ಏಷ್ಯನ್ ಗೇಮ್ಸ್‌ | ಮುಂದುವರಿದ ಭಾರತೀಯರ ಚಿನ್ನದ ಬೇಟೆ: ಜಾವೆಲಿನ್, ಸ್ಟೀಪಲ್ ಚೇಸ್‌ನಲ್ಲಿ ಚಿನ್ನ

Date:

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಚಿನ್ನದ ಬೇಟೆಯನ್ನು ಮುಂದುವರೆಸಿದ್ದು, ಮಂಗಳವಾರ ಒಟ್ಟು ಎರಡು ಚಿನ್ನದ ಪದಕವನ್ನು ಗೆದ್ದಿದ್ದಾರೆ.

- Advertisement -

ಭಾರತದ ಅಥ್ಲೀಟ್ ಪಾರೂಲ್ ಚೌಧರಿ ಹಾಗೂ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI...

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’ (Retailers Association of India - RAI) ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆ ಡಿಜಿಟಲ್ ಆರ್ಥಿಕತೆಯನ್ನು ನುಚ್ಚುನೂರು...

ಕೊನೆಯ ಕ್ಷಣದಲ್ಲಿ ಜಪಾನ್‌ನ ಸ್ಪರ್ಧಿಯನ್ನು ಹಿಂದಿಕ್ಕಿದ ಪಾರೂಲ್ ಚೌಧರಿ

2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದು ಈ ಬಾರಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 5000 ಮೀಟರ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾರೂಲ್ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.

ಪಾರುಲ್ ಸ್ಪರ್ಧೆಯಲ್ಲಿ 50 ಮೀಟರ್‌ಗಳು ಇರುವವರೆಗೂ ಜಪಾನ್‌ನ ರಿರಿಕಾ ಅವರ ಹಿಂದೆಯೇ ಉಳಿದುಕೊಂಡಿದ್ದರು. ಆದರೆ ರೇಸ್‌ನ ಅಂತಿಮ ಹಂತದಲ್ಲಿ ರಿರಿಕಾ ಅವರನ್ನು ಪಾರುಲ್ ರೋಚಕವಾಗಿ ಹಿಂದಿಕ್ಕುವಲ್ಲಿ ಯಶಸ್ವಿಯಾದರು.

ಜಾವೆಲಿನ್‌ನಲ್ಲೂ ಚಿನ್ನ
ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಮಂಗಳವಾರ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದರು. ಆ ಮೂಲಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

31ರ ಹರೆಯದ ಅನ್ನು ರಾಣಿ, 19ನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 62.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2014ರ ಏಷ್ಯನ್ ಗೇಮ್ಸ್‌ನಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದಿದ್ದರು.

ಎರಡು ಚಿನ್ನ ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದ ಭಾರತ

ಇಬ್ಬರು ಚಿನ್ನದ ಪದಕವಲ್ಲದೇ, ಅಲ್ಲದೆ, ಮೊಹಮ್ಮದ್ ಅಫ್ಸಲ್ (ಪುರುಷರ 800 ಮೀ), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್), ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಂ (ಪುರುಷರ ಡಬಲ್ 1000 ಮೀ ಕ್ಯಾನೋ ಸ್ಪ್ರಿಂಟ್) ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.

ಪ್ರೀತಿ (ಮಹಿಳೆಯರ 54 ಕೆಜಿ ಬಾಕ್ಸಿಂಗ್), ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್), ನರೇಂದರ್ (ಪುರುಷರ +92 ಕೆಜಿ), ವಿತ್ಯಾ ರಾಮರಾಜ್ (ಮಹಿಳೆಯರ 400 ಮೀ ಹರ್ಡಲ್ಸ್)ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಈ ಮೂಲಕ ಈವರೆಗೆ ಭಾರತೀಯ ಕ್ರೀಡಾಪಟುಗಳು ಒಟ್ಟು 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಒಟ್ಟು 69 ಪದಕ ಗಳಿಸುವ ಮೂಲಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...

75ನೇ ವರ್ಷದ ಬಾಂಧವ್ಯ: ಭಾರತ-ಜಪಾನ್ ನಡುವೆ ಚೊಚ್ಚಲ ಟಿ20 ಕ್ರಿಕೆಟ್

ಭಾರತ ಹಾಗೂ ಜಪಾನ್ ನಡುವಿನ 75ನೇ ವರ್ಷದ ರಾಜತಾಂತ್ರಿಕ ಬಾಂಧವ್ಯದ ಸಂಭ್ರಮಾಚರಣೆಯ...

ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌ ಕೋಚ್!

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ...

ನೂರಾರು ವಿವಾದ, ಅದಕ್ಕೂ ಮೀರಿದ ಮನುಷ್ಯತ್ವ: ಮೆಸ್ಸಿಯ 21 ವರ್ಷದ ಪಯಣದತ್ತ ಒಂದು ಹಿನ್ನೋಟ

ಲಿಯೋನೆಲ್ ಮೆಸ್ಸಿ ಎಂಬ ದಂತಕಥೆಯನ್ನು ನಾವು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ನೋಡಬೇಕಾಗಿದೆ....