52 ಎಸೆತಗಳಲ್ಲಿ 148 ರನ್ ಸಿಡಿಸಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ

Date:

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯವೊಂದರಲ್ಲಿ ಭಾನುವಾರ ಪಂಜಾಬ್ ತಂಡದಲ್ಲಿ ಆಡುತ್ತಿರುವ ಭಾರತೀಯ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 52 ಎಸೆತಗಳಲ್ಲಿ 148 ರನ್‌ ಗಳನ್ನು ಬಾರಿಸಿದ್ದಾರೆ.

- Advertisement -

ಅಭಿಷೇಕ್‌ ಅವರ ಬೃಹತ್ ಇನಿಂಗ್ಸ್‌ನ ನೆರವಿನಿಂದ ಪಂಜಾಬ್ ತಂಡವು ಬಂಗಾಳದ ವಿರುದ್ಧ 20 ಓವರ್‌ಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನು ಕಳೆದುಕೊಂಡು 310 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ಜಾನಪದ ಪರಂಪರೆಯನ್ನು ಜೀವಂತವಾಗಿರಿಸಿದ ಚಾಮರಾಜನಗರದ ಗೌರಮ್ಮ

ಹಳ್ಳಿಗಳ ಮಣ್ಣಿನ ಸೊಗಡು, ಮಹಿಳೆಯರ ಬದುಕಿನ ಅನುಭವ, ಕುಟುಂಬದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಡಿನ ಮೂಲಕ ಅಭಿವ್ಯಕ್ತಿಸುವ ಸೋಬಾನೆ ಪದಗಳ ಗಾಯನಕ್ಕೆ ದಶಕಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಚಾಮರಾಜನಗರದ ಹಿರಿಯ ಜಾನಪದ...

ನವೆಂಬರ್ 1 | ಕರ್ನಾಟಕ ರಾಜ್ಯೋತ್ಸವ ಮಾತ್ರವಲ್ಲ; ಭಾರತದ...

ನವೆಂಬರ್ 1 ಕನ್ನಡಿಗರ ಹೆಮ್ಮೆಯ ಕರ್ನಾಟಕ ರಾಜ್ಯೋತ್ಸವ. ಇದೇ ದಿನ ದೇಶದ ಎಂಟು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ರಚನೆ, ಮರುರಚನೆ ಹಾಗೂ ವಿಮೋಚನೆಯ ಇತಿಹಾಸವೂ ಇದೆ. ಭಾಷಾವಾರು ರಾಜ್ಯಗಳಿಗಾಗಿ ನಡೆದ...

ರಾಜ್ಯೋತ್ಸವ ವಿಶೇಷ | ಕನ್ನಡಕ್ಕೊಂದು ವಿಜ್ಞಾನದ ಓದು

ವಿಜ್ಞಾನ ಓದು ಎಂದರೇನು? ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದ್ದೊಂದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ...

ಪಂದ್ಯದಲ್ಲಿ ಪಂಜಾಬ್ ಬಂಗಾಳ ತಂಡವನ್ನು 112 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದೆ.

ಮೊದಲ ಎಸೆತದಿಂದಲೇ ಆಕ್ರಮಣಕ್ಕಿಳಿದ ಅಭಿಷೇಕ್ ಕೇವಲ 12 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದರು. ಇದು ಪುರುಷರ ಟಿ20 ಕ್ರಿಕೆಟ್‌ನ ಜಂಟಿ ಮೂರನೇ ಅತಿವೇಗದ ಅರ್ಧ ಶತಕವಾಗಿದೆ ಹಾಗೂ ಭಾರತೀಯನೊಬ್ಬನ ಜಂಟಿ ಎರಡನೇ ಅತಿ ವೇಗದ ಅರ್ಧ ಶತಕವಾಗಿದೆ.

ಅಭಿಷೇಕ್‌ ಐದು ಬೌಂಡರಿಗಳು ಮತ್ತು ಐದು ಸಿಕ್ಸರ್‌ ಗಳನ್ನು ಸಿಡಿಸಿದರು.

ಬಳಿಕ, ಅವರು 32 ಎಸೆತಗಳಲ್ಲಿ ಶತಕ ಬಾರಿಸಿದರು. ಅದರಲ್ಲಿ 11 ಸಿಕ್ಸರ್‌ ಗಳು ಮತ್ತು ಏಳು ಬೌಂಡರಿಗಳಿದ್ದವು.

ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | KSCA ಕ್ರೀಡಾಂಗಣದ ಶಿಲ್ಪಿ- ಎಂ ಚಿನ್ನಸ್ವಾಮಿ

ಇದು ಭಾರತೀಯನೊಬ್ಬನ ಮೂರನೇ ಅತಿ ವೇಗದ ಟಿ20 ಶತಕವಾಗಿದೆ. ಭಾರತೀಯನೊಬ್ಬನ ಎರಡನೇ ಅತಿ ವೇಗದ ಟಿ20 ಶಕತದ ದಾಖಲೆಯನ್ನೂ ಅಭಿಷೇಕ್ ಈಗಾಗಲೇ ಹೊಂದಿದ್ದಾರೆ. ಅವರು 28 ಎಸೆತಗಳಲ್ಲಿ ಟಿ20 ಶತಕವನ್ನು ಇದಕ್ಕೆ ಮುನ್ನವೇ ಬಾರಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ ಗಳಲ್ಲಿ 5 ವಿಕೆಟ್‌ ಗಳ ನಷ್ಟಕ್ಕೆ 310 ರನ್ ಗಳಿಸಿತು. ಇದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತವಾಗಿದೆ. 2024ರ ಡಿಸೆಂಬರ್ನಲ್ಲಿ, ಇಂದೋರ್‌ನಲ್ಲಿ ಸಿಕ್ಕಿಮ್ ವಿರುದ್ಧ ಬರೋಡ ತಂಡವು ಐದು ವಿಕೆಟ್‌ ಗಳ ನಷ್ಟಕ್ಕೆ 349 ರನ್ ಗಳಿಸಿತ್ತು. ಇದು ಗರಿಷ್ಠ ಮೊತ್ತವಾಗಿದೆ.

ಆರಂಭಿಕ ಆಟಗಾರ ಪ್ರಭ್ಮಾನ್ ಸಿಂಗ್ 35 ಎಸೆತಗಳಲ್ಲಿ 70 ರನ್‌ ಗಳನ್ನು ಸಿಡಿಸಿದರು.

ಬಳಿಕ, ಗೆಲುವಿಗೆ 311 ರನ್‌ ಗಳ ಗುರಿಯನ್ನು ಬೆಂನ್ನಟ್ಟಿದ ಬಂಗಾಳಕ್ಕೆ 20 ಓವರ್‌ ಗಳಲ್ಲಿ 9 ವಿಕೆಟ್‌ ಗಳ ನಷ್ಟಕ್ಕೆ 198 ರನ್‌ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ನಾಯಕ ಅಭಿಮನ್ಯು ಈಶ್ವರನ್ 66 ಎಸೆತಗಳಲ್ಲಿ 130 ರನ್ ಗಳಿಸಿ ಅಜೇಯವಾಗಿ ಉಳಿದರು. ಆಕಾಶ್ ದೀಪ್ 31 ರನ್‌ ಗಳ ಕೊಡುಗೆಯನ್ನು ನೀಡಿದರು.

ಪಂಜಾಬ್ ತಂಡದ ಹರ್ಪ್ರೀತ್ ಬ್ರಾರ್ 23 ರನ್‌ ಗಳನ್ನು ನೀಡಿ 4 ವಿಕೆಟ್‌ ಗಳನ್ನು ಗಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾವಲ್ಪಿಂಡಿಯಲ್ಲಿ ದಾಖಲೆಗಳ ಸುರಿಮಳೆ: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಐತಿಹಾಸಿಕ ಜಯ

ಪಾಕಿಸ್ತಾನದ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ 2026ರ ಅಕ್ಟೋಬರ್ 22ರಂದು ನಡೆದ ಏಕದಿನ ತ್ರಿಕೋನ...

ಏಷ್ಯನ್ ಪ್ಯಾರಾ ಗೇಮ್ಸ್: ಸಂದೀಪ್, ಹನಿಗೆ ವಿಶ್ವ ದಾಖಲೆಯ ಚಿನ್ನ; ಭಾರತಕ್ಕೆ 100ನೇ ಪದಕದ ಸಂಭ್ರಮ

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು...

ದಾಖಲೆಯ ರನ್ ಬೆನ್ನತ್ತಿದ ಭಾರತಕ್ಕೆ ಜಯ: ನ್ಯೂಜಿಲೆಂಡ್ ವಿರುದ್ಧ ಮಿಂಚಿದ ಸಂಜು ಸ್ಯಾಮ್ಸನ್

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ...

ಪ್ಯಾರಾ ಏಷ್ಯನ್ ಗೇಮ್ಸ್ 2026: ಒಂದೇ ದಿನ ಎರಡು ಚಿನ್ನದ ಪದಕ ಗೆದ್ದು ಬೀಗಿದ ಶೀತಲ್ ದೇವಿ

ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಆರ್ಚರಿ...