ಕಾಂಗ್ರೆಸ್ ಮಡಿಲಿಗೆ ಮಮತಾ, ಪವಾರ್? ಮಹಾ ವಿಲೀನದ ಹಾದಿಯಲ್ಲಿ ವಿಪಕ್ಷಗಳು!

Date:

ಸತತ ಚುನಾವಣಾ ಸೋಲುಗಳು, ಮೋದಿ ಸರ್ಕಾರದ ದಮನ, ಆಂತರಿಕ ಒಡಕುಗಳು ಹಾಗೂ ಕೇಂದ್ರೀಕೃತ ರಾಷ್ಟ್ರೀಯ ರಾಜಕಾರಣದ ಅಬ್ಬರದ ನಡುವೆ ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತಿವೆ. ಅವುಗಳ ಶಕ್ತಿ ಕ್ಷೀಣಿಸುತ್ತಿದೆ. ಇದು ಮಹಾ ವಿಲೀನದ ಅನಿವಾರ್ಯತೆಗೆ ಮುಖ್ಯ ಕಾರಣವೂ ಆಗಿದೆ.

2024ರ ಲೋಕಸಭಾ ಚುನಾವಣೆಯು ದೇಶದ ದಿಕ್ಕು ಬದಲಾಯಿಸುತ್ತದೆ. ಆ ದಿಕ್ಕನ್ನು ಬದಲಿಸುವ ಗುರಾಣಿ ಮತದಾರರ ಕೈಯಲ್ಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರರು ಪರಿಪೂರ್ಣ ಅಧಿಕಾರ ಕೊಡದಿದ್ದರೂ, ಮೋದಿಗೆ ಮತ್ತೊಮ್ಮೆ ಮಣಿ ಹಾಕಿದರು. ಈಗ, ಅದೇ ಮತದಾರರ ಮತದಾನದ ಹಕ್ಕನ್ನೇ ಮೋದಿ ಸರ್ಕಾರ ಕಸಿದುಕೊಳ್ಳುತ್ತದೆ. ಈ ಚರ್ಚೆಯನ್ನು ಬದಿಗಿಟ್ಟು ನೋಡಿದರೆ, ಆ ಚುನಾವಣೆಯ ಸಮಯದಲ್ಲಿ, ಭಾರತೀಯ ರಾಜಕಾರಣದ ಅತ್ಯಂತ ಹಿರಿಯ ನಾಯಕ ಶರದ್ ಪವಾರ್ ಅವರು ಆಡಿದ್ದ ಒಂದು ಮಾತು ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. “ಮುಂದಿನ ದಿನಗಳಲ್ಲಿ ದೇಶದ ಹಲವು ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಲಿವೆ ಅಥವಾ ಅತ್ಯಂತ ನಿಕಟವಾಗಿ ಒಟ್ಟಿಗೆ ಕೆಲಸ ಮಾಡಲಿವೆ” ಎಂದು ಪವಾರ್ ಭವಿಷ್ಯ ನುಡಿದಿದ್ದರು.

- Advertisement -

ಅಂದು ಅನೇಕ ರಾಜಕೀಯ ವಿಶ್ಲೇಷಕರು ಪವಾರ್ ಅವರ ಮಾತನ್ನು ಕೇವಲ ಚುನಾವಣಾ ಕಾಲದ ತಂತ್ರಗಾರಿಕೆ ಅಥವಾ ರಾಜಕೀಯ ಹೇಳಿಕೆ ಎಂದು ಪರಿಗಣಿಸಿದ್ದರು. ಆದರೆ, ಎರಡು ವರ್ಷಗಳ ನಂತರದ ಪ್ರಸ್ತುತ ಸನ್ನಿವೇಶದಲ್ಲಿ ಪವಾರ್ ಅವರ ಮಾತು ಮತ್ತೆ-ಮತ್ತೆ ನೆನಪಾಗುತ್ತದೆ. ಭಾರತದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಶರದ್ ಪವಾರ್ ಅಂದು ಆಡಿದ್ದ ಮಾತುಗಳು ಅಕ್ಷರಶಃ ನಿಜವಾಗುವತ್ತ ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗ ಪ್ರಾದೇಶಿಕ ವಿರೋಧ ಪಕ್ಷಗಳು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಆಂತರಿಕ ಸವಾಲುಗಳು ಈ ವಿಲೀನದ ಚರ್ಚೆಗಳಿಗೆ ಹೊಸ ಜೀವ ತುಂಬಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಅಂದಹಾಗೆ, ದೇಶದ ಪ್ರಮುಖ ಪ್ರಾದೇಶಿಕ ಶಕ್ತಿಗಳಾದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಮಹಾರಾಷ್ಟ್ರದ ರಾಷ್ಟ್ರೀಯತಾವಾದಿ ಕಾಂಗ್ರೆಸ್ (ಎನ್‌ಸಿಪಿ) ಪಕ್ಷಗಳು ತಮ್ಮ ಮೂಲ ಬೇರು ಕಾಂಗ್ರೆಸ್‌ ಜೊತೆಗೆ ವಿಲೀನವಾಗುವ ಕುರಿತು ತೆರೆಯ ಮರೆಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿವೆ.

ಈ ಬೆಳವಣಿಗೆಯು ಕೇವಲ ಎರಡು ಪಕ್ಷಗಳ ಅಸ್ತಿತ್ವದ ಪ್ರಶ್ನೆಯಷ್ಟೇ ಅಲ್ಲ, ಬದಲಾಗಿ ಇಡೀ ದೇಶದ ವಿರೋಧ ಪಕ್ಷಗಳ ಒಕ್ಕೂಟದ ಭವಿಷ್ಯ ಮತ್ತು ಭಾರತದ ಪ್ರಜಾಪ್ರಭುತ್ವದ ಸ್ವರೂಪವನ್ನೇ ಬದಲಾಯಿಸುವ ಸಾಧ್ಯತೆಯೂ ಇದೆ.

ಸತತ ಚುನಾವಣಾ ಸೋಲುಗಳು, ಆಂತರಿಕ ಒಡಕುಗಳು ಹಾಗೂ ಕೇಂದ್ರೀಕೃತ ರಾಷ್ಟ್ರೀಯ ರಾಜಕಾರಣದ ಅಬ್ಬರದ ನಡುವೆ ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತಿವೆ. ಅವುಗಳ ಶಕ್ತಿ ಕ್ಷೀಣಿಸುತ್ತಿದೆ. ಇದು ಮಹಾ ವಿಲೀನದ ಅನಿವಾರ್ಯತೆಗೆ ಮುಖ್ಯ ಕಾರಣವೂ ಆಗಿದೆ.

ಇತಿಹಾಸವನ್ನು ನೋಡಿದರೆ, ಕಳೆದ ಎರಡು ದಶಕಗಳಲ್ಲಿ ಭಾರತೀಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಅತ್ಯಂತ ಪ್ರಬಲ ಭೂಮಿಕೆಯನ್ನು ನಿರ್ವಹಿಸಿದ್ದವು. ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ಕಾಯ್ದುಕೊಳ್ಳುವಲ್ಲಿ ಈ ಪಕ್ಷಗಳು ಯಶಸ್ವಿಯಾಗಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ರಾಜಕೀಯವು ಸಂಪೂರ್ಣವಾಗಿ ಧ್ರುವೀಕರಣಗೊಳ್ಳುತ್ತಿದೆ. ಚುನಾವಣೆಗಳು ವ್ಯಕ್ತಿ ಕೇಂದ್ರಿತ ಮತ್ತು ರಾಷ್ಟ್ರೀಯ ಸಿದ್ಧಾಂತಗಳ ಆಧಾರದ ಮೇಲೆ ನಡೆಯುತ್ತಿವೆ. ಜೊತಗೆ, ಮೋದಿ ಸರ್ಕಾರವು ಸಣ್ಣ-ಪುಟ್ಟ ಪಕ್ಷಗಳು ನುಂಗಿಹಾಕುವ ತೋಳದಂತೆ ವರ್ತಿಸುತ್ತಿದೆ. ಪ್ರದೇಶಿಕ ಪಕ್ಷಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ದಮನಿಸುತ್ತಿದೆ. ಪಕ್ಷಗಳನ್ನು ಒಡೆದು, ಚೂರು ಮಾಡಿ, ಅವುಗಳ ಅಸ್ತಿತ್ವವೇ ಇಲ್ಲದಂತೆ ಮಾಡುತ್ತಿದೆ.

ಮೋದಿ ಸರ್ಕಾರದ ದಮನಕಾರಿ ಧೋರಣೆ ಒಂದೆಡೆಯಾದರೆ, ಮತ್ತೊಂದೆಡೆ, ಮತದಾರರ ದೃಷ್ಟಿಕೋನಗಳೂ ಬದಲಾಗುತ್ತಿವೆ. ಈ ಹಿಂದೆ, ರಾಜ್ಯದ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ‘ಉಘೇ’ ಎನ್ನುತ್ತಿದ್ದ ಮತದಾರರು, ಈಗ ಸ್ಥಳೀಯ ಚುನಾವಣೆಗಳಲ್ಲೂ ರಾಷ್ಟ್ರೀಯ ಪಕ್ಷಗಳನ್ನೇ ಆಯ್ಕೆ ಮಾಡುವ ಪರಿಪಾಠ ಆರಂಭವಾಗಿದೆ. ಜೊತೆಗೆ, ವಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತಯು ಮತ ವಿಭಜನೆಗೂ ಕಾರಣವಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ, ಪ್ರತ್ಯೇಕವಾಗಿ ಹೋರಾಡಿ ಧೂಳೀಪಟವಾಗುವ ಬದಲು, ರಾಷ್ಟ್ರೀಯ ಅಸ್ತಿತ್ವ ಹೊಂದಿರುವ ಕಾಂಗ್ರೆಸ್ ನಾಯಕತ್ವದ ಅಡಿಯಲ್ಲಿ ಒಂದಾಗುವುದೇ ಸೂಕ್ತ ಎಂಬ ಆಲೋಚನೆ ಪ್ರಾದೇಶಿಕ ನಾಯಕರಲ್ಲಿ ಮೂಡಲಾರಂಭಿಸಿದೆ ಎಂದ ಚರ್ಚೆಗಳು ಈಗ ಮುನ್ನೆಲೆಯಲ್ಲಿವೆ.

ಈ ಇಡೀ ವಿಲೀನದ ಚರ್ಚೆಯಲ್ಲಿ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ. ಮಮತಾ ಮೂಲತಃ ಕಾಂಗ್ರೆಸ್‌ನವರು. 1998ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸೈದ್ಧಾಂತಿಕ ಮತ್ತು ನಾಯಕತ್ವದ ಭಿನ್ನಾಭಿಪ್ರಾಯಗಳ ಕಾರಣದಿಂದ ಹೊರಬಂದು ಟಿಎಂಸಿ ಕಟ್ಟಿದ್ದರು. ಪಶ್ಚಿಮ ಬಂಗಾಳದಲ್ಲಿ ದಶಕಗಳಿಂದ ಇದ್ದ ಎಡಪಕ್ಷಗಳ ಭದ್ರಕೋಟೆಯನ್ನು ಧ್ವಂಸಗೊಳಿಸಿ, ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿದ್ದರು.

ಕಳೆದೊಂದು ಚುನಾವಣೆ ಮಮತಾರ ಭದ್ರಕೋಟೆಯನ್ನು ನುಚ್ಚನೂರು ಮಾಡಿತು. ಕೊಂಚ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಟಿಎಂಸಿಯನ್ನು ಸೋಲಿಸಲು ಎಸ್‌ಐಆರ್‌ ಎಂಬ ಪೆಡಂಭೂತವನ್ನು ಹೇರಿದ ಬಿಜೆಪಿ, ಮತಗಳನ್ನು ಅಳಿಸಿ ಅಧಿಕಾರ ಕಬಳಿಸಿದೆ. ಮಾತ್ರವಲ್ಲ, ಟಿಎಂಸಿಯೊಳಗೆ ಒಡಕು ಮೂಡಿಸಿದೆ. ಪಕ್ಷದ ಶಾಸಕರು ಮತ್ತು ಸಂಸದರು ತಮ್ಮದೇ ನಾಯಕರ ವಿರುದ್ಧ ಬಂಡಾಯ ಏಳುವಂತೆ ಮಾಡಿದೆ. ಪಕ್ಷವನ್ನು ನಿರ್ನಾಮ ಮಾಡಲು ಹವಣಿಸುತ್ತಿದೆ.

ಈಗ, ಮಮತಾ ಅವರ ಟಿಎಂಸಿ ಅಳಿವು-ಉಳಿವಿನ ನಡುವೆ ಹೋರಾಡುತ್ತಿದೆ. ದೆಹಲಿಯಲ್ಲಿನ ಕಾಂಗ್ರೆಸ್‌ ನಾಯಕರ ಕದ ತಟ್ಟುವಂತೆ ಮಾಡಿದೆ. ಇಂಡಿಯಾ ಮೈತ್ರಿಕೂಟವನ್ನು ಕಡೆಗಣಿಸಿದ್ದ ಮಮತಾ, ಈಗ ಅದೇ ಮೈತ್ರಿಕೂಟವನ್ನು ಶಿಸ್ತಿನಿಂದ ಒಳಗೊಳ್ಳುತ್ತಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್‌ನ ವರಿಷ್ಠರನ್ನು ಮಮತಾ ಮತ್ತು ಅವರ ಸೋದರಳಿಯ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ಈ ಭೇಟಿಯ ವೇಳೆ ಕಾಂಗ್ರೆಸ್‌ ಜೊತೆ ಟಿಎಂಸಿಯ ವಿಲೀನದ ಮಾತುಕತೆಗಳೂ ನಡೆದಿವೆ ಎನ್ನಲಾಗಿದೆ.

ಒಂದು ವೇಳೆ, ಟಿಎಂಸಿ ಅಧಿಕೃತವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನವಾದರೆ, ಅದು ಭಾರತೀಯ ರಾಜಕಾರಣಕ್ಕೆ ಹೊಸ ದಿಕ್ಕು-ಹಾದಿಯನ್ನು ಸೃಷ್ಟಿಸಲಿದೆ ಎಂದು ಭಾವಿಸಲಾಗಿದೆ. ಬಂಗಾಳದಲ್ಲಿ ಜಾತ್ಯತೀತ ಮತಗಳು ವಿಭಜನೆಯಾಗುವುದನ್ನು ತಪ್ಪಿಸಬಹುದು. ಜೊತೆಗೆ, ಮಮತಾ ಬ್ಯಾನರ್ಜಿ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ನಾಯಕತ್ವದ ಸ್ಥಾನಮಾನವೂ ಸಿಗುಲಿದೆ. ಮಮತಾಗಿರುವ ಬದ್ಧತೆ, ಹೋರಾಟದ ಕಿಚ್ಚು, ಸಂಘಟನಾ ಸಾಮರ್ಥ್ಯವು ಕಾಂಗ್ರೆಸ್‌ಗೂ ಶಕ್ತಿ ತುಂಬಲಿದೆ.

ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರದ ಡಿಲಿಮಿಟೇಷನ್ ದುಸ್ಸಾಹಸ: ಮ್ಯಾಜಿಕ್ ನಂಬರ್‌ಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ!

ಅದೇ ರೀತಿ, ಮಹಾರಾಷ್ಟ್ರದಲ್ಲಿ ಪ್ರಮುಖ ಶಕ್ತಿಯಾಗಿರುವ, ಆಡಳಿತವನ್ನೂ ನಡೆಸಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ಟಿಎಂಸಿಯ ಹಾದಿಯಲ್ಲಿಯೇ ಇದೆ. 1999ರಲ್ಲಿ ‘ಸೋನಿಯಾ ಗಾಂಧಿ ವಿದೇಶಿ ಮಹಿಳೆ’ಯೆಂಬ ವಾದ ಮುಂದಿಟ್ಟು ಶರದ್ ಪವಾರ್, ತಾರಿಕ್ ಅನ್ವರ್ ಹಾಗೂ ಪಿ.ಎ. ಸಂಗ್ಮಾ ಅವರು ಕಾಂಗ್ರೆಸ್ ತೊರೆದು ಎನ್‌ಸಿಪಿ ಸ್ಥಾಪಿಸಿದ್ದರು. ಆದರೆ, ಇಂದು ಎನ್‌ಸಿಪಿ ಕೂಡ ಅಳಿವಿನ ಅಂಚಿನಲ್ಲಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಉಸಿರಾಡುತ್ತಿರುವುದೇ ಕಾಂಗ್ರೆಸ್‌ ಜೊತೆಗಿನ ಸಖ್ಯದಿಂದ ಎಂಬುದೂ ಮೇಲ್ನೋಟಕ್ಕೆ ಕಾಣುತ್ತಿದೆ.

2022ರಲ್ಲಿ ಎನ್‌ಸಿಪಿಯೊಳಗೆ ಸಂಭವಿಸಿದ ಭಾರಿ ಬಂಡಾಯ ಮತ್ತು ಅಜಿತ್ ಪವಾರ್ ನೇತೃತ್ವದ ಬಣವು ಮಹಾಯುತಿ (ಬಿಜೆಪಿ) ಜೊತೆ ಕೈಜೋಡಿಸಿದ್ದು ಶರದ್ ಪವಾರ್ ಅವರಿಗೆ ದೊಡ್ಡ ಆಘಾತ ನೀಡಿತ್ತು. ಪಕ್ಷದ ಹೆಸರು ಮತ್ತು ಚಿಹ್ನೆ ಎರಡೂ ಅವರ ಕೈಬಿಟ್ಟು ಹೋದವು. ಅಕ್ಷರಶಃ, ಶರದ್ ಪವಾರ್ ಅವರು ಹೊಸ ಪಕ್ಷವನ್ನು ಕಟ್ಟಿದಂತೆ ತನ್ನ ಪಕ್ಷವನ್ನು ಜೋಡಿಸಿಕೊಳ್ಳಬೇಕಾಯಿತು. ಆದರೂ, ಹೋರಾಟದ ಗುಣ ಬಿಡದ ಪವಾರ್, ಗಟ್ಟಿಯಾಗಿ ನಿಂತರು, ಅವರಿಗೆ ಕಾಂಗ್ರೆಸ್‌ ಹೆಗಲು ಕೊಟ್ಟಿತು.

ಈಗ, ಮಹಾರಾಷ್ಟ್ರದ ಪ್ರಸ್ತುತ ಜಟಿಲ ರಾಜಕೀಯ ಪರಿಸ್ಥಿತಿಯಲ್ಲಿ ಕೇವಲ ಒಂದು ಸಣ್ಣ ಬಣವಾಗಿ ಉಳಿದು ಹೋರಾಡುವುದಕ್ಕಿಂತ, ತಮ್ಮ ಮಾತೃಸಂಸ್ಥೆಯಾದ ಕಾಂಗ್ರೆಸ್‌ನೊಂದಿಗೆ ಪಕ್ಷವನ್ನು ವಿಲೀನಗೊಳಿಸುವುದು ಅತ್ಯಂತ ಗೌರವಾನ್ವಿತ ಮತ್ತು ಸುರಕ್ಷಿತ ಮಾರ್ಗ ಎಂದು ಪವಾರ್ ಭಾವಿಸುತ್ತಿದ್ದಾರೆ. ಇದು ಅವರ ನಿಷ್ಠಾವಂತ ಕಾರ್ಯಕರ್ತರಿಗೆ ರಾಷ್ಟ್ರೀಯ ಪಕ್ಷದ ರಕ್ಷಣೆ ನೀಡುವುದಲ್ಲದೆ, ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಯ ಗೊಂದಲಗಳನ್ನು ಶಾಶ್ವತವಾಗಿ ಪರಿಹರಿಸುತ್ತದೆ. ಈ ವಿಲೀನ ಪ್ರಕ್ರಿಯೆಯು ಪೂರ್ಣಗೊಂಡರೆ, ಅದು ಇತಿಹಾಸದ ಚಕ್ರವೊಂದು ಸಂಪೂರ್ಣವಾಗಿ ಸುತ್ತಿ ಮತ್ತೆ ಮೂಲ ಸ್ಥಾನಕ್ಕೆ ಬಂದಂತಾಗುತ್ತದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಎನ್‌ಡಿಎ ಒಳಗಿನ ಪ್ರಾದೇಶಿಕ ಪಕ್ಷಗಳನ್ನು ಸ್ವತಃ ಬಿಜೆಪಿಯೇ ನುಂಗಿ ನೀರು ಕುಡಿಯುತ್ತಿದೆ. ವಿಪಕ್ಷಗಳಲ್ಲಿರುವ ಸ್ಥಳೀಯ ಪಕ್ಷಗಳನ್ನು ಒಡೆದು, ಚೂರು ಮಾಡುತ್ತಿದೆ. ಪ್ರಾದೇಶಿಕ ಪಕ್ಷಗಳು ಕೃಶಗೊಂಡಿರುವ ಈ ಸಮಯದಲ್ಲಿ, ಕಾಂಗ್ರೆಸ್‌ ಪಕ್ಷವು ‘ಪ್ರವಾಹದಲ್ಲಿ ಸಿಕ್ಕ ಗರಿಕೆ’ಯಂತೆ ಕಾಣುತ್ತಿದೆ.

ಹಲವು ರಾಜ್ಯಗಳಲ್ಲಿ ಪ್ರದೇಶಿಕ ವಿಪಕ್ಷಗಳು ರಾಷ್ಟ್ರೀಯ ಪಕ್ಷದೊಂದಿಗೆ ವಿಲೀನವಾಗುತ್ತಿರುವ ಈ ಪ್ರವೃತ್ತಿಯು ಭಾರತೀಯ ಪ್ರಜಾಪ್ರಭುತ್ವದ ಚೌಕಟ್ಟಿನ ಮೇಲೆ ದೀರ್ಘಾವಧಿಯ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ ಎಂದು ನಂಬಲಾಗಿದೆ. ವಿರೋಧ ಪಕ್ಷಗಳ ಶಕ್ತಿಯು ಒಂದೇ ಸೂರಿನಡಿ ಬಲಗೊಂಡರೆ, ಫ್ಯಾಸಿಸ್ಟ್‌ ಧೋರಣೆಯುಳ್ಳ ಬಿಜೆಪಿ ವಿರುದ್ಧ ಬಲಿಷ್ಠ ಮತ್ತು ಸಂಘಟಿತ ಹೋರಾಟ ಕಟ್ಟಲು ಸಾಧ್ಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...