ಭಾನುಕಾ ರಾಜಪಕ್ಸೆ ಹಾಗೂ ನಾಯಕ ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ಐಪಿಎಲ್ 2023ರ 16ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ಗೆ 192 ರನ್‌ಗಳ ಸವಾಲಿನ ಗುರಿ ನೀಡಿದೆ.
ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ಪ್ರಭಸಿಮ್ರನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಜೋಡಿ ಮೊದಲ ವಿಕೆಟ್‌ಗೆ 2 ಓವರ್‌ಗಳಿಗೆ 23 ರನ್‌ಗಳ ಜತೆಯಾಟವಾಡಿದರು.
12 ಎಸೆತಗಳನ್ನು ಎದುರಿಸಿದ ಪ್ರಭಸಿಮ್ರನ್ ಸಿಂಗ್ 2 ಬೌಂಡರಿ, 2 ಸಿಕ್ಸರ್ ಸಿಡಿಸಿ 23 ರನ್ ಗಳಿಸಿ ಟಿಮ್ ಸೌಥಿಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಿರ್ಗಮಿಸಿದರು.
ನಂತರ ಆಗಮಿಸಿದ ಎರಡನೇ ಕ್ರಮಾಂಕದ ಆಟಗಾರ ಭಾನುಕಾ ರಾಜಪಕ್ಸೆ, ನಾಯಕ ಶಿಖರ್ ಧವನ್ ಅವರೊಂದಿಗೆ 55 ಎಸೆತಗಳಲ್ಲಿ 86 ರನ್‌ಗಳ ಜತೆಯಾಟವಾಡಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ರಾಜಪಕ್ಸೆ ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ನೊಂದಿಗೆ 50 ರನ್ ಸಿಡಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ನಡೆಸಿ 29 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 40 ರನ್ ಬಾರಿಸಿ ವರುಣ್‌ಗೆ ಬೌಲ್ಡ್ ಆದರು.
ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ (21), ಸಿಕಂದರ್ ರಾಜಾ (16) ಹಾಗೂ ಸ್ಯಾಮ್ ಕರ್ರನ್ (26) ಕೂಡ ಭರ್ಜರಿ ಬ್ಯಾಟಿಂಗ್ ಆಡಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆ ಹಾಕಿದರು.
ಕೆಕೆಆರ್ ಪರ ಟಿಮ್ ಸೌಥಿ 54/2, ಉಮೇಶ್ ಯಾದವ್, ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.