ಕೆಲಸದ ಸ್ಥಳದಲ್ಲಿ ಊಟದ ವಿರಾಮದ ವೇಳೆ ಅಪಘಾತವಾದರೂ ಪರಿಹಾರಕ್ಕೆ ಅರ್ಹರು: ದೆಹಲಿ ಹೈಕೋರ್ಟ್

Date:

ಕೆಲಸದ ಸ್ಥಳದಲ್ಲಿ ಕಾರ್ಮಿಕನಿಗೆ ಮಧ್ಯಾಹ್ನದ ಊಟದ ವಿರಾಮದ ವೇಳೆ ಅಪಘಾತ ಸಂಭವಿಸಿದರೂ, ಅದು ಉದ್ಯೋಗದ ಅವಧಿಯಲ್ಲೇ ನಡೆದ ಅಪಘಾತವೆಂದು ಪರಿಗಣಿಸಬೇಕು ಮತ್ತು ಉದ್ಯೋಗಿ ಪರಿಹಾರ ಪಡೆಯಲು ಅರ್ಹನಾಗಿರುತ್ತಾನೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

- Advertisement -

ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್ vs ಯಶ್‌ಪಾಲ್ ಮತ್ತು ಇತರರು ಪ್ರಕರಣದಲ್ಲಿ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಈ ಆದೇಶ ನೀಡಿದ್ದಾರೆ. ಊಟಕ್ಕಾಗಿ ತೆಗೆದುಕೊಳ್ಳುವ ತಾತ್ಕಾಲಿಕ ವಿರಾಮವು ಉದ್ಯೋಗ ಮತ್ತು ಅಪಘಾತದ ನಡುವಿನ ಸಂಬಂಧವನ್ನು ಕಡಿದುಹಾಕುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

2010ರಲ್ಲಿ ದೆಹಲಿಯ ನಿರ್ಮಾಣ ಸ್ಥಳವೊಂದರಲ್ಲಿ ಮೇಲ್ವಿಚಾರಕರಾಗಿ (ಸೂಪರ್‌ವೈಸರ್) ಕೆಲಸ ಮಾಡುತ್ತಿದ್ದ ಯಶ್‌ಪಾಲ್ ಅವರು ಮಧ್ಯಾಹ್ನದ ಊಟದ ವಿರಾಮದ ವೇಳೆ ಸ್ಥಳದಲ್ಲೇ ಇದ್ದಾಗ, ಮೊಬೈಲ್ ಕ್ರೇನ್ ಮೂಲಕ ಸಾಗಿಸಲಾಗುತ್ತಿದ್ದ ಕಬ್ಬಿಣದ ರಾಡ್ ಅವರ ಮೇಲೆ ಬಿದ್ದ ಪರಿಣಾಮ ಎಡಗಾಲು ಕಳೆದುಕೊಂಡಿದ್ದರು.

ಈ ಪ್ರಕರಣದಲ್ಲಿ ಉದ್ಯೋಗಿ ಪರಿಹಾರ ಆಯುಕ್ತರು (Commissioner) ಯಶ್‌ಪಾಲ್ ಅವರಿಗೆ ಬಡ್ಡಿ ಸಹಿತ ₹7.86 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ವಿಮಾ ಕಂಪನಿ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ವಿಮಾ ಕಂಪನಿ ಪರ ವಕೀಲರು, ಅಪಘಾತ ಸಂಭವಿಸಿದ ವೇಳೆ ಯಶ್‌ಪಾಲ್ ಊಟದ ವಿರಾಮದಲ್ಲಿದ್ದರು. ಆದ್ದರಿಂದ ಅದು ಉದ್ಯೋಗದ ಅವಧಿಯಲ್ಲಿ ನಡೆದ ಅಪಘಾತವಲ್ಲ ಎಂದು ವಾದಿಸಿದ್ದರು. ಜೊತೆಗೆ ಅವರು ಸೂಪರ್‌ವೈಸರ್ ಆಗಿದ್ದರಿಂದ ಉದ್ಯೋಗಿಗಳ ಪರಿಹಾರ ಕಾಯ್ದೆ (Employee’s Compensation Act) ಅಡಿಯಲ್ಲಿ “ಉದ್ಯೋಗಿ” ಎಂಬ ವ್ಯಾಖ್ಯಾನಕ್ಕೆ ಬರುವುದಿಲ್ಲ ಎಂದೂ ವಾದ ಮಂಡಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು.

“ಅಪಘಾತ ಕೆಲಸದ ಸ್ಥಳದಲ್ಲೇ ಸಂಭವಿಸಿರುವುದು ನಿರ್ವಿವಾದ. ಉದ್ಯೋಗದ ಸಂಬಂಧದಿಂದಲೇ ಅವರು ಅಲ್ಲಿದ್ದರು. ಊಟಕ್ಕಾಗಿ ತೆಗೆದುಕೊಳ್ಳುವ ತಾತ್ಕಾಲಿಕ ವಿರಾಮ ಮಾತ್ರದಿಂದ ಉದ್ಯೋಗ ಮತ್ತು ಅಪಘಾತದ ನಡುವಿನ ಸಂಬಂಧ ಕಳೆದುಹೋಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಕೇವಲ “ಸೂಪರ್‌ವೈಸರ್” ಎಂಬ ಹುದ್ದೆ ಹೊಂದಿರುವುದರಿಂದ ಯಾರನ್ನಾದರೂ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಮೀಸಲಾತಿ ಸವಲತ್ತಲ್ಲ; ಸಂವಿಧಾನಾತ್ಮಕ ಸಾಮಾಜಿಕ ನ್ಯಾಯದ ಭರವಸೆ…

ಹುದ್ದೆಯ ಹೆಸರು ಮುಖ್ಯವಲ್ಲ; ಉದ್ಯೋಗಿ ವಾಸ್ತವವಾಗಿ ಯಾವ ರೀತಿಯ ಕೆಲಸ ನಿರ್ವಹಿಸುತ್ತಿದ್ದಾನೆ ಎಂಬುದೇ ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ಯಶ್‌ಪಾಲ್ ಅವರು ವ್ಯವಸ್ಥಾಪಕ ಅಥವಾ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂಬುದಕ್ಕೆ ಯಾವುದೇ ದಾಖಲೆ ಅಥವಾ ಸಾಕ್ಷ್ಯವನ್ನು ವಿಮಾ ಕಂಪನಿ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಉದ್ಯೋಗಿ ಪರಿಹಾರ ಆಯುಕ್ತರು ನೀಡಿದ್ದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ರಾಷ್ಟ್ರೀಯ ವಿಮಾ ಕಂಪನಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.

ಈ ತೀರ್ಪು, ಕೆಲಸದ ಸ್ಥಳದಲ್ಲೇ ಊಟದ ವಿರಾಮ ಅಥವಾ ಇತರ ತಾತ್ಕಾಲಿಕ ವಿರಾಮದ ವೇಳೆ ಸಂಭವಿಸುವ ಅಪಘಾತಗಳಿಗೂ ಉದ್ಯೋಗಿಗಳ ಪರಿಹಾರ ಕಾಯ್ದೆಯಡಿ ಪರಿಹಾರ ದೊರೆಯಬಹುದು ಎಂಬುದನ್ನು ಸ್ಪಷ್ಟಪಡಿಸಿರುವ ಮಹತ್ವದ ತೀರ್ಪು ಎಂದು ಪರಿಗಣಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...