ಮುಂದುವರಿದ ಕಂಗನಾ ಎಡವಟ್ಟು; “ರಘುಪತಿ ರಾಘವ ರಾಜಾರಾಮ್‌…” ರಾಷ್ಟ್ರಗೀತೆಯಾಗಿತ್ತೇ!

Date:

“ದೇಶದಲ್ಲಿ ಏಕತೆಯನ್ನು ಸಾಧಿಸಲು ಮಹಾತ್ಮ ಗಾಂಧಿ ಅವರು ‘ರಘುಪತಿ ರಾಘವ ರಾಜಾ ರಾಮ್’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದರು. ಆದ್ದರಿಂದ ರಾಮನ ಹೆಸರಿನಿಂದ ಯೋಜನೆಯನ್ನು ಕರೆಯುವುದು ಗಾಂಧಿಯ ಕನಸನ್ನು ಈಡೇರಿಸಿದಂತಾಗುತ್ತದೆಯೇ ಹೊರತು ಅವಮಾನ ಮಾಡಿದ ಹಾಗೆ ಆಗುವುದಿಲ್ಲ”, ಎಂದು ಕಂಗನಾ ಹೇಳಿದ್ದಾರೆ.

- Advertisement -

ಕೆಲವರು ಬಾಯಿಬಿಟ್ಟರೆ ವಿವಾದವಾಗುತ್ತದೆ. ಈ ಲಿಸ್ಟ್‌ನಲ್ಲಿ ಕಂಗನಾ ರಣಾವತ್‌ ಹೆಸರು ಬಹುಷಃ ಮೊದಲ ಸ್ಥಾನದಲ್ಲಿ ಇರಬಹುದೇನೋ. ಕಂಗನಾ ರಾಣಾವತ್ ಇದ್ದಲ್ಲಿ ವಿವಾದ ಇದ್ದೇ ಇರುತ್ತದೆ. ಈ ಹಿಂದೆ ದಿಲ್ಲಿಯ ರೈತ ಚಳವಳಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಗೆ ಮುಜುಗರಕ್ಕೆ ಕಾರಣವಾಗಿದ್ದ ಚಿತ್ರನಟಿ ಈಗ ಹಿಮಾಚಲದ ಮಂಡಿ ಕ್ಷೇತ್ರದ ಸಂಸದೆ. ಸಂಸದೆಯಾದ ನಂತರವೂ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದೆ. ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಗೆ ಹೊಸ ಹೆಸರು ನೀಡಿರುವ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಮರುನಾಮಕರಣವನ್ನು ಸಮರ್ಥಿಸುವ ವೇಳೆ ಕಂಗನಾ ಸುಳ್ಳೊಂದನ್ನು ಹೇಳಿಬಿಟ್ಟಿದ್ದಾರೆ. “ಮಹಾತ್ಮ ಗಾಂಧಿಯವರು ‘ರಘುಪತಿ ರಾಘವ ರಾಜಾರಾಮ್’ ಭಕ್ತಿಗೀತೆಯನ್ನು ಭಾರತದ ರಾಷ್ಟ್ರಗೀತೆಯನ್ನಾಗಿ ಮಾಡಿದ್ದರು”, ಎಂದು ಹೇಳಿ ಮತ್ತೊಂದು ಎಡವಟ್ಟು ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಅಧಿವೇಶನ ನಡೆಯುತ್ತಿರುವಾಗ ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ರಾಮಭಕ್ತಿಯನ್ನು ಉಲ್ಲೇಖಿಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದರು. “ಇದಕ್ಕೆ ‘ರಾಮ್ ಜಿ’ ಹೆಸರಿಟ್ಟರೆ ಗಾಂಧೀಜಿಗೆ ಹೇಗೆ ಅವಮಾನ ಮಾಡಿದಂತಾಗುತ್ತದೆ?” ಎಂದು ಪ್ರಶ್ನಿಸಿದ ಅವರು, “ದೇಶದಲ್ಲಿ ಏಕತೆಯನ್ನು ಹೆಚ್ಚಿಸಲು ಮಹಾತ್ಮ ಗಾಂಧಿ ‘ರಘುಪತಿ ರಾಘವ್ ರಾಜಾ ರಾಮ್’ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಿದ್ದರು. ಆದ್ದರಿಂದ ರಾಮನ ಹೆಸರಿನಿಂದ ಯೋಜನೆಯನ್ನು ಕರೆಯುವುದು ಗಾಂಧಿಯ ಕನಸನ್ನು ಈಡೇರಿಸಿದಂತಾಗುತ್ತದೆಯೇ ಹೊರತು ಅವಮಾನ ಮಾಡಿದ ಹಾಗೆ ಆಗುವುದಿಲ್ಲ”, ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ MGNREGA ಯೋಜನೆಯನ್ನು ‘ವಿಕ್ಷಿತ್ ಭಾರತ್–ಉದ್ಯೋಗ ಮತ್ತು ಜೀವನೋಪಾಯ ಗ್ಯಾರಂಟಿ ಮಿಷನ್’ ಎಂದು ಮರುನಾಮಕರಣ ಮಾಡಿದ್ದು, ಇದನ್ನು VB-G RAM G ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತಿದೆ. ಯೋಜನೆಯ ಹೆಸರಿನಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿರುವುದಕ್ಕೆ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ‘‘ರಾಷ್ಟ್ರಪಿತಗೆ ಮಾಡಿದ ಅವಮಾನ’ ಎಂದು ಆರೋಪಿಸಿವೆ.

ಕಂಗನಾ ರಾಣಾವತ್ ಅವರು ಚಿತ್ರರಂಗದಿಂದ ರಾಜಕೀಯಕ್ಕೆ ಧುಮುಕಿದವರು. 2021 ರಲ್ಲಿ ಬಿಜೆಪಿಯ ಟಿಕೆಟ್‌ನಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರ ರಾಜಕೀಯ ಜೀವನವು ಚಿತ್ರರಂಗದಂತೆಯೇ ಡ್ರಾಮಾಟಿಕ್. ರೈತರ ಚಳವಳಿ, ಬಾಲಿವುಡ್ ನಟರ ವಿಮರ್ಶೆ, ರಾಜಕೀಯ ನಾಯಕರ ಮೇಲಿನ ಆರೋಪಗಳು ಇವೆಲ್ಲವೂ ಅವರ ಹೇಳಿಕೆಗಳಲ್ಲಿ ಕಂಡುಬರುತ್ತವೆ. ಕಂಗನಾ ರಣಾವತ್‌  ಮಾಡಿಕೊಂಡಿರುವ ಕಾಂಟ್ರವರ್ಸಿಗಳು ಒಂದೆರಡಲ್ಲ. ಈ ಹಿಂದೆ ಬಾಂಗ್ಲಾದೇಶದ ಹಿಂಸಾಚಾರವನ್ನು ಪಂಜಾಬ್‌ನ ರೈತರ ಆಂದೋಲನಕ್ಕೆ ಜೋಡಿಸುವ ಮೂಲಕ ಕಂಗನಾ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಕೇಂದ್ರ ಸರ್ಕಾರದ ಹೊಗಳಿಕೆಯಲ್ಲಿ ಮುಳುಗಿದ್ದ ಕಂಗನಾ, ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶದ ಅನ್ನದಾತರನ್ನು ಕೆರಳಿಸಿದ್ದರು. ಪಂಜಾಬ್‌ನಲ್ಲಿ ರೈತರ ಹೆಸರಿನಲ್ಲಿ ಗೂಂಡಾಗಳು ಹಿಂಸಾಚಾರವನ್ನು ಹರಡುತ್ತಿದ್ದಾರೆ ಎಂದು ಕಂಗನಾ ರನಾವತ್ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲಿ ಅತ್ಯಾಚಾರ ಮತ್ತು ಕೊಲೆಗಳು ನಡೆಯುತ್ತಿದ್ದವು. ನಮ್ಮ ನಾಯಕತ್ವ ಬಲವಾಗಿಲ್ಲದಿದ್ದರೆ, ರೈತರ ಆಂದೋಲನದ ಸಮಯದಲ್ಲಿ ಪಂಜಾಬ್ ಅನ್ನು ಬಾಂಗ್ಲಾದೇಶವನ್ನಾಗಿ ಮಾಡಲಾಗುತ್ತಿತ್ತು. ಕೃಷಿ ಮಸೂದೆಯನ್ನು ಹಿಂಪಡೆಯಲಾಯಿತು ಇಲ್ಲದಿದ್ದರೆ ಈ ಗೂಂಡಾಗಳಿಗೆ ಬಹಳ ದೊಡ್ಡ ಯೋಜನೆ ಇತ್ತು. ಅವರು ದೇಶದಲ್ಲಿ ಏನು ಬೇಕಾದರೂ ಮಾಡಬಹುದಿತ್ತು ಅಂತ ಹೇಳಿ ರೈತರ ಆಕ್ರೋಶಕ್ಕೆ ಕಾರಣರಾಗಿದ್ದರು. 

ಅಷ್ಟೇ ಅಲ್ಲ ರೈತರ ಹೋರಾಟದ ವೇಳೆ ಕಂಗನಾ ರಣಾವತ್ ರೈತರನ್ನು ಖಲಿಸ್ತಾನಿಗಳು ಎಂದೂ ಕರೆದಿದ್ದರು. ಹೋರಾಟ ನಡೆಸುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಕರೆದಿದ್ದರು.  ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯನ್ನು ಹೊಗಳುತ್ತಾ, 1947 ರಲ್ಲಿ ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯ ‘ಭಿಕ್ಷೆ’ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದರು.  2014 ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಅವರು 2021 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು.  

2020 ರಲ್ಲಿ ಬಾಲಿವುಡ್ ಮಾಫಿಯಾಗಿಂತ ಮುಂಬೈ ಪೊಲೀಸರು ತನಗೆ ಹೆಚ್ಚು ಕಿರುಕುಳ ನೀಡಿದ್ದಾರೆ ಎಂದು ನಟಿ ಹೇಳಿದ್ದರು. ಅವರು ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಈ ನಗರದಲ್ಲಿ ತನಗೆ ಅಸುರಕ್ಷಿತ ಭಾವನೆ ಮೂಡುತ್ತಿದೆ ಎಂದಿದ್ದರು.

ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಬಿಜೆಪಿ ವಿರೋಧಿ ಗುಂಪುಗಳನ್ನು ಕಂಗನಾ ರನಾವತ್ ‘ತುಕ್ಡೆ ತುಕ್ಡೆ  ಗ್ಯಾಂಗ್’ ಎಂದು ಕರೆದು ಅವರು ದೇಶದ್ರೋಹಿಗಳು ಎಂದು ಹೇಳಿದ್ದರು.

2020 ರಲ್ಲಿ ಕೃಷಿಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಭಟಿಂಡಾದ ಬಹದ್ದೂರ್‌ಗಢ್ ಜಾಂಡಿಯನ್ ಗ್ರಾಮದ ಮಹಿಂದರ್ ಕೌರ್ ಅವರನ್ನು ಉಲ್ಲೇಖಿಸಿ ರನೌತ್ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.  ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೃದ್ಧ ಮಹಿಳೆಯೊಬ್ಬರ ಛಾಯಾಚಿತ್ರವನ್ನು ಒಳಗೊಂಡ ಪೋಸ್ಟ್‌ಗೆ ರನೌತ್ ಕಾಮೆಂಟ್ ಮಾಡಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಿದ್ದಿರು.  ವಯಸ್ಸಾದ ರೈತ ಮಹಿಳೆ ಮಹಿಂದರ್ ಕೌರ್ ಅವರನ್ನು ದಿಲ್ಲಿಯ ಶಾಹೀನ್ ಬಾಗ್ ಸಿಎಎ ವಿರೋಧಿ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಬಿಲ್ಕಿಸ್ ಬಾನೋ ಎಂದು ತಪ್ಪಾಗಿ ಗುರುತಿಸಿ, “ಪ್ರತಿಭಟನೆಗಳಿಗೆ 100 ರೂಪಾಯಿಗೆ ಲಭ್ಯ” ಎಂದು ವ್ಯಂಗ್ಯವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಅಕ್ರೋಶ ವ್ಯಕ್ತವಾದ ಹಿನ್ನಲೆಯನ್ನ ಆ ಪೋಸ್ಟ್‌ ಅನ್ನ ಡಿಲೀಟ್‌ ಮಾಡಿದ್ದರು.  

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎಂದು ಹೇಳಿದ್ದರು. ಟೈಮ್ಸ್ ನೌ ಸಮಿಟ್ ನಲ್ಲಿ ನಿರೂಪಕಿ ನವಿಕಾ ಕುಮಾರ್ ಅವರು ಕಂಗನಾ ರಣಾವತ್ ಅವರನ್ನು ಸಂದರ್ಶಿಸಿದಾಗ ಕಂಗನಾ ಈ ಹೇಳಿಕೆ ನೀಡಿದ್ದರು. ಈ ವೀಡಿಯೊ ವೈರಲ್ ಆಗಿದ್ದು, ಅವರ ಹೇಳಿಕೆ ಟ್ರೋಲ್‌ ಆಗಿತ್ತು. 

ಇನ್ನೂ ಇನ್ನೊಂದು ವಿಷಯ, ಬಿಜೆಪಿ ಗಾಂಧೀಜಿಯನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರನ್ನು ಆರೋಪಿಸಿ, ಕೆಲವೊಮ್ಮೆ ಬೆಂಬಲಿಸಿ, ತಮಗೆ ಬೇಕಾದ ಹಾಗೇ ಬಳಸಿಕೊಳ್ಳೋದರಲ್ಲಿ ಬಿಜೆಪಿ ನಿಸ್ಸೀಮ ಪಕ್ಷ. ಇದೀಗ ಕಂಗನಾ ರಾಣಾವತ್ ಅವರ ಹೇಳಿಕೆಯು ಮತ್ತೊಮ್ಮೆ ಸಾಬೀತುಪಡಿಸಿದೆ, ಕಂಗನಾ ಇಲ್ಲದೇ ವಿವಾದ ಇಲ್ಲ ಅಂತ. ಕಂಗನಾ ರಣಾವತ್‌ ಅವರ ನಾನ್ಸೆನ್ಸ್‌ ಹೇಳಿಕೆಗಳು ಕೇಂದ್ರ ನಾಯಕತ್ವ ಮತ್ತು ಪಕ್ಷದ ಹಿಮಾಚಲ ಪ್ರದೇಶ ಘಟಕ ಎರಡಕ್ಕೂ ತೀವ್ರ ಮುಜುಗರ ಉಂಟು ಮಾಡುತ್ತಿರುವುದಂತೂ ಸತ್ಯ.  

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...