ವಿಶ್ವಕಪ್ | ಶಮಿ, ಸಿರಾಜ್‌ ದಾಳಿಗೆ ಶ್ರೀಲಂಕಾ ಧೂಳೀಪಟ; ದಾಖಲೆ ಜಯದೊಂದಿಗೆ ಭಾರತ ಸೆಮಿಫೈನಲ್‌ ಪ್ರವೇಶ

Date:

ಐಸಿಸಿ ಏಕದಿನ ವಿಶ್ವಕಪ್‌ 2023ರ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್‌ ಬೌಲಿಂಗ್‌ ದಾಳಿಗೆ  ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಬ್ಯಾಟ್‌ ಬೀಸಲು ಸಾಧ್ಯವಾಗದೆ 302 ರನ್‌ಗಳ ದಾಖಲೆ ಅಂತರದಿಂದ ಸೋಲನ್ನು ಅನುಭವಿಸಿದರು.

- Advertisement -

ಮುಂಬೈನ್‌ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕುಸಾಲ್‌ ಮೆಂಡಿಸ್‌ ಸಾರಥ್ಯದ ಶ್ರೀಲಂಕಾ ತಂಡ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆದರು.  ಶ್ರೀಲಂಕಾ 11 ಬ್ಯಾಟ್ಸ್‌ಮನ್‌ಗಳಲ್ಲಿ  ಐವರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರೆ, ಇಬ್ಬರು 1 ರನ್‌ಗಳಿಗೆ ಪೆವಿಲಿಯನ್‌ಗೆ ತೆರಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಲಂಕಾ ಬೌಲರ್‌ಗಳನ್ನು ಧೂಳೀಪಟ ಮಾಡಿದ  ಮೊಹಮ್ಮದ್‌ ಶಮಿ  ವಿಶ್ವಕಪ್‌ ಟೂರ್ನಿಯಲ್ಲಿ ಎರಡನೇ ಬಾರಿ 5 ವಿಕೆಟ್ ಕಬಳಿಸಿದರು.  ಕೇವಲ ಮೂರು ಪಂದ್ಯಗಳಲ್ಲಿ 14 ವಿಕೆಟ್‌ ಕಿತ್ತು ದಾಖಲೆ ನಿರ್ಮಿಸಿದ್ದಾರೆ.

ಮತ್ತೊಬ್ಬ ವೇಗಿ ಮೊಹಮದ್‌ ಸಿರಾಜ್‌ 16/3 ವಿಕೆಟ್‌ ಉರಿಸಿದರೆ, ಬುಮ್ರಾ 8/1 ಹಾಗೂ ರವೀಂದ್ರ ಜಡೇಜಾ 4/1 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಸತತ 7 ಗೆಲುವು ದಾಖಲಿಸಿರುವ ಭಾರತ ಮತ್ತೊಂದು ದಾಖಲೆ ನಿರ್ಮಿಸಿತು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವುದರ ಜೊತೆಗೆ ಸೆಮಿಫೈನಲ್‌ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಶ್ರೇಯಸ್‌, ಗಿಲ್‌, ವಿರಾಟ್ ಅರ್ಧ ಶತಕ

ಮೊದಲು ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್‌ ಆಹ್ವಾನಿಸಿದರು.

ಬ್ಯಾಟಿಂಗ್‌ ಆರಂಭಿಸಿದ ಮೊದಲ ಓವರ್‌ನಲ್ಲಿ ಲಂಕಾ ವೇಗಿ ಮಧುಶಂಕಾ ನಾಯಕ ರೋಹಿತ್‌ ಶರ್ಮಾ(4) ಅವರನ್ನು ಬೌಲ್ಡ್‌ ಮಾಡಿ ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು.

ನಂತರ ಎರಡನೇ ವಿಕೆಟ್‌ಗೆ ವಿರಾಟ್‌ ಕೊಹ್ಲಿ ಅತ್ಯುತ್ತಮ 189 ರನ್‌ಗಳ ಜೊತೆಯಾಟವಾಡಿದ ಉದಯೋನ್ಮುಖ ಆಟಗಾರ ಶುಭಮನ್‌ ಗಿಲ್‌ 92 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 92 ರನ್‌ ಗಳಿಸಿ 8 ರನ್‌ನಿಂದ ಶತಕ ತಪ್ಪಿಸಿಕೊಂಡರು.

ಕೊಹ್ಲಿ ದಾಖಲೆ

ಶುಭಮನ್‌ ಔಟಾದ ಎರಡು ಓವರ್‌ಗಳ ತರುವಾಯು 88 ರನ್‌ ಗಳಿಸಿದ್ದ ವಿರಾಟ್‌ ಕೊಹ್ಲಿ ಕೂಡ ಔಟಾದರು. 94 ಚೆಂಡುಗಳ ಅವರ ಆಟದಲ್ಲಿ 11 ಬೌಂಡರಿಗಳಿದ್ದವು. ಕೊಹ್ಲಿ ಈ ಪಂದ್ಯದಲ್ಲಿ ಸಂಗಕ್ಕರ, ಶಕೀಬ್‌ ಹಾಗೂ ರೋಹಿತ್‌ ದಾಖಲೆಯನ್ನು ಸರಿಗಟ್ಟಿದರು.

ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇ ರಿದರು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು 21 ಬಾರಿ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 13ನೇ ಬಾರಿ ಈ ಸಾಧನೆ ಮಾಡಿದರು.

ಶ್ರೀಲಂಕಾದ ಕುಮಾರ ಸಂಗಕ್ಕರ, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಮತ್ತು ಭಾರತದ ರೋಹಿತ್ ಶರ್ಮ ಅವರು 12 ಬಾರಿ 50ಕ್ಕಿಂತ ಹೆಚ್ಚು ರನ್‌ಗಳಿಸಿದ್ದಾರೆ.

ಶುಭಮನ್‌ ಹಾಗೂ ವಿರಾಟ್‌ ಪೆವಿಲಿಯನ್‌ಗೆ ತೆರಳಿದ ನಂತರ ಶ್ರೇಯಸ್‌ ಅಯ್ಯರ್ ಬಿರುಸಿನ ಆಟವಾಡಿದರು. 56 ಚೆಂಡುಗಳಲ್ಲಿ 6 ಸಿಕ್ಸರ್‌ ಹಾಗೂ 3 ಬೌಂಡರಿ ಸಹಿತ 82 ಚಚ್ಚಿದರು. ಕೊನೆಯಲ್ಲಿ ರವೀಂದ್ರ ಜಡೇಜಾ 24 ಎಸೆತಗಳಲ್ಲಿ 1 ಸಿಕ್ಸರ್‌ 1 ಬೌಂಡರಿಯೊಂದಿಗೆ 35 ರನ್‌ ಬಾರಿಸಿದರು.

ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 357 ರನ್‌ ಕಲೆ ಹಾಕಿತು.

ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 80 ರನ್‌ ಕೊಟ್ಟರು ಪ್ರಮುಖ 5 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...