್ದರೆಂಬ ಪೊಲೀಸರ ವಾದ ಸುಳ್ಳೆಂದು ಸಾಬೀತಾಗುತ್ತದೆ.

4 35

ಆಗಸ್ಟ್ 5 ರಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಕೇಸ್ ಡೈರಿಯಲ್ಲಿ (Case Diary) ಮತ್ತೊಂದು ವಿಚಿತ್ರ ವಿಷಯ ಬೆಳಕಿಗೆ ಬಂದಿದೆ. ಅದರಂತೆ, ಅಖ್ತರ್ 1982ರ ಚುನಾವಣೆಯಲ್ಲೇ ಮತ ಚಲಾಯಿಸಿದ್ದರು ಮತ್ತು ದೆಹಲಿಯಲ್ಲಿ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. 1982ರಿಂದಲೇ ಭಾರತೀಯ ದಾಖಲೆಗಳಲ್ಲಿದ್ದ ವ್ಯಕ್ತಿಯನ್ನು 24 ವರ್ಷಗಳ ಹಿಂದೆ ಬಂದ ಬಾಂಗ್ಲಾದೇಶಿ ಎಂದು ಎಫ್‌ಐಆರ್‌ನಲ್ಲಿ ಬರೆದಿರುವುದು ಪೊಲೀಸರ ತನಿಖೆಯ ವೈಫಲ್ಯ ಮತ್ತು ಉದ್ದೇಶಪೂರ್ವಕ ಕಿರುಕುಳವನ್ನು ಎತ್ತಿಹಿಡಿದಿದೆ.

ಸೆಪ್ಟೆಂಬರ್ 2 ರಂದು ಇಸ್ಲಾಂಪುರ ನ್ಯಾಯಾಲಯದ (ACJM) ವಿಚಾರಣೆ ವೇಳೆ, ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ತನಿಖಾಧಿಕಾರಿ (IO), ಜಲೀಲ್ ಅಖ್ತರ್ ಅವರ ವೋಟರ್ ಐಡಿ, ಪಾನ್ ಕಾರ್ಡ್, 1995ರ ಮತದಾರರ ಪಟ್ಟಿ ಹಾಗೂ 2002ರ SIR ದಾಖಲೆಗಳು 100%ರಷ್ಟು ನೈಜ. ಅವೆಲ್ಲವೂ ಅಧಿಕೃತ ಭಾರತೀಯ ದಾಖಲೆಗಳು ಎಂದು ಲಿಖಿತ ವರದಿ ಸಲ್ಲಿಸಿದ್ದಾರೆ. ಆದಾಗ್ಯೂ, ಅವರ ಜನ್ಮಸ್ಥಳ ಮತ್ತು ಪ್ರಸ್ತುತ ವಾಸಸ್ಥಳ ಬೇರೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತವೆ ಎಂಬ ತಾಂತ್ರಿಕ ನೆಪವನ್ನೊಡ್ಡಿ ಜಾಮೀನು ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆ.

ಇನ್ನು, ಅಖ್ತರ್ ಅವರನ್ನು ಬಂದೂಕು ತೋರಿಸಿ ಬಂಧಿಸಲಾಗಿದೆ ಎಂಬ ಕುಟುಂಬದ ಆರೋಪಕ್ಕೆ ಡಾಲ್ಖೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಂಖ ಚಟರ್ಜಿ ಅತ್ಯಂತ ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿದ್ದಾರೆ. “66 ವರ್ಷದ ವೃದ್ಧನನ್ನು ಬಂಧಿಸಲು ಲಾಠಿ ಸಾಕು” ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, “ನಮ್ಮ ತನಿಖೆಯಂತೆ ಅವರ ವಯಸ್ಸಿನ 21 ವರ್ಷದವರೆಗೆ ದಾಖಲೆ ಸಿಕ್ಕಿಲ್ಲ, ಈಗ ನ್ಯಾಯಾಲಯವೇ ಅವರ ನಾಗರಿಕತ್ವ ನಿರ್ಧರಿಸಲಿ” ಎಂದು ಜಾರಿಕೊಂಡಿದ್ದಾರೆ.

ನಾಗರಿಕತ್ವ ಕಾಯ್ದೆಯ ಪ್ರಕಾರ 1987ಕ್ಕಿಂತ ಮೊದಲು ಜನಿಸಿದ ವ್ಯಕ್ತಿಯು ತನ್ನ ಪೋಷಕರ ಜನ್ಮ ದಾಖಲೆಗಳನ್ನು ನೀಡಬೇಕಾದ ಅಗತ್ಯವಿಲ್ಲ. ಪ್ರಸ್ತುತ ಜಲೀಲ್ ಅಖ್ತರ್ ಅವರಿಗೆ ಸೆಪ್ಟೆಂಬರ್ 10 ರಂದು ಮುಂದಿನ ವಿಚಾರಣೆ ನಿಗದಿಯಾಗಿದ್ದು, ಎಲ್ಲ ಸರ್ಕಾರಿ ದಾಖಲೆಗಳಿದ್ದರೂ ಒಬ್ಬ ಬಡ, ನಿರಾಶ್ರಿತ ವೃದ್ಧ ನಾಗರಿಕರೊಬ್ಬರು ಆಡಳಿತ ಯಂತ್ರಾಂಗದ ಕೌರ್ಯಕ್ಕೆ ಸಿಲುಕಿ ಪೌರತ್ವ ಸಾಬೀತುಪಡಿಸಲು ಪರದಾಡುತ್ತಿರುವುದು ಆಳುವವರ ಕರಾಳ ಮುಖವನ್ನು ಅನಾವರಣಗೊಳಿಸಿದೆ.

ಮೂಲ: ದಿ ವೈರ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಣ್ಣೆಕಾಳು ಉತ್ಪಾದನೆ ಸ್ವಾವಲಂಬನೆ ಅಗತ್ಯ : ಡಿಸಿ ಶಿಲ್ಪಾ ಶರ್ಮಾ

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ,...

ರೈಲು ಶೌಚಾಲಯದಲ್ಲಿ ನೀರಿಲ್ಲದೆ ಪರದಾಟ: ಇಲಾಖೆಗೆ ದಂಡ ವಿಧಿಸಿದ ಶಿವಮೊಗ್ಗ ಗ್ರಾಹಕ ಆಯೋಗ

ರೈಲಿನಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ಸಂಬಂಧಿಸಿದಂತೆ ರೈಲ್ವೆ...

ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ

ಒಂದು ಕಡೆ ಚೀನಾ ನಮ್ಮ ಗಡಿ ಅತಿಕ್ರಮಿಸುತ್ತಿದ್ದರೆ, ಇನ್ನೊಂದು ಕಡೆ ಅದೇ...