RSS ಸಮಾನತೆಯ ಶತ್ರು; ಯಾಕೆಂದರೆ…

Date:

ವರ್ಣಾಶ್ರಮದ ಕೆಳಗಿನ ವರ್ಗ, ಶೂದ್ರರು, ದಲಿತರು ಯೋಚಿಸಬಾರದು, ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಬೆಳೆಸುವುದು RSS ನ ದೀರ್ಘಕಾಲೀನ ಕುತಂತ್ರ

- Advertisement -

ಇಂದಿನ ಭಾರತದಲ್ಲಿ ʼರಾಷ್ಟ್ರೀಯತೆʼಯ ಹೆಸರಿನಲ್ಲಿ ನಡೆಯುತ್ತಿರುವ ಅತಿದೊಡ್ಡ ಅಪಾಯವೆಂದರೆ ಬೆಳೆಯುತ್ತಿರುವ RSS ವಿಚಾರ ಧಾರೆ. ಬಹುಜನರ ಹಕ್ಕುಗಳನ್ನು ಕಸಿದುಕೊಂಡು, ಬ್ರಾಹ್ಮಣಿಕ ವ್ಯವಸ್ಥೆಯನ್ನು ಶಾಶ್ವತಗೊಳಿಸುವ ಕಾರ್ಯದಲ್ಲಿರುವ ಈ ಸಂಘಟನೆಗೆ ವಿರೋಧ ತೋರಿಸುವುದು ನಮ್ಮ ಶೋಷಿತ ಸಮುದಾಯಗಳ ಸಾಮಾಜಿಕ ಜವಾಬ್ದಾರಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...
  1. ಬ್ರಾಹ್ಮಣಿಕ ಮೂಲ ತತ್ವ: RSS ಮನುವಾದದ ಆಧಾರದಲ್ಲಿ ನಿರ್ಮಿತವಾಗಿದೆ. ವರ್ಣ ವ್ಯವಸ್ಥೆಯನ್ನು ದೇವತಾ ಸೃಷ್ಟಿ ಎಂಬಂತೆ ಬಿಂಬಿಸಿ, ಸಮಾಜವನ್ನು ಬ್ರಾಹ್ಮಣ ಪ್ರಭುತ್ವದ ರಾಜ್ಯವನ್ನಾಗಿ ರೂಪಿಸಬೇಕೆಂಬುದೇ ಇದರ ಮೂಲ ಉದ್ದೇಶ.
  2. ನುಸುಳುವಿಕೆ & ಹಸ್ತಕ್ಷೇಪ: ಇವರು ತನ್ನ ಸದಸ್ಯರನ್ನು ವಿವಿಧ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯಗಳು, ಮಾಧ್ಯಮಗಳು, ಸರ್ಕಾರಿ ಇಲಾಖೆಗಳು ಮತ್ತು ಗಣ್ಯ ಸಂಸ್ಥೆಗಳಲ್ಲಿ ಒಳನುಸುಳುವಂತೆ ಮಾಡಿಸುತ್ತದೆ. ನಂತರ ನಿಧಾನವಾಗಿ ಆ ಸಂಸ್ಥೆಗಳ ಚಿಂತನೆ, ಧೋರಣೆ ಮತ್ತು ನೇಮಕಾತಿ ವ್ಯವಸ್ಥೆಯನ್ನು ಹಸ್ತಗತ ಮಾಡಿಕೊಳ್ಳುತ್ತದೆ. ಜನತಾಂತ್ರಿಕ ಕಾರ್ಯವಿಧಾನ ಬದಲು, ಸಂಘದ ನಿಯಮದ ಆಧಾರದ ಮೇಲಿನ ನಿಯಂತ್ರಣವನ್ನು ತರಲು ಯತ್ನಿಸುತ್ತಾರೆ.
  3. ವಿಭಜನೆಯ ತಂತ್ರ: ಒಬಿಸಿ, ಎಸ್‌ಸಿ, ಎಸ್‌ಟಿ ವರ್ಗಗಳು ಒಂದಾಗುವ ಭೀತಿಯಿಂದ ಈ ಸಂಘಟನೆ ಉಪ ವರ್ಗಗಳ ವೈಷಮ್ಯವನ್ನು ಉತ್ತೇಜಿಸುತ್ತದೆ. ʼಬಹುಜನ ಏಕತೆʼಗೆ ಕುತಂತ್ರದಿಂದ ಕೆಲಸ ಮಾಡುತ್ತದೆ.
  4. ಸಾಂಸ್ಕೃತಿಕ ವಶೀಕರಣ: ಫುಲೆ, ಪೆರಿಯಾರ್, ಅಂಬೇಡ್ಕರ್, ನಾರಾಯಣ ಗುರು ಮುಂತಾದ ಸಾಮಾಜಿಕ ನಾಯಕರ ಸ್ಮರಣೆಯನ್ನು ಮಸುಕಾಗಿಸಿ, ಹಿಂದೂತ್ವದ ನಕಲಿ ಐಕಾನ್ ಗಳನ್ನು ಸೃಷ್ಟಿಸುತ್ತಾರೆ. ಕನ್ನಡದ ಭೂಮಿ ಹುಟ್ಟಿಸಿದ ಬಸವಣ್ಣ, ಕೂಡಲ ಸಂಗಮ ಶರಣರು, ಕ್ರಾಂತಿಶೀಲ ಸಂತರು ಇವರ ಮೌಲ್ಯಗಳು ಇವರಿಗೆ ಅಜೀರ್ಣ.
  5. ಸಂವಿಧಾನ ವಿರೋಧಿ ಮನೋಭಾವ: ಸಂಘ ಅಂಬೇಡ್ಕರ್ ಬರೆದ ಸಂವಿಧಾನವನ್ನು ಪಾಶ್ಚಾತ್ಯ ಮಾದರಿ ಎಂದು ತಳ್ಳಿಹಾಕಿ, ಮನುವಾದದ ನಿಯಮಗಳಿಗೆ ಮರಳಿಸಲು ಪ್ರಯತ್ನಿಸುತ್ತದೆ. ಇದು ದೇಶದ ಜನತಾಂತ್ರಿಕ ಆತ್ಮದ ವಿರುದ್ಧವಾದ ಅಪರಾಧ.
  6. ರಾಜಕೀಯ ಮೋಸ: OBC, SC, ST ಮುಖಂಡರ ಮುಖವಾಡವನ್ನು ಮುನ್ನೆಲೆಗೆ ತಂದು, ನಿಜವಾದ ಅಧಿಕಾರವನ್ನು ಬ್ರಾಹ್ಮಣ ವಲಯದಲ್ಲೇ ಕೇಂದ್ರೀಕರಿಸುತ್ತಾರೆ. ಇದು ʼಪಾಲಿಟಿಕಲ್ ಟೋಕೆನಿಸಮ್ʼ ಎಂಬ ನಾಟಕ ಕೇವಲ ಮುಖಗಳ ಬದಲಾವಣೆ, ವ್ಯವಹಾರದ ಮಾಲೀಕರು ಅವರೇ ಆಗಿರುತ್ತಾರೆ. (ಅಯೋಗ್ಯ ಗುಲಾಮರು ಇವರ ಆಯ್ಕೆ)
  7. ಬಂಡವಾಳಶಾಹಿ ಪರ: ಆರ್ಥಿಕ ಅಸಮಾನತೆ, ಕಾರ್ಮಿಕ ವರ್ಗ ಮತ್ತು ರೈತ ಸಮಾಜವಾದ ಒಬಿಸಿ, ಎಸ್‌ಸಿ, ಎಸ್‌ಟಿ ಜನರ ಶ್ರಮದ ಆಧಾರದಲ್ಲಿ ಈ ಸಂಘಟನೆ ಬಂಡವಾಳಶಾಹಿಯನ್ನು ಬಲಪಡಿಸುತ್ತಿದೆ. ಸಂಪತ್ತು ಮೇಲ್ವರ್ಗಕ್ಕೆ ಸೇರಿಸಿ, ಬಡತನವನ್ನು ಪವಿತ್ರತೆ ಎಂದು ಬಿಂಬಿಸುತ್ತದೆ.
  8. ಶಿಕ್ಷಣದ ಕ್ಷೇತ್ರದ ನಿಯಂತ್ರಣ: ಕರ್ನಾಟಕದ ಶೈಕ್ಷಣಿಕ ವಿಷಯಗಳಲ್ಲಿ ಸಂಘದ ಹಸ್ತಕ್ಷೇಪ ಅತಿ ಹೆಚ್ಚು ಕಾಣುತ್ತದೆ.
    ಪಠ್ಯಪುಸ್ತಕಗಳಲ್ಲಿ ಅಂಬೇಡ್ಕರ್, ಫುಲೆ, ಕುವೆಂಪು, ನಾರಾಯಣ ಗುರು ಮತ್ತಿತರ ಸಾಮಾಜಿಕ ಚಿಂತಕರ ಅಭಿವ್ಯಕ್ತಿಯನ್ನು ಕಡಿಮೆ ಮಾಡಿ, ಹಿಂದೂತ್ವದ ಕಥಾನಕವನ್ನು ಪ್ರಾಮುಖ್ಯತೆ ನೀಡುತ್ತಾರೆ.
  9. ಭಾಷಾ ಮತ್ತು ಸಂಸ್ಕೃತಿಹರಣ: ಕನ್ನಡದ ಆತ್ಮವನ್ನು ಕುಂದಿಸುವ ರೀತಿಯಲ್ಲಿ ಸಂಸ್ಕೃತೀಕರಣ ನಡೆಸಿ, ಕನ್ನಡ ಬದಲಿಗೆ ಸಂಸ್ಕೃತದ ಮಹತ್ವವನ್ನು ಹೆಚ್ಚಿಸಿ, ಸ್ಥಳೀಯ ಸಂಸ್ಕೃತಿಯನ್ನು ಹೀನಗೊಳಿಸುವುದೇ ಇವರ ಸುಪ್ತ ಉದ್ದೇಶ.
  10. ಸಾಮಾಜಿಕ ಬದಲಾವಣೆಯ ಶತ್ರುಶಿಕ್ಷಣ, ಜಾಗೃತಿ ಮತ್ತು ಬೌದ್ಧ ಚಿಂತನೆಗಳನ್ನು ಈ ಸಂಘಟನೆ ತನ್ನ ವಿರೋಧಿಯಾಗಿಯೇ ನೋಡುವುದು.
  11. ಸಾಮಾಜಿಕ ನ್ಯಾಯ ವಿರೋಧಿ: ಪ್ರಾತಿನಿಧ್ಯದ ವ್ಯವಸ್ಥೆಗೆ ಹಾಗೂ ಡಾ. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ RSS ಮುಕ್ತವಾಗಿ ವಿರೋಧಿಸಿದೆ. ಸಾಮಾಜಿಕ ಸಮಾನತೆ ಬದಲು ʼಸಮರಸತೆʼ ಎಂಬ ಹುಸಿ ಉಪದೇಶದಿಂದ ಅಸಮಾನತೆಯನ್ನು ದಾಸ್ಯ ವ್ಯವಸ್ಥೆಯನ್ನು ಖಾಯಂಗೊಳಿಸುವ ಸಿದ್ಧಾಂತ ಇವರದ್ದಾಗಿದೆ.

ವರ್ಣಾಶ್ರಮದ ಕೆಳಗಿನ ವರ್ಗ ಅಂದ್ರೆ ಶೂದ್ರರು, ದಲಿತರು ಯೋಚಿಸಬಾರದು, ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಬೆಳೆಸುವುದು RSSನ ದೀರ್ಘಕಾಲೀನ ಕುತಂತ್ರ.

ಇದನ್ನೂ ಓದಿ ಕಾಲಮಾನ | ಜೇನ್‌ ಗುಡಾಲ್‌ ಮತ್ತು ಚಿಂಪಾಂಜಿಗಳ ಲೋಕದೊಳಗೆ ಒಂದು ಸುತ್ತು

ಸಂಘ ಸಮಾಜವನ್ನು ದೊಡ್ಡ ಕುಟುಂಬದಂತೆ ತೋರಿಸುತ್ತಿದ್ದರೂ, ಅದರ ಒಳಗೆ ಶೋಷಣೆ ಮತ್ತು ಪ್ರಭುತ್ವದ ಸುಪ್ತ ಯೋಜನೆ ಇದೆ. ನಮ್ಮ ಸಾಮಾಜಿಕ ಚಳವಳಿ ನಾಯಕರು ಬಸವಣ್ಣರಿಂದ ಅಂಬೇಡ್ಕರ್ ತನಕ ಎಲ್ಲರೂ ಮಾನವತೆಗಾಗಿ ಹೋರಾಡಿದರು. ಇಂದು RSS ವಿರೋಧಿಸುವುದು ಅಂದರೆ ಅವರ ನೆನಪನ್ನು ಜೀವಂತಗೊಳಿಸುವುದು. ಇಂತಹದೊಂದು ಅಮಾನವೀಯ ಸಿದ್ಧಾಂತ ಭಾರತದ ಮುಗ್ಧ ಸಮಾಜದಲ್ಲಿ ಬೆರೆತು ಅನೇಕರ ಮನಸ್ಸನ್ನು ಕೆಡಿಸಿ, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ.

ಆ ಕಾರಣಕ್ಕೆ ವಿಶೇಷವಾಗಿ ಈ ದೇಶದ ಸೌಹಾರ್ದತೆ ಮತ್ತು ಅಂತಸತ್ವಕ್ಕೆ ಸದಾ ಧಕ್ಕೆ ತರುವ ಸಂಘದ ಬಗ್ಗೆ ಎಚ್ಚರದಿಂದ ಇರುವುದು ನಮ್ಮ ಕರ್ತವ್ಯ.

WhatsApp Image 2025 10 20 at 10.22.01 AM
ಲೋಹಿತ್‌ ನಾಯಕ
+ posts

ಮೂಲತಃ ಶಿರಸಿಯವರಾದ ಇವರು ಕರ್ನಾಟಕದ ಹಿಂದುಳಿದ ವರ್ಗದ ಚಿಂತಕ, ಸಂಘಟಕರು ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರು.
ಸಮಾನತೆ, ಧರ್ಮನಿರಪೇಕ್ಷತೆಯ ಸಂವಿಧಾನದ ಚಿಂತನೆಗಳನ್ನು ಯುವಜನರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಲೋಹಿತ್‌ ನಾಯಕ
ಲೋಹಿತ್‌ ನಾಯಕ
ಮೂಲತಃ ಶಿರಸಿಯವರಾದ ಇವರು ಕರ್ನಾಟಕದ ಹಿಂದುಳಿದ ವರ್ಗದ ಚಿಂತಕ, ಸಂಘಟಕರು ಹಾಗೂ ಸಾಮಾಜಿಕ ನ್ಯಾಯದ ಹೋರಾಟಗಾರರು. ಸಮಾನತೆ, ಧರ್ಮನಿರಪೇಕ್ಷತೆಯ ಸಂವಿಧಾನದ ಚಿಂತನೆಗಳನ್ನು ಯುವಜನರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...