ಸರ್ವರನ್ನೂ ತಬ್ಬುವವಳು ತಾಯಿ ಗಂಗೆ; ಇಫ್ತಾರ್ ಊಟದಿಂದ ಆಕೆಯ ಉದಾರ ಮಡಿಲು ಮಲಿನವಾಗದು

Date:

ಅವರು ಇವರೆಂಬ ಭೇದವಿಲ್ಲದೆ ತಾಯಿ ಗಂಗೆ ಸರ್ವರನ್ನೂ ಶುದ್ಧಗೊಳಿಸುವಾಗ, ಅದೇ ಸಮಯದಲ್ಲಿ, ಶಿವನು ಗಂಗಾ ಘಾಟ್‌ಗಳಲ್ಲಿ ನಗ್ನ- ಅರೆನಗ್ನ ಅಘೋರಿಗಳು, ಭೂತಗಳು, ಜೋಗಿಗಳು ಮತ್ತಿತರರ ಜೊತೆ ಸಂಚರಿಸುತ್ತಾನೆ. ಅವರು ಮಾನವ ಕಪಾಲಗಳಿಂದ ಮಾಡಿದ ಪಾತ್ರೆಗಳಲ್ಲಿ ರಕ್ತ ಮತ್ತು ಸತೂವಿನೊಂದಿಗೆ (ಹುರಿಗಡಲೆಯ ಹಿಟ್ಟು- ಉತ್ತರ ಭಾರತದ ಜನಪ್ರಿಯ ಆಹಾರ) ಕಲೆಸಿದ ಮಾಂಸ ಸೇವಿಸುತ್ತಾರೆ. ಶಿವನು ಅವರೊಂದಿಗೆ ಕಲೆತು ಮತ್ತೆ ಮತ್ತೆ ಚಪ್ಪಾಳೆ ತಟ್ಟುತ್ತ ಮನಸಾರೆ ನಕ್ಕು ಘರ್ಜಿಸುತ್ತಾನೆ.

- Advertisement -

ಹಿಂದುಗಳಿರಲಿ ಹಿಂದುಗಳಲ್ಲದಿರಲಿ, ಭಾರತದ ಎಲ್ಲ ಸಮುದಾಯಗಳು ಒಂದೇ ದನಿಯಲ್ಲಿ ಮಾತಾಡುವ ವಿಷಯಗಳು ಕೆಲವೇ ಕೆಲವು ಇವೆ. ಗಂಗಾ ಮಾತೆ ಇವುಗಳಲ್ಲೊಂದು. ಕಾಶಿಯಲ್ಲಿ ದೋಣಿಯೊಂದರಲ್ಲಿ ಗಂಗಾ ನದಿ ಮೇಲೆ ಇಫ್ತಾರ್ ಊಟ ಮಾಡಿ ಕೋಳಿ ತಿಂದು ಗಂಗೆಯನ್ನು ಅಪವಿತ್ರಗೊಳಿಸಿದರೆಂದು 14 ಮುಸ್ಲಿಮ್ ಯುವಕರ ವಿರುದ್ಧ ಎಫ್.ಐ.ಆರ್. ದಾಖಲಾಗಿ ಗದ್ದಲವೆದ್ದು ಅವರನ್ನು ಬಂಧಿಸಲಾಯಿತು. ಕೋಳಿ ತಿಂದು ಎಲುಬುಗಳನ್ನು ನೀರಿಗೆ ಎಸೆದು ಮಾಲಿನ್ಯಗೊಳಿಸಿದರು ಎಂದು ನಂಬಲು ಅನರ್ಹವಾದ ಪ್ರತ್ಯಕ್ಷ ಸಾಕ್ಷಿಗಳ ಅಂಬೋಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಗಂಗೆಯ ಕುರಿತ ಅತ್ಯಂತ ಮನೋಹರ ಕವಿತೆಗಳಲ್ಲಿ ಒಂದೆನಿಸಿದ ಕವಿತೆಯೊಂದನ್ನು ಗಂಗಾ ಆರತಿಯಲ್ಲಿ ಈಗಲೂ ಹಾಡಲಾಗುತ್ತದೆ. ಇದನ್ನು ಬರೆದವರು ಕವಿ ಪಂಡಿತ ಜಗನ್ನಾಥ ಶಾಸ್ತ್ರಿ ತೆಲಾಂಗ್. ಈತ ಮೊಘಲ್ ದೊರೆ ಶಹಜಹಾನನ ಆಸ್ಥಾನದ ಕವಿ. ಶಹಜಹಾನನ ಅಚ್ಚುಮೆಚ್ಚಿನ ಮಗ ದಾರಾ ಶಿಖೋ ಗೆ ಪಾಠ ಹೇಳಿಕೊಟ್ಟಾತ. ಜಗನ್ನಾಥ ಶಾಸ್ತ್ರಿ ಶಹಜಹಾನನ 14ನೆಯ ಮಗಳು ಲವಂಗಿಯನ್ನು ಪ್ರೀತಿಸಿದ. ಆಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಶಹಜಹಾನನನ್ನು ಕೋರಿದ. ಈ ‘ಉದ್ಧಟತನ’ ಶಹಜಾನನಿಗೆ ಭಾರೀ ಕೋಪ ತರಿಸಿತ್ತು. ಆದರೆ ಏನು ಬೇಕಾದರೂ ವರ ಕೇಳುವಂತೆ ಅದಾಗಲೇ ಜಗನ್ನಾಥ ಶಾಸ್ತ್ರಿಗೆ ಮಾತು ಕೊಟ್ಟಿದ್ದ ಚಕ್ರವರ್ತಿ. ವಚನ ಭಂಗ ಮಾಡುವಂತಿರಲಿಲ್ಲ. ಜಗನ್ನಾಥ ಶಾಸ್ತ್ರಿ ಮತ್ತು ಲವಂಗಿ ಮದುವೆಯಾಗಿ ಓಡಿ ಹೋಗಿ ಕಾಶಿಯನ್ನು ಸೇರುತ್ತಾರೆ. ಆದರೆ ಯವನ ಕನ್ಯೆಯನ್ನು (ಮುಸಲ್ಮಾನ) ವರಿಸಿದನೆಂದು ಕಾಶಿಯ ಪಂಡಿತರು ಜಗನ್ನಾಥನನ್ನು ದೂರವಿಡುತ್ತಾರೆ. ಆದರೆ ಚಕ್ರವರ್ತಿಗೆ ಸಿಟ್ಟು ಬಂದೀತೆಂದು ಹೆದರಿ, ಜಗನ್ನಾಥನನ್ನು ಅಟ್ಟುವುದಿಲ್ಲ. ಆದರೆ ಜಗನ್ನಾಥ ಶಾಸ್ತ್ರಿ ಗಂಗಾ ತಟಗಳಿಗೆ ಬಂದಾಗಲೆಲ್ಲ ಪಂಡಿತರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಹೊರನಡೆಯುತ್ತಿರುತ್ತಾರೆ.

ಅಲ್ಲಿ ಪಂಡಿತರು ಕೂಡ “ಯವನ ಕನ್ಯೆ” ಯನ್ನು ಮದುವೆಯಾದ ಕಾರಣದಿಂದ ಕವಿಯನ್ನು ತಳ್ಳಿಹಾಕಿದರು. ಆದರೆ ಬಲಿಷ್ಠ ಚಕ್ರವರ್ತಿಯನ್ನು ಕೆಣಕುವ ಭಯದಿಂದ ಅವರನ್ನು ಹೊರಹಾಕಲು ಸಾಧ್ಯವಾಗಲಿಲ್ಲ. ಆದರೂ, ಕವಿ ಗಂಗಾ ಘಾಟ್‌ಗಳಿಗೆ ಬಂದಾಗಲೆಲ್ಲಾ, ಅವರು ಮುಖ ಮುಚ್ಚಿಕೊಂಡು ದೂರ ಹೋಗುತ್ತಿದ್ದರು.

ತನ್ನ ಹುಟ್ಟು ಸೀಮೆಯಾದ ತೆಲಂಗ್ ದೇಶಕ್ಕೆ (ತ್ರಿಲಿಂಗ ದೇಶ ಅರ್ಥಾತ್ ತೆಲಂಗಾಣ) ಹೋಗೋಣವೆಂಬ ಜಗನ್ನಾಥ ಶಾಸ್ತ್ರಿಯ ವಿಚಾರವನ್ನು ಲವಂಗಿ ಒಪ್ಪುವುದಿಲ್ಲ. ತಾಯಿ ಗಂಗೆ ತನ್ನ ತಾಯಿಯೂ ಹೌದು, ಕಾಶಿ ನನ್ನ ನಗರಿ ಕೂಡ, ನಾನು ಇಲ್ಲಿಯೇ ಇರುತ್ತೇನೆ ಎನ್ನುತ್ತಾಳೆ. ಹೀಗಾಗಿ ಅಲ್ಲಿಯ ಉಳಿದ ಜೋಡಿ ದಶಾಶ್ವಮೇಧ ಘಾಟ್ ನ ಅತಿ ಎತ್ತರದ ಪಾವಟಿಗೆಯ ಮೇಲೆ ಕುಳಿತುಕೊಳ್ಳುತ್ತದೆ. ಬಂದು ತಮ್ಮನ್ನು ಕರೆದೊಯ್ಯಬೇಕೆಂದು ಕವಿ ತಾಯಿ ಗಂಗೆಯನ್ನು ಕೋರುತ್ತಾನೆ.ಕುತೂಹಲ ಭರಿತ ಕಾಶಿಯ ಜನರು ಈ ದೃಶ್ಯವನ್ನು ನೋಡಲು ನೆರೆಯುತ್ತಾರೆ. ‘ಗಂಗಾ ಲಹರಿ’ ಎಂಬ 52 ದ್ವಿಪದಿಗಳನ್ನು ರಚಿಸಿದ ತೆಲಂಗ್, ಕೇಳುಗರ ಹೃದಯ ಚಲಿಸುವಂತೆ ಅದನ್ನು ಹಾಡುತ್ತಾನೆ. ‘ತಾಯೀ, ನೀನು ಕೂಡ ನನ್ನನ್ನು  ದೂರ ಮಾಡಿದರೆ ಯಾರ ಮಡಿಲಲ್ಲಿ ಮುಖವಿರಿಸಿ ಅಳಲಿ ನಾನು’ ಎಂದು ಆತ ಆರ್ತತೆಯಿಂದ ಹಾಡುತ್ತಿದ್ದಂತೆ ಗಂಗಾ ನದಿ ಉಕ್ಕತೊಡಗುತ್ತದೆ. ಶ್ಲೋಕದ ಕಡೆಯ ಭಾಗದ ಹೊತ್ತಿಗೆ ಗಂಗಾ ಮಾತೆ ಪ್ರೇಮಿಗಳು ಕುಳಿತಿದ್ದ ಮೇಲಿನ ಮೆಟ್ಟಲು ತಲುಪಿ ಅವರನ್ನು ತನ್ನ ಪವಿತ್ರ ಮಡಿಲಿಗೆ ಸೆಳೆಯುತ್ತಾಳೆ.

ಇಂತಹ ಕಾಶಿಯು ಇಂದು “ಸನಾತನ ಸಂಸ್ಕೃತಿ” ಎಂಬ ಘೋಷಣೆಯ ಗದ್ದಲದೊಳಕ್ಕೆ ಸೆಳೆಯಲ್ಪಡುತ್ತಿದೆ. ಅಲ್ಲಿ ಹಿಂದೂ ಅಲ್ಲದವರು ಗಂಗಾ ಮಾತೆಯನ್ನು ಮಲಿನಗೊಳಿಸುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ಕಾಶಿಯು ಶಿವನ ಶಾಶ್ವತ ಪೀಠ.  ಸನಾತನಿಗಳ ಭದ್ರಕೋಟೆಯೇನೂ ಅಲ್ಲ. ಗಂಗೆ ಶಿವನ ಜಟೆಯಿಂದ ಹರಿಯುತ್ತಾಳೆಂದು ಹೇಳಲಾಗುತ್ತದೆ. ಮತ್ತು ಗಂಗೆ ಎಲ್ಲರನ್ನೂ ಕ್ಷಮಿಸುವ ತಾಯಿ. ಶಿವ ಮತ್ತು ಗಂಗೆ ಇಬ್ಬರೂ ತಪೋನೈಪುಣ್ಯ ಮತ್ತು ಅಮಯಾಕ ನಗುವಿನ ಆಟ ತೋರುತ್ತಾರೆ. ಶಿವ ಸಂತೋಷ, ದುಃಖ ಎರಡರಲ್ಲೂ ನರ್ತಿಸುತ್ತಾನೆ. ಗಂಗೆ ಜೀವದಾಯಿ ಆಗಿರುವುದಷ್ಟೇ ಅಲ್ಲದೆ ಮೃತರ ಅಸ್ಥಿ-ಭಸ್ಮಗಳನ್ನು ಸ್ವೀಕರಿಸಿ ಪಾವನಗೊಳಿಸುತ್ತಾಳೆ.

ರಾಮಚರಿತಮಾನಸದಲ್ಲಿ ತುಳಸೀದಾಸರು, ಶಿವನನ್ನು ತಪೋತೇಜಸ್ಸಿನ ಯೋಗಿಯಾಗಿಯೂ, ಆನಂದಭರಿತ  ಭೂತನಾಥನಾಗಿಯೂ ವರ್ಣಿಸಿದ್ದಾರೆ. ಅವರು ಇವರೆಂಬ ಭೇದವಿಲ್ಲದೆ ತಾಯಿ ಗಂಗೆ ಸರ್ವರನ್ನೂ ಶುದ್ಧಗೊಳಿಸುವಾಗ,  ಅದೇ ಸಮಯದಲ್ಲಿ, ಶಿವನು ಗಂಗಾ ಘಾಟ್‌ಗಳಲ್ಲಿ ನಗ್ನ- ಅರೆನಗ್ನ ಅಘೋರಿಗಳು, ಭೂತಗಳು, ಜೋಗಿಗಳು ಮತ್ತಿತರರ ಜೊತೆ ಸಂಚರಿಸುತ್ತಾನೆ. ಅವರು ಮಾನವ ಕಪಾಲಗಳಿಂದ ಮಾಡಿದ ಪಾತ್ರೆಗಳಲ್ಲಿ ರಕ್ತ ಮತ್ತು ಸತ್ತೂವಿನೊಂದಿಗೆ (ಹುರಿಗಡಲೆಯ ಹಿಟ್ಟು- ಉತ್ತರ ಭಾರತದ ಜನಪ್ರಿಯ ಆಹಾರ) ಕಲೆಸಿದ ಮಾಂಸ ಸೇವಿಸುತ್ತಾರೆ. ಶಿವನು ಅವರೊಂದಿಗೆ ಕಲೆತು ಮತ್ತೆ ಮತ್ತೆ ಚಪ್ಪಾಳೆ ತಟ್ಟುತ್ತ ಮನಸಾರೆ ನಕ್ಕು ಘರ್ಜಿಸುತ್ತಾನೆ.

ಇದು ತಾಯಿ ಗಂಗೆಯ ಆತ್ಮ,ಕಾಶಿಯ ಹೃದಯ. ಇಂತಹ ಔದಾರ್ಯದ ಆತ್ಮವನ್ನು ವಿವಾದಾತ್ಮಕ ವಿಡಿಯೋವೊಂದು ಆವರಿಸಿ ಕವಿದು, ಕೇವಲ ದೋಣಿಯಲ್ಲಿ ಇಫ್ತಾರ್ ಊಟ ಮಾಡಿದ್ದಕ್ಕಾಗಿ 14 ಯುವಕರನ್ನು ಜೈಲಿಗೆ ತಳ್ಳುವುದು ಎಂತಹ ನ್ಯಾಯ?

ನಿಜವಾದ ಸಮಸ್ಯೆಯಾದ ಮಾಲಿನ್ಯ ಕುರಿತು ಮಾತನಾಡುವುದಾದರೆ, ನಾವು ನಾಗರಿಕರಾಗಿ ಮತ್ತು ನಮ್ಮ ಪ್ರತಿನಿಧಿಗಳು ಈ ರೀತಿಯ ಅತಿರೇಕದ ಮನೋಭಾವವನ್ನು ಬಿಟ್ಟು, ನದಿಯ ಹಾನಿಯನ್ನು ತಡೆಯಲು ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು. ಪವಿತ್ರವಾಗಿರಲಿ ಅಥವಾ ಅಪವಿತ್ರವಾಗಿರಲಿ, ತ್ಯಾಜ್ಯ ಮತ್ತು ರಾಸಾಯನಿಕ ಕಸಗಳು ಗಂಗೆಯ ನೀರನ್ನು ಎಲ್ಲರಿಗೂ ಅಪಾಯಕಾರಿಯಾಗಿಸುತ್ತಿವೆ.

ಇನ್ನು ಗಂಗಾ ನದಿಯ ಮಾಲಿನ್ಯದ ಸಮಸ್ಯೆಯನ್ನು ಎತ್ತಿಕೊಳ್ಳುವುದಾದರೆ, ನಾಗರಿಕರಾದ ನಾವು ಮತ್ತು ನಮ್ಮ ಪ್ರತಿನಿಧಿಗಳು ಈ ಸಂಕುಚಿತ ಅತ್ಯಭಿಮಾನವನ್ನು ತೊರೆದು ಗಂಗಾ ನದಿ ಇನ್ನಷ್ಟು ಮಲಿನವಾಗದಂತೆ ತಡೆಯಬೇಕಿದೆ. ಪವಿತ್ರ ಮತ್ತು ಅಪವಿತ್ರ ಕಸ, ರಾಸಾಯನಿಕ ತ್ಯಾಜ್ಯಗಳು ಗಂಗೆಯ ನೀರನ್ನು ಮತ್ತಷ್ಟು ಅಪಾಯಕಾರಿ ಆಗದಂತೆ ಆಸ್ಥೆ ವಹಿಸಬೇಕಿದೆ.

ಮೃಣಾಲ್ ಪಾಂಡೆ
ಸೌಜನ್ಯ- ದಿ ಇಂಡಿಯನ್ ಎಕ್ಸ್ ಪ್ರೆಸ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...