ಸುದ್ದಿ ವಿವರ | ಹೊಸ ‘ಪರೀಕ್ಷೆ ತಿದ್ದುಪಡಿ ಮಸೂದೆ’ಯಲ್ಲಿ ಏನಿದೆ?

Date:

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ, ತ್ವರಿತ ನ್ಯಾಯಾಲಯಗಳು ಹಾಗೂ ಕಾಲಮಿತಿಯ ತನಿಖೆ ಮತ್ತು ವಿಚಾರಣೆಯನ್ನು ಪರಿಚಯಿಸುವ ‘ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ತಿದ್ದುಪಡಿ ಮಸೂದೆ- 2026’ಅನ್ನು ಸಂಸತ್ತು ಅಂಗೀಕರಿಸಿದೆ.

- Advertisement -

2024ರಲ್ಲಿ ಜಾರಿಗೆ ತರಲಾಗಿದ್ದ ‘ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆ) ಕಾಯ್ದೆ’ಗೆ ಹಲವು ಬದಲಾವಣೆಗಳನ್ನು ತರಲಾಗಿದೆ. ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿ (RRB), ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಯುವುದು ಈ ಕಾಯ್ದೆಯ ಉದ್ದೇಶವಾಗಿತ್ತು. ಈ ಕಾಯ್ದೆ ಜಾರಿಗೆ ಬಂದ ನಂತರವೂ ಪರೀಕ್ಷಾ ಅಕ್ರಮಗಳು ಮುಂದುವರೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

2026ರ ಮೇನಲ್ಲಿ ನೀಟ್-ಯುಜಿ ಪ್ರಶ್ನೆ ಪತ್ರಿಕೆಗಳು ಕೂಡ ಸೋರಿಕೆಯಾಗಿದ್ದವು. ಬಳಿಕ, ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಮಡುಗಟ್ಟಿತ್ತು. ಪರೀಕ್ಷಾ ಅಕ್ರಮಗಳ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ಇತ್ತೀಚೆಗೆ ಭಾರೀ ಪ್ರತಿಭಟನೆಗಳು ನಡೆದವು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ರಾಜೀನಾಮೆ ನೀಡುವಂತಾಯಿತು. ಈ ಬೆನ್ನಲ್ಲೇ, ‘ಸಾರ್ವಜನಿಕ ಪರೀಕ್ಷಾ (ಅಕ್ರಮ ತಡೆ) ಕಾಯ್ದೆ-2024’ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಿ, ಹೊಸ ಮಸೂದೆಯನ್ನು ಮೋದಿ ಸರ್ಕಾರ ಮಂಡಿಸಿದೆ.

2024ರ ಕಾಯ್ದೆಯಲ್ಲಿ ಏನಿತ್ತು?

ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ನ್ಯಾಯಸಮ್ಮತತೆಯನ್ನು ರಕ್ಷಿಸುವ ಉದ್ದೇಶದಿಂದ 2024ರ ಕಾಯ್ದೆಯನ್ನು ರಚಿಸಲಾಗಿತ್ತು. ಇದು ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ಮಾರ್ಗಗಳನ್ನು ಬಳಸುವ ವ್ಯಕ್ತಿಗಳು ಮತ್ತು ಸಂಘಟಿತ ಗುಂಪುಗಳು ಎಸಗುವ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶ ಹೊಂದಿತ್ತು. ಅಂತಹ ಅಕ್ರಮಗಳನ್ನು ಎಸಗುವವರಿಗೆ ಶಿಕ್ಷೆ ವಿಧಿಸುತ್ತಿತ್ತು.

  • ಅಕ್ರಮಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತಿತ್ತು.
  • ಕೆಲವು ಪ್ರಕರಣಗಳಲ್ಲಿ, 1 ಕೋಟಿ ರೂ.ವರೆಗೆ ದಂಡ ಮತ್ತು ನಾಲ್ಕು ವರ್ಷಗಳ ಕಾಲ ಪರೀಕ್ಷೆಗೆ ಸಂಬಂಧಿಸಿದ ಜವಾಬ್ದಾರಿಗಳಿಂದ ನಿಷೇಧ ಹೇರಲಾಗುತ್ತಿತ್ತು.
  • ಪರೀಕ್ಷಾ ವಂಚನೆಗೆ ಸಂಬಂಧಿಸಿದ ಸಂಘಟಿತ ಅಪರಾಧಕ್ಕೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಲಾಗುತ್ತಿತ್ತು.
  • ಅತ್ಯಂತ ಗಂಭೀರ ಅಪರಾಧಗಳಲ್ಲಿ, ಶಿಕ್ಷೆಯನ್ನು 5 ರಿಂದ 10 ವರ್ಷಗಳ ಜೈಲು ಶಿಕ್ಷೆಗೆ ಮತ್ತು 1 ಕೋಟಿ ರೂ. ದಂಡಕ್ಕೆ ವಿಸ್ತರಿಸಲಾಗುತ್ತಿತ್ತು.

ಆದಾಗ್ಯೂ, ಈ ಕಾಯ್ದೆ ಜಾರಿಗೆ ಬಂದು 2 ವರ್ಷಗಳು ಕಳೆದಿದ್ದರೂ, ಈ ಕಾಯ್ದೆಯಡಿ ಈವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಎಂಬುದು ಗಮನಾರ್ಹ.

ಸಾರ್ವಜನಿಕ ಪರೀಕ್ಷೆ ತಿದ್ದುಪಡಿ ಮಸೂದೆ-2026

ಸಂಸತ್ತಿನ ಎರಡೂ ಸದನಗಳಲ್ಲಿ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿರುವ ಈ ಮಸೂದೆಯು 2024ರ ಕಾನೂನನ್ನು ನಾಲ್ಕು ಪ್ರಮುಖ ರೀತಿಯಲ್ಲಿ ಬಲಪಡಿಸುವ ಉದ್ದೇಶ ಹೊಂದಿದೆ. 1. ಕಠಿಣ ಶಿಕ್ಷೆಗಳು, 2. ತ್ವರಿತ ಗತಿ ನ್ಯಾಯಾಲಯಗಳಿಗೆ ಶಾಸನಬದ್ಧ ಬೆಂಬಲ, 3. ತನಿಖೆ ಮತ್ತು ವಿಚಾರಣೆಗೆ ಐದು ತಿಂಗಳ ಕಾಲಮಿತಿ ಹಾಗೂ 4. ವಿಶೇಷ ಕಾರ್ಯಪಡೆ ವ್ಯವಸ್ಥೆ.

ಕಠಿಣ ಶಿಕ್ಷೆ

ಕಠಿಣ ಶಿಕ್ಷೆ

  • ಮಸೂದೆಯ ಸೆಕ್ಷನ್ 10(1)ರ ಅಡಿಯಲ್ಲಿ ಈ ಹಿಂದೆ, 2024ರ ಕಾಯ್ದೆಯಲ್ಲಿ ಇದ್ದ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗಿನ ದಂಡವನ್ನು ಈಗ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ.ವರೆಗಿನ ದಂಡಕ್ಕೆ ಹೆಚ್ಚಿಸಲಾಗಿದೆ.
  • ಹಿಂದಿನ ಕಾನೂನಿನಲ್ಲಿ ಸೇವಾ ಪೂರೈಕೆದಾರರು ಮತ್ತು ಅವರ ಆಡಳಿತ ಮಂಡಳಿಗಳು ಅಕ್ರಮ ಎಸಗಿದರೆ, 3 ವರ್ಷ ಜೈಲು ಮತ್ತು 1 ಕೋಟಿ ರೂ. ದಂಡ ವಿಧಿಸಲಾಗುತ್ತಿತ್ತು. ಈಗ ಸೆಕ್ಷನ್ 10(2)ರ ಅಡಿಯಲ್ಲಿ ಶಿಕ್ಷೆಯ ಪ್ರಮಾಣವನ್ನು 10 ವರ್ಷ ಜೈಲು ಮತ್ತು ದಂಡವನ್ನು 5 ಕೋಟಿ ರೂ.ವರೆಗೆ ಹೆಚ್ಚಿಸಲಾಗಿದೆ.
  • ಸೆಕ್ಷನ್ 10(3) ರ ಅಡಿಯಲ್ಲಿ ಉಸ್ತುವಾರಿ ಸಿಬ್ಬಂದಿಗೆ 5 ರಿಂದ 10 ವರ್ಷಗಳ ಜೈಲು ಶಿಕ್ಷೆ (ಹಿಂದೆ 3 ರಿಂದ 10 ವರ್ಷ ಇತ್ತು) ಮತ್ತು 5 ಕೋಟಿ ರೂ. ದಂಡ (ಹಿಂದೆ 1 ಕೋಟಿ ರೂ. ಇತ್ತು) ನಿಗದಿ ಮಾಡಲಾಗಿದೆ.
  • ಸೆಕ್ಷನ್ 11(1)ರ ಅಡಿಯಲ್ಲಿ ಸಂಘಟಿತ ಅಪರಾಧಕ್ಕೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ (ಹಿಂದೆ 5 ವರ್ಷ ಇತ್ತು) ಮತ್ತು 10 ಕೋಟಿ ರೂ.ವರೆಗೆ ದಂಡ (ಹಿಂದೆ 1 ಕೋಟಿ ರೂ. ಇತ್ತು) ಪ್ರಸ್ತಾಪಿಸಲಾಗಿದೆ.
ತ್ವರಿತ ನ್ಯಾಯಾಲಯಗಳಿಗೆ ಶಾಸನಬದ್ಧ ಬೆಂಬಲ

ತ್ವರಿತ ನ್ಯಾಯಾಲಯಗಳಿಗೆ ಶಾಸನಬದ್ಧ ಬೆಂಬಲ

ಈ ಮಸೂದೆಯು 2024ರ ಕಾಯ್ದೆಯಡಿಯಲ್ಲಿ ಅಪರಾಧಗಳ ವಿಚಾರಣೆಗಾಗಿ ತ್ವರಿತ ನ್ಯಾಯಾಲಯಗಳಿಗೆ ಶಾಸನಬದ್ಧ ಬೆಂಬಲವನ್ನು ನೀಡುತ್ತದೆ. ಇದು ಪರೀಕ್ಷಾ ಅಕ್ರಮ ತಡೆಯುವಿಕೆಯಲ್ಲಿ ಕಾರ್ಯಾಂಗದ ಆದೇಶವನ್ನು ಮೀರಿ, ನೇರವಾಗಿ ಕಾನೂನಿನಲ್ಲಿಯೇ ಫಾಸ್ಟ್-ಟ್ರ್ಯಾಕ್ ವ್ಯವಸ್ಥೆಯನ್ನು ಅಳವಡಿಸುತ್ತದೆ. ತಿದ್ದುಪಡಿ ಜಾರಿಗೆ ಬಂದ ನಂತರ, ಕಾಯ್ದೆಯಡಿ ಎಲ್ಲ ಭವಿಷ್ಯದ ಅಪರಾಧಗಳನ್ನು ತ್ವರಿತ ಗತಿ ನ್ಯಾಯಾಲಯ ವಿಚಾರಣೆ ನಡೆಸಬಹುದು. ಆರಂಭದಲ್ಲಿ, ಪ್ರಸ್ತುತ ನೀಟ್ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ನಾಲ್ಕು ಹೈಕೋರ್ಟ್‌ಗಳಲ್ಲಿ ಈ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.

ತನಿಖೆ ಮತ್ತು ವಿಚಾರಣೆಗೆ ಐದು ತಿಂಗಳ ಕಾಲಮಿತಿ

ತನಿಖೆ ಮತ್ತು ವಿಚಾರಣೆಗೆ ಐದು ತಿಂಗಳ ಕಾಲಮಿತಿ

ಹೊಸ ಮಸೂದೆಯಲ್ಲಿ ಉಲ್ಲೇಖಿಸಿರುವಂತೆ ಪರೀಕ್ಷಾ ಅಕ್ರಮಗಳ ಪ್ರಕರಣಗಳನ್ನು 5 ತಿಂಗಳೊಳಗೆ ತನಿಖೆ ಮತ್ತು ವಿಚಾರಣೆ ನಡೆಸಿ, ಪ್ರಕರಣಗಳನ್ನು ಮುಗಿಸಬೇಕು ಎಂದು ಸೂಚಿಸಲಾಗಿದೆ. ಅದಲ್ಲರೂ, ಎರಡು ಬಗೆಯ ಕಾಲಮಿತಿಗಳನ್ನು ವಿವರಿಸಲಾಗಿದೆ.

  • ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು.
  • ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು.

ಇದರರ್ಥ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಐದು ತಿಂಗಳೊಳಗೆ ಮುಕ್ತಾಯಗೊಳ್ಳಬೇಕು. ಅಂತೆಯೇ, ಈ ಕಾಲಮಿತಿಯಿಂದಾಗಿ, ಸ್ಪಷ್ಟ ಮತ್ತು ವಿನಾಯಿತಿಯ ಕಾರಣಗಳನ್ನು ಲಿಖಿತವಾಗಿ ದಾಖಲಿಸದೆ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯನ್ನು ಮರುದಿನಕ್ಕಿಂತ ಹೆಚ್ಚು ಮುಂದೂಡುವಂತಿಲ್ಲ.\

ಈ ಲೇಖನ ಓದಿದ್ದೀರಾ?: ಬಿಜೆಪಿ ಸರ್ಕಾರಗಳಿಂದ ಸಂವಿಧಾನದ ಬಹುತ್ವಕ್ಕೆ ‘ಕೇಸರೀಕರಣ’ದ ಲೇಪನ!

ಗಮನಾರ್ಹವಾಗಿ, 2024ರ ಕಾಯ್ದೆಯಡಿ ದಾಖಲಾಗಿದ್ದು, ತನಿಖೆ ಮತ್ತು ವಿಚಾರಣಾ ಹಂತದಲ್ಲಿರುವ ಎಲ್ಲ ಪ್ರಕರಣಗಳು ತಕ್ಷಣವೇ ಹೊಸದಾಗಿ ನಿರ್ದಿಷ್ಟಪಡಿಸಿದ ವಿಶೇಷ ತ್ವರಿತ ನ್ಯಾಯಾಲಯಗಳಿಗೆ ವರ್ಗಾವಣೆಯಾಗುತ್ತವೆ. ಈ ವಿಚಾರಣೆಗಳಿಗಾಗಿಯೇ ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯವಾಗಿ ನೇಮಿಸಬೇಕು.

ವಿಶೇಷ ಕಾರ್ಯಪಡೆ ವ್ಯವಸ್ಥೆ

2024ರ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ಕಾರ್ಯಪಡೆಯನ್ನು (STF) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಹೊಸ ಮಸೂದೆಯಡಿ ಅವಕಾಶ ನೀಡಲಾಗಿದೆ. ವಿಶೇಷವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಜಾಲಗಳು ವಿಭಿನ್ನ ರಾಜ್ಯಗಳಲ್ಲಿ ಹರಡಿದ್ದಾಗ ಅಥವಾ ಸಂಘಟಿತ ಅಪರಾಧ ಸಿಂಡಿಕೇಟ್‌ಗಳನ್ನು ಒಳಗೊಂಡಿದ್ದಾಗ ತನಿಖೆಯ ಸಮನ್ವಯತೆಗಾಗಿ ಕೇಂದ್ರ ಸರ್ಕಾರವು ಎಸ್‌ಟಿಎಫ್‌ಗಳನ್ನು ರಚಿಸಬಹುದು.

ಮಸೂದೆಯ ಪ್ರಾಮುಖ್ಯತೆ

ಈ ತಿದ್ದುಪಡಿ ಮಸೂದೆಯು 2024ರ ಕಾನೂನಿನ ಮೂಲಭೂತ ದೌರ್ಬಲ್ಯ ಮತ್ತು ಕಾರ್ಯವಿಧಾನದ ವಿಳಂಬ – ಈ ಎರಡನ್ನೂ ಪರಿಹರಿಸಲು ಯತ್ನಿಸುತ್ತದೆ ಎಂದು ಹೇಳಲಾಗಿದೆ.

ನಾಲ್ಕು ರೀತಿಯ ಕಾರ್ಯವಿಧಾನಗಳ ಮೂಲಕ ತನಿಖೆ, ವಿಚಾರಣೆ ಹಾಗೂ ಶಿಕ್ಷೆಗಳನ್ನು ಸಮೀಕರಿಸಿರುವುದರಿಂದ ಕಾನೂನು ಕೇವಲ ಕಠಿಣವಾಗುವುದು ಮಾತ್ರವಲ್ಲದೆ, ಹೆಚ್ಚು ಪರಿಣಾಮಕಾರಿಯೂ ಆಗಿರಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಕಳವಳಗಳು ಮತ್ತು ಸವಾಲುಗಳು

ಮಸೂದೆಯಲ್ಲಿ ಕಠಿಣ ಶಿಕ್ಷೆಗಳಿದ್ದರೂ, ಕಾನೂನಿನ ನೈಜ ಪರಿಣಾಮಕಾರಿಯತ್ವವು ಅದರ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ. ಅಂತೆಯೇ, ಮಸೂದೆ ಮತ್ತು ಕಾಯ್ದೆಯ ಅನುಷ್ಠಾನದಲ್ಲಿ ಕೆಲವು ಪ್ರಮುಖ ಸವಾಲುಗಳೂ ಇವೆ.

  • ತನಿಖೆಗಳನ್ನು ನಿಜವಾಗಿಯೂ ಎರಡು ತಿಂಗಳೊಳಗೆ ಪೂರ್ಣಗೊಳಿಸಲು ಸಾಧ್ಯವೇ.
  • ತ್ವರಿತ ನ್ಯಾಯಾಲಯಗಳು ಕಾಲಮಿತಿಯನ್ನು ತಲುಪಲು ಅಗತ್ಯವಾದ ಸಾಮರ್ಥ್ಯ ಮತ್ತು ಸಿಬ್ಬಂದಿಯನ್ನು ಹೊಂದಿರುತ್ತವೆಯೇ.
  • ರಾಜ್ಯಗಳು ಮತ್ತು ತನಿಖಾ ಸಂಸ್ಥೆಗಳು ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಲು ಸಾಧ್ಯವೇ.
  • ಪರೀಕ್ಷಾ ವ್ಯವಸ್ಥೆಗಳಲ್ಲಿನ ಡಿಜಿಟಲ್ ಮತ್ತು ತಾಂತ್ರಿಕ ದೌರ್ಬಲ್ಯಗಳನ್ನು ಸರಿಪಡಿಸಲಾಗುತ್ತದೆಯೇ.

ಪೋಕ್ಸೋ ರೀತಿಯ ವಿಶೇಷ ಕಾನೂನುಗಳ ಅಡಿಯಲ್ಲಿರುವ ಇತರ ತ್ವರಿತ ನ್ಯಾಯಾಲಯಗಳ ಅನುಭವವು, ಮೂಲಸೌಕರ್ಯ ಮತ್ತು ಸಿಬ್ಬಂದಿ ಸಂಖ್ಯಾ ಬಲ ಹೆಚ್ಚಾಗದಿದ್ದರೆ ಪ್ರಕರಣಗಳ ಬಾಕಿ ಉಳಿಕೆ ಪ್ರಮಾಣ ಹೆಚ್ಚಾಗಬಹುದು ಎಂಬುದನ್ನು ತೋರಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಈ ಮಸೂದೆಯು ಅಕ್ರಮಗಳು ನಡೆದ ಬಳಿಕ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿ, ತನಿಖೆಗೆ ಕಾಲಮಿತಿಯನ್ನು ನಿಗದಿ ಮಾಡಿದೆಯೇ ಹೊರತು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಕಿಂಚಿತ್ತೂ ಬೆಳಕು ಚೆಲ್ಲಿಲ್ಲ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19 ಸೀಟು ಹಾಗೂ ನೆತನ್ಯಾಹು ಭವಿಷ್ಯ…

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ...

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...