ಕಾಮನ್‌ವೆಲ್ತ್‌ ಗೇಮ್ಸ್: ಭಾರತದ ಪದಕಗಳ ಸಂಖ್ಯೆ 10ಕ್ಕೆ ಏರಿಕೆ; ಹೈಜಂಪ್‌ನಲ್ಲಿ ಸರ್ವೇಶ್, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶರ್ಮಿಳಾಗೆ ಐತಿಹಾಸಿಕ ಪದಕ

Date:

ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಐದನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದರೆ, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಶರ್ಮಿಳಾ ಧನಕರ್ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಥ್ಲೆಟಿಕ್ಸ್, ಪ್ಯಾರಾ ಅಥ್ಲೆಟಿಕ್ಸ್ ಹಾಗೂ ವೇಟ್‌ಲಿಫ್ಟಿಂಗ್ ವಿಭಾಗಗಳಲ್ಲಿ ಭಾರತ ಒಟ್ಟು ಆರು ಪದಕಗಳನ್ನು ತನ್ನದಾಗಿಸಿಕೊಂಡಿವೆ.

- Advertisement -

ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆ 2.25 ಮೀಟರ್ ಎತ್ತರ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದು ಕಾಮನ್‌ವೆಲ್ತ್ ಗೇಮ್ಸ್‌ನ ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊಟ್ಟಮೊದಲ ಬೆಳ್ಳಿ ಪದಕವಾಗಿದೆ. ಜಮೈಕಾದ ರೊಮೈನ್ ಬೆಕ್‌ಫೋರ್ಡ್ (2.25 ಮೀ) ಚಿನ್ನ ಗೆದ್ದರೆ, ಇಂಗ್ಲೆಂಡ್‌ನ ಜಾಕ್ ಕಿಮಾನಿ (2.20 ಮೀ) ಕಂಚಿನ ಪದಕ ಪಡೆದರು. ರಾಷ್ಟ್ರೀಯ ದಾಖಲೆ ಹೊಂದಿರುವ ಸರ್ವೇಶ್ 2.28 ಮೀಟರ್ ಯತ್ನದಲ್ಲಿ ವಿಫಲರಾದ ಕಾರಣ ಚಿನ್ನದ ಪದಕ ಕೈತಪ್ಪಿತು. ಮತ್ತೋರ್ವ ಭಾರತೀಯ ಆದರ್ಶ್ ರಾಮ್ 2.15 ಮೀಟರ್ ಜಿಗಿದು ಐದನೇ ಸ್ಥಾನ ಪಡೆದರು. ಆದರೆ, ತೇಜಸ್ವಿನ್ ಶಂಕರ್ 2.05 ಮೀಟರ್ ಜಿಗಿಯುವ ಮೊದಲ ಯತ್ನದಲ್ಲೇ ವಿಫಲರಾಗಿ, ಮುಂಬರುವ ಡೆಕಥ್ಲಾನ್ ಸ್ಪರ್ಧೆಯ ದೃಷ್ಟಿಯಿಂದ ಸ್ಪರ್ಧೆಯಿಂದ ಹಿಂದೆ ಸರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಭಾರತದ ಪ್ಯಾರಾ ಅಥ್ಲೆಟಿಕ್ಸ್ ತಂಡವು ಕ್ರೀಡಾಕೂಟದ ಅತ್ಯಂತ ಸ್ಮರಣೀಯ ಕ್ಷಣಗಳನ್ನು ನೀಡಿತು. ಮಹಿಳೆಯರ ಎಫ್‌57 ಶಾಟ್‌ಪುಟ್ ಸ್ಪರ್ಧೆಯಲ್ಲಿ ಶರ್ಮಿಳಾ ಧನಕರ್ 9.81 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಈ ಮೂಲಕ 20 ವರ್ಷಗಳ ಕಾಮನ್‌ವೆಲ್ತ್‌ ಪ್ಯಾರಾ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಇದಾಗಿದೆ.

ಇದೇ ಸ್ಪರ್ಧೆಯಲ್ಲಿ ಭಾರತದ ಶಿಲ್ಪಾ ಶೈಲಾ (7.26 ಮೀಟರ್) ಅವರಿಗೆ ಕಂಚಿನ ಪದಕ ಒಲಿದುಬಂದಿರುವುದು ಸಂಭ್ರಮವನ್ನು ಇಮ್ಮಡಿಗೊಳಿಸಿತು. ಆರಂಭದಲ್ಲಿ 4ನೇ ಸ್ಥಾನದಲ್ಲಿದ್ದ ಶಿಲ್ಪಾ, ನೈಜೀರಿಯಾದ ಆಟಗಾರ್ತಿಯ ಎಸೆತವನ್ನು ಅಸಿಂಧುಗೊಳಿಸುವಂತೆ ಭಾರತ ಸಲ್ಲಿಸಿದ ಯಶಸ್ವಿ ಮೇಲ್ಮನವಿಯ ನಂತರ ಈ ಕಂಚಿನ ಪದಕ ಪಡೆದರು.

ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಡುತ್ತಿರುವ ವೇಟ್‌ಲಿಫ್ಟಿಂಗ್‌ನಲ್ಲಿ ಐದನೇ ದಿನವೂ ಪದಕಗಳ ಬೇಟೆ ಮುಂದುವರೆಯಿತು. ಪುರುಷರ 79 ಕೆ.ಜಿ ವಿಭಾಗದಲ್ಲಿ ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ವಿರುದ್ಧ ತೀವ್ರ ಪೈಪೋಟಿ ನೀಡಿದ ಆಂಧ್ರಪ್ರದೇಶದ ವಲ್ಲೂರು ಅಜಯ ಬಾಬು, ಒಟ್ಟು 330 ಕೆ.ಜಿ (ಸ್ನ್ಯಾಚ್ 149 ಕೆ.ಜಿ, ಕ್ಲೀನ್ ಅಂಡ್ ಜರ್ಕ್ 181 ಕೆ.ಜಿ) ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು.

ಚಿನ್ನ ಗೆದ್ದ ಮಲೇಷ್ಯಾ ಸ್ಪರ್ಧಿಗಿಂತ ಕೇವಲ 1 ಕೆ.ಜಿ ಅಂತರದಿಂದ ಇವರು ಹಿಂದೆ ಉಳಿದರು. ಅಂತೆಯೇ, ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ 199 ಕೆ.ಜಿ ಎತ್ತುವ ಮೂಲಕ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರೆ, ಮಹಿಳೆಯರ 58 ಕೆ.ಜಿ ವಿಭಾಗದಲ್ಲಿ ಒಟ್ಟು 199 ಕೆ.ಜಿ (ಸ್ನ್ಯಾಚ್ 87 ಕೆ.ಜಿ, ಕ್ಲೀನ್ ಅಂಡ್ ಜರ್ಕ್ 112 ಕೆ.ಜಿ) ಎತ್ತುವ ಮೂಲಕ ಬಿಂದ್ಯಾರಾಣಿ ದೇವಿ ಕಂಚಿನ ಪದಕ ಪಡೆದರು. ಈ ಮೂರು ಪದಕಗಳೊಂದಿಗೆ ಗ್ಲಾಸ್ಗೊ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಿಂದಲೇ ಭಾರತಕ್ಕೆ ಒಟ್ಟು 6 ಪದಕಗಳು ಲಭಿಸಿವೆ.

ಬಾಕ್ಸಿಂಗ್ ಅಖಾಡದಲ್ಲಿ ಭಾರತದ ಉತ್ತಮ ಪ್ರದರ್ಶನ ಮುಂದುವರೆದಿದೆ. ಪುರುಷರ 60 ಕೆ.ಜಿ ವಿಭಾಗದಲ್ಲಿ ಸಚಿನ್ ಸಿವಾಚ್, 80 ಕೆ.ಜಿ ವಿಭಾಗದಲ್ಲಿ ಅಂಕುಶ್ ಮತ್ತು ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಚೌಧರಿ ತಮ್ಮ ಎದುರಾಳಿಗಳನ್ನು ಸುಲಭವಾಗಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಆದರೆ ಪುರುಷರ 70 ಕೆ.ಜಿ ವಿಭಾಗದಲ್ಲಿ ಸುಮಿತ್ 1-4 ಅಂತರದಿಂದ ಉತ್ತರ ಐರ್ಲೆಂಡ್‌ನ ಜಾನ್ ಮೆಕ್‌ಕಾನ್ನೆಲ್ ವಿರುದ್ಧ ವಿರೋಚಿತ ಸೋಲು ಕಂಡು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ, ಮೊದಲ ಯತ್ನದಲ್ಲೇ 8.01 ಮೀಟರ್ ದೂರ ಜಿಗಿದ ಎಂ. ಶ್ರೀಶಂಕರ್ ಮತ್ತು 7.77 ಮೀಟರ್ ಜಿಗಿದ ಲೋಕೇಶ್ ಸತ್ಯನಾಥನ್ ಪುರುಷರ ಲಾಂಗ್ ಜಂಪ್ ಫೈನಲ್‌ಗೆ ಅರ್ಹತೆ ಪಡೆದರು. 110 ಮೀಟರ್ ಹರ್ಡಲ್ಸ್ ಹೀಟ್ಸ್‌ನಲ್ಲಿ 13.76 ಸೆಕೆಂಡುಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದ ಭಾರತದ ಮೊದಲಿಗ ಎಂಬ ಇತಿಹಾಸ ನಿರ್ಮಿಸಿದ್ದ ತೇಜಸ್ ಶಿರ್ಸೆ, ಅಭ್ಯಾಸದ ವೇಳೆ ಕಾಲುನೋವಿಗೆ ತುತ್ತಾದ ಕಾರಣ ಫೈನಲ್‌ನಲ್ಲಿ 8ನೇ ಸ್ಥಾನಕ್ಕೆ (15.39 ಸೆ.) ತೃಪ್ತಿಪಡಬೇಕಾಯಿತು.

ಇತ್ತ 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಗುರಿಂದರ್ವೀರ್ ಸಿಂಗ್ 10.39 ಸೆಕೆಂಡುಗಳೊಂದಿಗೆ ಹೀಟ್ಸ್‌ನಲ್ಲಿ ಎರಡನೇ ಸ್ಥಾನ ಪಡೆದರೂ, ಒಟ್ಟಾರೆ 28ನೇ ಸ್ಥಾನ ಪಡೆದು ಸೆಮಿಫೈನಲ್‌ಗೇರುವ ಅವಕಾಶ ಕೈಚೆಲ್ಲಿದರು.

ಇತರ ಕ್ರೀಡಾ ಫಲಿತಾಂಶಗಳನ್ನು ಗಮನಿಸುವುದಾದರೆ, ಈಜಿನ ಪುರುಷರ 200 ಮೀಟರ್ ಬಟರ್‌ಫ್ಲೈ ಫೈನಲ್‌ನಲ್ಲಿ ಸಾಜನ್ ಪ್ರಕಾಶ್ (1:58.05) ಹಾಗೂ ಪುರುಷರ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಆರ್ಯನ್ ನೆಹ್ರಾ (8:07.26) 8ನೇ ಸ್ಥಾನ ಪಡೆದರು. ಪ್ಯಾರಾ ಈಜುಗಾರ ಸ್ವಾತಿಕ್ ಪಾಟೀಲ್ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 5ನೇ ಸ್ಥಾನ ಪಡೆದು ಪದಕದಿಂದ ವಂಚಿತರಾದರು.

ಮಹಿಳೆಯರ ಜಿಮ್ನಾಸ್ಟಿಕ್ಸ್ ವಾಲ್ಟ್ ಫೈನಲ್‌ನಲ್ಲಿ ಪ್ರತಿಷ್ಠಾ ಸಮಂತ್ 7ನೇ ಸ್ಥಾನ ಪಡೆದರೆ, ಲಾನ್ ಬೌಲ್ಸ್‌ನಲ್ಲಿ ಪುತುಲ್ ಸೊನೊವಾಲ್ ಸೆಮಿಫೈನಲ್ ತಲುಪುವಲ್ಲಿ ವಿಫಲರಾದರು. ಮಹಿಳಾ ವೀಲ್‌ಚೇರ್ ಬ್ಯಾಸ್ಕೆಟ್‌ಬಾಲ್ (3×3) ತಂಡವು ನೈಜೀರಿಯಾ ವಿರುದ್ಧ 6-7 ಅಂತರದ ರೋಚಕ ಸೋಲು ಕಂಡು, 1 ಗೆಲುವು ಹಾಗೂ 4 ಸೋಲಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...