ಜೆನ್‌-ಝೀ ಮಾತ್ರವಲ್ಲ, ಮೋದಿಯ ಕಟ್ಟಾ ಬೆಂಬಲಿಗ ‘ಕುಲೀನ ವರ್ಗ’ವೂ BJPಯಿಂದ ದೂರ ಸರಿಯುತ್ತಿದೆ!

Date:

ಬಿಜೆಪಿ ಪರ ಒಲವು ಹೊಂದಿರುವ ಪತ್ರಕರ್ತ ಆರ್. ಜಗನ್ನಾಥನ್ ಅವರು ಇತ್ತೀಚೆಗೆ ‘ದಿ ಪ್ರಿಂಟ್‌’ಗೆ ಲೇಖನವೊಂದನ್ನು ಬರೆದಿದ್ದಾರೆ. ಮೋದಿ ಸರ್ಕಾರಕ್ಕೆ ಮಹತ್ವದ ರಾಜಕೀಯ ಎಚ್ಚರಿಕೆಯನ್ನು ನೀಡಿದ್ದಾರೆ. ಅವರು ಜೆನ್‌-ಝೀ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯು ಕೇವಲ ನೀಟ್ ಪರೀಕ್ಷಾ ಅಕ್ರಮ ಅಥವಾ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿರ್ಗಮನಕ್ಕೆ ಸೀಮಿತವಲ್ಲ. ಅದು ಬದಲಾಗುತ್ತಿರುವ ಭಾರತೀಯ ಸಮಾಜ, ಅದರಲ್ಲೂ ಯುವಜನತೆ ಮತ್ತು ಹೊಸ ಮಧ್ಯಮ ವರ್ಗದ ರಾಜಕೀಯ ಮನಸ್ಥಿತಿಯ ಪ್ರತಿಬಿಂಬವೆಂದು ವಿಶ್ಲೇಷಿಸಿದ್ದಾರೆ. ಜೆನ್‌-ಝೀಗಳು ಮಾತ್ರವಲ್ಲ, ದೀರ್ಘಕಾಲದಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದ ಕುಲೀನ ವರ್ಗವೂ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂದು ಎಚ್ಚರಿಸಿದ್ದಾರೆ.

- Advertisement -

ಅವರ ಲೇಖನ ಹೇಳುವಂತೆ; ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಮೂಲಕ ಸರ್ಕಾರ ತಾತ್ಕಾಲಿಕವಾಗಿ ರಾಜಕೀಯ ಒತ್ತಡವನ್ನು ಕಡಿಮೆ ಮಾಡಿಕೊಂಡಿರಬಹುದು. ಆದರೆ, ಅದು ಸಮಸ್ಯೆಯ ಅಂತ್ಯವಲ್ಲ. ಒಂದು ವಿಷಯದ ಸುತ್ತ ಆರಂಭವಾಗುವ ಜನರ ಅಸಮಾಧಾನ ಬೇಗನೆ ಇತರ ಕ್ಷೇತ್ರಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಇಂದು ನೀಟ್, ನಾಳೆ ಇ-20 ಇಂಧನ, ನಂತರ ರೈತರ ಸಮಸ್ಯೆಗಳು, ವಾಹನ ಮಾಲೀಕರ ಅಸಮಾಧಾನ, ಉದ್ಯೋಗ, ಶಿಕ್ಷಣ, ಆರೋಗ್ಯ, ಸ್ಥಳೀಯ ಆಡಳಿತ – ಹೀಗೆ ಪ್ರತಿಯೊಂದು ವಿಷಯವೂ ಸಾರ್ವಜನಿಕ ಪ್ರತಿಭಟನೆಗೆ ಕಾರಣವಾಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಪ್ರಸ್ತುತ, ಯಾವುದೇ ವಿಷಯ ಗಂಭೀರವಾಗಿ ಮುನ್ನೆಗೆ ಬಂದರೂ, ಅವುಗಳ ಕೇಂದ್ರದಲ್ಲಿ ಇರುವವರು ಜೆನ್-ಝೀಗಳು. ಈ ಪೀಳಿಗೆಗೆ ಕಾಂಗ್ರೆಸ್ ಆಡಳಿತದ ಅನುಭವವಿಲ್ಲ. ಅವರು ಕಂಡಿರುವ ಏಕೈಕ ರಾಷ್ಟ್ರೀಯ ನಾಯಕತ್ವ ನರೇಂದ್ರ ಮೋದಿ ಅವರದ್ದೇ. ಹೀಗಾಗಿ ತಮ್ಮ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಉತ್ತರ ಕೇಳುವುದೂ ಅವರಿಂದಲೇ. ಈ ಪೀಳಿಗೆಯ ಅಸಮಾಧಾನ ಯಾವುದೋ ಒಂದು ನೀತಿ ಅಥವಾ ಪರೀಕ್ಷೆಯ ವಿರುದ್ಧವಲ್ಲ. ‘ನಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ’ ಎಂಬ ಆಕ್ರೋಶ.

ಇದು ಕೇವಲ ಯುವಜನರ ಪ್ರಶ್ನೆಯೂ ಅಲ್ಲ. ಹೊಸ ರೀತಿಯ ಮಧ್ಯಮ ವರ್ಗವೂ ರೂಪುಗೊಳ್ಳುತ್ತಿದೆ. ಆದಾಯ ತೆರಿಗೆ ಕಟ್ಟುವವರಷ್ಟೇ ಮಧ್ಯಮ ವರ್ಗವಲ್ಲ; ಜಿಎಸ್‌ಟಿ ಮೂಲಕ ತೆರಿಗೆ ಪಾವತಿಸುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಬಯಸುವವರು, ಪ್ರತಿದಿನ ಸರ್ಕಾರಿ ವ್ಯವಸ್ಥೆಯನ್ನು ಎದುರಿಸುವವರು – ಇವರೆಲ್ಲರೂ ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಬೇಕಾಗಿರುವುದು ಕೇವಲ ಯೋಜನೆಗಳಲ್ಲ, ಉತ್ತರದಾಯಿತ್ವ.

Advertisements

ಇಲ್ಲಿಯವರೆಗೆ ಚುನಾವಣಾ ರಾಜಕೀಯದಲ್ಲಿ ಉಚಿತ ಯೋಜನೆಗಳು ಪ್ರಮುಖ ಪಾತ್ರವಹಿಸಿದ್ದವು. ಆದರೆ ಮುಂದೆ ಅದು ಸಾಕಾಗುವುದಿಲ್ಲ. ಉಚಿತ ಯೋಜನೆಗಳ ಜೊತೆಗೆ ಉತ್ತಮ ಆಡಳಿತ, ಗುಣಮಟ್ಟದ ನಾಗರಿಕ ಸೇವೆಗಳು, ಸುಗಮ ಸಂಚಾರ, ಆರೋಗ್ಯ ವ್ಯವಸ್ಥೆ, ಶಿಕ್ಷಣ, ಉದ್ಯೋಗ ಹಾಗೂ ಭ್ರಷ್ಟಾಚಾರ ನಿಯಂತ್ರಣವೂ ಜನರ ರಾಜಕೀಯ ಆಯ್ಕೆಯನ್ನು ನಿರ್ಧರಿಸಲಿವೆ. ನೀಟ್ ವಿವಾದವು ಒಂದು ಪರೀಕ್ಷೆಯ ಸಮಸ್ಯೆಯಷ್ಟೇ ಅಲ್ಲ; ಆಡಳಿತದ ಗುಣಮಟ್ಟದ ಪ್ರಶ್ನೆಯೂ ಆಗಿದೆ ಎಂಬ ಸಂದೇಶವನ್ನು ಲೇಖನ ನೀಡಿದೆ.

ಇನ್ನೊಂದು ಮಹತ್ವದ ಅಂಶ ಆಡಳಿತದ ಶೈಲಿ. ಮೇಲಿನಿಂದ ನಿರ್ಧಾರ ತೆಗೆದುಕೊಂಡು, ಜನರ ಮೇಲೆ ಹೇರುವ ಮಾದರಿ ಇನ್ನು ಮುಂದೆ ಪರಿಣಾಮಕಾರಿಯಾಗುವುದಿಲ್ಲ. ಸರ್ಕಾರದ ಉದ್ದೇಶ ಒಳ್ಳೆಯದಾಗಿದ್ದರೂ, ಜನರೊಂದಿಗೆ ಸಮಾಲೋಚನೆ ನಡೆಸದೆ ತೆಗೆದುಕೊಳ್ಳುವ ನಿರ್ಧಾರಗಳು ಹೇರಿಕೆಯಂತೆ ಕಾಣಬಹುದು. ಇ-20 ಇಂಧನ ಯೋಜನೆ ಅದರ ಒಂದು ಉದಾಹರಣೆ. ಜನರ ಅಭಿಪ್ರಾಯ ಕೇಳುವುದು, ಪರ್ಯಾಯಗಳನ್ನು ಚರ್ಚಿಸುವುದು ಹಾಗೂ ನೀತಿಗಳನ್ನು ವಿವರಿಸುವುದು ಈಗ ಆಡಳಿತದ ಅವಿಭಾಜ್ಯ ಭಾಗವಾಗಬೇಕು.

ಇದೇ ಕಾರಣಕ್ಕೆ ವ್ಯಾಪಕ ಸಮಾಲೋಚನೆಯ ಅಗತ್ಯ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ. ಯುವಜನರು, ತಜ್ಞರು, ರೈತರು, ಕಾರ್ಮಿಕರು, ಉದ್ಯಮಿಗಳು ಹಾಗೂ ವಿವಿಧ ನಾಗರಿಕ ಗುಂಪುಗಳೊಂದಿಗೆ ನಿರಂತರ ಸಂವಾದ ನಡೆಸುವ ಆಡಳಿತವೇ ವಿಶ್ವಾಸ ಗಳಿಸಬಲ್ಲದು. ಕೃಷಿ, ಶಿಕ್ಷಣ, ಆರೋಗ್ಯ, ನ್ಯಾಯಾಂಗ, ಆಡಳಿತ ಮತ್ತು ರಾಜಕೀಯ ಸುಧಾರಣೆಗಳ ಬಗ್ಗೆ ದೇಶವ್ಯಾಪಿ ಚರ್ಚೆಗಳು ಆರಂಭವಾಗಬೇಕಾದ ಅಗತ್ಯವಿದೆ.

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಮೀಸಲಾತಿಯ ಕುರಿತ ಅಸಮಾಧಾನವೂ ಸೂಕ್ಷ್ಮ ರಾಜಕೀಯ ವಿಷಯವಾಗಿದೆ. ಈ ಪ್ರಶ್ನೆಯನ್ನು ಯಾರಾದರೂ ಜಾತಿ ಸಂಘರ್ಷದ ದಿಕ್ಕಿಗೆ ತಳ್ಳಲು ಪ್ರಯತ್ನಿಸಿದರೆ ಅದರ ಪರಿಣಾಮ ಅತ್ಯಂತ ಗಂಭೀರವಾಗಬಹುದು. ದೇಶದ ರಾಜಕೀಯವೇ ಹೊಸ ರೀತಿಯ ಧ್ರುವೀಕರಣದತ್ತ ಸಾಗುವ ಅಪಾಯವಿದೆ.

ಈ ಬದಲಾವಣೆಗಳ ಪರಿಣಾಮ ಕೇವಲ ಕೇಂದ್ರ ಸರ್ಕಾರದ ಮೇಲಷ್ಟೇ ಅಲ್ಲ. ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಆಡಳಿತ ಯಂತ್ರ, ನ್ಯಾಯಾಂಗ ಮತ್ತು ಮಾಧ್ಯಮ – ಎಲ್ಲವೂ ಜನರ ನೇರ ಪರಿಶೀಲನೆಗೆ ಒಳಗಾಗಲಿವೆ. ನಾಗರಿಕ ಸೇವೆಗಳನ್ನು ಸಮರ್ಪಕವಾಗಿ ನೀಡಲು ವಿಫಲವಾಗುವ ಪ್ರತಿಯೊಂದು ಸಂಸ್ಥೆಯೂ ಸಾರ್ವಜನಿಕ ಅಸಮಾಧಾನವನ್ನು ಎದುರಿಸಬೇಕಾಗುತ್ತದೆ.

ಹೀಗಾಗಿ, ಬಿಜೆಪಿ ಎದುರಿಸುತ್ತಿರುವ ದೊಡ್ಡ ಸವಾಲು ಇಂದು ವಿರೋಧ ಪಕ್ಷಗಳಿಂದಲ್ಲ. ಬದಲಾಗುತ್ತಿರುವ ಭಾರತೀಯ ಸಮಾಜದಿಂದ. ಪ್ರಶ್ನೆ ಕೇಳುವ ಯುವಜನರಿಂದ. ಉತ್ತಮ ಆಡಳಿತವನ್ನು ಬೇಡುವ ಮಧ್ಯಮ ವರ್ಗದಿಂದ. ತಾವು ಕೇವಲ ಫಲಾನುಭವಿಗಳಲ್ಲ, ನಿರ್ಧಾರ ಪ್ರಕ್ರಿಯೆಯ ಭಾಗವಾಗಬೇಕು ಎಂದು ಒತ್ತಾಯಿಸುವ ನಾಗರಿಕರಿಂದ ಎಂದು ಆರ್‌ ಜಗನ್ನಾಥ್ ತರ್ಕಿಸಿದ್ದಾರೆ.

ಅವರ ಪ್ರಕಾರ, ಸರ್ಕಾರವು ತನ್ನ ಆಡಳಿತದ ಡಿಎನ್‌ಎಯನ್ನು ‘ಆಳುವ ಮನೋಭಾವ’ದಿಂದ ‘ಸಮಾಲೋಚಿಸುವ ಮನೋಭಾವ’ಕ್ಕೆ ಬದಲಾಯಿಸಬೇಕು. ಜನರನ್ನು ಕೇಳುವ, ಅವರೊಂದಿಗೆ ಚರ್ಚಿಸುವ, ಅವರ ವಿಶ್ವಾಸವನ್ನು ಗಳಿಸುವ ಆಡಳಿತವೇ ಮುಂದಿನ ರಾಜಕೀಯವನ್ನು ನಿರ್ಧರಿಸಲಿದೆ. ಇಲ್ಲವಾದರೆ, ಇಂದಿನ ಸಣ್ಣ ಸಣ್ಣ ಅಸಮಾಧಾನಗಳೇ ನಾಳೆಯ ದೊಡ್ಡ ರಾಜಕೀಯ ಬಿರುಗಾಳಿಯಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...