ರೀಲ್ಸ್‌ ಮಾಡುವುದೂ ಉದ್ಯೋಗ – ರೈಲು ಬಿಟ್ಟ ಮೋದಿ

Date:

ರಾಹುಲ್‌ ಗಾಂಧಿ ದೃಷ್ಟಿಕೋನದಲ್ಲಿ; ರೀಲ್ಸ್‌ ನೋಡುವುದು ಒಂದು ವ್ಯಸನ. ಇದು ನಿರುದ್ಯೋಗದ ಲಕ್ಷಣ. ಚೀನಾದವರು ಫೋನ್ ತಯಾರು ಮಾಡಿ ಮುಂದುವರೆಯುತ್ತಿದ್ದರೇ, ನಮ್ಮ ದೇಶದ ಯುವಜನರು ಫೋನ್ ನೋಡುತ್ತಾ ಹಿಂದುಳಿಯುತ್ತಿದ್ದಾರೆ. ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯ ವೈಫಲ್ಯದ ಸಂಕೇತ.

- Advertisement -

ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ ಎಂದು ಹೇಳಿ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು. ಆದರೆ, ಭಾರತದ ಯುವಜನರು ಇಂದಿಗೂ ನಿರುದ್ಯೋಗಿಗಳಾಗಿ ಕಂಗಾಲಾಗಿದ್ದಾರೆ. ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ನಿರುದ್ಯೋಗದಿಂದ ಬಸವಳಿದ ಯುವಜನರು, “ಮೋದಿ ಅವರೇ, ಉದ್ಯೋಗಗಳನ್ನು ಎಲ್ಲಿ ಸೃಷ್ಟಿಸಿದ್ದೀರಿ” ಎಂದು ಕೇಳಿದರೆ, “ಪಕೋಡಾ ಮಾರುವುದೂ ಉದ್ಯೋಗವೇ” ಎಂದು ಮೋದಿ ಹೇಳಿದ್ದರು. ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ದೇಶದ ಯುವಜನರನ್ನು ಕಡೆಗಣಿಸಿ ಮಾತನಾಡಿದ್ದ ಮೋದಿ ಅವರು ಈಗ ಮತ್ತದೇ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಬಿಹಾರದ ಸಮಷ್ಠಿಪುರದಲ್ಲಿ ಸಾರ್ವಜನಿಕ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಮೋದಿ, “ಈಗ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ತಯಾರಾಗುತ್ತಿದೆಯಲ್ಲ, ಅವುಗಳಲ್ಲಿ ಗೋಚರಿಸುವ ಸೃಜನಶೀಲತೆಗೆ ಬಿಜೆಪಿ ಮತ್ತು ಎನ್‌ಡಿಎ ನೀತಿಗಳ ದೊಡ್ಡ ಕೊಡುಗೆಯಿದೆ. ರೀಲ್ಸ್ ಮೂಲಕ ಯುವಜನರು ಆದಾಯ ಗಳಿಸುತ್ತಿದ್ದಾರೆ” ಎಂದು ಹೇಳಿ ಅಗ್ಗದ ಡೇಟಾ ನೀಡುತ್ತಿರುವುದು ತಮ್ಮ ಸರ್ಕಾರದ ಸಾಧನೆಯೆಂದು ಹೇಳಿಕೊಂಡಿದ್ದಾರೆ.

ಮುಂದುವರೆದು, “ಈಗ 1 ಜಿಬಿ ಡೇಟಾ ಒಂದು ಚಹಾ ಕಪ್‌ಗಿಂತಲೂ ಕಡಿಮೆ ಬೆಲೆಯಲ್ಲಿದೆ. ಈ ‘ಚಾಯ್‌ ವಾಲಾ’ ಇದನ್ನು ಸಾಧಿಸಿದ್ದಾನೆ. ಹಲವು ದೇಶಗಳಲ್ಲಿ 1 ಜಿಬಿ ಡೇಟಾ ₹100-150 ರೂಪಾಯಿಗಳಿದ್ದರೆ, ಭಾರತದಲ್ಲಿ ಅದು ಸಾಮಾನ್ಯ ಜನರಿಗೂ ಕೂಡ ದೊರಕುತ್ತಿದೆ. ಬಿಹಾರದ ಯುವಜನರು ಇದರಿಂದ ಹೆಚ್ಚು ಪ್ರಯೋಜನ ಪಡೆದಿದ್ದಾರೆ. ಇದರಿಂದ ಯುವಜನರು ಇಂಟರ್ನೆಟ್ ಮೂಲಕ ರೀಲ್ಸ್ ತಯಾರಿಸಿ ತಮ್ಮ ಸೃಜನಶೀಲತೆಯನ್ನು ತೋರಿಸುತ್ತಿದ್ದಾರೆ, ಆದಾಯ ಸಂಪಾದಿಸುತ್ತಿದ್ದಾರೆ. ಇದು ಬಿಜೆಪಿ-ಎನ್‌ಡಿಎ ಸರ್ಕಾರದ ನೀತಿಗಳ ಕೊಡುಗೆ” ಎಂದು ಹೇಳಿದ್ದಾರೆ.

modipm

ಮೋದಿಯವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯುವಜನತೆ ತಮ್ಮ ಭವಿಷ್ಯದ ಬಗ್ಗೆ ಗಂಭಿರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮೋದಿ ಅವರ ‘ರೀಲ್ಸ್‌ ಉದ್ಯೋಗ’ದ ಹೇಳಿಕೆ ಬೆನ್ನಲ್ಲೇ, ಕಳೆದ ವರ್ಷ ರಾಹುಲ್ ಗಾಂಧಿ ಅವರು ಮಾತನಾಡಿದ್ದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ಸಂಭಾಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ‘ನೀವು ಎಷ್ಟು ಗಂಟೆ ನಿಮ್ಮ ಮೊಬೈಲ್ ಬಳಸುತ್ತೀರಿ?’ ಎಂದು ಒಬ್ಬ ವ್ಯಕ್ತಿಯನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವ್ಯಕ್ತಿ ‘ಹನ್ನೆರಡು ಗಂಟೆ’ ಎಂದು ಉತ್ತರಿಸಿದ್ದರು.

ಅವರ ಉತ್ತರಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, “ಭಾರತದಲ್ಲಿ ಉದ್ಯೋಗವಿಲ್ಲ, ಅದಕ್ಕಾಗಿಯೇ ನೀವು ನಿಮ್ಮ ಮೊಬೈಲ್ ಫೋನ್ ಅನ್ನು 12 ಗಂಟೆಗಳ ಕಾಲ ಬಳಸುತ್ತೀರಿ. ದೊಡ್ಡ ಉದ್ಯಮಿಗಳ ಮಕ್ಕಳು ರೀಲ್ಸ್ ನೋಡುವುದಿಲ್ಲ, ಅವರು ದಿನದ 24 ಗಂಟೆ ಹಣವನ್ನು ಎಣಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ದಿನದ 12 ಗಂಟೆ ರೀಲ್ಸ್‌ ನೋಡುವುದು, ಆ ರೀಲ್ಸ್‌ ಅನ್ನು ಮತ್ತೊಬ್ಬರಿಗೆ ಕಳಿಸುವುದು ನಶೆಯಲ್ಲವೇ? ಇದು 21ನೇ ಶತಮಾನದ ನಶೆ. ಇದು ಅತ್ಯಂತ ಅಪಾಯಕಾರಿ ನಶೆ. ಈ ನಶೆಯನ್ನ ಏಕೆ ಹಚ್ಚಿಸಲಾಗುತ್ತಿದೆ? ಏಕೆಂದರೆ, ಅದಾನಿ ಮತ್ತು ಅಂಬಾನಿ ಸೆಲ್‌ ಫೋನ್‌ನಲ್ಲಿ ದಿನಕ್ಕೆ 10-15 ನಿಮಿಷಕ್ಕಿಂತ ಹೆಚ್ಚು ಇರುವುದಿಲ್ಲ. ಅವರು ಹಣ ಸಂಪಾದಿಸುತ್ತಿದ್ದಾರೆ. ನಿಮ್ಮ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದರು.

ರಾಹುಲ್ ಗಾಂಧಿ ಅವರು ‘ರೀಲ್ಸ್‌ ಒಂದು ವ್ಯಸನ’ ಎಂದು ಹೇಳಿದ್ರೆ, ಪ್ರಧಾನಿ ನರೇಂದ್ರ ಮೋದಿ ಅವರು ರೀಲ್ಸ್‌ ಒಂದು ಉದ್ಯೋಗ ಎಂದು ಹೇಳುತ್ತಾರೆ.

ಮೋದಿ ಅವರ ದೃಷ್ಟಿಕೋನದಲ್ಲಿ; ಡೇಟಾ ಅಗ್ಗವಾಗಿದ್ದರಿಂದ ಯುವಕರು ರೀಲ್ಸ್‌ ತಯಾರಿಸಿ ಹಣ ಗಳಿಸುತ್ತಿದ್ದಾರೆ. ಇದು ಕೂಡ ಒಂದು ಉದ್ಯೋಗ ಎನ್ನುತ್ತಿರುವ ಅವರು, ತಮ್ಮ ಸರ್ಕಾರದ ಸಾಧನೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಜಯ್ ಶಾ ಮತ್ತು ನಿಖಿಲ್ ಗಡ್ಕರಿ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿರುವಾಗ ಬಿಹಾರದ ಯುವಕರು ರೀಲ್ಸ್‌ಗಳ ಮೇಲೆ ತಮ್ಮ ಸಮಯವನ್ನು ವ್ಯರ್ಥ ಮಾಡಬೇಕೆಂದು ಮೋದಿ ಬಯಸುತ್ತಿದ್ದಾರೆ.

ಈ ಲೇಖನ ಓದಿದ್ದೀರಾ? ಹಬ್ಬದ ದೀಪಗಳ ಹಿಂದೆ ಮೌನದ ನೋವುಗಳು

ರಾಹುಲ್‌ ಗಾಂಧಿ ದೃಷ್ಟಿಕೋನದಲ್ಲಿ; ರೀಲ್ಸ್‌ ನೋಡುವುದು ಒಂದು ವ್ಯಸನ. ಇದು ನಿರುದ್ಯೋಗದ ಲಕ್ಷಣ. ಚೀನಾದವರು ಫೋನ್ ತಯಾರು ಮಾಡಿ ಮುಂದುವರೆಯುತ್ತಿದ್ದರೇ, ನಮ್ಮ ದೇಶದ ಯುವಜನರು ಫೋನ್ ನೋಡುತ್ತಾ ಹಿಂದುಳಿಯುತ್ತಿದ್ದಾರೆ. ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯ ವೈಫಲ್ಯದ ಸಂಕೇತ.

ಆದರೂ, ಮೋದಿ ಹೇಳುವಂತೆ, ರೀಲ್ಸ್‌ ಮಾಡುವುದು ಅಷ್ಟೊಂದು ಸುಲಭವಾಗಿದೆಯಾ? ಡೇಟಾ ಅಗ್ಗವಾದರೆ, ರೀಲ್ಸ್‌ ಮಾಡಿ ಹಣ ಗಳಿಸಬಹುದಾ? ವಾಸ್ತವವೆಂದರೆ, ನಿಜಕ್ಕೂ ರೀಲ್ಸ್ ಮಾಡುವ ಯುವಜನರ ಪಾಡೇನು ಎಂಬುದೇ ಮೋದಿ ಅವರಿಗೆ ಗೊತ್ತಿಲ್ಲ.

ಯುವಜನರು ಹೇಳುವಂತೆ, ಒಂದು ರೀಲ್ ಮಾಡಲು 5 ರಿಂದ 6 ಗಂಟೆಗಳ ಶ್ರಮ ಬೇಕೇ ಬೇಕು. ಇಷ್ಟು ಶ್ರಮಪಟ್ಟು ರೀಲ್ ಮಾಡಿದರೂ ಕೂಡ ವೀಕ್ಷಣೆಗಳು ಕಡಿಮೆ. ಬಹುಸಂಖ್ಯಾತರಿಗೆ ಜಾಹೀರಾತಿನಿಂದ ತಿಂಗಳಿಗೆ ಅಥವಾ 15 ದಿನಕ್ಕೊಮ್ಮೆ ಬರುವ ಆದಾಯ ಕೇವಲ 1,000 ರೂ.ನಿಂದ 2,000 ಮಾತ್ರ. ಜತೆಗೆ, ಕ್ಯಾಮರಾ, ಮೊಬೈಲ್, ಎಡಿಟಿಂಗ್ ಉಪಕರಣಗಳ ವೆಚ್ಚ ಲಕ್ಷ ರೂ. ದಾಟುತ್ತದೆ. ಸಣ್ಣ ಕ್ರಿಯೇಟರ್‌ಗಳು ಸಾಲ ಮಾಡಿ ಅಥವಾ ಪೋಷಕರಿಂದ ಹಣ ಪಡೆದು ರೀಲ್ಸ್‌ ಸೃಷ್ಟಿಸುತ್ತಾರೆ.

ಅಲ್ಲದೆ, ಮೋದಿ ಅವರ ‘ಚಹಾದಷ್ಟು ಅಗ್ಗದ ಡೇಟಾ’ ಹೇಳಿಕೆಯನ್ನು ಯುವಜನರು ನಿರಾಕರಿಸುತ್ತಾರೆ. ಇತ್ತೀಚೆಗೆ ಡೇಟಾ ದರಗಳು 20-25% ಹೆಚ್ಚಾಗಿದೆ. 22 ರೂ.ಗೆ 1 GB ಡೇಟಾ ಸಿಗುತ್ತದೆ. ಒಂದು ವಿಡಿಯೋ ಸೃಷ್ಟಿಸಿ, ಅಪ್‌ಲೋಡ್‌ ಮಾಡಲು ದಿನಕ್ಕೆ 4-5 GB ಡೇಟಾ ಬೇಕಾಗುತ್ತದೆ. ಅಂದರೆ, ದಿನಕ್ಕೆ ಸುಮಾರು ₹70-80 ಖರ್ಚಾಗುತ್ತದೆ. ಇದು ಚಹಾಕ್ಕಿಂತ ಹೆಚ್ಚು ದುಬಾರಿಯಾಗಿದೆ ಎಂದು ಹೇಳುತ್ತಾರೆ.

task 01k8qkrb4sfsdt52wr9x0v8qva 1761729166 img 0

ಟೆಲಿಕಾಂ ಕಂಪನಿಗಳು ₹250 ಎಂಟ್ರಿ ಲೆವೆಲ್ ರೀಚಾರ್ಜ್ ಪ್ಲಾನ್‌ಗಳನ್ನು ನಿಲ್ಲಿಸಿವೆ. ಏರ್‌ಟೆಲ್ ಬೆಲೆಯನ್ನು ₹299 ಕ್ಕೆ ಹೆಚ್ಚಿಸಿದೆ. ಜಿಯೋ 1 GB ಯೋಜನೆಯನ್ನು ನಿಲ್ಲಿಸಿ, ಈಗ ಕನಿಷ್ಠ 1.5 GB ಯ ಯೋಜನೆಯನ್ನು ₹299 ರಿಂದ ಪ್ರಾರಂಭಿಸಿದೆ.

ರೀಲ್ಸ್‌ ಒಂದು ಉದ್ಯೋಗವಾ? ವಾಸ್ತವವೇನು?

ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಾರೆ. ಅದಕ್ಕಾಗಿ ತಮ್ಮ ಜೀವನಪೂರ್ತಿ ದುಡಿದ ಹಣವನ್ನು ಶಾಲಾ-ಕಾಲೇಜುಗಳಿಗೆ ಸುರಿಯುತ್ತಾರೆ. ಅಂತಹವರು ಯಾವತ್ತೂ ರೀಲ್ ಮಾಡುವುದನ್ನು ಉದ್ಯೋಗವೆಂದು ಪರಿಗಣಿಸುವುದಿಲ್ಲ.

ಪೋಷಕರ ಕನಸು 1

ಇನ್ನೊಂದು ವಿಚಾರ ಏನೆಂದರೆ, ಬಿಹಾರದ ಬಹುತೇಕ ಜನರು ಡಿಜಿಟಲ್ ಮಾಧ್ಯಮದಿಂದ ದೂರ ಉಳಿದಿದ್ದಾರೆ. ಬಿಹಾರ ಸರ್ಕಾರದ ಅಧಿಕೃತ ದತ್ತಾಂಶದ ಪ್ರಕಾರ, 13 ಕೋಟಿ ಜನಸಂಖ್ಯೆಯಲ್ಲಿ 98% ಜನರ ಬಳಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇಲ್ಲ. ಎಸ್‌ ಸಿ, ಎಸ್‌ ಟಿ ಮತ್ತು ಅತಿ ಹಿಂದುಳಿದ ವರ್ಗಗಳಲ್ಲಿ 1% ಕ್ಕಿಂತ ಕಡಿಮೆ ಜನರು ಮಾತ್ರವೇ ಕಂಪ್ಯೂಟರ್/ಲ್ಯಾಪ್‌ಟಾಪ್ ಹೊಂದಿದ್ದಾರೆ. ಇನ್ನು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಮತ್ತು ಕಾಂಟಾರ್ ನಡೆಸಿದ ‘ಭಾರತದಲ್ಲಿ ಇಂಟರ್ನೆಟ್ ವರದಿ 2024’ ಪ್ರಕಾರ, ಕೇರಳವು 72% ಇಂಟರ್ನೆಟ್ ಪ್ರವೇಶ ಹೊಂದಿದ್ದರೆ, ಬಿಹಾರವು 43% ಮಾತ್ರವೇ ಹೊಂದಿದೆ. ಇದು ಯುಪಿ ಮತ್ತು ಜಾರ್ಖಂಡ್‌ಗಿಂತಲೂ ಕಡಿಮೆ.

ಪ್ರಧಾನ ಮಂತ್ರಿ ಮೋದಿಯವರು ಪಕೋಡ್ ಮಾರಿ ಎಂದು ಹೇಳುವುದು, ರೀಲ್ ಮಾಡುವುದು ಉದ್ಯೋಗವೆಂದು ಬಿಂಬಿಸುವುದು, ಅಗ್ಗದ ಡೇಟಾ ನೀಡುವುದೇ ತಮ್ಮ ಸರ್ಕಾರದ ಸಾಧನೆಯೆಂದು ತೋರಿಸಲು ಯತ್ನಿಸುತ್ತಿರುವುದು, ಬಿಹಾರದ ನಿರುದ್ಯೋಗ ಮತ್ತು ಶಿಕ್ಷಣದ ಕರಾಳ ವಾಸ್ತವತೆಯಿಂದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುವ ಸರ್ಕಸ್‌ನಂತೆ ಕಾಣುತ್ತದೆ. ಇದು ‘ಮೇಕ್ ಇನ್ ಇಂಡಿಯಾ’ದಂತಹ ಯೋಜನೆಗಳ ವಿಫಲತೆಯನ್ನು ಸೂಚಿಸುತ್ತದೆ. ರೀಲ್ ಕೆಲವರಿಗೆ ಗಳಿಕೆಯ ಮಾರ್ಗವಾಗಿದ್ದರೂ, ಬಹುಪಾಲು ಯುವಕರಿಗೆ ಅದು ಉದ್ಯೋಗವಲ್ಲ. ನಿರುದ್ಯೋಗದಿಂದ ಬಳಲುತ್ತಿರುವವರಿಗೆ ‘ಟೈಮ್ ಪಾಸ್‌’ ಮಾಡುವ ಗೀಳು.

ಮೊದಲೇ ಉಲ್ಲೇಖಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಹೇಳಿದ್ದರು. ಆದರೆ, 2014ರಿಂದ 2023ರ ಅಂತ್ಯದ ವರೆಗೆ ಮೋದಿ ಸರ್ಕಾರ ಸೃಷ್ಟಿಸಿದ್ದು ಕೇವಲ 1.5 ಕೋಟಿ ಉದ್ಯೋಗ ಮಾತ್ರ. ಇದನ್ನು ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ. ಮೋದಿ ಭರವಸೆಯಂತೆ 9 ತಿಂಗಳಲ್ಲಿ ಸೃಷ್ಟಿಯಾಗಬೇಕಿದ್ದ ಉದ್ಯೋಗಗಳು 9 ವರ್ಷಗಳಲ್ಲಿ ಸೃಷ್ಟಿಯಾಗಿವೆ. ಹಾಗಾದರೆ, ಕಳೆದ 11 ವರ್ಷದಲ್ಲಿ ಸೃಷ್ಟಿಯಾಗಬೇಕಿದ್ದ 22 ಕೋಟಿ ಉದ್ಯೋಗಗಳು ಎಲ್ಲಿವೆ? ಈ ಪ್ರಶ್ನೆಗೆ ಮೋದಿ ಉತ್ತರಿಸುವರೇ?

ನಿರುದ್ಯೋಗ2

ಮೋದಿ ಆಡಳಿತದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿರುವ ವಿವಿಧ ವಲಯಗಳಲ್ಲಿ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಅವುಗಳನ್ನು ಭರ್ತಿ ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೇಶದಲ್ಲಿ ನಿರುದ್ಯೋಗ ದರವು 9% ಆಸುಪಾಸಿನಲ್ಲಿದೆ. ಕಳೆದ 45 ವರ್ಷಗಳಲ್ಲಿಯೇ ಕಂಡರಿಯದಷ್ಟು ನಿರುದ್ಯೋಗ ಪ್ರಮಾಣವು ಮೋದಿ ಆಡಳಿತದಲ್ಲಿ ಎದುರಾಗಿದೆ. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದ ಮೋದಿ ಅವರು, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಎಂಬಿಬಿಎಸ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆದವರಿಗೆ ಪಕೋಡಾ ಮಾರಲು ಹೇಳುತ್ತಾರೆ. ಈಗ ರೀಲ್ಸ್ ಮಾಡುವುದೇ ಸಾಧನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಏನು? ಯಾಕೆಂದರೆ, ಮೋದಿ ಸರ್ಕಾರ ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಹೋಗಲಿ, ಮೋದಿ ಅವರು ಹೇಳಿದಂತೆ ಪಕೋಡ ಮಾರಿಯೇ ಬದುಕೋಣ ಎಂದರೂ, ಮೋದಿ ಅವರ ಆಡಳಿತದಲ್ಲಿ ಅದು ಕಷ್ಟವಿದೆ. ಪಕೋಡಾ ಮಾರುವುದು ಅವಮಾನವಲ್ಲ. ಆದರೆ, ಪಕೋಡ ಮಾರಲು ಕೇಂದ್ರ ಸರ್ಕಾರ ಯಾವ ಯೋಜನೆಯನ್ನೂ ಕೊಟ್ಟಿಲ್ಲ. ಪಕೋಡ ಮಾರಿಯೇ ಜೀವನ ನಡೆಸೋಣ ಎಂದರೆ, ಅಡುಗೆ ಅನಿಲ, ಅಡುಗೆ ಎಣ್ಣೆಯ ಬೆಲೆಯನ್ನೂ ಪ್ರಧಾನಿ ಮೋದಿ ಸರ್ಕಾರ ಏರಿಸಿದೆ. ಪಕೋಡಾ ಮಾರುವುದು ಉದ್ಯೋಗ ಎಂದು ಹೇಳಿ ಅಸಡ್ಡೆ ಮೆರೆದಿದ್ದ ಮೋದಿ ವಿರುದ್ಧ ಜನರು ಸಿಡಿದಿದ್ದರು. ಉದ್ಯೋಗ ಎಲ್ಲಿ ಎಂದು ಮೋದಿ ಅವರನ್ನು ಪ್ರಶ್ನೆ ಮಾಡಿದ್ದರು. ಜನರ ಈ ಮಾತಿಗೆ, ಈ ಪ್ರಶ್ನೆಗೆ ಎಚ್ಚೆತ್ತುಕೊಳ್ಳದ ಮೋದಿ ಅವರು ಇದೀಗ, ರೀಲ್ ಮಾಡೋದು ಕೂಡ ಒಂದು ಉದ್ಯೋಗ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ.

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ ಪಿಳ್ಳೈ ಮುಡಿಗೇರಿದ ನೊಬೆಲ್ ಶಾಂತಿ ಪುರಸ್ಕಾರ!

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ ಕೆಫೆ’: 44 ಲಕ್ಷ ರೂ. ವಹಿವಾಟು!

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ; ಮೋದಿ ಸರ್ಕಾರಕ್ಕೆ ಕೇರಳದ ಪೆಟ್ಟು

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ...