IND vs ENG ODI | ಸರಣಿ ಗೆದ್ದ ಭಾರತದ ವನಿತೆಯರು; ಹರ್ಮನ್‌ಪ್ರೀತ್ ಶತಕ, ಕ್ರಾಂತಿ ಗೌಡ್‌ಗೆ 6 ವಿಕೆಟ್‌

Date:

ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 13 ರನ್‌ಗಳಿಂದ ರೋಚಕ ಜಯ ಗಳಿಸಿ, 2-1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಶತಕ (84 ಎಸೆತಗಳಲ್ಲಿ 102 ರನ್) ಮತ್ತು ಕ್ರಾಂತಿ ಗೌಡ್ ಅವರ ಅತ್ಯದ್ಭುತ ಬೌಲಿಂಗ್ (52ಕ್ಕೆ 6 ವಿಕೆಟ್) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

- Advertisement -

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಸ್ಮೃತಿ ಮಂದಾನ (45 ರನ್, 54 ಎಸೆತ) ಮತ್ತು ಪ್ರತೀಕಾ ರಾವಲ್ (26 ರನ್, 33 ಎಸೆತ) 64 ರನ್‌ಗಳ ಆರಂಭಿಕ ಜೊತೆಯಾಟ ನೀಡಿದರು. ಆದರೆ, ಐದು ಓವರ್‌ಗಳ ಅಂತರದಲ್ಲಿ ಈ ಇಬ್ಬರೂ ಔಟಾದರು. ಇದೇ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಹರ್ಮನ್‌ಪ್ರೀತ್ ಕೌರ್, ಹರ್ಲಿನ್ ಡಿಯೊಲ್ (45 ರನ್, 65 ಎಸೆತ) ಜೊತೆಗೆ 81 ರನ್‌ಗಳ ಮೂರನೇ ವಿಕೆಟ್ ಜೊತೆಯಾಟವನ್ನು ಮುಂದುವರಿಸಿದರು. ಲಾರೆನ್ ಬೆಲ್ ಹರ್ಲಿನ್‌ರನ್ನು ಔಟ್ ಮಾಡಿದರೂ, ಹರ್ಮನ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಏಳನೇ ಶತಕವನ್ನು ದಾಖಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಜೆಮಿಮಾ ರಾಡ್ರಿಗಸ್ (50 ರನ್, 45 ಎಸೆತ, 7 ಬೌಂಡರಿ) ಜೊತೆಗೆ ಹರ್ಮನ್ 110 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟವನ್ನು ಆಡಿದರು. ಆದರೆ, ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಲಾರೆನ್ ಫೈಲರ್ ಜೆಮಿಮಾರನ್ನು ಔಟ್ ಮಾಡಿದರು. ಕೊನೆಗೆ ರಿಚಾ ಘೋಷ್ (ಅಜೇಯ 38 ರನ್, 18 ಎಸೆತ, 3 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್‌ನಿಂದ ಭಾರತದ ಮೊತ್ತವನ್ನು 50 ಓವರ್‌ಗಳಲ್ಲಿ 5 ವಿಕೆಟ್‌ಗೆ 318 ರನ್‌ಗಳಿಗೆ ಕೊಂಡೊಯ್ದರು.

ಇದನ್ನು ಓದಿದ್ದೀರಾ? ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ಜಯಗಳಿಸಿದ್ದು ಹೇಗೆ? ಗೆಲುವಿಗೆ ತಂತ್ರ ರೂಪಿಸಿದ್ದು ಹೇಗಿತ್ತು?

319 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಕ್ರಾಂತಿ ಗೌಡ್‌ರ ಆರಂಭಿಕ ದಾಳಿಯಿಂದ ಆಘಾತವಾಯಿತು. 8 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಇಂಗ್ಲೆಂಡ್‌ಗೆ ಎಮ್ಮಾ ಲ್ಯಾಂಬ್ (68 ರನ್, 81 ಎಸೆತ, 5 ಬೌಂಡರಿ) ಮತ್ತು ನಾಯಕಿ ನ್ಯಾಟ್ ಸ್ಕಿವರ್‌ಬ್ರಂಟ್ (98 ರನ್, 11 ಬೌಂಡರಿ) 187 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟದ ಮೂಲಕ ಚೇತರಿಕೆಯ ಭರವಸೆ ಮೂಡಿಸಿದರು. ಆದರೆ, ಶತಕದಂಚಿನಲ್ಲಿದ್ದ ಬ್ರಂಟ್‌ರನ್ನು ಆಲ್‌ರೌಂಡರ್ ದೀಪ್ತಿ ಶರ್ಮಾ ಔಟ್ ಮಾಡಿದರು. ಕ್ರಾಂತಿ ಗೌಡ್‌ರ 6 ವಿಕೆಟ್‌ಗಳ ದಾಳಿಯಿಂದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 305 ರನ್‌ಗಳಿಗೆ ಆಲೌಟ್ ಆಗಿ, 13 ರನ್‌ಗಳಿಂದ ಸೋಲನ್ನು ಅನುಭವಿಸಿತು.

ಸಂಕ್ಷಿಪ್ತ ಸ್ಕೋರ್‌:

ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 (ಪ್ರತಿಕಾ ರಾವಲ್ 26, ಸ್ಮೃತಿ ಮಂದಾನ 45, ಹರ್ಲೀನ್ ಡಿಯೊಲ್ 45, ಹರ್ಮನ್‌ಪ್ರೀತ್ ಕೌರ್ 102, ಜೆಮಿಮಾ ರಾಡ್ರಿಗಸ್ 50, ರಿಚಾ ಘೋಷ್ ಔಟಾಗದೇ 38, ಲಾರೆನ್ ಬೆಲ್ 82ಕ್ಕೆ1, ಲಾರೆನ್ ಫೈಲರ್ 64ಕ್ಕೆ1, ಚಾರ್ಲೀ ಡೀನ್ 69ಕ್ಕೆ1)

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 (ಎಮ್ಮಾ ಲ್ಯಾಂಬ್‌ 68,ನ್ಯಾಟ್ ಸ್ಕಿವರ್‌ಬ್ರಂಟ್ 98,ಅಲೈಸ್ ಡೇವಿಡ್‌ಸನ್ ರಿಚರ್ಡ್ಸ್ 44, ಕ್ರಾಂತಿ ಗೌಡ್‌ 52ಕ್ಕೆ6, ಶ್ರೀ ಚರಣಿ 68ಕ್ಕೆ2)

ಫಲಿತಾಂಶ : ಭಾರತಕ್ಕೆ 13 ರನ್‌ಗಳ ಜಯ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...