SIR | ASDDO ಅಡಿ ರಾಜ್ಯದ 1.08 ಕೋಟಿ ಮತಗಳು ಅತಂತ್ರ; ಮುಂದಿದೆ ‘ತಾರ್ಕಿಕ ವ್ಯತ್ಯಾಸ’ದ ಮಹಾ ಕಂಟಕ!

Date:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ನಿರ್ಣಾಯಕ ಘಟ್ಟ ತಲುಪಿದೆ. ರಾಜ್ಯದ ಲಕ್ಷಾಂತರ ನಾಗರಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಚುನಾವಣಾ ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದ ಒಟ್ಟು ಮತದಾರರ ಪೈಕಿ ಸುಮಾರು 1.08 ಕೋಟಿ ಮತದಾರರು ‘ASDDO’ ವರ್ಗೀಕರಣದ ಅಡಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈ ಬೃಹತ್ ಪ್ರಮಾಣದ ಮತದಾರರರು ಮತಪಟ್ಟಿಯಲ್ಲಿ ತಮ್ಮ ಹೆಸರುಗಳು ‘ಡಿಲೀಟ್‌’ ಆಗಬಹುದೆಂಬ ಆತಂಕದಲ್ಲಿದ್ದಾರೆ. ಅರ್ಹ ಮತದಾರರ ಮತಗಳು ‘ಡಿಲೀಟ್’ ಆಗದಂತೆ ತಡೆಯಲು ತೊಡಗಿರುವ ಸಾಮಾಜಿಕ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ.

- Advertisement -

ASDDO ಅಡಿಯಲ್ಲಿ – ವಿಳಾಸದಲ್ಲಿ ಸಿಗದವರು (Absent), ಸ್ಥಳಾಂತರಗೊಂಡವರು (Shifted), ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿರುವ ಮತದಾರರು (Duplicate), ಮೃತಪಟ್ಟವರು (Dead) ಹಾಗೂ ಇತರರು (Others) ಎಂದು ವರ್ಗೀಕರಿಸಲಾಗಿದೆ. ಇದೀಗ, ಪಟ್ಟಿ ಮಾಡಿರುವ 1.08 ಕೋಟಿ ಮತದಾರರಲ್ಲಿ ಬಹುತೇಕರನ್ನು ಸ್ಥಳಾಂತರಗೊಂಡವರು ಎಂದೇ ಗುರುತಿಸಲಾಗಿದೆ. ಆದರೆ, ಈ ಬೃಹತ್ ಸಂಖ್ಯೆಯ ಮತದಾರರು ಎಲ್ಲಿ ಹೋದರು? ಎಲ್ಲಿ ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ? ಅವರನ್ನು ಮತಪಟ್ಟಿಗೆ ಸೇರಿಸಲು ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳ ಬಗ್ಗೆ ಆಯೋಗದಲ್ಲಿ ಯಾವುದೇ ಉತ್ತರವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಬರೋಬ್ಬರಿ 1.08 ಕೋಟಿ ಮತದಾರರು ಅನುಮಾನಾಸ್ಪದ ಪಟ್ಟಿಗೆ ಸೇರಲು ಚುನಾವಣಾ ಆಯೋಗದ ಮೌನ ಮತ್ತು ಬೇಜವಾಬ್ದಾರಿತನವೇ ಪ್ರಧಾನ ಕಾರಣ. ಆಯೋಗದ ಧೋರಣೆಯಿಂದಾಗಿ ASDDO ಅಡಿಯಲ್ಲಿ ಪಟ್ಟಿಯಾಗಿರುವ ಅರ್ಹ ಮತದಾರರು ಈಗ ಆಕ್ಷೇಪಣೆ ಸಲ್ಲಿಸಲು, ದಾಖಲೆಗಳನ್ನು ಒದಗಿಸಲು ಹಾಗೂ ಭೌತಿಕ ಪರಿಶೀಲನೆಗೆ ಒಳಗಾಗಲು ಕಚೇರಿಗಳಿಗೆ ಅಲೆದಾಡಬೇಕಾಗಿದೆ.

ಇದಲ್ಲದೆ, ಮತದಾರರ ಮುಂದೆ ಕೇವಲ ASDDO ವರ್ಗೀಕರಣ ಮಾತ್ರವಲ್ಲದೆ ‘ತಾರ್ಕಿಕ ವ್ಯತ್ಯಾಸ’ (Logical Discrepancies) ಎಂಬ ತಾಂತ್ರಿಕ ಪರಿಶೀಲನೆಯೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮತದಾರರು ನಮೂದಿಸಿರುವ ವೈಯಕ್ತಿಕ ವಿವರಗಳು, ಕುಟುಂಬದ ಮ್ಯಾಪಿಂಗ್ ಮಾಹಿತಿ, ವಯಸ್ಸಿನ ಪ್ರಮಾಣ, ಸಂಬಂಧಿಕರ ವಿವರಗಳು ಹಾಗೂ ಹಳೆಯ ಮತಪಟ್ಟಿಯ ದಾಖಲೆಗಳ ನಡುವೆ ಸಾಫ್ಟ್‌ವೇರ್ ವ್ಯವಸ್ಥೆಯು ಗುರುತಿಸುವ ಸಣ್ಣ-ಪುಟ್ಟ ಸ್ಪೆಲ್ಲಿಂಗ್ ಮಿಸ್ಟೇಕ್‌ನಂತಹ ವ್ಯತ್ಯಾಸಗಳು ಕೂಡ ಮತದಾರರನ್ನು ಅನುಮಾನದ ಸುಳಿಗೆ ಸಿಲುಕಿಸುತ್ತಿವೆ. ಪರಿಣಾಮವಾಗಿ, ಈಗಾಗಲೇ ASDDO ಪಟ್ಟಿಯಲ್ಲಿರುವ 1.08 ಕೋಟಿ ಜನರ ಜೊತೆಗೆ ಇನ್ನೆಷ್ಟು ಲಕ್ಷ ಮತದಾರರ ಹೆಸರುಗಳು ಈ ತಾರ್ಕಿಕ ವ್ಯತ್ಯಾಸದ ನೆಪದಲ್ಲಿ ಅಂತಿಮ ಪಟ್ಟಿಯಿಂದ ಹೊರಬೀಳಲಿವೆಯೋ ಎಂಬ ಭೀತಿ ಎದುರಾಗಿದೆ.

ಈ ಇಡೀ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಅತ್ಯಂತ ಗೊಂದಲ ಮತ್ತು ಕಿರಿಕಿರಿಯನ್ನು ಉಂಟುಮಾಡಿರುವುದು ಪ್ರಸ್ತುತ ಮತದಾರರನ್ನು 2002ರ ಮತಪಟ್ಟಿಯೊಂದಿಗೆ ಜೋಡಿಸುವ (Mapping) ಕಡ್ಡಾಯ ಷರತ್ತು. ಕಳೆದ ಎರಡು ದಶಕಗಳಲ್ಲಿ ಉದ್ಯೋಗ ಅರಸಿ ನಗರಗಳಿಗೆ ವಲಸೆ ಬಂದವರು, ಆಗಾಗ್ಗೆ ಬಾಡಿಗೆ ಮನೆಗಳನ್ನು ಬದಲಾಯಿಸುವ ಬಡವರು ಹಾಗೂ ಮದುವೆಯಾಗಿ ವಿಳಾಸ ಬದಲಾಯಿಸಿಕೊಂಡ ಮಹಿಳೆಯರಿಗೆ ತಮ್ಮ ಅಥವಾ ತಮ್ಮ ಹಿರಿಯರ ಹೆಸರನ್ನು 2002ರ ದಾಖಲೆಗಳಲ್ಲಿ ಹುಡುಕಿ ತೆಗೆಯುವುದು ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಈ ವಿಚಾರದಲ್ಲಿ ಸ್ವತಃ ಚುನಾವಣಾ ಅಧಿಕಾರಿಗಳಿಗೇ ಸ್ಪಷ್ಟತೆಯಿರಲಿಲ್ಲ ಎಂಬ ಆರೋಪಗಳಿವೆ; ಒಮ್ಮೆ ಯಾವುದೇ ಸಂಬಂಧಿಕರ ಜೊತೆ ಜೋಡಿಸಬಹುದು ಎಂದರೆ, ಮತ್ತೊಮ್ಮೆ ರಕ್ತಸಂಬಂಧಿಗಳ ಜೊತೆಯೇ ಮ್ಯಾಪ್ ಮಾಡಬೇಕೆಂಬ ಗೊಂದಲದ ಸೂಚನೆಗಳನ್ನು ನೀಡಲಾಗಿತ್ತು. ವಿಶೇಷವಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಮಹಿಳೆಯರ ಮ್ಯಾಪಿಂಗ್ ವಿಚಾರದಲ್ಲಿ ಸರಿಯಾದ ಮಾರ್ಗಸೂಚಿ ಇಲ್ಲದೇ ಹೋದದ್ದು, ಈಗ ‘ತಾರ್ಕಿಕ ವ್ಯತ್ಯಾಸ’ದ ರೂಪದಲ್ಲಿ ಮತದಾರರನ್ನೇ ಸಂಕಷ್ಟಕ್ಕೆ ಗುರಿಮಾಡಿದೆ.

ಮತ್ತೊಂದೆಡೆ, ಆಯೋಗವು ವಿಧಿಸಿರುವ ದಾಖಲೆಗಳ ಷರತ್ತುಗಳು ಸಮಾಜದ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಗಂಭೀರ ಸವಾಲಾಗಿದೆ. ‘ನನ್ನ ಮತ ನಮ್ಮ ಹಕ್ಕು’ ಅಭಿಯಾನದ ಜಾಗೃತಿ ಅಭಿಯಾನದ ವೇಳೆ ನಡೆಸಲಾದ ಸಮೀಕ್ಷೆ ಪ್ರಕಾರ, ಸಮೀಕ್ಷಕರು ಸಂಪರ್ಕಿಸಿದವರಲ್ಲಿ 34%ರಷ್ಟು ಜನರ ಬಳಿ ಚುನಾವಣಾ ಆಯೋಗ ಸೂಚಿಸಿದ್ದ 11 ಅಧಿಕೃತ ದಾಖಲೆಗಳಲ್ಲಿ ಒಂದೂ ಲಭ್ಯವಿಲ್ಲ. ದಲಿತರು, ಆದಿವಾಸಿಗಳು, ಅಲೆಮಾರಿಗಳು, ವಲಸೆ ಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಲೈಂಗಿಕ ಕಾರ್ಮಿಕರು, ಟ್ರಾನ್ಸ್‌ಜೆಂಡರ್‌ಗಳು ಹಾಗೂ ಬಡ ಅಲ್ಪಸಂಖ್ಯಾತರಿಗೆ 2002ರ ವಿಳಾಸಕ್ಕೂ ಇಂದಿನ ವಾಸಸ್ಥಳಕ್ಕೂ ಇರುವ ನಂಟನ್ನು ನಿರೂಪಿಸುವ ದಾಖಲೆಗಳನ್ನು ಒದಗಿಸುವುದು ಕಷ್ಟಸಾಧ್ಯವಾಗಿದೆ. ಉದಾಹರಣೆಗೆ, ಕೊಡಗಿನ ಎಸ್ಟೇಟ್‌ಗಳಲ್ಲಿ ಕಾಲಕಾಲಕ್ಕೆ ತೋಟಗಳನ್ನು ಬದಲಿಸುವ ಆದಿವಾಸಿ ಕಾರ್ಮಿಕರಿಗೆ ಇಂತಹ ದಾಖಲೆಗಳ ಆಡಳಿತಾತ್ಮಕ ಸಂಕೀರ್ಣತೆಯನ್ನು ಪೂರೈಸಲಾಗದೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುವ ಅಪಾಯ ಎದುರಾಗಿದೆ.

ಹಿಂದೆ, ಪಶ್ಚಿಮ ಬಂಗಾಳದಲ್ಲಿ ನಡೆದ ಪರಿಷ್ಕರಣೆಯ ಸಂದರ್ಭದಲ್ಲೂ ಈ ‘ತಾರ್ಕಿಕ ವ್ಯತ್ಯಾಸ’ಗಳ ನೆಪದಲ್ಲೇ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು. ಅದೇ ಮಾದರಿಯ ಆತಂಕ ಈಗ ಕರ್ನಾಟಕದಲ್ಲೂ ವ್ಯಕ್ತವಾಗುತ್ತಿದೆ. ಒಬ್ಬ ವ್ಯಕ್ತಿ ಮತ್ತು ಆತನ ತಂದೆ-ತಾಯಿಯ ವಯಸ್ಸಿನ ಅಂತರ, ಹೆಸರುಗಳ ಸ್ಪೆಲ್ಲಿಂಗ್, ಲಿಪ್ಯಂತರ (Transliteration) ದೋಷಗಳಂತಹ ಸಣ್ಣಪುಟ್ಟ ತಾಂತ್ರಿಕ ವ್ಯತ್ಯಾಸಗಳೂ ಸಹ ಸಾಫ್ಟ್‌ವೇರ್‌ನಲ್ಲಿ ‘ದೋಷ’ ಎಂದು ಬಿಂಬಿತವಾಗುತ್ತಿವೆ. ಪ್ರಮುಖವಾಗಿ ಮುಸ್ಲಿಂ ಮತದಾರರ ಹೆಸರುಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಸಂಭವಿಸಿದ ಅಕ್ಷರ ದೋಷಗಳನ್ನೇ ನೆಪ ಮಾಡಿಕೊಂಡು ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂಬ ಆತಂಕ ರಾಜ್ಯದ ಮತದಾರರಲ್ಲಿದೆ. ಈ ವ್ಯತ್ಯಾಸಗಳು ನಿಜವಾದ ನಕಲಿ ಮತದಾರರನ್ನು ಪತ್ತೆಹಚ್ಚುವ ಬದಲಿಗೆ, ತಾಂತ್ರಿಕ ಮತ್ತು ಸಿಬ್ಬಂದಿಯ ದೋಷಗಳಿಂದಾಗಿ ಅರ್ಹ ಮತದಾರರನ್ನೇ ಬಲಿಪಶು ಮಾಡುತ್ತಿವೆ.

ಈ ಲೇಖನ ಓದಿದ್ದೀರಾ?: FCRA ತಿದ್ದುಪಡಿ | ವಿದೇಶಿ ದೇಣಿಗೆ ನಿಯಂತ್ರಣವೋ, ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರಿ ಹಿಡಿತವೋ?

ನೆಲಮಟ್ಟದಲ್ಲಿ ಈ ಬೃಹತ್ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುತ್ತಿರುವ ‘ಬೂತ್‌ ಮಟ್ಟದ ಅಧಿಕಾರಿ’ಗಳ (BLO) ಸ್ಥಿತಿಯೂ ಶೋಚನೀಯವಾಗಿದೆ. ಮನೆಮನೆ ಸಮೀಕ್ಷೆ, ಆ್ಯಪ್‌ಗಳಲ್ಲಿ ಮಾಹಿತಿ ನಮೂದು, ದಾಖಲೆ ಪರಿಶೀಲನೆ ಹಾಗೂ ಡಿಜಿಟಲೀಕರಣದಂತಹ ವಿಪರೀತ ಕೆಲಸದ ಒತ್ತಡದಿಂದಾಗಿ ಗಣತಿ ಹಂತದಲ್ಲೇ ಈಗಾಗಲೇ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ‘ಮತ ಕಾವಲು ಪಡೆ’ ನಡೆಸಿದ ಸಮೀಕ್ಷೆ ವೇಳೆ, “ಅಗತ್ಯ ತರಬೇತಿ, ಸ್ಪಷ್ಟ ಮಾರ್ಗಸೂಚಿ ಹಾಗೂ ಪರ್ಯಾಪ್ತ ಕಾಲಾವಕಾಶ ನೀಡದೆ ಈ ಕಾರ್ಯವನ್ನು ತುರ್ತಾಗಿ ಮುಗಿಸಲು ಹೊರಟದ್ದು ಇಡೀ ಪ್ರಕ್ರಿಯೆಯಲ್ಲೇ ಸಾಲು ಸಾಲು ಲೋಪಗಳು ಉಂಟಾಗಲು ಮುಖ್ಯ ಕಾರಣವೂ ಆಗಿದೆ” ಎಂದು ಹಲವು ಬಿಎಲ್‌ಒಗಳು ಒಪ್ಪಿಕೊಂಡಿದ್ದಾರೆ. ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಡಿಲೀಟ್‌ ಆಗುವ ಅಪಾಯವಿದ್ದರೂ, ರಾಜ್ಯ ಸರ್ಕಾರ ‘ಎಸ್‌ಐಆರ್‌’ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಾತಿ ಪ್ರಮಾಣ ಪತ್ರ ಮತ್ತು ಶಾಶ್ವತ ವಾಸಸ್ಥಳ ಪ್ರಮಾಣ ಪತ್ರವನ್ನು ನೀಡುತ್ತೇವೆಂದಷ್ಟೇ ಸರ್ಕಾರ ಹೇಳುತ್ತಿದೆ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ, ಎದ್ದೇಳು ಕರ್ನಾಟಕ, ಜಾಗೃತ ಕರ್ನಾಟಕ, ಎಪಿ ಸಿಆರ್ ಹಾಗೂ ಎಂವಿಎಂಆರ್ ನಂತಹ ನಾಗರಿಕ ಸಂಘಟನೆಗಳೇ ಮತದಾರರಿಗೆ ನೆರವು ನೀಡುತ್ತಿವೆ. ನೆರವು ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಸಹಾಯ ಮಾಡುತ್ತಿವೆ.

ಮತಪಟ್ಟಿ ಪರಿಷ್ಕರಣೆ ಮಾಡಿ ಮೃತಪಟ್ಟವರ, ನಕಲಿ ಅಥವಾ ಅನರ್ಹರ ಹೆಸರುಗಳನ್ನು ತೆಗೆದುಹಾಕುವುದಕ್ಕೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಇಡೀ ಮತಪಟ್ಟಿಯನ್ನೇ ಅನುಮಾನದ ಸುಳಿಯಲ್ಲಿರಿಸಿ, ಮತದಾರರು ತಮ್ಮ ಮತದಾನದ ಅರ್ಹತೆಯನ್ನು ಸಾಬೀತು ಮಾಡಬೇಕೆಂದು ಚುನಾವಣಾ ಆಯೋಗ ಕೇಳುತ್ತಿದೆ. ಇದು ‘ದೇಶದಲ್ಲಿ ಯಾವುದೇ ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು’ ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಚಿಕ್ಕಮಗಳೂರು | ದರ್ಗಾ ಆವರಣದಲ್ಲಿ ದಫನ್‌ಗೆ ಅನುಮತಿ ನಿರಾಕರಣೆ ಖಂಡನೀಯ: SDPI

ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...