ಬೆಳಗಾವಿ | 80 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ಅಲೆಮಾರಿಗಳ ಬದುಕಿಗೆ ಮೂಲಸೌಕರ್ಯ ಮರೀಚಿಕೆ

Date:

ಭಾರತೀಯ ಜಾತಿ ಮತ್ತು ಸಾಮಾಜಿಕ ವ್ಯವಸ್ಥೆ ಒಬ್ಬ ವ್ಯಕ್ತಿಯ ಕುಡಿಯುವ ನೀರು, ವಸತಿ, ಪ್ರಯಾಣ, ಶಿಕ್ಷಣ, ಉದ್ಯೋಗ ಮತ್ತು ಮಾನವ ಘನತೆಯ ಹಕ್ಕನ್ನೇ ಹೇಗೆ ನಿರಾಕರಿಸುತ್ತಿತ್ತು ಎಂಬುದಕ್ಕೆ ಅಂಬೇಡ್ಕರ್‌ ಅವರ waiting for a Visa ಕೃತಿ 1935-36ರ ಅವಧಿಯಲ್ಲಿಯೇ ನೇರ ಸಾಕ್ಷ್ಯವಾಗಿತ್ತು. 2026ರ ಅವಧಿಯಲ್ಲಿಯೂ ಪ್ರಸ್ತುತವಾಗಿದೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತ ಅಲೆಮಾರಿಗಳ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ 80 ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಅರ್ಥವಿಲ್ಲದಂತಾಗುತ್ತದೆ.       

ಸ್ವಾತಂತ್ರ್ಯ ದೊರೆತು 80 ವರ್ಷಗಳಾದರೂ ಅಲೆಮಾರಿ ಸಮುದಾಯದ ಜನರಿಗೆ ಇನ್ನೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಬಯಲು ಶೌಚಾಲಯ, ಶುದ್ಧ ಕುಡಿಯುವ ನೀರಿನ ಕೊರತೆ, ತಗಡಿನ ಶೆಡ್‌ಗಳಲ್ಲಿಯೇ ವಾಸ, ಸರಿಯಾದ ಶಿಕ್ಷಣದ ಕೊರತೆ ಹೀಗೆ ಪಟ್ಟಿ ಮಾಡುತ್ತ ಹೋದರೆ ಇವರ ಸಮಸ್ಯೆಗಳ ಪಟ್ಟಿ ಉದ್ದವಾಗುತ್ತಲೇ ಹೋಗುತ್ತದೆ.

- Advertisement -

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ 44ನೇ ವಾರ್ಡ್‌ನಲ್ಲಿ ಸುಮಾರು 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದ ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿವೆ. ನಿತ್ಯವೂ ಪ್ಲ್ಯಾಸ್ಟಿಕ್ ಆಯುವುದೇ ಇವರ ಪ್ರಮುಖ ಕೆಲಸ. ಮುಂಜಾನೆಯಿಂದ ಸಂಜೆಯವರೆಗೆ ದುಡಿದರೂ ಕೈಗೆ ಸಿಗುವುದು ಕೇವಲ 200 ರೂಪಾಯಿಗಳು ಮಾತ್ರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ಬಯಲು ಶೌಚಕ್ಕೆ ತೆರಳಬೇಕಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಮುರಿದ ತಗಡಿನ ಶೆಡ್‌ಗಳಲ್ಲಿಯೇ ವಾಸಿಸುವ ಕುಟುಂಬಗಳು ಮಳೆ ಬಂದಾಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತವೆ. ಶೆಡ್‌ಗಳಲ್ಲಿ ನೀರು ಸೋರಿಕೆಯಾಗುವುದರಿಂದ ಮಕ್ಕಳು ರಾತ್ರಿ ನಿದ್ದೆಯಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಇದರ ಜತೆಗೆ ಮಕ್ಕಳಿಗೆ ಸರಿಯಾದ ಶಿಕ್ಷಣವೂ ದೊರೆಯುತ್ತಿಲ್ಲ. ಹರಿದ ಬಟ್ಟೆ ತೊಟ್ಟು ಶೆಡ್‌ಗಳ ಸುತ್ತಮುತ್ತ ಆಟವಾಡುವ ಮಕ್ಕಳು, ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿಯೇ ಬದುಕಿನ ಹೋರಾಟದಲ್ಲಿ ಸಿಲುಕಿರುವ ದೃಶ್ಯ ಮನಕಲಕುವಂತಿದೆ.

ʼVisaʼ ಎಂಬ ಪದವನ್ನು ರೂಪಕವಾಗಿಯೂ ಅರ್ಥಮಾಡಿಕೊಳ್ಳುವುದಾದರೆ, ಭಾರತೀಯ ತಳ ಸಮುದಾಯಗಳು ವಿದೇಶ ಪ್ರವೇಶಿಸಲು ಬೇಕಾದ ವೀಸಾಕ್ಕಿಂತಲೂ, ಭಾರತೀಯ ಸಮಾಜದೊಳಗೆ ಸಮಾನ ಮನುಷ್ಯನಾಗಿ ಪ್ರವೇಶಿಸಲು ಒಂದು ‘ಸಾಮಾಜಿಕ ವೀಸಾ’ ಬೇಕಾಗಿದೆ ಎಂಬ ಅಂಬೇಡ್ಕರ್‌ ಅವರ ಮಾತನ್ನು ಅರ್ಥಮಾಡಿಕೊಳ್ಳಬಹುದು.

ಅಲೆಮಾರಿ ಸಮುದಾಯದವರು ಆಧಾರ್ ಕಾರ್ಡ್ ಮಾಡಿಸಲು ಹೋದರೂ ಸಮಸ್ಯೆ ಎದುರಾಗುತ್ತದೆ. ರೇಷನ್ ಕಾರ್ಡ್ ಇಲ್ಲದ ಕಾರಣ ಸರ್ಕಾರದಿಂದ ಸಿಗಬೇಕಾದ ಪಡಿತರವೂ ದೊರೆಯುತ್ತಿಲ್ಲ. ದುಡ್ಡು ಕೊಟ್ಟು ಅಕ್ಕಿ ಖರೀದಿಸಬೇಕು, ಇಲ್ಲವೇ ಯಾರಾದರೂ ನೀಡುವ ನೆರವಿನ ಮೇಲೆ ಅವಲಂಬಿತರಾಗಬೇಕು. ಒಂದು ಸ್ಥಳದಲ್ಲಿ ವಾಸಿಸಲು ಆರಂಭಿಸಿದರೆ ಅಲ್ಲಿಂದ ಮತ್ತೊಂದು ಸ್ಥಳಕ್ಕೆ ತೆರಳುವಂತೆ ಮಾಡಲಾಗುತ್ತದೆ. ಮತ್ತೆ ಬೇರೆಡೆ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸಬೇಕಾದ ಸ್ಥಿತಿ ಇವರದ್ದು.

ಈ ಕುರಿತು ದಿನ.ಕಾಮ್ ಮಾಧ್ಯಮ ವರದಿ ಮಾಡಲು ಅಲೆಮಾರಿಗಳು ವಾಸಿಸುವ ಸ್ಥಳಕ್ಕೆ ತೆರಳಿದಾಗ ಕಂಡ ದೃಶ್ಯಗಳು ಜೀವ ಹಿಂಡುವಂತಿದ್ದವು. ಮುರಿದ ತಗಡಿನ ಶೆಡ್‌ಗಳು, ಶಾಲೆಗೆ ಹೋಗದ ಮಕ್ಕಳು, ಹರಿದ ಬಟ್ಟೆಗಳಲ್ಲಿ ಆಟವಾಡುತ್ತಿರುವ ಬಾಲಕರು ಹಾಗೂ ಒಂದು ಹೊತ್ತಿನ ಊಟಕ್ಕೂ ಪರದಾಡುವ ಕುಟುಂಬಗಳ ಸ್ಥಿತಿ ಕಣ್ಣಿಗೆ ಕಂಡಿತು.

ಎಸ್‌ಐಆ‌ರ್ ಪ್ರಕ್ರಿಯೆಯಿಂದಲೂ ಅನೇಕರು ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಈ ದಿನ.ಕಾಮ್ ತಹಶೀಲ್ದಾ‌ರ್ ಅವರ ಗಮನಕ್ಕೆ ತಂದಿದೆ. ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ, ಇವರ ಬಳಿ ಸರಿಯಾದ ದಾಖಲೆಗಳಿಲ್ಲದಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ದಾಖಲೆಗಳಿದ್ದರೂ ಎಸ್‌ಐಆ‌ರ್ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲದಿರುವುದರಿಂದ ಅನೇಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಅಲೆಮಾರಿ ಸಮುದಾಯದವರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಸಮುದಾಯಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ನಿಜವಾಗಿಯೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ.

ಮೀಸಲಾತಿ ಬೇಡ ಎನ್ನುವ ಸಂಕುಚಿತ ಮನೋಭಾವ ಹೊಂದಿರುವವರು ಒಮ್ಮೆ ಇಂತಹ ಅಲೆಮಾರಿ ಕುಟುಂಬಗಳಿರುವ ಸ್ಥಳಕ್ಕೆ ಬಂದು ಅವರ ಬದುಕನ್ನು ಕಣ್ಣಾರೆ ನೋಡಬೇಕು. ಆಗ ಮಾತ್ರ ಮೀಸಲಾತಿ ಯಾಕೆ ಬೇಕು, ವಿಶೇಷ ಸೌಲಭ್ಯಗಳು ಯಾಕೆ ಬೇಕು? ಎಂಬುದು ಅರ್ಥವಾಗುತ್ತದೆ.

ʼಓಟು ಕೇಳೋಕೆ ಬರ್ತಾರ, ನಮ್ಮ ಕಷ್ಟ ಕೇಳೋಕೆ ಯಾರೂ ಬರಲ್ಲʼ

ಈ ಕುರಿತು ಈ ದಿನ.ಕಾಮ್ ಜತೆ ಮಾತಾಡಿದ ಅಲೆಮಾರಿ ಸಮುದಾಯದ ಜಂಬಕ್ಕ ಅವರು, “ನಾವು ಯರಗಟ್ಟಿ ಪಟ್ಟಣದಲ್ಲಿ ಸುಮಾರು 20 ವರ್ಷದಿಂದ ವಾಸ ಮಾಡ್ತಿದೀವಿ. ಮೊದ್ಲು ಪಟ್ಟಣದ ಬೇರೆ ಕಡೆ ಇದ್ವಿ. ಅಲ್ಲಿಂದ ಸ್ಮಶಾನದ ಜಾಗದಾಗ ವಾಸ ಮಾಡೋಕೆ ಕಳಿಸಿದ್ರು. ಆಮೇಲೆ ನಮ್ಮನ್ನ ಇಲ್ಲಿಗೆ ಕಳಿಸಿದ್ರು. ಹೀಗೆ ಜಾಗ ಬದಲಾಯಿಸ್ಕೊಂಡೇ ಜೀವನ ಮಾಡ್ತಿದೀವಿ” ಎಂದು ತಮ್ಮ ಅಳಲು ತೋಡಿಕೊಂಡರು.

“ಚುನಾವಣೆ ಬಂದಾಗ ಓಟು ಕೇಳೋಕೆ ಮಾತ್ರ ನಮ್ಮ ಹತ್ತಿರ ಬರ್ತಾರ. ಚುನಾವಣೆ ಮುಗಿದಮೇಲೆ ನಮ್ಮ ಕಷ್ಟ ಕೇಳೋಕೆ ಯಾರೂ ಬರಲ್ಲ. ನಮಗೆ ಸ್ನಾನ ಮಾಡೋಕೆ ಜಾಗ ಇಲ್ಲ, ಶೌಚಾಲಯ ಇಲ್ಲ; ಬಯಲಿಗೇ ಹೋಗಬೇಕು. ಈಗ ನಮ್ಮ ಸುತ್ತಮುತ್ತ ಹೊಸ ಮನೆಗಳು ಆಗ್ತಿವೆ. ಇದ್ರಿಂದ ಹೆಣ್ಣುಮಕ್ಕಳು, ಮಹಿಳೆಯರು ಬಯಲಿಗೆ ಹೋಗೋಕೆ ತುಂಬಾ ತೊಂದರೆ ಆಗ್ತಿದೆ. ನಮಗೆ ಮರ್ಯಾದೆನೇ ಇಲ್ಲದಂಗ ಆಗೈತಿ” ಎಂದು ಜಂಬಕ್ಕ ನೋವು ವ್ಯಕ್ತಪಡಿಸಿದರು.

“ನಾವು ಪ್ಲ್ಯಾಸ್ಟಿಕ್ ಆಯ್ದು ಜೀವನ ಮಾಡ್ತೀವಿ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುಡಿದ್ರೂ ದಿನಕ್ಕೆ ಇನ್ನೂರು ರೂಪಾಯಿ ಸಿಗ್ತೈತಿ. ಅದ್ರಲ್ಲೇ ಊಟ, ಬಟ್ಟೆ ಎಲ್ಲ ಮಾಡ್ಕೊಬೇಕು. ನಮ್ಮ ಮಕ್ಕಳಿಗೆ ಆರೋಗ್ಯ ಕೆಟ್ರೆ ಸರ್ಕಾರಿ ಆಸ್ಪತ್ರೆಗೆ ಕರಕೊಂಡು ಹೋಗ್ತಿವಿ. ಗರ್ಭಿಣಿಯರನ್ನು ಸರ್ಕಾರಿ ಆಸ್ಪತ್ರೆಗೆ ಕರಕೊಂಡು ಹೋದ್ರೆ ಖಾಸಗಿ ಆಸ್ಪತ್ರೆಗೆ ಹೋಗ್ರಿ ಅಂತಾರ. ನಾವು ಅಷ್ಟೊಂದು ದುಡ್ಡು ಎಲ್ಲಿಂದ ಕೊಡಬೇಕು” ಎಂದು ಪ್ರಶ್ನಿಸಿದರು.

“ಎಸ್‌ಐಆರ್ ವಿಚಾರವಾಗಿ ಬಿಎಲ್‌ಒಗಳು ಬಂದಿದ್ರು. ಆದ್ರೆ ನಮ್ಮ ಬಗ್ಗೆ ಅಷ್ಟೊಂದು ಕಾಳಜಿ ತೋರಿಸಲಿಲ್ಲ. ನಮಗೆ ಏನು ಮಾಡಬೇಕು ಅನ್ನೋದೂ ಗೊತ್ತಾಗಲ್ಲ. ತಗಡಿನ ಶೆಡ್‌ನಲ್ಲೇ ಜೀವನ ಮಾಡ್ತೀವಿ. ಮಳೆ ಬಂದ್ರೆ ಮಕ್ಕಳನ್ನ ಕಟ್ಟಿಕೊಂಡು ಅದೇ ಶೆಡ್‌ನೊಳಗ ಇರಬೇಕು. ರಾತ್ರಿ ಮಳೆ ನೀರು ಸೋರ್ತಿದ್ರೂ ಬೇರೆ ಕಡೆ ಹೋಗೋಕೆ ಜಾಗ ಇಲ್ಲ” ಎಂದು ಕಣ್ಣೀರು ಹಾಕಿದರು.

ಈ ಕುರಿತು ಈ ದಿನ.ಕಾಮ್ ಜತೆ ದುರ್ಗವ್ವ ಅವರು ಮಾತನಾಡಿ, “ನಮಗ ರೇಷನ್ ಕಾರ್ಡ್ ಇಲ್ಲ, ಮನೆ ಇಲ್ಲ. ನಾವು ಎಲ್ಲಿಗೆ ಹೋಗಬೇಕು? ರೊಕ್ಕ ಕೊಟ್ಟು ಅಕ್ಕಿ ಹಾಕಿಸ್ಕೋತೀವಿ. ರೇಷನ್ ಪ್ರಾರಂಭ ಆಗಿದೆ ಅಂತ ಹೋದ್ರ, ಬಂದ್ ಆಗಿದೆ, ಮೆಸೇಜ್ ಬಂದಾಗ ಬನ್ನಿ ಅಂತಾರ. ಆದ್ರ ನಮಗೇನೂ ಗೊತ್ತಾಗಲ್ಲ” ಎಂದು ಅಳಲು ತೋಡಿಕೊಂಡರು.

“ನಾವು ಯಾವ ಕಚೇರಿಗೆ ಹೋದ್ರೂ ರೊಕ್ಕ ಕೇಳ್ತಾರ. ರೇಷನ್ ಕಾರ್ಡ್ ಮಾಡಿಸೋಕೆ ಒಂದು ಕಡೆ 700 ರೂಪಾಯಿ, ಇನ್ನೊಂದು ಕಡೆ 200 ರೂಪಾಯಿ, ಮತ್ತೊಂದು ಕಡೆ 1500 ರೂಪಾಯಿ ಕೊಡ್ತೀವಿ. ಆದ್ರೂ ರೇಷನ್ ಕಾರ್ಡ್ ಸಿಕ್ಕಿಲ್ಲ. ನಾವು ಜೀವಂತ ಇದ್ದರೂ ಏನೂ ಉಪಯೋಗ ಇಲ್ಲದಂಗ ಆಗೈತಿ” ಎಂದು ನೋವು ವ್ಯಕ್ತಪಡಿಸಿದರು.

“ಸರ್ಕಾರದಿಂದ ಸೌಲಭ್ಯಗಳು ಬಂದರೆ ಬೇರೆಯವರು ತಿಂದ್ಕೋತ್ತಾರೆ. ಚುನಾವಣೆ ಬಂದಾಗ ಮಾತ್ರ ಬರ್ತಾರ, ಚುನಾವಣೆ ಮುಗಿದಮೇಲೆ ನಮ್ಮನ್ನ ಯಾರೂ ನೋಡಲ್ಲ. ಈ ವರ್ಷ ಯಾರಿಗೂ ಮತ ಕೊಡೋದಿಲ್ಲ. ಇದ್ದವ್ರಿಗೆಲ್ಲ ಸೌಲಭ್ಯ ಕೊಡ್ತಾರ, ನಮಗ ಸರ್ಕಾರ ಏನೂ ಕೊಟ್ಟಿಲ್ಲ” ಎಂದು ದುರ್ಗವ್ವ ಆಕ್ರೋಶ ವ್ಯಕ್ತಪಡಿಸಿದರು.

WhatsApp Image 2026 08 16 at 9.39.25 AM

ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಕಾಟ್ಟೆವ್ ಅವರು, “ನಾವು ಆಧಾರ್ ಕಾರ್ಡ್ ಮಾಡಿಸೋಕೆ ಹೋದ್ರ ಎರಡು ಸಾವಿರ ರೊಕ್ಕ ಕೇಳ್ತಾರ. ಅಷ್ಟೊಂದು ರೊಕ್ಕ ನಮ್ಮ ಹತ್ರ ಇಲ್ಲ. ಅದಕ್ಕೆ ಆಧಾ‌ರ್ ಕಾರ್ಡ್ ಮಾಡಿಸಿಕೊಳ್ಳೋಕೆ ಆಗ್ತಿಲ್ಲ. ನಮಗ ಯಾವುದೇ ಸೌಲಭ್ಯ ಇಲ್ಲ. ಸರ್ಕಾರ ನಮಗೂ ಸಹಾಯ ಮಾಡೋಕು. ನಮ್ಮ ಕಷ್ಟ ಅರ್ಥ ಮಾಡ್ಕೊಂಡು ಮೂಲಭೂತ ಸೌಲಭ್ಯ ಕೊಡಬೇಕು” ಎಂದು ಹೇಳಿದರು.

80 ವರ್ಷಗಳ ಸ್ವಾತಂತ್ರ್ಯ ನಂತರವೂ ಯರಗಟ್ಟಿಯ ಅಲೆಮಾರಿ ಕುಟುಂಬಗಳು ಮನೆ, ನೀರು, ಶೌಚಾಲಯ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಂತಾಗಿದೆ. ಸರ್ಕಾರದ ಯೋಜನೆಗಳು ಕಾಗದದ ಮೇಲಷ್ಟೇ ಉಳಿಯದೆ, ಅರ್ಹ ಫಲಾನುಭವಿಗಳ ಗುಡಿಸಲುಗಳವರೆಗೆ ತಲುಪಬೇಕಿದೆ. ದಾಖಲೆಗಳಿಲ್ಲದ ಕಾರಣ ಸೌಲಭ್ಯಗಳಿಂದ ವಂಚಿತರಾಗುತ್ತಿರುವವರಿಗೆ ಅಧಿಕಾರಿಗಳು ಸ್ಥಳದಲ್ಲೇ ವಿಶೇಷ ಶಿಬಿರ ನಡೆಸಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು.

ಇದನ್ನೂ ಓದಿದ್ದೀರಾ? ‘ಮೀಸಲಾತಿಯಿಂದ ಮೆರಿಟ್‌ಗೆ ಹಾನಿ’ ಎಂಬ ಅಪಪ್ರಚಾರ: ಸಾಂವಿಧಾನಿಕ ವಾಸ್ತವವೇನು?

ಚುನಾವಣೆ ಸಂದರ್ಭದಲ್ಲಿ ಮಾತ್ರ ಅಲೆಮಾರಿಗಳ ನೆನಪಾಗದೆ, ಅವರ ಬದುಕು ಬದಲಾಗುವವರೆಗೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೊಣೆಗಾರಿಕೆಯಿಂದ ಸ್ಪಂದಿಸಬೇಕಿದೆ. ಅವರ ಬದುಕಿನಲ್ಲಿ ಬೆಳಕು ಮೂಡಿದಾಗಲೇ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ನಿಜವಾದ ಅರ್ಥ ಸಿಗಲಿದೆ.

ಭಾರತೀಯ ಜಾತಿ ಮತ್ತು ಸಾಮಾಜಿಕ ವ್ಯವಸ್ಥೆ ಒಬ್ಬ ವ್ಯಕ್ತಿಯ ಕುಡಿಯುವ ನೀರು, ವಸತಿ, ಪ್ರಯಾಣ, ಶಿಕ್ಷಣ, ಉದ್ಯೋಗ ಮತ್ತು ಮಾನವ ಘನತೆಯ ಹಕ್ಕನ್ನೇ ಹೇಗೆ ನಿರಾಕರಿಸುತ್ತಿತ್ತು ಎಂಬುದಕ್ಕೆ ಅಂಬೇಡ್ಕರ್‌ ಅವರ waiting for a Visa ಕೃತಿ 1935-36ರ ಅವಧಿಯಲ್ಲಿಯೇ ನೇರ ಸಾಕ್ಷ್ಯವಾಗಿತ್ತು. 2026ರ ಅವಧಿಯಲ್ಲಿಯೂ ಪ್ರಸ್ತುತವಾಗಿದೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತ ಅಲೆಮಾರಿಗಳ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ 80 ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಅರ್ಥವಿಲ್ಲದಂತಾಗುತ್ತದೆ.

WhatsApp Image 2026 08 16 at 9.39.26 AM
WhatsApp Image 2026 08 16 at 9.39.27 AM
WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...

ಯಾದಗಿರಿ | ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ...

ರಾಯಚೂರು | ಬರ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ: ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸೂಕ್ತ ಪರಿಹಾರ ಒದಗಿಸಬೇಕು, ರೈತರಿಗೆ ಸಮರ್ಪಕ...

ಉಡುಪಿ | ‘ಕಬ್ಬದುಳುಮೆ’ ಕಾವ್ಯಲೋಕದ ಓದಿನ ಹೊಸಪರಿ

ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ ನಿರಂತರ ಬೇಸಾಯವಾದ...