ಸುಪ್ರೀಂ ಮಧ್ಯಂತರ ಆದೇಶ: ವಿದ್ಯಾರ್ಥಿಗಳಿಗೆ ರಕ್ಷಣೆಯೋ? FIRಗಳಿಗೆ ಹಸಿರು ನಿಶಾನೆಯೋ?

Date:

ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ-ಯುವಜನರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದ ಮೋದಿ ಸರ್ಕಾರ, ಪ್ರತಿಭಟನೆಯ ನೇತೃತ್ವ ವಹಿಸಿದ್ದವರನ್ನು ಗುರಿಯಾಗಿಸಿಕೊಂಡು ಪ್ರತಿಕಾರ ತೀರಿಸಿಕೊಳ್ಳುತ್ತಿದೆ. ಎಫ್‌ಐಆರ್‌, ಬಂಧನ ಹಾಗೂ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ. ವಿದ್ಯಾರ್ಥಿಗಳ ವಿರುದ್ಧದ ಕ್ರಮ ಖಂಡಿಸಿ ಸಿಜೆಪಿ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿದ್ಯಾರ್ಥಿಗಳ ಪರವಾದ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ಆದರೆ, ನ್ಯಾಯಾಲಯದ ಆದೇಶವೇ ಈಗ ಹೊಸ ಆತಂಕವನ್ನು ಹುಟ್ಟುಹಾಕಿದೆ.

- Advertisement -

ಸುಪ್ರೀಂ ಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ಹೀಗೆ ಹೇಳಿದೆ; “ದೆಹಲಿ ಎನ್‌ಸಿಟಿ ಮತ್ತು ಇತರ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಯನ್ನು ಮುಂದುವರಿಸಬಹುದು; ಆದಾಗ್ಯೂ, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಬಲವಂತದ ಕ್ರಮಗಳಿಂದ ರಕ್ಷಣೆಯು ಅಪರಾಧ ಪೂರ್ವಾಪರ ಹೊಂದಿರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ” ಎಂದಿದೆ. ಮುಂದುವರೆದು, ‘ಬಂಧಿತ 18 ವರ್ಷದೊಳಗಿನ ಮಕ್ಕಳನ್ನು ಅವರಿಂದ ಅಥವಾ ಅವರ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಬೇಕು’ ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ನ್ಯಾಯಾಲಯದ ಈ ಮಧ್ಯಂತರ ಆದೇಶವು ಒಂದೆಡೆ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಮ್ಮದಿ ನೀಡಿದಂತೆಯೂ, ಮತ್ತೊಂದೆಡೆ, ಭವಿಷ್ಯದ ಬಗ್ಗೆ ಹೊಸ ಆತಂಕಗಳನ್ನು ಹುಟ್ಟುಹಾಕಿದಂತೆಯೂ ಕಾಣಿಸುತ್ತಿದೆ. ಮೇಲ್ನೋಟಕ್ಕೆ, ವಿದ್ಯಾರ್ಥಿಗಳ ಬಂಧನವಾಗುವುದಿಲ್ಲ, ಕಠಿಣ ಪೊಲೀಸ್ ಕ್ರಮಗಳಿಲ್ಲ ಎಂಬ ಭರವಸೆ ಸಿಕ್ಕಿದೆ. ಆದರೆ ಆದೇಶವನ್ನು ಸೂಕ್ಷ್ಮವಾಗಿ ಓದಿದಾಗ, ಅದರೊಳಗೆ ಹಲವು ಆತಂಕಕಾರಿ ಅಂಶಗಳು ಅಡಗಿವೆ. ಏಕೆಂದರೆ, ನ್ಯಾಯಾಲಯವು ತನಿಖೆಯನ್ನು ಸಂಪೂರ್ಣವಾಗಿ ತಡೆದಿಲ್ಲ; ಬದಲಾಗಿ ಅದನ್ನು ಮುಂದುವರಿಸಲು ಸ್ಪಷ್ಟ ಅವಕಾಶ ನೀಡಿದೆ. ಇದೇ ಅಂಶ ಈಗ ನಾಗರಿಕ ಹಕ್ಕುಗಳ ಹೋರಾಟಗಾರರು, ಕಾನೂನು ತಜ್ಞರು ಹಾಗೂ ಜನತಂತ್ರವಾದಿಗಳಲ್ಲಿ ಆತಂಕ ಮೂಡಿಸಿದೆ.

ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ತನಿಖೆ ಎನ್ನುವುದು ಕೇವಲ ಒಂದು ಔಪಚಾರಿಕ ಪ್ರಕ್ರಿಯೆಯಲ್ಲ. ತನಿಖೆಯ ಹೆಸರಿನಲ್ಲಿ ಪೊಲೀಸರು ವ್ಯಕ್ತಿಗಳನ್ನು ವಿಚಾರಣೆಗೆ ಕರೆಯಬಹುದು, ಅವರ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಬಹುದು, ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸಬಹುದು, ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಬಹುದು ಹಾಗೂ ಸಾಕ್ಷಿಗಳನ್ನು ವಿಚಾರಿಸಬಹುದು. ಅಂದರೆ ಬಂಧನವಾಗದೇ ಇದ್ದರೂ, ತನಿಖೆಯ ಹೆಸರಿನಲ್ಲಿ ನಡೆಯುವ ಪ್ರಕ್ರಿಯೆಗಳೇ ಒಬ್ಬ ವಿದ್ಯಾರ್ಥಿಯ ವೈಯಕ್ತಿಕ ಬದುಕು, ಶಿಕ್ಷಣ, ಉದ್ಯೋಗ ಹಾಗೂ ಮಾನಸಿಕ ನೆಮ್ಮದಿಯ ಮೇಲೆ ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಇಲ್ಲಿಯೂ, ನ್ಯಾಯಾಲಯ ಬಳಸಿರುವ ‘ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂಬ ಪದಪ್ರಯೋಗದ ಅರ್ಥವೂ ಮಹತ್ವ ಪಡೆಯುತ್ತದೆ. ಕಾನೂನಿನ ಭಾಷೆಯಲ್ಲಿ ಬಲವಂತದ ಕ್ರಮ ಎಂದರೆ ಸಾಮಾನ್ಯವಾಗಿ ಬಂಧನ, ಪೊಲೀಸ್ ಕಸ್ಟಡಿ ಅಥವಾ ದೈಹಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕ್ರಮಗಳನ್ನು ಸೂಚಿಸುತ್ತದೆ. ಆದರೆ, ತನಿಖೆಯ ಭಾಗವಾಗಿ ಪದೇ-ಪದೇ ವಿಚಾರಣೆಗೆ ಕರೆಯುವುದು, ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆಯುವುದು, ದಾಖಲೆಗಳನ್ನು ಸಲ್ಲಿಸಲು ಸೂಚಿಸುವುದು ಅಥವಾ ನಿರಂತರವಾಗಿ ಪೊಲೀಸ್ ಸಂಪರ್ಕದಲ್ಲಿರಿಸುವುದು ಕೂಡ ಒಬ್ಬ ವ್ಯಕ್ತಿಯ ಮೇಲೆ ಒತ್ತಡ ಉಂಟುಮಾಡಬಹುದು. ಇದು ವಿದ್ಯಾರ್ಥಿಗಳನ್ನು ದಮನಿಸಲು ಸರ್ಕಾರ ಮತ್ತು ಪೊಲೀಸರಿಗೆ ಹೆಚ್ಚಿನ ಅವಕಾಶ ನೀಡಲಿದೆ.

ಅದೇ ರೀತಿ, ‘ಕ್ರಿಮಿನಲ್ ಪೂರ್ವಾಪರ’ ಎಂಬ ಪದ ಪ್ರಯೋಗವೂ ವಿದ್ಯಾರ್ಥಿಗಳ ಪಾಲಿಗೆ ಕಂಟಕವೇ ಆಗಿದೆ. ನ್ಯಾಯಾಲಯ ಈ ರಕ್ಷಣೆ ಅಪರಾಧ ಪೂರ್ವಾಪರ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಹಾಗೆ ನೋಡಿದರೆ, ಭಾರತೀಯ ಸಂವಿಧಾನದ ಅಡಿಯಲ್ಲಿ ಮತ್ತು ಕ್ರಿಮಿನಲ್ ನ್ಯಾಯಶಾಸ್ತ್ರದ ಮೂಲ ತತ್ವಗಳ ಪ್ರಕಾರ, ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸುವವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ನಿರಪರಾಧಿಯೇ ಆಗಿರುತ್ತಾರೆ. ಆದರೆ, ಸರ್ಕಾರಗಳು ಮತ್ತು ಪೊಲೀಸರು ಯಾವುದನ್ನು ಅಪರಾಧ ಪೂರ್ವಾಪರ ಎಂದು ಪರಿಗಣಿಸಬಹುದು. ಕ್ಷುಲ್ಲಕ ಆರೋಪಗಳು ಅಥವಾ ಕ್ಯಾಂಪಸ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗ ಹೆಸರು ಉಲ್ಲೇಖಿತವಾಗಿದ್ದರೆ ಅಥವಾ ಆ ಪ್ರತಿಭಟನೆ ಕಾರಣಕ್ಕಾಗಿ ಪ್ರಕರಣ ದಾಖಲಾಗಿದ್ದು, ಅದೆಲ್ಲವನ್ನೂ ‘ಅಪರಾಧ ಪೂರ್ವಾಪರ’ ಎಂದು ಪರಿಗಣಿಸಿದರೆ ಏನಾಗುತ್ತದೆ? ವಿದ್ಯಾರ್ಥಿಗಳನ್ನೂ ಕ್ರಿಮಿನಲ್ ಹಿನ್ನೆಲೆಯವರು ಎಂದು ಸರ್ಕಾರಗಳು ಮತ್ತು ಪೊಲೀಸರು ಅಕ್ಷರಶಃ ದಮನಿಸುತ್ತಾರೆ. ಇಂತಹ, ಸಣ್ಣ-ಪುಣ್ಣ ಅವಕಾಶಗಳು ಸಿಕ್ಕರೆ ಸಾಕೆಂದು ಆಳುವವರು ಕಾಯುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಸಚಿವ ಸಂಪುಟ ವಿಸ್ತರಣೆ: ರಾಹುಲ್‌ ಗಾಂಧಿ 2:3 ಸೂತ್ರ; ಕಾಂಗ್ರೆಸ್‌ಗೆ ಸಮತೋಲನ-ಬಂಡಾಯದ ಸವಾಲು!

ಭಾರತದ ಇತಿಹಾಸದಲ್ಲಿ ವಿದ್ಯಾರ್ಥಿ ಚಳವಳಿಗೆ ಮಹತ್ವವಿದೆ. ಹಲವು ವಿದ್ಯಾರ್ಥಿ ಚಳವಳಿಗಳು ಅನೇಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿವೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಜೆಪಿ ಚಳವಳಿ, ಮಂಡಲ್ ಚಳವಳಿ, ಭ್ರಷ್ಟಾಚಾರ ವಿರೋಧಿ ಹೋರಾಟಗಳು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು – ಎಲ್ಲೆಡೆ ವಿದ್ಯಾರ್ಥಿಗಳೇ ಪ್ರಮುಖ ಶಕ್ತಿಯಾಗಿದ್ದರು. ಹೀಗಿರುವಾಗ, ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಯ ಕಾರಣಕ್ಕಾಗಿ ವಿದ್ಯಾರ್ಥಿಗಳು ಪ್ರಕರಣವನ್ನು ಎದುರಿಸುವುದು ಎಂದರೇನು? ಇದು ಯುವಜನರಲ್ಲಿ ಭಯ ಹುಟ್ಟಿಸುವ ತಂತ್ರ. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ವರ್ಷಗಟ್ಟಲೆ ತನಿಖೆ ಎದುರಿಸಬೇಕಾಗಬಹುದು ಎಂಬ ಭಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತು, ಅವರನ್ನು ಮೌನಗೊಳಿಸುವ ಮೋದಿ ಸರ್ಕಾರದ ಸಂಚು. ಈ ಸಂಚಿಗೆ, ಸುಪ್ರೀಂ ಕೋರ್ಟ್‌ನ ‘ತನಿಖೆ ಮುಂದುವರಿಸಬಹುದು ಮತ್ತು ಅಪರಾಧ ಪೂರ್ವಾಪರ ಹೊಂದಿರುವವರಿಗೆ ರಕ್ಷಣೆ ಇಲ್ಲ’ ಎಂಬ ಆದೇಶವು ನೀರೆರೆಯಲಿದೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಎನ್‌ಡಿಎ ಸರ್ಕಾರವಿರುವ ರಾಜ್ಯಗಳಲ್ಲಿ ‘ತನಿಖೆ’ಗಳು ಮುಂದುವರೆದರೆ, ಆಯಾ ರಾಜ್ಯಗಳಲ್ಲಿನ ವಿದ್ಯಾರ್ಥಿಗಳು ಪದೇಪದೇ ಪೊಲೀಸ್ ಠಾಣೆಗಳಿಗೆ ಹಾಜರಾಗಬೇಕಾಗಬಹುದು, ಉದ್ಯೋಗ ಅರ್ಜಿಗಳಲ್ಲಿ ಪ್ರಕರಣಗಳ ವಿವರ ನೀಡುವ ಪರಿಸ್ಥಿತಿ ಎದುರಾಗಬಹುದು, ಉನ್ನತ ಶಿಕ್ಷಣ ಅಥವಾ ವಿದೇಶಿ ವಿದ್ಯಾಭ್ಯಾಸದ ಅವಕಾಶಗಳ ಮೇಲೂ ಪರಿಣಾಮ ಉಂಟಾಗಬಹುದು. ಅಂತಿಮವಾಗಿ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಸಾಬೀತಾಗದಿದ್ದರೂ, ತನಿಖೆಯ ಪ್ರಕ್ರಿಯೆಯೇ ಒಂದು ಶಿಕ್ಷೆಯಂತೆ ಪರಿಣಮಿಸುವ ಅಪಾಯವಿದೆ.

ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಅಂತಿಮ ಆಶ್ರಯವೆಂದು ಪರಿಗಣಿಸಲಾಗುತ್ತದೆ. ಅದೇ ವೇಳೆ, ಕಾನೂನಿನ ಆಳ್ವಿಕೆಯನ್ನು ಕಾಪಾಡುವ ಹೊಣೆಗಾರಿಕೆಯೂ ನ್ಯಾಯಾಲಯದ ಮೇಲಿದೆ. ಹೀಗಿದ್ದಾಗ, ನ್ಯಾಯಾಲಯಗಳು ‘ಅಡ್ಡಗೋಡೆ ಮೇಲೆ ದೀಪವಿಟ್ಟರೆ’ ಸಮಾಜವನ್ನು ಕತ್ತಲೆಗೆ ದೂಡಿದಂತೆಯೇ ಸರಿ!

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್‌ | ನ.4ರಂದು ಸಂಗ್‌ರೂರ್‌ನಲ್ಲಿ ʼಇನ್ಸಾಫ್ ರ‍್ಯಾಲಿʼ; ರಾಹುಲ್ ಗಾಂಧಿ ಭಾಗಿ

ಪಂಜಾಬ್‌ನ ಹಕ್ಕುಗಳು, ನ್ಯಾಯ ಮತ್ತು ಭವಿಷ್ಯದ ಕುರಿತು ಧ್ವನಿ ಎತ್ತುವ ಉದ್ದೇಶದಿಂದ...

ಬೀದರ್‌ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ

ಬೀದರ್ ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ...

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...