ಬೆಲೆ ಏರಿಕೆ | ಮೋದಿ ಪಡೆಯ ಸರಳತೆಯ ಸೋಗಲಾಡಿತನವೂ, ವಿಪಕ್ಷಗಳ ದೌರ್ಬಲ್ಯವೂ

Date:

ತಮ್ಮ ಸ್ವಂತ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಹಾಗೂ ಒಂದೊಂದು ಸಾರ್ವಜನಿಕ ರ್‍ಯಾಲಿಗಳಿಗೆ ಬರೋಬ್ಬರಿ 25ರಿಂದ 30 ಕೋಟಿ ರೂ.ಗಳನ್ನು ವ್ಯಯಿಸುವ ನಾಯಕರು ಈಗ ಸರಳತೆಯ ಸೋಗಲಾಡಿತನ ಪ್ರದರ್ಶಿಸುತ್ತಿದ್ದಾರೆ. ಜನರ ಹಸಿವನ್ನು ಅಣಕಿಸುತ್ತಿದ್ದಾರೆ.

ಯಾವುದೇ ಒಬ್ಬ ಕಾಂಗ್ರೆಸ್ ಪ್ರಧಾನ ಮಂತ್ರಿ ಚುನಾವಣೆಯಲ್ಲಿ ಬಹುಮತದ 272ರ ಗಡಿಗಿಂತ ಕಡಿಮೆ ಸೀಟುಗಳನ್ನು ಪಡೆದು, ಅಮೆರಿಕದ ಬ್ಲ್ಯಾಕ್‌ಮೇಲ್‌ಗೆ ಶರಣಾಗಿದ್ದಾರೆ ಎಂಬ ಆರೋಪ ಎದುರಿಸುತ್ತಾ, ವಿದೇಶಾಂಗ ನೀತಿಯನ್ನು ಹಳ್ಳ ಹಿಡಿಸಿ, ಮತ ಕಳ್ಳತನದ ಆರೋಪಗಳು ಹಾಗೂ ದೇಶದ ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಗಂಭೀರ ಬಿಕ್ಕಟ್ಟುಗಳ ನಡುವೆ ಸಿಕ್ಕಿಕೊಂಡಿದ್ದರೆ ಹೇಗಿರುತ್ತಿತ್ತು? ಅವರ ವಿರುದ್ಧ ಬಿಜೆಪಿಯ ಆಕ್ರಮಣಶೀಲತೆ ಮತ್ತು ಅಬ್ಬರ ಎಷ್ಟಿರುತ್ತಿತ್ತು? ಒಮ್ಮೆ ಯೋಚಿಸಿ. ಆದರೆ, ಈಗೇನಾಗುತ್ತಿದೆ ಎಂಬುದನ್ನೂ ಗಮನಿಸಿ.

- Advertisement -

ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ವಿರೋಧ ಪಕ್ಷಗಳು ತೋರುತ್ತಿರುವ ಮೃದು ಧೋರಣೆ ಆಶ್ಚರ್ಯಕರವಾಗಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಮಾಡಿರುವ ಭಾಷಣಗಳು ಕೇವಲ ಅವರ ವಾಕ್ಚಾತುರ್ಯದ ರೂಪಾಂತರ ಮಾತ್ರವಲ್ಲ; ಬದಲಿಗೆ, ಅವರು ಸಾರ್ವಜನಿಕರನ್ನು ಕಲ್ಪನಾ ಲೋಕದಿಂದ ದಿಢೀರನೆ ಹತಾಶೆಯ ಪ್ರಪಾತಕ್ಕೆ ತಳ್ಳಿದ್ದಾರೆ. ವಿಶ್ವಗುರು ಕಲ್ಪನೆಗಳು, ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಎಂಬ ಬಡಾಯಿಗಳು ಮತ್ತು ಅಚ್ಛೇ ದಿನದ ಭ್ರಮೆಗಳೊಂದಿಗೆ ಹೆಣೆಯಲಾಗಿದ್ದ ಕಲ್ಪನಾ ಪ್ರಪಂಚವು ಈಗ ಸಂಪೂರ್ಣವಾಗಿ ಛಿದ್ರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿದೆ, ನಿಜ. ಆದರೆ, ಈ ಯುದ್ಧವು ಇದೇ ವರ್ಷದ ಫೆಬ್ರವರಿ 28ರಂದೇ ಪ್ರಾರಂಭವಾಗಿತ್ತು. ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಯಗಳು ಸವಾಲುಗಳನ್ನು ತಂದೊಡ್ಡುವುದು ಸಹಜವೂ ಆಗಿತ್ತು. ಅದು ಎಲ್ಲರಿಗೂ ತಿಳಿದಿತ್ತು. ಆದರೂ, ಭಾರತವು ಅದಕ್ಕೆ ತಕ್ಕ ಸಿದ್ಧತೆ ಅಥವಾ ಪ್ರತಿಕ್ರಿಯೆಯನ್ನು ಹೊಂದಿರಲಿಲ್ಲ ಎಂಬುದು ಅಷ್ಟೇ ಕಹಿ ಸತ್ಯ. ಭಾರತದ ಅದ್ಭುತ ಆರ್ಥಿಕ ಬೆಳವಣಿಗೆಯ ಕುರಿತಾದ ಮಾತುಗಳೆಲ್ಲವೂ ಕೇವಲ ಪೊಳ್ಳು ಮಾತುಗಳಾಗಿದ್ದು, ಅವುಗಳು ಗಟ್ಟಿಯಾದ ಅಡಿಪಾಯದ ಬದಲಿಗೆ ಸುಳ್ಳು ಬುನಾಧಿಗಳ ಮೇಲೆ ನಿಂತಿದ್ದವು ಎಂಬುದು ಈಗ ಸಾಬೀತಾಗಿದೆ.

ಕೇಂದ್ರ ಸರ್ಕಾರವು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದಿದ್ದ ‘ಮೇಕ್ ಇನ್ ಇಂಡಿಯಾ’ ಯೋಜನೆ ಸಂಪೂರ್ಣ ವಿಫಲವಾಗಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಎಷ್ಟು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ ಎಂಬ ಪ್ರಶ್ನೆ ಎದುರಾಗಿದೆ. ದೇಶದ ತಲಾ ಆದಾಯದ ಪಟ್ಟಿಯಲ್ಲಿ ಭಾರತವು ಜಾಗತಿಕವಾಗಿ ಕೆಳಮಟ್ಟದ ಅರ್ಧ ಭಾಗದಲ್ಲಿದೆ. ಈ ವಾಸ್ತವವನ್ನು ಅರಿಯದೆ, ನಾವು ಕೇವಲ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಸಂಭ್ರಮಿಸುತ್ತಿದ್ದೆವು. ಪ್ರಸ್ತುತ ಎದುರಾಗಿರುವ ಈ ಆರ್ಥಿಕ ಬಿಕ್ಕಟ್ಟಿಗೆ ಕೇವಲ ಪಶ್ಚಿಮ ಏಷ್ಯಾದ ಯುದ್ಧ ಮಾತ್ರ ಕಾರಣವಲ್ಲ; ಬದಲಿಗೆ ಮೋದಿಯವರ ದೂರದೃಷ್ಟಿಯ ಕೊರತೆಯೂ ಕಾರಣ. ಈಗ, ಅವರ ಬದ್ಧತೆಯಿಲ್ಲದ ಆಡಳಿತದ ಅಸಲಿ ಮುಖವಾಡ ಕಳಚಿ ಬಿದ್ದಿದೆ.

ಕಚ್ಚಾ ತೈಲ ಬೆಲೆಯ ನೈಜ ಸತ್ಯವನ್ನು ಅವಲೋಕಿಸಿ ನೋಡೋಣ; ಈ ಹಿಂದೆ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಆ ಸಮಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100ರಿಂದ 140 ಡಾಲರ್‌ಗಳ ವರೆಗೆ ತಲುಪಿದ್ದ ಅತ್ಯಂತ ಕಠಿಣ ಪರಿಸ್ಥಿತಿಯನ್ನು ನಿರಂತರವಾಗಿ ಎದುರಿಸಿತ್ತು. ಆದಾಗ್ಯೂ, 2010ರಲ್ಲಿ ದೇಶದಲ್ಲಿ ಡೀಸೆಲ್‌ಅನ್ನು ಲೀಟರ್‌ಗೆ 38.10 ರೂ., 2011ರಲ್ಲಿ 37.75 ರೂ., 2012ರಲ್ಲಿ 40.91 ರೂ., 2013ರಲ್ಲಿ 48.63 ರೂ. ಹಾಗೂ 2014ರಲ್ಲಿ 55.48 ರೂ. ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು.

 ಆದರೆ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಜಾಗತಿಕ ಕಚ್ಚಾ ತೈಲದ ಬೆಲೆಗಳು ನಾಟಕೀಯವಾಗಿ ಕುಸಿದು, ಪ್ರತಿ ಬ್ಯಾರೆಲ್‌ಗೆ ಕೇವಲ 40ರಿಂದ 70 ಡಾಲರ್‌ಗಳ ಆಸುಪಾಸಿಗೆ ತಲುಪಿದ್ದವು. ಮೋದಿ ಅವರು ಅತ್ಯಂತ ಅದೃಷ್ಟಶಾಲಿಯಾಗಿದ್ದರು. ಆದರೂ, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಿಲ್ಲ. ಆದಾಗ್ಯೂ, 2019ರವರೆಗೆ ದೇಶದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 60 ರೂ. ಗಿಂತ ಕಡಿಮೆ ಇತ್ತು. ಆದರೆ, ಜಾಗತಿಕವಾಗಿ ತೈಲ ಬೆಲೆ ತೀರಾ ಅಗ್ಗವಾಗಿದ್ದರೂ ಸಹ 2020ರಲ್ಲಿ ಬೆಲೆಯು 80 ರೂ.ಗಳ ಗಡಿ ದಾಟಿತು. 2022ರ ವೇಳೆಗೆ ದೇಶದ ಅನೇಕ ನಗರಗಳಲ್ಲಿ ಡೀಸೆಲ್ ಬೆಲೆ 90 ರೂ.ಗೆ ಹೆಚ್ಚಾಯಿತು.

ಪ್ರಸ್ತುತ, ಯುದ್ಧದ ಸನ್ನಿವೇಶದಲ್ಲೂ ಜಾಗತಿಕ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 102 ಡಾಲರ್ ಆಸುಪಾಸಿನಲ್ಲಿದ್ದರೆ, ಭಾರತದಲ್ಲಿ ಡೀಸೆಲ್ ಬೆಲೆ 90 ರೂ.ಗಿಂತ ಹೆಚ್ಚಾಗಿದೆ. ಮೋದಿಯವರು ಸದ್ಯದ ಬಿಕ್ಕಟ್ಟಿಗೆ ಪಶ್ಚಿಮ ಏಷ್ಯಾದ ಯುದ್ಧವನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಕೇವಲ 40ರಿಂದ 50 ಡಾಲರ್‌ಗಳಿದ್ದಾಗ ಅದರ ಆರ್ಥಿಕ ಲಾಭವನ್ನು ಅವರು ದೇಶದ ಗ್ರಾಹಕರಿಗೆ ವರ್ಗಾಯಿಸಿದ್ದರೇ ಎಂಬ ಪ್ರಶ್ನೆ ಕಾಡುತ್ತದೆ. ಉತ್ತರ ಸ್ಪಷ್ಟ; ಖಂಡಿತವಾಗಿಯೂ ಇಲ್ಲ.

ಕಳೆದ 11 ವರ್ಷಗಳ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಪರೀತ ತೆರಿಗೆಗಳನ್ನು ವಿಧಿಸುವ ಮೂಲಕ ಮೋದಿ ಸರ್ಕಾರವು ಬರೋಬ್ಬರಿ 43 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ ಎಂದು ಕಾಂಗ್ರೆಸ್ ಅಂಕಿ-ಅಂಶಗಳ ಸಮೇತ ಆರೋಪಿಸಿದೆ. ಇದು ಜನಸಾಮಾನ್ಯರ ಕಷ್ಟಗಳು ಮತ್ತು ದುಸ್ಥಿತಿಯ ಮೇಲೆ ಸರ್ಕಾರವೇ ನಡೆಸಿದ ಬೃಹತ್ ಆರ್ಥಿಕ ದಾಳಿಯಾಗಿದೆ. ದಿನವೊಂದಕ್ಕೆ ಸರಿಸುಮಾರು 1,000 ಕೋಟಿ ರೂಪಾಯಿಗಳಷ್ಟು ಲಾಭವನ್ನು ಜನರಿಂದ ಲೂಟಿ ಮಾಡಲಾಗಿದೆ.

ಅಷ್ಟೇ ಅಲ್ಲದೆ, ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಚುನಾವಣೆಗಳು ಮುಗಿದ ತಕ್ಷಣವೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಖಯಾಲಿ ನಿರಂತರವಾಗಿ ಮುಂದುವರೆದಿದೆ. ಕನಿಷ್ಠ ಪಕ್ಷ ದೇಶದ ಜನರು ಇಂತಹ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ದುರ್ದಿನಗಳಲ್ಲಾದರೂ ಪ್ರಧಾನಿ ಮೋದಿಯವರು ಸಾರ್ವಜನಿಕರ ಮೇಲೆ ಕೊಂಚ ಕರುಣೆ ತೋರಬೇಕಿತ್ತು. ಆದರೆ, ಅವರು ಜನರ ಮೇಲೆ ದಯೆ ತೋರಲಿಲ್ಲ.

ಇಂಧನ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ ಬಡವರಿಗೆ ಕಪ್ಪು ಮಾರುಕಟ್ಟೆಯಲ್ಲಿ 1,200 ರೂ.ಗೆ ಸಿಗುತ್ತಿದ್ದ ಅಡುಗೆ ಅನಿಲದ ಬೆಲೆ ಈಗ ಬರೋಬ್ಬರಿ 4,000 ರೂ.ಗಳಿಗೆ ಜಿಗಿದಿದೆ. ನೀವು ರಸ್ತೆಯಲ್ಲಿ ದುಡಿಯುವ ಯಾವುದೇ ಒಬ್ಬ ಸಾಮಾನ್ಯ ಕಾರ್ಮಿಕನ ಬಳಿ ಮಾತನಾಡಿದರೂ ಸಹ, ದಿನಬಳಕೆ ವಸ್ತುಗಳ ಬೆಲೆ ದಿಢೀರನೆ ಏರಿಕೆಯಾಗಿರುವ ಕಾರಣದಿಂದಾಗಿ ಅವರು ದಿನದ ಒಂದೊತ್ತಿನ ಊಟವನ್ನೇ ಬಿಡುತ್ತಿದ್ದಾರೆ ಅಥವಾ ಕೇವಲ ಬಿಸ್ಕತ್ತು ಮತ್ತು ಬಾಳೆಹಣ್ಣುಗಳನ್ನು ತಿಂದು ಜೀವ ದೂಡುತ್ತಿದ್ದಾರೆ ಎಂಬ ಕಹಿ ಸತ್ಯ ನಿಮಗೆ ಅರಿವಾಗುತ್ತದೆ.

ಇಂತಹ ಹಸಿವಿನ ಭೀಕರ ವಾಸ್ತವದ ಮುಂದೆ, ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವ ನಾಟಕವಾಡುವುದು ಅಥವಾ ರಾಜಭವನದ ನಿವಾಸಿಗಳು ಮಿತವ್ಯಯದ ಬಗ್ಗೆ ಮಾತನಾಡುವುದು ಅತ್ಯಂತ ಹಾಸ್ಯಾಸ್ಪದ ಪ್ರದರ್ಶನದಂತೆ ಕಾಣುತ್ತದೆ. ತಮ್ಮ ಸ್ವಂತ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಹಾಗೂ ಒಂದೊಂದು ಸಾರ್ವಜನಿಕ ರ್‍ಯಾಲಿಗಳಿಗೆ ಬರೋಬ್ಬರಿ 25ರಿಂದ 30 ಕೋಟಿ ರೂ.ಗಳನ್ನು ವ್ಯಯಿಸುವ ನಾಯಕರು ಮೊದಲು ಇಂತಹ ಸರಳತೆಯ ಸೋಗಲಾಡಿತನವನ್ನು ನಿಲ್ಲಿಸಬೇಕು. ಈ ದೇಶವು ಮಹಾತ್ಮಾ ಗಾಂಧೀಜಿಯವರನ್ನು ನೋಡಿದೆ, ಅವರು ದೇಶದಲ್ಲಿ ಬಿಕ್ಕಟ್ಟು ಎದುರಾದಾಗ ತಮ್ಮ ಐಷಾರಾಮಿ ಜೀವನವನ್ನು ತೊರೆಯುವ ನಾಟಕವನ್ನೇನೂ ಮಾಡಲಿಲ್ಲ; ಏಕೆಂದರೆ ಸರಳತೆ ಎಂಬುದು ಅವರ ಜೀವನದ ಸಹಜ ಶೈಲಿಯಾಗಿತ್ತು.

ಈಗ ಪ್ರಶ್ನೆಯೇನೆಂದರೆ, ವಿರೋಧ ಪಕ್ಷಗಳು ಕೇವಲ ಟ್ವೀಟ್ ಮಾಡುತ್ತಾ ಕುಳಿತುಕೊಳ್ಳಬೇಕೇ ಅಥವಾ ಹೋರಾಡಬೇಕೇ? ಒಂದು ವೇಳೆ ಯಾವುದೇ ಒಬ್ಬ ಕಾಂಗ್ರೆಸ್ ಪ್ರಧಾನ ಮಂತ್ರಿಯು ಇಂತಹ ದಯನೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಆ ಪ್ರಧಾನಿಯನ್ನು ಬಿಜೆಪಿ ನಾಯಕರು ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಾಯಿಸುತ್ತಿದ್ದರು. ಇಡೀ ದೇಶದ ವ್ಯವಸ್ಥೆಯನ್ನೇ ಸ್ತಬ್ಧಗೊಳಿಸುತ್ತಿದ್ದರು. ಆದರೆ, ಇಂದಿನ ವಿರೋಧ ಪಕ್ಷಗಳು ಗಾಢ ನಿದ್ರೆಗೆ ಜಾರಿದಂತಿದ್ದು, ಅಪರೂಪಕ್ಕೊಮ್ಮೆ ಎಚ್ಚರಗೊಂಡು ಕೇವಲ ಸಣ್ಣಪುಟ್ಟ ವಾದಗಳನ್ನು ಮಾಡುತ್ತಾ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುತ್ತಾ ಕಾಲ ಕಳೆಯುತ್ತಿವೆ. ದೇಶದ ಜನರು ಎಂದಾದರೂ ಒಂದು ದಿನ ಮೋದಿಯವರ ಈ ಎಲ್ಲ ತಂತ್ರಗಳಿಂದ ಬೇಸತ್ತು, ಅಧಿಕಾರವನ್ನು ತಟ್ಟೆಯಲ್ಲಿಟ್ಟು ನಮಗೆ ತಂದು ನೀಡುತ್ತಾರೆ ಎಂಬ ಭ್ರಮೆಯು ವಿರೋಧ ಪಕ್ಷದ ನಾಯಕರ ಭಗ್ನಗೊಂಡ ಹೃದಯಗಳಲ್ಲಿ ಸುಪ್ತವಾಗಿ ಅಡಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತ ಕಳ್ಳತನದ ವಿರುದ್ಧ ಅತ್ಯಂತ ಪ್ರಬಲವಾಗಿ ತಮ್ಮ ಪ್ರಚಾರವನ್ನು ಆರಂಭಿಸಿ, ಚುನಾವಣಾ ಆಯೋಗವನ್ನೇ ಕಟಕಟೆಯಲ್ಲಿ ನಿಲ್ಲಿಸುವಂತಹ ಗಟ್ಟಿಯಾದ ದತ್ತಾಂಶಗಳನ್ನು ಬಿಡುಗಡೆ ಮಾಡಿದರು. ಆಗ, ಯಾವುದೇ ನಂಬಿಕಸ್ಥ ಪರಿಹಾರ ಸಿಗುವ ಮುನ್ನವೇ ಅವರು ಆ ಹೋರಾಟವನ್ನು ಅರ್ಧದಲ್ಲೇ ಕೈಬಿಡುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು?

ಬಿಹಾರ ಚುನಾವಣೆಯು ವೋಟ್‌ ಚೋರಿಯಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲೇ ನಡೆದಿತ್ತು. ಆದರೆ, ಅಲ್ಲಿ ಬಂದ ಅಸಹಜ ಫಲಿತಾಂಶ ಮತ್ತು 90%ರಷ್ಟು ತಲುಪಿದ ಬಿಜೆಪಿಯ ಯಶಸ್ಸಿನ ದರದ ನಂತರ ವಿರೋಧ ಪಕ್ಷಗಳು ತೋರಿದ ಪ್ರತಿಕ್ರಿಯೆ ಕೇವಲ ಒಂದು ಸಣ್ಣ ಗೊಣಗಾಟಕ್ಕಿಂತ ಹೆಚ್ಚೇನೂ ಆಗಿರಲಿಲ್ಲ. ಚುನಾವಣಾ ಫಲಿತಾಂಶದ ನಂತರ ರಾಷ್ಟ್ರೀಯ ಜನತಾ ದಳದ (RJD) ನಾಯಕ ತೇಜಸ್ವಿ ಯಾದವ್ ಅವರು ಕಾಯ್ದುಕೊಂಡ ಮೌನವು ಅವರ ಊಹಿಸಲಾಗದ ದುರ್ಬಲತೆಯನ್ನು ಪ್ರದರ್ಶಿಸಿತು.

ಸದ್ಯ, ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವನ್ನು ಬಹಿರಂಗ ಲೂಟಿ ಎಂದು ಮಮತಾ ಬ್ಯಾನರ್ಜಿ ಕರೆದಿದ್ದಾರೆ. ಹೋರಾಟ ನಡೆಸುವುದಾಗಿಯೂ ಹೇಳಿದ್ದಾರೆ. ಆದರೆ, ಅವರೂ ಕಾಲಕ್ರಮೇಣ ಮೌನವಾಗಬಹುದೇ ಅಂತ ಕಳವಳವೂ ಇದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲಿರುವ ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಆದರೂ, ಚುನಾವಣಾ ಪ್ರಕ್ರಿಯೆಯಲ್ಲಿನ ದೋಷಗಳನ್ನು ಸರಿಪಡಿಸಲು ಯಾವುದೇ ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ಅವರೂ ಕೂಡ ಇದುವರೆಗೆ ಪ್ರಕಟಿಸಿಲ್ಲ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್‌ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!

ರಾಹುಲ್ ಗಾಂಧಿಯವರು ಸಹ, “ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಬೆಂಬಲದೊಂದಿಗೆ ಮತಗಳನ್ನು ಬಿಜೆಪಿ ಸ್ಪಷ್ಟವಾಗಿ ಕದ್ದಿದೆ. ನಾವು ಮಮತಾ ಜಿ ಅವರ ಮಾತನ್ನು ಒಪ್ಪುತ್ತೇವೆ. ಬಂಗಾಳದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಕದಿಯಲಾಗಿದೆ. ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ 2024ರ ಲೋಕಸಭಾ ಚುನಾವಣೆಗಳಲ್ಲೂ ನಾವು ಇದೇ ರೀತಿಯ ತಂತ್ರಗಳನ್ನು ನೋಡಿದ್ದೇವೆ. ಚುನಾವಣೆ ಕಳ್ಳತನ, ಸಾಂಸ್ಥಿಕ ಕಳ್ಳತನ – ಈಗ ನಮಗೆ ಬೇರೆ ದಾರಿ ಇಲ್ಲ!” ಎಂದು ತೀಕ್ಷ್ಣವಾದ ಟ್ವೀಟ್ ಮಾಡಿದರು. ಆನಂತರ ಅವರೂ ಸಂಪೂರ್ಣವಾಗಿ ಮೌನಕ್ಕೆ ಶರಣಾಗಿದ್ದಾರೆ.

ವಿರೋಧ ಪಕ್ಷಗಳು ಇಂತಹ ಸ್ಪೋಟಕ ಆರೋಪಗಳನ್ನು ಮಾಡಿ, ತಕ್ಷಣವೇ ಮೌನಕ್ಕೆ ಶರಣಾದರೆ, ಪ್ರಧಾನ ಮಂತ್ರಿಯವರು ಖಂಡಿತವಾಗಿಯೂ ತಮ್ಮಷ್ಟಕ್ಕೆ ತಾವೇ ನಸುನಗುತ್ತಿರುತ್ತಾರೆ.

ವರ್ಷಕ್ಕೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು, ತಮ್ಮ 700 ಕ್ಕೂ ಹೆಚ್ಚು ಒಡನಾಡಿಗಳನ್ನು ಕಳೆದುಕೊಂಡು, ಅಂತಿಮವಾಗಿ ಸರ್ಕಾರವನ್ನು ಮಣಿಸಿದ ನಂತರವೇ ತಮ್ಮ ಮನೆಗಳಿಗೆ ಮರಳಿದ ದೇಶದ ರೈತರ ಹೋರಾಟದ ಬದ್ಧತೆ ಮತ್ತು ಧೃಡಸಂಕಲ್ಪ ಈ ರಾಜಕೀಯ ಪಕ್ಷಗಳಿಗೆ ಇಲ್ಲ. ಇದು ಮೋದಿಯವರಿಗೂ ಈಗಾಗಲೇ ಖಚಿತವಾಗಿ ಮನವರಿಕೆಯಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಒಂದೆರಡು ಕಟು ಟ್ವೀಟ್‌ಗಳನ್ನು ಮತ್ತು ಸಂಸತ್ತಿನಲ್ಲಿ ಅಪರೂಪಕ್ಕೊಮ್ಮೆ ಎದುರಾಗುವ ಸಣ್ಣಪುಟ್ಟ ವಿರೋಧಗಳನ್ನು ತಡೆದುಕೊಳ್ಳುವಷ್ಟು ದಪ್ಪ ಚರ್ಮವನ್ನು ಮೋದಿ ಹೊಂದಿದ್ದಾರೆ. ಅಧಿಕಾರದಲ್ಲಿ ಉಳಿಯಲು ಕೇವಲ ಇಷ್ಟೇ ಬೆಲೆ (ದಂಡ) ತೆರಬೇಕಾಗಿ ಬಂದರೆ, ಮುಂಬರುವ 50 ವರ್ಷಗಳ ಕಾಲವೂ ಆ ದಂಡವನ್ನು ಸಂತೋಷದಿಂದ ಪಾವತಿಸಲು ಬಿಜೆಪಿ ಸದಾ ಸಿದ್ಧವಾಗಿರುತ್ತದೆ.

ಮೂಲ: ದಿ ವೈರ್ (ಸಂಜಯ್ ಕೆ. ಝಾ)
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...