ಬಿಗಡಾಯಿಸಿದೆ ಸೋನಮ್ ಆರೋಗ್ಯ; ಇತಿಹಾಸದಲ್ಲಿ ಮೋದಿಯೇ ಅಪರಾಧಿ – ಸಿಗದು ಕ್ಷಮೆ!

Date:

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುತ್ತಿರುವ ಚೆಲ್ಲಾಟಕ್ಕೆ ಉತ್ತರದಾಯಿತ್ವ ಇರಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಖ್ಯಾತ ಶಿಕ್ಷಣ ತಜ್ಞ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ 18ನೇ ದಿನಕ್ಕೆ ಕಾಲಿಟ್ಟಿದೆ.

- Advertisement -

ದಿನದಿಂದ ದಿನಕ್ಕೆ ಅವರ ಆರೋಗ್ಯ ಬಿಗಡಾಯಿಸುತ್ತಿದೆ. ದೇಹದ ತೂಕ ಗಣನೀಯವಾಗಿ ಇಳಿದಿದೆ. ಸ್ನಾಯುಗಳು ಕ್ಷೀಣಿಸುತ್ತಿವೆ. ದೈಹಿಕ ನೋವು ಹೆಚ್ಚುತ್ತಿದೆ. ದೇಶದ ಪ್ರಮುಖ ಸಾಹಿತಿಗಳು, ಸಿನಿಮಾ ಕಲಾವಿದರು, ಸಾಮಾಜಿಕ ಹೋರಾಟಗಾರರು, ರಾಜಕೀಯ ನಾಯಕರು ಹಾಗೂ ಸಾವಿರಾರು ನಾಗರಿಕರು ಸೋನಮ್ ಅವರ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಕೇಂದ್ರ ಸರ್ಕಾರದಿಂದ ಇದುವರೆಗೆ ಸ್ಪಷ್ಟ ಪ್ರತಿಕ್ರಿಯೆಯಾಗಲಿ, ಮಾತುಕತೆಯ ಪ್ರಯತ್ನವಾಗಲಿ ನಡೆದಿಲ್ಲ. ಈ ಮೌನದ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೂ, ಮೋದಿ ಸರ್ಕಾರ ಮೌನ ಮುರಿಯುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಜೂನ್ 28ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದರು. ಅದಕ್ಕೂ ಮೊದಲು ಅವರು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದ್ದರು. ಬಳಿಕ, “ಆಡಳಿತ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇಲ್ಲದಾಗ, ಅಹಿಂಸಾತ್ಮಕ ಮತ್ತು ಶಾಂತಿಯುತ ಪ್ರತಿಭಟನೆಯೇ ನಾಗರಿಕರ ಮುಂದಿರುವ ಮಾರ್ಗ” ಎಂಬ ಸಂದೇಶದೊಂದಿಗೆ ಸೋನಮ್ ಉಪವಾಸ ಆರಂಭಿಸಿದರು.

8.5 ಕೆ.ಜಿ. ತೂಕ ಇಳಿಕೆ; ಸ್ನಾಯುಗಳ ಕ್ಷೀಣತೆ

ಉಪವಾಸದ ಆರಂಭದ ದಿನಗಳಿಂದಲೇ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಉಪವಾಸದ ಆರನೇ ದಿನವೇ ರಕ್ತದಲ್ಲಿನ ಸಕ್ಕರೆ ಪ್ರಮಾಣ 61 mg/dLಗೆ ಕುಸಿದಿತ್ತು. ಆಗ ಅವರ ರಕ್ತದೊತ್ತಡ 110/75 ಹಾಗೂ ನಾಡಿಮಿಡಿತ ನಿಮಿಷಕ್ಕೆ 72 ಎಂದು ದಾಖಲಾಗಿತ್ತು. ಆ ಸಂದರ್ಭದಲ್ಲಿಯೇ ಅವರು ತೀವ್ರವಾಗಿ ದಣಿದಂತೆ ಮತ್ತು ದುರ್ಬಲವಾಗಿ ಕಾಣುತ್ತಿದ್ದರು.

ಈಗ ಅವರ ಉಪವಾಸವು 18ನೇ ದಿನಕ್ಕೆ ಕಾಲಿಟ್ಟಿದೆ. ಸೋನಮ್ ಸುಮಾರು 8.5 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಅವರ ರಕ್ತದೊತ್ತಡ 109/70ಕ್ಕೆ ತಲುಪಿದೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ 67 mg/dLಗೆ ಕುಸಿದಿದೆ. ದೀರ್ಘಾವಧಿಯ ಆಹಾರ ತ್ಯಾಗದಿಂದ ಸ್ನಾಯುಗಳ ಕ್ಷೀಣತೆ ಆರಂಭವಾಗಿದ್ದು, ತೀವ್ರ ದೈಹಿಕ ನೋವನ್ನೂ ಅನುಭವಿಸುತ್ತಿದ್ದಾರೆ. ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಬೆಂಬಲಿಗರು ಉಪವಾಸ ಕೈಬಿಡುವಂತೆ ಮನವಿ ಮಾಡುತ್ತಿದ್ದಾರೆ. ಮನವೊಲಿಸಲು ಯತ್ನಿಸುತ್ತಿದ್ದಾರೆ.

ಆದರೆ, ಉಪವಾಸ ಬಿಡಲು ನಿರಾಕರಿಸಿರುವ ಸೋಮನ್, ‘ತಮ್ಮ ವೈಯಕ್ತಿಕ ಆರೋಗ್ಯಕ್ಕಿಂತ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಮುಖ್ಯ. ಸರ್ಕಾರ ಮಾತುಕತೆಗೆ ಮುಂದಾಗುವವರೆಗೆ ಉಪವಾಸ ಕೈಬಿಡುವುದಿಲ್ಲ’ ಎಂದು ದೃಢವಾಗಿ ಹೇಳಿದ್ದಾರೆ.

ಏಕೆ ಈ ಆಮರಣಾಂತ ಉಪವಾಸ?

ದೇಶದಲ್ಲಿ ನಡೆದ ವಿವಿಧ ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿಬಂದಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹಾಗೂ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತು ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಅಸಮಾಧಾನ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಆರಂಭವಾದ ಯುವಜನರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸೋನಮ್ ವಾಂಗ್ಚುಕ್ ಉಪವಾಸಕ್ಕೆ ಕುಳಿತಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಉತ್ತರದಾಯಿತ್ವ ನಿಗದಿಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

“ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೆ ಶ್ರಮಪಟ್ಟು ಪರೀಕ್ಷೆಗಳಿಗೆ ಸಿದ್ಧರಾಗುತ್ತಾರೆ. ಕುಟುಂಬಗಳು ತಮ್ಮ ಆದಾಯದ ಬಹುಭಾಗವನ್ನು ಮಕ್ಕಳ ಶಿಕ್ಷಣ ಮತ್ತು ತರಬೇತಿಗಾಗಿ ವ್ಯಯಿಸುತ್ತವೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಅಥವಾ ಆಡಳಿತಾತ್ಮಕ ವೈಫಲ್ಯ ಸಂಭವಿಸಿದಾಗ ಅದರ ಹೊಣೆ ಹೊರುವವರು ಯಾರು. ಹೊಣೆಗಾರರು ಇರಬೇಕಲ್ಲವೇ” ಎಂದು ಸೋನಮ್ ಪ್ರಶ್ನಿಸಿದ್ದಾರೆ.

ಸೋನಮ್ ಅವರ ಪ್ರಕಾರ, ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ. ದೇಶದ ಯುವಜನರು ಶಿಕ್ಷಣ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಯ ಪ್ರಶ್ನೆಯಾಗಿದೆ. ಆದ್ದರಿಂದ, ಯುವಜನರ ಭವಿಷ್ಯಕ್ಕೆ ಉತ್ತರದಾಯಿತ್ವ ಬೇಕೆಂದು ಅವರು ಆಗ್ರಹಿಸಿದ್ದಾರೆ. ಉಪವಾಸಕ್ಕೆ ಕುಳಿತಿದ್ದಾರೆ.

‘ನಾನು ಗಾಂಧಿಯಲ್ಲ; ನಿಮ್ಮ ನಾಯಕರು ನೀವೇ’ ಎನ್ನುವ ಸೋನಮ್

ಉಪವಾಸದ ನಡುವೆ ಸೋನಮ್ ವಾಂಗ್ಚುಕ್ ಅವರನ್ನು ಕೆಲವರು ‘ಆಧುನಿಕ ಗಾಂಧಿ’ ಎಂದು ಕರೆದಿದ್ದಾರೆ. ಆದರೆ, ಅದನ್ನು ಸೋನಮ್ ವಿನಯದಿಂದ ನಿರಾಕರಿಸಿದ್ದಾರೆ.

“ನಾನು ಗಾಂಧಿಯಲ್ಲ. ನಾನು ಯಾವುದೇ ನಾಯಕನೂ ಅಲ್ಲ. ನಾನು ನಿಮ್ಮಂತೆಯೇ ಒಬ್ಬ ಸಾಮಾನ್ಯ ನಾಗರಿಕ. ಮತ್ತೊಬ್ಬರಲ್ಲಿ ನಾಯಕನನ್ನು ಹುಡುಕಬೇಡಿ. ನಿಮ್ಮ ಬದುಕಿನ ನಾಯಕರು ನೀವೇ ಆಗಿ” ಎಂದು ಅವರು ಯುವಜನರಿಗೆ ಕರೆ ನೀಡಿದ್ದಾರೆ.

ಈ ಮಾತು ಸೋನಮ್ ಅವರ ಹೋರಾಟದ ಮೂಲ ಆಶಯವನ್ನೂ ಪ್ರತಿಬಿಂಬಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕೇವಲ ಮತದಾರರಾಗಿ ಉಳಿಯಬಾರದು; ಸರ್ಕಾರವನ್ನು ಪ್ರಶ್ನಿಸುವ, ಸಾರ್ವಜನಿಕ ಸಂಸ್ಥೆಗಳಿಂದ ಉತ್ತರ ಕೇಳುವ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಜವಾಬ್ದಾರಿಯನ್ನೂ ಹೊಂದಿರಬೇಕು ಎಂಬುದು ಅವರ ನಿಲುವಾಗಿದೆ.

ಸೋನಮ್‌ಗೆ ದೇಶಾದ್ಯಂತ ಬೆಂಬಲ; ಆರೋಗ್ಯದ ಕುರಿತು ಆತಂಕ

ಸೋನಮ್ ಅವರ ಉಪವಾಸ ಮುಂದುವರಿದಂತೆ ದೇಶದ ವಿವಿಧ ಭಾಗಗಳಿಂದ ಬೆಂಬಲ ಹೆಚ್ಚುತ್ತಿದೆ. ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಮಾನ್ಯ ನಾಗರಿಕರು ಅವರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಹಿರಿಯ ನಟ ನಸೀರುದ್ದೀನ್ ಶಾ, ಜೀನತ್ ಅಮಾನ್ ಹಾಗೂ ಅಭಯ್ ಡಿಯೋಲ್ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಸೋನಮ್ ಅವರ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮಾತು ಕೇಳುವುದು ಅಧಿಕಾರದಲ್ಲಿರುವವರ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.

‘3 Idiots’ ಸಿನಿಮಾದಲ್ಲಿ ‘ಚತುರ’ ಪಾತ್ರದ ಮೂಲಕ ಜನಪ್ರಿಯರಾದ ನಟ ಓಮಿ ವೈದ್ಯ ಕೂಡ ಸೋನಮ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋನಮ್ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನ ಜನರು ಮತ್ತು ಸರ್ಕಾರ ಅವರ ಹೋರಾಟದ ಕುರಿತು ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಸೋನಮ್ ಅವರ ಜೀವ ಮತ್ತು ಆರೋಗ್ಯ ದೇಶಕ್ಕೆ ಮುಖ್ಯವಾಗಿದ್ದು, ಅವರು ಉಪವಾಸ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ಹಲವು ರಾಜಕೀಯ ನಾಯಕರು ಕೂಡ ಅವರ ಬೇಡಿಕೆಗಳಿಗೆ ಬೆಂಬಲ ಸೂಚಿಸುತ್ತಲೇ, ಆರೋಗ್ಯದ ದೃಷ್ಟಿಯಿಂದ ಉಪವಾಸ ಕೊನೆಗೊಳಿಸುವಂತೆ ಕೋರಿದ್ದಾರೆ.

ಈ ಲೇಖನ ಓದಿದ್ದೀರಾ?: ಹಾರ್ಮುಜ್‌ನಲ್ಲಿ ಟ್ರಂಪ್ ‘ದಾದಾಗಿರಿ’: ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ಯನ್ನು ಇರಾನ್ ವಶಕ್ಕೆ ಪಡೆದರೆ ಹೇಗಿರುತ್ತದೆ?

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, “ನಿಮ್ಮ ಜೀವ ನಮಗೆ ಮುಖ್ಯ” ಎಂದು ಹೇಳಿದ್ದು, ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಆದರೆ, ಸೋನಮ್ ಅವರ ನಿಲುವು ಸ್ಪಷ್ಟವಾಗಿದೆ: “ಸರ್ಕಾರ ಕನಿಷ್ಠ ಪ್ರತಿಭಟನಾಕಾರರೊಂದಿಗೆ ಮಾತುಕತೆ ಆರಂಭಿಸಬೇಕು ಮತ್ತು ಅವರ ಪ್ರಶ್ನೆಗಳಿಗೆ ಉತ್ತರ ನೀಡಬೇಕು” ಎನ್ನುತ್ತಿದ್ದಾರೆ.

ದೇಶ ಮಾತನಾಡುತ್ತಿದೆ; ಸರ್ಕಾರ ಮಾತ್ರ ಮೌನ

ಸೋನಮ್ ಅವರ ಆರೋಗ್ಯ ಹದಗೆಡುತ್ತಿರುವ ಸುದ್ದಿ ದೇಶಾದ್ಯಂತ ಹರಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿ ಯುವಜನರು ಸೇರಿದಂತೆ ಸಾವಿರಾರು ಜನರು ಅವರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಸರ್ಕಾರವು ಮಾತುಕತೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಇದುವರೆಗೆ ಪರಿಣಾಮಕಾರಿ ಪ್ರತಿಕ್ರಿಯೆ ಬಂದಿಲ್ಲ.

ಉಪವಾಸದ 18ನೇ ದಿನವೂ ಕೇಂದ್ರದಿಂದ ‘ಮೌನವನ್ನು ಹೊರತುಪಡಿಸಿ ಏನೂ ಪ್ರತಿಕ್ರಿಯೆ ದೊರೆತಿಲ್ಲ’ ಎಂದು CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಿಡಿಕಾರಿದ್ದಾರೆ.

ಪ್ರತಿಭಟನಾಕಾರರ ಬೇಡಿಕೆಗಳನ್ನು ಸರ್ಕಾರ ಒಪ್ಪಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದು ರಾಜಕೀಯ ಮತ್ತು ಆಡಳಿತಾತ್ಮಕ ನಿರ್ಧಾರವಾಗಬಹುದು. ಆದರೆ, 18 ದಿನಗಳಿಂದ ಆಹಾರ ತ್ಯಜಿಸಿ ಆರೋಗ್ಯ ಕಳೆದುಕೊಳ್ಳುತ್ತಿರುವ ವ್ಯಕ್ತಿಯೊಂದಿಗೆ ಮಾತುಕತೆ ನಡೆಸದೇ, ದೂರ ಉಳಿದಿರುವುದು ಯಾವ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಪ್ರಶ್ನೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಮಾತುಕತೆ ನಡೆಸುವುದು ಅವರ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಂತಲ್ಲ. ಕನಿಷ್ಠ ಅವರ ಅಹವಾಲುಗಳನ್ನು ಆಲಿಸುವುದು, ಸರ್ಕಾರದ ನಿಲುವನ್ನು ವಿವರಿಸುವುದು ಹಾಗೂ ಪರಿಹಾರದ ಸಾಧ್ಯತೆಗಳ ಕುರಿತು ಚರ್ಚಿಸುವುದು ಪ್ರಜಾಪ್ರಭುತ್ವ ಸರ್ಕಾರದ ಮೂಲ ಜವಾಬ್ದಾರಿ. ಸರ್ಕಾರ ಸೋನಮ್ ಅವರಿಗೆ ಚರ್ಚೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಸೋನಮ್ ಆರೋಗ್ಯಕ್ಕೆ ಯಾರು ಹೊಣೆ?

ಸೋನಮ್ ಅವರ ಆರೋಗ್ಯದ ಕುರಿತು ವೈದ್ಯಕೀಯ ವರದಿಗಳು ಆತಂಕಕಾರಿ ಸೂಚನೆಗಳನ್ನು ನೀಡುತ್ತಿವೆ. ದೇಹದ ತೂಕ ನಿರಂತರವಾಗಿ ಇಳಿಯುತ್ತಿದೆ. ಸ್ನಾಯುಗಳು ಕ್ಷೀಣಿಸುತ್ತಿವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕುಸಿಯುತ್ತಿದೆ. ದೀರ್ಘಾವಧಿಯ ಉಪವಾಸವು ದೇಹದ ಪ್ರಮುಖ ಅಂಗಗಳ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಇನ್ನೂ ಎಷ್ಟು ದಿನ ಮೌನವಾಗಿರಲಿದೆ ಎಂಬ ಪ್ರಶ್ನೆ ದೇಶಾದ್ಯಂತ ಕೇಳಿಬರುತ್ತಿದೆ.

ಸೋನಮ್ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಅಥವಾ ನಿರಾಕರಿಸುವುದು ನಂತರದ ಪ್ರಶ್ನೆ. ಮೊದಲು ಅವರೊಂದಿಗೆ ಮಾತುಕತೆ ನಡೆಸುವುದು ಮತ್ತು ಅವರ ಜೀವಕ್ಕೆ ಅಪಾಯವಾಗದಂತೆ ಕ್ರಮ ಕೈಗೊಳ್ಳುವುದು ಸರ್ಕಾರದ ಮಾನವೀಯ ಹಾಗೂ ಸಾಂವಿಧಾನಿಕ ಜವಾಬ್ದಾರಿ. ಒಬ್ಬ ಪರಿಸರ ಹೋರಾಟಗಾರ, ಶಿಕ್ಷಣ ಸುಧಾರಕ ಹಾಗೂ ಗಾಂಧಿ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಸ್ಪಂದಿಸದಿದ್ದರೆ, ಅದು ಕೇವಲ ಒಬ್ಬ ವ್ಯಕ್ತಿಯ ನಿರ್ಲಕ್ಷ್ಯವಲ್ಲ’ ಪ್ರಜಾಸತ್ತಾತ್ಮಕ ಭಿನ್ನಮತದ ಕುರಿತು ಆಡಳಿತ ಹೊಂದಿರುವ ಹೀನ ಕ್ರೌರ್ಯವೆಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ, ಸೋನಮ್ ಅವರ ಆಕ್ರೋಶಕ್ಕೆ ಏನಾದರೂ ಆದಲ್ಲಿ, ಇತಿಹಾಸವು ಕೇಳುವ ಪ್ರಶ್ನೆ ಸ್ಪಷ್ಟವಾಗಿದೆ: “ದೇಶದ ಲಕ್ಷಾಂತರ ಯುವಜನರ ಪರವಾಗಿ ಒಬ್ಬ ವ್ಯಕ್ತಿ ತನ್ನ ಜೀವವನ್ನೇ ಪಣಕ್ಕಿಟ್ಟಾಗ ಸರ್ಕಾರ ಏನು ಮಾಡಿತು?”

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...