‘ಮೀಸಲಾತಿಯಿಂದ ಮೆರಿಟ್‌ಗೆ ಹಾನಿ’ ಎಂಬ ಅಪಪ್ರಚಾರ: ಸಾಂವಿಧಾನಿಕ ವಾಸ್ತವವೇನು?

Date:

ಪರೀಕ್ಷಾ ಪದ್ಧತಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಆಡಳಿತಾತ್ಮಕ ವೈಫಲ್ಯಗಳನ್ನು ಪ್ರಶ್ನಿಸುವ ಬದಲಾಗಿ, ‘Reservation Hatao Andolan’ ಸಂಪೂರ್ಣವಾಗಿ ‘ಮೀಸಲಾತಿ’ಯ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಾಗುವ ನಿಜವಾದ ಸವಾಲುಗಳು ಹಾಗೂ ಆಡಳಿತಾತ್ಮಕ ಲೋಪಗಳನ್ನು ಮೀಸಲಾತಿಯ ತಲೆಯ ಮೇಲೆ ಹಾಕುವುದು ಕೇವಲ ಮೂಲ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಷ್ಟೇ!

ನೀಟ್ ಪರೀಕ್ಷೆಯ ಅಕ್ರಮ ಮತ್ತು ಫಲಿತಾಂಶದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ‘Reservation Hatao Andolan’ (ಮೀಸಲಾತಿ ತೆಗೆದುಹಾಕಿ ಆಂದೋಲನ) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟವೊಂದು ಕ್ಷಿಪ್ರವಾಗಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದೆ. ಸದ್ಯ ಈ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ನಡುವೆಯೂ ವಿದ್ಯಾರ್ಥಿಗಳ ಗಮನವನ್ನು ವಾಸ್ತವತೆಯಿಂದ ಬೇರೆಡೆಗೆ ಸೆಳೆಯುವ ತಂತ್ರವನ್ನು ಪ್ರಶ್ನಿಸುವ ಲಕ್ಷಾಂತರ ಜನರೂ ಇದ್ದಾರೆ. ಈ ಅಪಪ್ರಚಾರ, ಮೀಸಲಾತಿ ವಿರೋಧಿಗಳ ದ್ವಂದ್ವ ನಿಲುವುಗಳನ್ನೂ ಈ ಸಂದರ್ಭದಲ್ಲಿ ನಾವು ಪ್ರಶ್ನಿಸಬೇಕಾಗುತ್ತದೆ.

- Advertisement -

ಪರೀಕ್ಷಾ ಪದ್ಧತಿ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಆಡಳಿತಾತ್ಮಕ ವೈಫಲ್ಯಗಳನ್ನು ಪ್ರಶ್ನಿಸುವ ಬದಲಾಗಿ, ಈ ಚಳವಳಿ ಸಂಪೂರ್ಣವಾಗಿ ‘ಮೀಸಲಾತಿ’ಯ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದೆ. “ಮೀಸಲಾತಿ ವ್ಯವಸ್ಥೆಯು ಅರ್ಹತೆಯನ್ನು (Merit) ಕೊಲ್ಲುತ್ತಿದೆ ಅಥವಾ ನಾಶಮಾಡುತ್ತಿದೆ” ಎಂಬ ಹಳೆಯ ವಾದವನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ. ಆದರೆ ಈ ವಾದ ಒಪ್ಪುವಂತದ್ದೇ? ವೈಜ್ಞಾನಿಕ ಅಥವಾ ಸಾಂವಿಧಾನಿಕ ವಾಸ್ತವ ಏನು ಹೇಳುತ್ತದೆ? ಈ ವಾದ ವಾಸ್ತವಕ್ಕೆ ತದ್ವಿರುದ್ಧವಾಗಿರುವುದಲ್ಲವೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಇದನ್ನೂ ಓದಿ: ಒಳ ಮೀಸಲಾತಿ ವಿರೋಧಿಸಿ ಮಾ.25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮೀಸಲಾತಿ ಅರ್ಹತೆಯನ್ನು (Merit) ಧಕ್ಕೆಯೇ?

ಸಾಮಾನ್ಯವಾಗಿ ಅಂಕಪಟ್ಟಿಯಲ್ಲಿ ಗಳಿಸುವ ಶೇಕಡಾವಾರು ಅಂಕಗಳನ್ನು ಮಾತ್ರವೇ ‘ಮೆರಿಟ್’ ಎಂದು ಕರೆಯುವ ರೂಢಿಯಿದೆ. ಆದರೆ ದೇಶದ ಸುಪ್ರೀಂ ಕೋರ್ಟ್ ಮತ್ತು ಸಮಾಜಶಾಸ್ತ್ರಜ್ಞರು ಈ ಹಿಂದೆಯೇ ಈ ಕಲ್ಪನೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ನ್ಯಾಯಾಲಯಗಳು ಮತ್ತು ಸಮಾಜಶಾಸ್ತ್ರಜ್ಞರು ಹೇಳುವಂತೆ ಸಾವಿರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಕ್ಕುಗಳಿಂದ ವಂಚಿತರಾದ ಸಮುದಾಯ (ಎಸ್‌ಸಿ, ಎಸ್‌ಟಿ ಮೊದಲಾದ ಸಮುದಾಯ) ಮತ್ತು ಸಕಲ ಸೌಲಭ್ಯಗಳನ್ನು ಪಡೆದ ಸಮುದಾಯವನ್ನು (ಮೇಲ್ಜಾತಿ ಎಂದು ಕರೆಸಿಕೊಂಡವರು) ಒಂದೇ ಅಂಕಪಟ್ಟಿ ಪ್ರಮಾಣಪತ್ರದಿಂದ ಅಳೆಯುವುದು ‘ಅಸಮಾನತೆಯನ್ನು ಮುಂದುವರಿಸುವುದೇ’ ಹೊರತು ನ್ಯಾಯ ಒದಗಿಸುವುದಲ್ಲ.

ಪ್ರಮುಖ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿರುವಂತೆ, “ಮೀಸಲಾತಿಯು ಮೆರಿಟ್‌ಗೆ ವಿರುದ್ಧವಾದುದಲ್ಲ, ಬದಲಾಗಿ ಅದು ನೈಜ ಮೆರಿಟ್‌ನ ವಿಸ್ತರಣೆ”. ಪ್ರವೇಶ ಪರೀಕ್ಷೆಯ ಅಂಕಗಳು ಕೇವಲ ಒಬ್ಬ ವ್ಯಕ್ತಿಯ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಂಬಲವನ್ನು (ಉದಾಹರಣೆಗೆ ದುಬಾರಿ ತರಬೇತಿ ಸಂಸ್ಥೆಗಳು) ಪ್ರತಿಫಲಿಸುತ್ತವೆಯೇ ಹೊರತು, ಕೇವಲ ಅವರ ಬುದ್ಧಿವಂತಿಕೆಯನ್ನಲ್ಲ.

ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, ಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದ ಜನರು ಆಡಳಿತ, ವೈದ್ಯಕೀಯ ಮತ್ತು ಸೇವಾ ಕ್ಷೇತ್ರಗಳನ್ನು ಸೇರಿದಾಗ ಆ ಸಂಸ್ಥೆಗಳ ದಕ್ಷತೆ ಮತ್ತು ಸಾರ್ವಜನಿಕ ಸೇವೆಯ ವ್ಯಾಪ್ತಿ ಹೆಚ್ಚಿದೆಯೇ ಹೊರತು ಕಡಿಮೆಯಾಗಿಲ್ಲ.

ಇದನ್ನೂ ಓದಿ: ಹಾವೇರಿ | ಒಳ ಮೀಸಲಾತಿ ಇಲ್ಲದೆ ಸರ್ಕಾರಿ ಉದ್ಯೋಗ ನೇಮಕ ಆದೇಶ ವಿರೋಧಿಸಿ ಮನವಿ

‘ಮೀಸಲಾತಿ ಹಠಾವೋ’ ಆಂದೋಲನಕಾರರ ದ್ವಂದ್ವ ನಿಲುವುಗಳು

NEET ಗೊಂದಲಗಳ ಸಂದರ್ಭದಲ್ಲಿ ಹುಟ್ಟಿಕೊಂಡ ಈ ‘Reservation Hatao’ ಅಭಿಯಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ದೊಡ್ಡಮಟ್ಟದ ದ್ವಂದ್ವಗಳು ಎದ್ದು ಕಾಣುತ್ತವೆ. NEET ವಿಚಾರದಲ್ಲಿ ಎದುರಾದ ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್ ಅಂಕಗಳ ಹಂಚಿಕೆ ಮತ್ತು ಪರೀಕ್ಷಾ ಮಂಡಳಿಗಳ ಆಡಳಿತಾತ್ಮಕ ಲೋಪಗಳನ್ನು ಪ್ರಶ್ನಿಸಬೇಕಿದ್ದ ಯುವಜನತೆ, ತಮ್ಮ ಕೋಪವನ್ನು ಮೀಸಲಾತಿಯತ್ತ ತಿರುಗಿಸಿದ್ದು ವಿಪರ್ಯಾಸ. ಪರೀಕ್ಷೆಯ ಅವ್ಯವಸ್ಥೆಗೆ ಆಡಳಿತ ವ್ಯವಸ್ಥೆ ಕಾರಣವೇ ಹೊರತು ಶೋಷಿತ ವರ್ಗಗಳ ಮೀಸಲಾತಿಯಲ್ಲ ಎಂಬುದನ್ನು ಯುವಜನರು ತಿಳಿಯಬೇಕು. ಇದು ಸ್ಪಷ್ಟವಾಗಿ ಸರ್ಕಾರದ ವೈಫಲ್ಯದ ದಿಕ್ಕು ಬದಲಾಯಿಸುವ ತಂತ್ರ.

ಇನ್ನೊಂದೆಡೆ ಸಾಮಾನ್ಯ ವರ್ಗದ (Unreserved/General) ಮೀಸಲಾತಿಯತ್ತ ಈ ಮೀಸಲಾತಿ ವಿರೋಧಿಗಳು ಮೌನ ವಹಿಸುವುದನ್ನು ನೋಡಿದಾಗ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಸದ್ಯ ದೇಶದಲ್ಲಿ ಶೇಕಡ 10ರಷ್ಟು EWS (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲಾತಿ ಜಾರಿಯಲ್ಲಿದೆ. ‘ಮೀಸಲಾತಿಯೇ ಮೆರಿಟ್‌ಗೆ ಶತ್ರು’ ಎಂದು ವಾದಿಸುವ ಹಲವರು EWS ಮೀಸಲಾತಿಯನ್ನು ಸ್ವಾಗತಿಸುತ್ತಾರೆ. ಆದರೆ ಜಾತಿ ಆಧಾರಿತ ಮೀಸಲಾತಿಯನ್ನು ಮಾತ್ರ ವಿರೋಧಿಸುತ್ತಾರೆ. ಅಂದರೆ ಅವರ ಉದ್ದೇಶ ‘ಮೆರಿಟ್’ ರಕ್ಷಣೆಯಲ್ಲ, ಬದಲಾಗಿ ನಿರ್ದಿಷ್ಟ ಸಮುದಾಯಗಳ ಪ್ರಾತಿನಿಧ್ಯವನ್ನು ತಡೆಯುವುದು ಎಂಬುದು ಸ್ಪಷ್ಟವಾಗಿ ಬಿಂಬಿತವಾಗುತ್ತದೆ.

ಮೀಸಲಾತಿ ವಿರೋಧಿಗಳು ಖಾಸಗೀಕರಣ ಮತ್ತು ಕೋಚಿಂಗ್ ಮಾಫಿಯಾ ವಿರುದ್ಧವೂ ಮೌನ ವಹಿಸುತ್ತಾರೆ. ಲಕ್ಷಾಂತರ ರೂಪಾಯಿ ನೀಡಿ ಪ್ರವೇಶ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯಲು ಸಾಧ್ಯವಿಲ್ಲದ ಬಡ ವಿದ್ಯಾರ್ಥಿಗಳಿಗೆ ‘ಮೆರಿಟ್’ ಗಳಿಸುವುದು ಕಷ್ಟವಾಗುತ್ತಿದೆ. ಶಿಕ್ಷಣ ಸಂಪೂರ್ಣವಾಗಿ ಉದ್ಯಮವಾಗಿ ಮಾರ್ಪಟ್ಟಿರುವ ಬಗ್ಗೆ ಧ್ವನಿ ಎತ್ತದ ಈ ಆಂದೋಲನಗಳು, ಸಂವಿಧಾನಿಕ ಹಕ್ಕಾದ ಮೀಸಲಾತಿಯನ್ನು ಮಾತ್ರ ಗುರಿಮಾಡುತ್ತವೆ.

ಅಷ್ಟಕ್ಕೂ ಮೀಸಲಾತಿ ಇಂದಿಗೂ ಅತ್ಯಗತ್ಯವೇ ಆಗಿದೆ. ಯಾಕೆಂದರೆ ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಯೋಜನೆಯಲ್ಲ. ಅದು ‘ಸಾಮಾಜಿಕ ಪ್ರಾತಿನಿಧ್ಯ’ ಒದಗಿಸುವ ಸಂವಿಧಾನಾತ್ಮಕ ಹಕ್ಕು. ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ಭಾಗವಹಿಸುವಿಕೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ.

ಸಂವಿಧಾನದ ಆಶಯಗಳ ಪ್ರಕಾರ, ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಶಿಕ್ಷಣ ಕ್ಷೇತ್ರದಲ್ಲಾಗುವ ನಿಜವಾದ ಸವಾಲುಗಳು ಹಾಗೂ ಆಡಳಿತಾತ್ಮಕ ಲೋಪಗಳನ್ನು ಮೀಸಲಾತಿಯ ತಲೆಯ ಮೇಲೆ ಹಾಕುವುದು ಕೇವಲ ಮೂಲ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಷ್ಟೇ!

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ವರ್ಷದೊಳಗಿನವರಿಗೆ ‘ಸೋಶಿಯಲ್ ಮೀಡಿಯಾ’ ನಿಷೇಧವೇ? ಕೇಂದ್ರ ಸರ್ಕಾರ ಹೇಳುವುದೇನು?

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...

‘ಇಂಡಿಯಾ’ ಒಕ್ಕೂಟ ಅತ್ಯಂತ ಒಗ್ಗಟ್ಟಾಗಿದೆ; ಸಿಇಸಿ ಗ್ಯಾನೇಶ್ ಕುಮಾರ್ ವಜಾಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

ವಿಪಕ್ಷಗಳ ಇಂಡಿಯಾ ಒಕ್ಕೂಟವು ಸಂಪೂರ್ಣ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು...

ಬಿಜೆಪಿ ಸರ್ಕಾರಗಳ ಅನಾಹುತಗಳಿಂದಾಗಿಯೇ ಆರ್ಥಿಕ ಇಲಾಖೆಯವರು ನಮಗೀಗ ಪತ್ರ ಬರೆದಿದ್ದಾರೆ: ಸಿಎಂ ಡಿ ಕೆ ಶಿವಕುಮಾರ್

"ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಮೀರಿ ಯೋಜನೆಗಳ...