ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

Date:

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ ತಮ್ಮ ಪೂರ್ವಜರ ನೆಲದ ಮೇಲಿನ ಹಕ್ಕುಗಳಿಗಾಗಿ ಜೇನುಕುರುಬ ಕುಟುಂಬಗಳು ಕಾನೂನುಬದ್ಧ ಹೋರಾಟ ನಡೆಸುತ್ತಿವೆ. ಈ ಆದಿವಾಸಿ ಕುಟುಂಬಗಳ ವಿರುದ್ಧ ಕರ್ನಾಟಕ ಸರ್ಕಾರವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಮುಂದಾಗಿದೆ. ಸರ್ಕಾರದ ಕ್ರಮದ ವಿರುದ್ಧ ಆದಿವಾಸಿ ಸಮುದಾಯ ಮತ್ತು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರವು ಆದಿವಾಸಿ ಜನರ ಮೇಲೆ ಅಧಿಕಾರ ದುರುಪಯೋಗ ಮತ್ತು ಬಲಪ್ರಯೋಗ ನಡೆಸುತ್ತಿದೆ ಎಂದು ಕಿಡಿಕಾರಿವೆ.

- Advertisement -

ನಾಗರಹೊಳೆ ವ್ಯಾಪ್ತಿಯ ಕರಡಿಕಲ್ಲು ಅತ್ತೂರುಕೊಲ್ಲಿ ಹಾಡಿಯಲ್ಲಿ ಸುಮಾರು 52 ಜೇನುಕುರುಬ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳನ್ನು ಈ ಹಿಂದೆ, ಒಕ್ಕಲೆಬ್ಬಿಸಲಾಗಿತ್ತು. ಆದಾಗ್ಯೂ, ಕಾಡಿನಾಚೆಗೆ ತಮ್ಮ ಬದುಕು ಮತ್ತು ನೆಲೆಯನ್ನು ಕಟ್ಟಿಕೊಳ್ಳಲು ಸಾಧ್ಯವಾಗದ ಕುಟುಂಬಗಳು ತಮ್ಮ ಹಾಡಿಗೆ ಮರಳಿವೆ. ‘ಅರಣ್ಯ ಹಕ್ಕುಗಳ ಕಾಯ್ದೆ-2006’ರ ಅಡಿ ತಮ್ಮ ಸಾಂಪ್ರದಾಯಿಕ ವಾಸಸ್ಥಳ ಮತ್ತು ಅರಣ್ಯ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಅಧಿಕೃತವಾಗಿ ಗುರುತಿಸಬೇಕೆಂದು ಒತ್ತಾಯಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಆದರೆ, ಅರಣ್ಯ ಇಲಾಖೆಯು ಈ ನಿರ್ದಿಷ್ಟ ಪ್ರದೇಶವು ಹುಲಿ ಸಂರಕ್ಷಿತ ವಲಯದ ವ್ಯಾಪ್ತಿಯಲ್ಲಿದ್ದು, ಅಲ್ಲಿ ಹೊಸದಾಗಿ ವಾಸಸ್ಥಳಗಳನ್ನು ನಿರ್ಮಿಸುವುದು ಅಥವಾ ಜನ ವಾಸಿಸುವುದು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಪ್ರಕಾರ ಕಾನೂನುಬಾಹಿರ ಎಂದು ವಾದಿಸುತ್ತಿದೆ.

ಆದಾಗ್ಯೂ, ಜೇನುಕುರುಬರು ಕರ್ನಾಟಕದ ಅತ್ಯಂತ ದುರ್ಬಲ ಆದಿವಾಸಿ ಸಮುದಾಯಗಳಲ್ಲಿ ಒಂದಾಗಿದ್ದು, ಸರ್ಕಾರವೇ ಇವರನ್ನು ‘ವಿಶೇಷ ದುರ್ಬಲ ಬುಡಕಟ್ಟು ಗುಂಪು’ (PVTG) ಎಂದು ಗುರುತಿಸಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದ ಈ ಸಮುದಾಯದ ಬದುಕು ಜೇನು ಸಂಗ್ರಹಣೆ, ಕಿರು ಅರಣ್ಯ ಉತ್ಪನ್ನಗಳ ಬಳಕೆ, ಸಾಂಪ್ರದಾಯಿಕ ಆಚರಣೆಗಳು ಹಾಗೂ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಕರಡಿಕಲ್ಲು ಅತ್ತೂರುಕೊಲ್ಲಿ ಪ್ರದೇಶದ ಕುಟುಂಬಗಳ ಹೇಳಿಕೆಯ ಪ್ರಕಾರ, 1980ರ ದಶಕದ ಆರಂಭದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಹೆಸರಿನಲ್ಲಿ ತಮ್ಮ ಪೂರ್ವಜರನ್ನು ಬಲವಂತವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರದ ಪರಿಣಾಮವಾಗಿ ಅವರು ತಮ್ಮ ಸಾಂಪ್ರದಾಯಿಕ ವಾಸಸ್ಥಳ, ಪೂಜಾಸ್ಥಳಗಳು ಹಾಗೂ ಜೀವನೋಪಾಯದ ಆಧಾರ ಸ್ತಂಭಗಳಿಂದ ದೂರವಾಗಬೇಕಾಯಿತು.

ಈ ಹಿನ್ನೆಲೆಯಲ್ಲಿ, ತಮ್ಮ ದಶಕಗಳ ಅನ್ಯಾಯವನ್ನು ಸರಿಪಡಿಸಿಕೊಳ್ಳಲು 2025ರ ಮೇ 5ರಂದು ಈ 52 ಜೇನುಕುರುಬ ಕುಟುಂಬಗಳು ತಮ್ಮ ಪೂರ್ವಜರ ಊರೆಂದು ದೃಢವಾಗಿ ನಂಬಿರುವ ಕರಡಿಕಲ್ಲು ಅತ್ತೂರುಕೊಲ್ಲಿ ಪ್ರದೇಶಕ್ಕೆ ಮರಳಿದ್ದು, ತಾತ್ಕಾಲಿಕ ಆಶ್ರಯಗಳನ್ನು ನಿರ್ಮಿಸಿಕೊಂಡು ಬದುಕಲು ಆರಂಭಿಸಿವೆ. “ಇದು ಯಾವುದೇ ಹೊಸದಾಗಿ ಅರಣ್ಯವನ್ನು ಒತ್ತುವರಿ ಮಾಡುವ ದುರುದ್ದೇಶದ ಪ್ರಯತ್ನವಲ್ಲ, ಬದಲಿಗೆ ಐತಿಹಾಸಿಕವಾಗಿ ತಾವು ಕಳೆದುಕೊಂಡ ತಮ್ಮ ಸ್ವಂತ ನೆಲದ ಹಕ್ಕನ್ನು ಮರಳಿ ಪಡೆಯುವ ಅನಿವಾರ್ಯ ಹೋರಾಟ” ಎಂದು ಸಮುದಾಯದ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಆದರೆ, ಆದಿವಾಸಿ ಕುಟುಂಬಗಳು ಅರಣ್ಯ ಪ್ರದೇಶಕ್ಕೆ ಮರಳಿದ ನಂತರ ಅರಣ್ಯ ಇಲಾಖೆ ಮತ್ತು ಸಮುದಾಯದ ನಡುವೆ ಸಂಘರ್ಷ ಮತ್ತು ಉದ್ವಿಗ್ನತೆ ಉಂಟಾಗಿದೆ. ಮೇ 5ರಿಂದ 7ರ ನಡುವೆ ನೂರಕ್ಕೂ ಹೆಚ್ಚು ಶಸ್ತ್ರಸಜ್ಜಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕುಟುಂಬಗಳನ್ನು ಬಲವಂತವಾಗಿ ತೆರವುಗೊಳಿಸಲು ಯತ್ನಿಸಿದ್ದಾರೆ. ಅಲ್ಲದೆ, ತಾತ್ಕಾಲಿಕ ಆಶ್ರಯಗಳು ಮತ್ತು ಸಾಂಸ್ಕೃತಿಕ ಆಚರಣೆಯ ರಚನೆಗಳನ್ನು ಧ್ವಂಸಗೊಳಿಸಿದ್ದಾರೆ. ತಮ್ಮ ಅರಣ್ಯ ಹಕ್ಕುಗಳ ಅರ್ಜಿಗಳು ಕಾನೂನುಬದ್ಧವಾಗಿ ಇತ್ಯರ್ಥವಾಗುವ ಮುನ್ನವೇ ಇಲಾಖೆಯು ಈ ರೀತಿ ಧಾವಂತದಿಂದ ತೆರವುಗೊಳಿಸುವುದು ಸಂಪೂರ್ಣ ಅನ್ಯಾಯ ಎಂದು ಆದಿವಾಸಿ ಕುಟುಂಬಗಳು ಆರೋಪಿಸಿವೆ.

ತಮ್ಮ ಮೇಲಿನ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಅರಣ್ಯ ಇಲಾಖೆ, “ಸಂರಕ್ಷಿತ ಅರಣ್ಯದೊಳಗೆ ಯಾವುದೇ ಪೂರ್ವಾನುಮತಿಯಿಲ್ಲದೆ ಹೊಸ ನಿರ್ಮಾಣಗಳನ್ನು ನಡೆಸಲಾಗುತ್ತಿದೆ” ಎಂದು ಪ್ರತ್ಯಾರೋಪ ಮಾಡಿದೆ.

ಪ್ರಮುಖ ಅಂಶವೆಂದರೆ; 2006ರ ಅರಣ್ಯ ಹಕ್ಕುಗಳ ಕಾಯ್ದೆಯಡಿ ತಮ್ಮ ಹಕ್ಕುಗಳ ಮರುಸ್ಥಾಪನೆಗಾಗಿ ಈ ಕುಟುಂಬಗಳು ಅರ್ಜಿಗಳನ್ನೂ ಸಲ್ಲಿಸಿವೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2025ರ ಡಿಸೆಂಬರ್‌ನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದು, “ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರುಕೊಲ್ಲಿಯಲ್ಲಿ ಅರಣ್ಯ ಹಕ್ಕುಗಳಿಗಾಗಿ 52 ಜೇನುಕುರುಬ ಕುಟುಂಬಗಳು ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ 39 ಅರ್ಜಿಗಳನ್ನು ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಗಳ ಕೊರತೆ ಎಂಬ ಕಾರಣ ನೀಡಿ ಗ್ರಾಮಸಭೆ ಹಂತದಲ್ಲೇ ತಿರಸ್ಕರಿಸಲಾಗಿದೆ. ಉಳಿದ 13 ಅರ್ಜಿಗಳು ಗ್ರಾಮಸಭೆಯ ಪರಿಶೀಲನೆಗೆ ಬಾಕಿ ಇವೆ” ಎಂದು ತಿಳಿಸಿದೆ.

ತಿರಸ್ಕೃತಗೊಂಡ 39 ಅರ್ಜಿದಾರರು ಉಪವಿಭಾಗ ಮಟ್ಟದ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರೂ, 2026ರ ಮೇ 22ರಂದು ನಡೆದ ಸಭೆಯಲ್ಲೂ ಸಾಕ್ಷ್ಯಗಳ ಕೊರತೆಯ ಕಾರಣವನ್ನೇ ಮುಂದಿಟ್ಟು ಆ ಮೇಲ್ಮನವಿಗಳನ್ನು ತಿರಸ್ಕರಿಸಲಾಗಿದೆ. ಆದರೆ, ಜೇನುಕುರುಬ ಸಂಘಟನೆಗಳು ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದು, ತಮ್ಮ ಪೂರ್ವಜರು ನೆಲೆಸಿದ್ದ ಅರಣ್ಯ ಪ್ರದೇಶದ ಸಾಂಪ್ರದಾಯಿಕ ದಾಖಲೆಗಳು, ಪೂಜಾಸ್ಥಳಗಳು ಹಾಗೂ ಮೌಖಿಕ ಇತಿಹಾಸವನ್ನು ಪರಿಗಣಿಸದೆ ಏಕಪಕ್ಷೀಯವಾಗಿ ಹಕ್ಕುಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಆರೋಪಿಸಿವೆ.

ಅರಣ್ಯ ಹಕ್ಕುಗಳ ಕಾಯ್ದೆಯ ಸೆಕ್ಷನ್ 4(5) ರ ಪ್ರಕಾರ, ಹಕ್ಕುಗಳ ಗುರುತಿಸುವಿಕೆ ಮತ್ತು ಪರಿಶೀಲನೆಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಅರ್ಹ ಅರಣ್ಯವಾಸಿಗಳನ್ನು ಅವರು ವಾಸಿಸುತ್ತಿರುವ ಅರಣ್ಯ ಭೂಮಿಯಿಂದ ತೆರವುಗೊಳಿಸಬಾರದು ಎಂಬ ಸ್ಪಷ್ಟ ರಕ್ಷಣೆಯಿದ್ದರೂ, ಅದನ್ನು ಉಲ್ಲಂಘಿಸಲಾಗುತ್ತಿದೆ ಎಂದು ಸಮುದಾಯ ದೂರಿದೆ.

ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

ಈ ವಿವಾದದ ಗಂಭೀರತೆಯನ್ನು ಗಮನಿಸಿ, 2025ರ ಮಧ್ಯಭಾಗದಲ್ಲೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡು ಕೊಡಗು ಜಿಲ್ಲಾಧಿಕಾರಿಯಿಂದ ವಿವರವಾದ ವರದಿ ಕೇಳಿತ್ತು. ಆದಿವಾಸಿ ಕುಟುಂಬಗಳ ಬಲವಂತದ ತೆರವು ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡಿಕೊಡಬಹುದು ಎಂದು ಆಯೋಗ ಎಚ್ಚರಿಸಿತ್ತು. ಅಲ್ಲದೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಗೆ ಪತ್ರ ಬರೆದು ಅತ್ತೂರುಕೊಲ್ಲಿಯ ಸಂತ್ರಸ್ತ ಕುಟುಂಬಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿತ್ತು.

ಜೊತೆಗೆ, ಸುಮಾರು 70 ನಾಗರಿಕ ಮತ್ತು ಪರಿಸರ ಪರ ಸಂಘಟನೆಗಳು ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿರುವ ಅರಣ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿ ಮೇಲಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದವು. ಅಲ್ಲದೆ, 2025ರ ಡಿಸೆಂಬರ್‌ನಲ್ಲಿ ನಾಗರಹೊಳೆ ಆದಿವಾಸಿ ಜಮ್ಮಾಪಾಲೆ ಹಕ್ಕು ಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಸುಮಾರು 29 ಆದಿವಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ 70 ಕಿ.ಮೀ. ಬೃಹತ್ ಪಾದಯಾತ್ರೆ ನಡೆಸಿ, ಅರಣ್ಯ ಹಕ್ಕುಗಳ ಕಾಯ್ದೆಯ ಸರಿಯಾದ ಅನುಷ್ಠಾನಕ್ಕಾಗಿ ಒತ್ತಾಯಿಸಲಾಗಿತ್ತು.

ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವ ಸಮಯದಲ್ಲಿ, ಇದೀಗ ಸರ್ಕಾರವು ಆದಿವಾಸಿ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಮುಂದಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

“ವಾಯುಮಾಲಿನ್ಯದಲ್ಲಿ ನಾವು ‘ವಿಶ್ವಗುರು’ ಆಗುತ್ತಿರುವುದು ಏಕೆ”: ಮೋದಿ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ...

ಬಳ್ಳಾರಿ | ಸಿಮೆಂಟ್ ಲಾರಿ ಹರಿದು 80ಕ್ಕೂ ಹೆಚ್ಚು ಕುರಿಗಳ ಸಾವು

ರಸ್ತೆಬದಿಯಲ್ಲಿ ಸಾಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಸಿಮೆಂಟ್ ತುಂಬಿದ ಲಾರಿಯೊಂದು ಹರಿದ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು...

ಔರಾದ್-ಬೀದರ್ ಮಾರ್ಗದಲ್ಲಿ ಹೆಚ್ಚುವರಿ ಬಸ್ ಓಡಿಸಿ : ನಂದಾದೀಪ ಬೋರಾಳೆ

ಔರಾದ್ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ಬೀದರ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುವ...