ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ ಇಂದಿಗೂ ಜೀವಂತ!

Date:

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸಾರ್ವಭೌಮತ್ವವನ್ನು ಸ್ವೀಕರಿಸಲು ನಿರಾಕರಿಸಿ, ಅದರ ವಿರುದ್ಧ ಹೋರಾಡಿದ ವೀರ ವೆಂಕಟಪ್ಪ ನಾಯಕನ ಐತಿಹಾಸಿಕ ಸಂಸ್ಥಾನವಾಗಿರುವ ಸುರಪುರದಲ್ಲೇ ಇಂದಿಗೂ ಅಸ್ಪೃಶ್ಯತೆಯ ಆಚರಣೆ ಜೀವಂತವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದಲ್ಲಿ ದಲಿತ ಸಮುದಾಯದ ಜನರು ಹಲವು ವರ್ಷಗಳಿಂದ ಜಾತಿ ತಾರತಮ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೂಲಭೂತ ಮಾನವ ಹಕ್ಕುಗಳ ನಿರಾಕರಣೆಯನ್ನು ಎದುರಿಸುತ್ತಿದ್ದಾರೆ ಎಂಬ ಗಂಭೀರ ಸಂಗತಿಗಳು ಬೆಳಕಿಗೆ ಬಂದಿವೆ.

- Advertisement -

ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಿಸಿಕೊಳ್ಳಲು, ಬಳೆ ಹಾಕಿಸಿಕೊಳ್ಳಲು, ಬಟ್ಟೆ ಹೊಲಿಸಿಕೊಳ್ಳಲು ಹಾಗೂ ಹೋಟೆಲ್‌ಗಳಿಗೆ ಪ್ರವೇಶಿಸಲು ನಿರ್ಬಂಧವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದಲಿತ ಕುಟುಂಬಗಳಲ್ಲಿ ಸಾವು ಸಂಭವಿಸಿದಾಗ ಅಂತ್ಯಕ್ರಿಯೆಗೆ ಆಗಮಿಸುವ ಸಂಬಂಧಿಕರಿಗೆ ಚಹಾ, ನೀರು ನೀಡದಂತೆ ತಡೆಯಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಹೋಟೆಲ್‌ಗಳನ್ನು ಮುಚ್ಚಲಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಂತ್ಯಕ್ರಿಯೆಗೆ ಬಂದ ಸಂಬಂಧಿಕರು ಊರಿನ ಪರಿಸ್ಥಿತಿಯನ್ನು ಕಂಡು ಪ್ರಶ್ನಿಸುವಂತಾಗಿದೆ ಎಂದು ಗ್ರಾಮಸ್ಥರು ನೋವು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

ನೀರು, ಹಿಟ್ಟು, ಬಳೆ, ಕ್ಷೌರದಲ್ಲೂ ಜಾತಿ ತಾರತಮ್ಯ!

ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ದಲಿತರು ತಮ್ಮ ಪಾತ್ರೆಗಳನ್ನು ನೇರವಾಗಿ ಮುಟ್ಟಲು ಅವಕಾಶವಿಲ್ಲ. ಮೇಲಿನಿಂದ ಡಬ್ಬಿಗೆ ಹಿಟ್ಟು ಸುರಿಯಲಾಗುತ್ತದೆ. ನೀರು ಪಡೆಯಲು ಹೋದಾಗಲೂ ಪಾತ್ರೆಗಳಿಗೆ ಮೇಲಿನಿಂದ ನೀರು ಸುರಿಯುತ್ತಾರೆ. ಮಕ್ಕಳಿಗೂ ಇದೇ ರೀತಿಯ ವರ್ತನೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಬಳೆಗಾರರು ದಲಿತರ ಓಣಿಗೆ ಬಂದು ಬಳೆ ಹಾಕಿದರೂ, ಸವರ್ಣೀಯರು ಅವರನ್ನು ಪ್ರಶ್ನಿಸಿ, ದಲಿತರಿಗೆ ಬಳೆ ಹಾಕಿದರೆ ತಮ್ಮನ್ನು ಮುಟ್ಟಿಕೊಳ್ಳಬಾರದು ಎಂದು ಎಚ್ಚರಿಸುತ್ತಾರೆ. ಇದರಿಂದ ಬಳೆಗಾರರು ದಲಿತರಿಗೆ ಬಳೆ ಹಾಕುವುದನ್ನೇ ನಿಲ್ಲಿಸಿದ್ದಾರೆ. ಬಳೆ ಹಾಕಿಸಿಕೊಳ್ಳಲು ದಲಿತ ಮಹಿಳೆಯರು ಸುರಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕ್ಷೌರದ ವಿಚಾರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಗ್ರಾಮಕ್ಕೆ ಹೊರಗಿನಿಂದ ಬರುತ್ತಿದ್ದ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಿದರೆ ಸವರ್ಣೀಯರು ಅವರೊಂದಿಗೆ ಜಗಳವಾಡಿ, ದಲಿತರಿಗೆ ಕ್ಷೌರ ಮಾಡದಂತೆ ತಡೆಯುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದಲಿತರಿಗೆ ಕ್ಷೌರ ಮಾಡುತ್ತಿದ್ದ ಸ್ಥಳೀಯ ಕ್ಷೌರಿಕನನ್ನೂ ಇದೇ ರೀತಿಯಲ್ಲಿ ತಡೆಯಲಾಗಿದೆ ಎಂಬ ಆರೋಪವಿದೆ.

ದೇವಸ್ಥಾನ ಪ್ರವೇಶಕ್ಕೂ ನಿರ್ಬಂಧ!

ಗ್ರಾಮದಲ್ಲಿ ಮದುವೆಯಾದ ನವಜೋಡಿಗಳು ದೇವಸ್ಥಾನದ ಒಳಗೆ ಪ್ರವೇಶಿಸಲು ಅವಕಾಶವಿಲ್ಲದೆ ಹೊರಗಡೆ ನಿಂತು ಆಶೀರ್ವಾದ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಭಜನೆ, ಪೂಜೆಯ ಸಂದರ್ಭದಲ್ಲಿಯೂ ದಲಿತರನ್ನು ದೂರವಿಡಲಾಗುತ್ತದೆ. ಜಾತಿಯ ಕಾರಣಕ್ಕೆ ನೀರು ನೀಡಲು ನಿರಾಕರಿಸುವ ಘಟನೆಗಳು ನಡೆಯುತ್ತಿವೆ ಎಂದು ವೃದ್ಧರು ಅಳಲು ತೋಡಿಕೊಂಡಿದ್ದಾರೆ.

ಶಾಲೆಗೆ ತೆರಳುವ ದಲಿತ ಮಕ್ಕಳು ತಮ್ಮ ಪ್ಲೇಟುಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಗ್ರಾಮದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಇದ್ದು, ಅದರಲ್ಲಿ ಸಾಮಾನ್ಯ ವರ್ಗದವರು ಸುಮಾರು 1,000 ಮಂದಿ ಹಾಗೂ ದಲಿತ ಸಮುದಾಯದವರು ಅಂದಾಜು 230 ಕುಟುಂಬಗಳಿದ್ದು, 1,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. (ಜನಸಂಖ್ಯೆಯ ಅಂಕಿಅಂಶಗಳ ಅಧಿಕೃತ ದೃಢೀಕರಣ ಅಗತ್ಯವಿದೆ.)

ಅಧಿಕಾರಿಗಳಿಗೆ ದೂರು ನೀಡಿದರೂ ಬದಲಾವಣೆ ಇಲ್ಲ: ರಾಮಪ್ಪ ಕೊರಿ

ಈದಿನ.ಕಾಮ್‌ನೊಂದಿಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡ ಹಾಗೂ ಗ್ರಾಮಸ್ಥ ರಾಮಪ್ಪ ಕೊರಿ, “ಜಾತಿಯ ಹೆಸರಿನಲ್ಲಿ ನಮ್ಮನ್ನು ಕಟ್ಟಿಹಾಕಲಾಗಿದೆ. ಗ್ರಾಮದಲ್ಲಿ ನಮಗೆ ಸ್ವತಂತ್ರವಾಗಿ ಬದುಕುವ ಅವಕಾಶವೇ ಇಲ್ಲ. 2021ರಲ್ಲಿಯೇ ಅಸ್ಪೃಶ್ಯತೆ ಆಚರಣೆ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ. ಅಧಿಕಾರಿಗಳು ತಿಳಿವಳಿಕೆ ನೀಡಿದರೂ ಆಚರಣೆ ನಿಂತಿಲ್ಲ. ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದೇನೆ” ಎಂದು ತಿಳಿಸಿದರು.

“ಅಧಿಕಾರಿಗಳು ನಮ್ಮ ಆರೋಪಗಳನ್ನು ಸುಳ್ಳೆಂದು ಭಾವಿಸಬಾರದು ಎಂಬ ಕಾರಣಕ್ಕೆ ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿ ಸಲ್ಲಿಸಿದ್ದೇವೆ. ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು. ಸವರ್ಣೀಯರು ಜಾತಿ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಮತ್ತೆ ಇಂತಹ ಘಟನೆಗಳು ನಡೆದರೆ ಸಾಮೂಹಿಕ ಸಂಘಟನೆಗಳನ್ನು ಒಗ್ಗೂಡಿಸಿ ಅಸ್ಪೃಶ್ಯತೆಯ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.

“ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಜಾತಿ ತಾರತಮ್ಯದಿಂದ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

18 ಕಿ.ಮೀ. ದೂರದ ಸುರಪುರಕ್ಕೆ ಹೋಗುವ ಅನಿವಾರ್ಯತೆ

ಗ್ರಾಮಸ್ಥ ಮಾರುತಿ ಮಾತನಾಡಿ, “ಸವರ್ಣೀಯರು ನಮ್ಮನ್ನು ಮನುಷ್ಯರಂತೆ ಕಾಣಬೇಕು. ಸಾರ್ವಜನಿಕ ಸ್ಥಳಗಳು, ಹೋಟೆಲ್‌ಗಳು ಹಾಗೂ ದೇವಸ್ಥಾನಗಳಲ್ಲಿ ನಮಗೆ ಸಮಾನ ಪ್ರವೇಶ ಕಲ್ಪಿಸಬೇಕು. ಜಾತಿಯ ಆಧಾರದ ಮೇಲೆ ನಮ್ಮನ್ನು ದೂರವಿಡುವುದು ನಿಲ್ಲಬೇಕು” ಎಂದು ಒತ್ತಾಯಿಸಿದರು.

ದಲಿತ ಸಮುದಾಯದ ಶಾಂತಪ್ಪ ಮಾತನಾಡಿ, “ನಮ್ಮ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೆ ನಾಲ್ಕು ಕ್ಷೌರಿಕರು ಬರುತ್ತಿದ್ದರು. ನಮ್ಮ ಸಮುದಾಯದವರಿಗೆ ಕ್ಷೌರ ಮಾಡಿದರೆ ಸವರ್ಣೀಯರು ಅವರೊಂದಿಗೆ ಜಗಳವಾಡಿ ತಡೆಯುತ್ತಿದ್ದರು. ಈಗ ನಾವು ಮತ್ತು ನಮ್ಮ ಮಕ್ಕಳು ಕ್ಷೌರ ಮಾಡಿಸಿಕೊಳ್ಳಲು 18 ಕಿ.ಮೀ. ದೂರದ ಸುರಪುರಕ್ಕೆ ಹೋಗಬೇಕಾಗಿದೆ. ನಾವು ಬಡವರು, ಉದ್ಯೋಗವೂ ಇಲ್ಲ. ಪ್ರತಿಯೊಂದು ಸಣ್ಣ ಅಗತ್ಯಕ್ಕೂ ಸುರಪುರಕ್ಕೆ ಹೋಗಬೇಕಾದ್ದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ” ಎಂದು ಅಳಲು ತೋಡಿಕೊಂಡರು.

“ಹೋಟೆಲ್‌ಗಳಲ್ಲಿ ಪ್ರವೇಶವಿಲ್ಲ. ನಮ್ಮ ಮನೆಗಳಲ್ಲಿ ಸಾವು ಸಂಭವಿಸಿದಾಗ ಹೋಟೆಲ್‌ಗಳನ್ನು ಮುಚ್ಚುತ್ತಾರೆ. ನೀರು ಕೇಳಿದರೆ ಮೇಲಿನಿಂದ ಸುರಿಯುತ್ತಾರೆ. ಬಳೆ ಹಾಕಿಸಿಕೊಳ್ಳಲು ಕೂಡ ಸುರಪುರಕ್ಕೆ ಹೋಗಬೇಕಾಗಿದೆ. ಈ ತಾರತಮ್ಯದಿಂದ ನಾವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ” ಎಂದು ಮತ್ತೊಬ್ಬ ಗ್ರಾಮಸ್ಥರು ತಿಳಿಸಿದರು.

ವೃದ್ಧರ ನೋವು: ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ

ದಲಿತ ಸಮುದಾಯದ ವೃದ್ಧೆ ಹಣಮಂತಿ ಮಾತನಾಡಿ, “ನಾವು ಕೀಳು ಜಾತಿಯವರು ಎಂಬ ಕಾರಣಕ್ಕೆ ಯಾರೂ ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ. ಭಜನೆ ಮತ್ತು ಪೂಜೆಯ ಸಂದರ್ಭದಲ್ಲಿಯೂ ದೂರವಿಡುತ್ತಾರೆ. ನೀರು ಕೊಡಲು ಕೂಡ ನಿರಾಕರಿಸುತ್ತಾರೆ” ಎಂದು ನೋವು ವ್ಯಕ್ತಪಡಿಸಿದರು.

ವೃದ್ಧೆ ಯಲ್ಲಮ್ಮ ಮಾತನಾಡಿ, “ಹಿಟ್ಟಿನ ಗಿರಣಿಯಲ್ಲಿ ನಮ್ಮ ಡಬ್ಬಿಗಳನ್ನು ಮುಟ್ಟುವುದಿಲ್ಲ. ಅವರೇ ಮೇಲಿನಿಂದ ಹಿಟ್ಟು ಹಾಕುತ್ತಾರೆ. ನಮ್ಮ ಮಕ್ಕಳು ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ನಮ್ಮ ಮಕ್ಕಳ ಸಂಖ್ಯೆ ಕಡಿಮೆ. ಅವರಿಗೆ ಏನಾದರೂ ತೊಂದರೆ ಮಾಡಬಹುದು ಎಂಬ ಭಯ ನಮಗಿದೆ. ಸರ್ಕಾರ ನಮ್ಮ ಕುಟುಂಬಗಳಿಗೆ ರಕ್ಷಣೆ ನೀಡಬೇಕು” ಎಂದು ಮನವಿ ಮಾಡಿದರು.

ಅಸ್ಪೃಶ್ಯತೆ ವಿರುದ್ಧ ಕಾನೂನು ಕ್ರಮದ ಜೊತೆಗೆ ಸಾಮಾಜಿಕ ಪರಿವರ್ತನೆಯೂ ಅಗತ್ಯ

ಅಸ್ಪೃಶ್ಯತೆ ಆಚರಣೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿರುವುದು ಕಾನೂನು ಕ್ರಮದ ಮಹತ್ವವನ್ನು ತೋರಿಸುತ್ತದೆ. ಆದರೆ ಪ್ರಕರಣ ದಾಖಲಿಸುವುದಷ್ಟೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಜಾತಿ ತಾರತಮ್ಯ ಮರುಕಳಿಸದಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ದಲಿತ ಕುಟುಂಬಗಳಿಗೆ ರಕ್ಷಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಮಾನ ಪ್ರವೇಶ ಹಾಗೂ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು.

ಜಾತಿ ಮೇಲು-ಕೀಳು ಎಂಬ ಮನೋಭಾವದಿಂದ ಸಂಘರ್ಷ ಮತ್ತು ದ್ವೇಷ ಬೆಳೆಸುವ ಬದಲು, ಎಲ್ಲರೂ ಒಂದೇ ಮಾನವ ಸಮುದಾಯದವರು ಎಂಬ ಅರಿವು ಮೂಡಿಸಬೇಕಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಹಾಗೂ ಸಮಾನತೆಯ ಆಧಾರದ ಮೇಲೆ ಸಹಬಾಳ್ವೆ ನಡೆಸುವ ವಾತಾವರಣ ನಿರ್ಮಾಣವಾಗಬೇಕು.

ವೀರ ವೆಂಕಟಪ್ಪ ನಾಯಕನ ಹೋರಾಟದ ನೆಲದಲ್ಲಿ ಅಸ್ಪೃಶ್ಯತೆಯ ಗೋಡೆಗಳು ಇನ್ನೂ ಉಳಿದಿರುವುದು ಸಮಾಜದ ಆತ್ಮಾವಲೋಕನಕ್ಕೆ ಕಾರಣವಾಗಬೇಕಿದೆ. ಸಂವಿಧಾನ ನೀಡಿರುವ ಸಮಾನತೆಯ ಹಕ್ಕು ಸೂಗೂರಿನ ಪ್ರತಿಯೊಬ್ಬ ದಲಿತನಿಗೂ ನಿಜ ಜೀವನದಲ್ಲಿ ದೊರೆಯುವ ದಿನವೇ ನಿಜವಾದ ಸ್ವಾತಂತ್ರ್ಯದ ಅರ್ಥ ಸಾಕಾರವಾಗಲಿದೆ

WhatsApp Image 2026 05 02 at 12.01.27 e1777704270988
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಗಾಗಲೇ ಮುಕ್ತಾಯಗೊಂಡ ನೇಮಕಾತಿಗಳಿಗೆ ‘ಕೆನೆಪದರ’ ಮಾರ್ಚ್ 11ರ ತೀರ್ಪು ಅನ್ವಯಿಸಲ್ಲ: ಸುಪ್ರೀಂ ಕೋರ್ಟ್

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ‘ಕೆನೆಪದರ’ (Creamy Layer) ನಿರ್ಧಾರಕ್ಕೆ ಸಂಬಂಧಿಸಿದಂತೆ...

ನಕಲಿ ಎನ್‌ಕೌಂಟರ್ ಭೀತಿ: ಬುಲೆಟ್ ಪ್ರೂಫ್ ಜಾಕೆಟ್‌ ಕೋರಿ ಕೊಲೆ ಆರೋಪಿಗಳಿಂದ ನ್ಯಾಯಾಲಯದ ಮೊರೆ

ಉತ್ತರ ಪ್ರದೇಶ ಪೊಲೀಸರಿಂದ 'ನಕಲಿ ಎನ್‌ಕೌಂಟರ್' ನಡೆಯುವ ಭೀತಿಯಿಂದಾಗಿ, ಹರ್ಯಾಣದ ಗಾಯಕ...

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಕಾರವಾರದಲ್ಲಿ ದಸಂಸ ಬೃಹತ್ ಪ್ರತಿಭಟನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸಿ,...

ವಿಜಯಪುರ | ಕೃಷ್ಣಾ ನದಿಯಿಂದ ಉಜ್ಜನಿ ಅಣೆಕಟ್ಟಿಗೆ 40 ಟಿಎಂಸಿ ನೀರು: ರೈತ ಸಂಘದ ತೀವ್ರ ವಿರೋಧ

ಕೃಷ್ಣಾ ನದಿಯಿಂದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹಾರಾಷ್ಟ್ರದ ಉಜ್ಜನಿ ಅಣೆಕಟ್ಟಿಗೆ...