ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರಿಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆಯಲಿರುವ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM) 2026ರ ಸಮಾರಂಭದಲ್ಲಿ ಲಾ ಟ್ರೋಬ್ ವಿಶ್ವವಿದ್ಯಾಲಯವು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.
ಈ ಪ್ರಕಟಣೆಯ ಬೆನ್ನಲ್ಲೇ ಅಧಿಕೃತ ಹೇಳಿಕೆ ನೀಡಿರುವ ರಾಣಿ ಮುಖರ್ಜಿ, “ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಈ ಗೌರವವನ್ನು ಸ್ವೀಕರಿಸಲು ನಾನು ಅತ್ಯಂತ ವಿನಮ್ರಳಾಗಿದ್ದೇನೆ. ನನ್ನ ಬದುಕಿನ ಪಯಣದಲ್ಲಿ ಸಿನೆಮಾವೇ ಅತ್ಯಂತ ದೊಡ್ಡ ಗುರುವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟಿ ರಾಣಿ ಮುಖರ್ಜಿ, ನಟರಾದ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಹಾಗೆಯೇ, “ಕಥೆ ಹೇಳುವ ಕಲೆಯು ಜನರ ಅನುಕಂಪವನ್ನು ಜಾಗೃತಗೊಳಿಸುತ್ತದೆ. ಮಹತ್ವದ ಸಂವಾದಗಳನ್ನು ಸೃಷ್ಟಿಸುತ್ತದೆ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ ಎಂದು ನಾನು ಯಾವಾಗಲೂ ನಂಬಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
“ಮಾನವೀಯ ಕಥೆಗಳು ನನ್ನನ್ನು ಯಾವಾಗಲೂ ಭಾವುಕಗೊಳಿಸುತ್ತವೆ. ಸಿನಿಮಾ ಕಾರಣದಿಂದಾಗಿ ನಾನು ಪರದೆಯ ಮೇಲೆ ಹಲವು ಜೀವಗಳನ್ನು ಬದುಕಲು ಸಾಧ್ಯವಾಗಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಆಸ್ಟ್ರೇಲಿಯಾ ಮತ್ತು IFFM ನೀಡುತ್ತಿರುವ ಈ ವಿಶೇಷ ಗೌರವವನ್ನು ನನ್ನ ಮಾತೃಭೂಮಿ ಭಾರತಕ್ಕೆ ಅರ್ಪಿಸುತ್ತೇನೆ,” ಎಂದು ರಾಣಿ ಮುಖರ್ಜಿ ತಿಳಿಸಿದ್ದಾರೆ.
ರಾಣಿ ಮುಖರ್ಜಿಗೆ ಈ ಗೌರವ ಸಲ್ಲಲು ಕಾರಣವೇನು?
ಭಾರತೀಯ ಚಿತ್ರರಂಗಕ್ಕೆ ರಾಣಿ ಮುಖರ್ಜಿ ಅವರು ನೀಡಿರುವ ಸುಮಾರು ಮೂರು ದಶಕಗಳ ಅಪಾರ ಕೊಡುಗೆ ಹಾಗೂ ಚಿತ್ರರಂಗದ ಆಚೆಗೂ ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ಸಮುದಾಯಗಳ ಪರವಾಗಿ ಅವರು ನಡೆಸುತ್ತಿರುವ ಮಾನವೀಯ ಹಾಗೂ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ವಿಶ್ವವಿದ್ಯಾಲಯವು ಈ ಗೌರವವನ್ನು ನೀಡುತ್ತಿದೆ.
ಇದನ್ನೂ ಓದಿ: ಐಐಎಫ್ಎ 2024 | ಶಾರುಖ್ ಖಾನ್, ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ: ಸಂಪೂರ್ಣ ಪಟ್ಟಿ
ವಿಶ್ವವಿದ್ಯಾಲಯ ಮತ್ತು ಉತ್ಸವದ ಆಯೋಜಕರು ಹೇಳುವಂತೆ, ರಾಣಿ ಮುಖರ್ಜಿ ಅವರು ನಟಿಸಿರುವ ‘ಬ್ಲ್ಯಾಕ್’, ‘ನೋ ಒನ್ ಕಿಲ್ಡ್ ಜೆಸ್ಸಿಕಾ’, ‘ಹಿಚ್ಕಿ’, ‘ಮರ್ದಾನಿ’ ಫ್ರಾಂಚೈಸಿ ಹಾಗೂ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ನಂತಹ ಚಿತ್ರಗಳು ಕೇವಲ ಮನೋರಂಜನೆಯಷ್ಟೇ ಅಲ್ಲದೆ ಮಹಿಳಾ ಹಕ್ಕುಗಳು, ಲಿಂಗ ಸಮಾನತೆ, ವಿಕಲಚೇತನರ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿವೆ.
ಆಗಸ್ಟ್ 13ರಿಂದ 23ರವರೆಗೆ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) 2026ರ ಅಧಿಕೃತ ಚಲನಚಿತ್ರೋತ್ಸವದ ಭಾಗವಾಗಿ ಈ ಪದವಿ ಪ್ರದಾನ ಮಾಡಲಾಗುತ್ತದೆ. ಆಗಸ್ಟ್ 14ರಂದು ಮೆಲ್ಬೋರ್ನ್ನ ಫೆಡರೇಶನ್ ಸ್ಕ್ವೇರ್ನಲ್ಲಿ ಪದವಿ ಪ್ರದಾನ ನಡೆಸಲಾಗುತ್ತದೆ.




