103 ಡಿಗ್ರಿ ಜ್ವರದ ನಡುವೆಯೂ ‘ಸ್ಮೃತಿ’ ಪರಾಕ್ರಮ: ಆರ್‌ಸಿಬಿ ನಾಯಕಿಯ ಬದ್ಧತೆಗೆ ಎಲ್ಲಡೆ ಪ್ರಶಂಸೆ

Date:

ಮೈ ಸುಡುವ 103 ಡಿಗ್ರಿ ಜ್ವರ.. ವಿಪರೀತ ಸುಸ್ತು.. ಆದರೂ ಮೈದಾನಕ್ಕಿಳಿದು ಅಬ್ಬರಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕಿ ಸ್ಮೃತಿ ಮಂದಾನ, ತಂಡಕ್ಕೆ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಈ ಅಪ್ರತಿಮ ಆಟದ ಹಿಂದಿನ ರೋಚಕ ಸಂಗತಿಯನ್ನು ಕೋಚ್‌ ಮಲೋಲನ್ ರಂಗರಾಜನ್ ಬಹಿರಂಗಪಡಿಸಿದ್ದಾರೆ.

- Advertisement -

​ಬುಧವಾರ ವಡೋದರಾದಲ್ಲಿ ನಡೆದ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಹಂಚಿಕೊಂಡರು.
​
“ಫೈನಲ್‌ ಪಂದ್ಯದ ಹಿಂದಿನ ದಿನ (ಬುಧವಾರ ಸಂಜೆ) ಸ್ಮೃತಿ 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದರು. ವಿಪರೀತ ಫ್ಲೂ (ಶೀತಜ್ವರ) ಅವರನ್ನು ಬಾಧಿಸುತ್ತಿತ್ತು. ಇಷ್ಟೊಂದು ಅಸ್ವಸ್ಥರಾಗಿದ್ದರೂ ಅವರು ಇದನ್ನು ಎಲ್ಲಿಯೂ ತೋರಿಸಿಕೊಳ್ಳಲಿಲ್ಲ. ತಂಡದ ಇತರೆ ಆಟಗಾರ್ತಿಯರಿಗೂ ಈ ವಿಚಾರ ತಿಳಿದಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಮಧ್ಯಾಹ್ನ ನಾನು ಅವರ ಬಳಿ ಮಾತನಾಡಿದಾಗ, ‘ನನಗೆ ಯಾವುದೇ ಸಮಸ್ಯೆ ಇಲ್ಲ, ನಾನು ಆಡಲೇಬೇಕು, ಇಲ್ಲೇ ಇರುತ್ತೇನೆ’ ಎಂದು ಸ್ಮೃತಿ ಆತ್ಮವಿಶ್ವಾಸದಿಂದ ಹೇಳಿದರು. ಇದು ಅವರ ಆಟದ ಬದ್ಧತೆಯನ್ನು ತೋರಿಸುತ್ತದೆ,” ಎಂದು ರಂಗರಾಜನ್ ಭಾವುಕರಾಗಿ ನುಡಿದರು. ​ಕೋಚ್‌ ಈ ವಿಚಾರವನ್ನು ತಿಳಿಸಿದಾಗ, ತಂಡದ ಆಟಗಾರ್ತಿಯರು ಕ್ಷಣಕಾಲ ಆಘಾತಕ್ಕೊಳಗಾದರೂ, ನಂತರ ಚಪ್ಪಾಳೆ ತಟ್ಟಿ ತಮ್ಮ ನಾಯಕಿಯ ಬದ್ಧತೆಗೆ ತಲೆಬಾಗಿದರು.

ಇದನ್ನು ಓದಿದ್ದೀರಾ? WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೆ ಚಾಂಪಿಯನ್; ಬಹುಮಾನದ ಮೊತ್ತವೆಷ್ಟು?

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಕೇವಲ 9 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ (9 ರನ್) ಅವರ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

​ಈ ಹಂತದಲ್ಲಿ ಒಂದಾದ ನಾಯಕಿ ಸ್ಮೃತಿ ಮಂದಾನ ಮತ್ತು ಜಾರ್ಜಿಯಾ ವೋಲ್‌ ಡೆಲ್ಲಿ ಬೌಲರ್‌ಗಳ ಬೆವರಿಳಿಸಿದರು. ಜ್ವರವನ್ನೂ ಲೆಕ್ಕಿಸದೆ ಅಬ್ಬರಿಸಿದ ಸ್ಮೃತಿ, ವೋಲ್‌ ಜೊತೆಗೂಡಿ 2ನೇ ವಿಕೆಟ್‌ಗೆ ಬರೋಬ್ಬರಿ 92 ಎಸೆತಗಳಲ್ಲಿ 165 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಇದು ತಂಡವನ್ನು ಜಯದತ್ತ ಕೊಂಡೊಯ್ಯಿತು.
​
ಪಂದ್ಯ ಗೆಲ್ಲಲು 13 ರನ್‌ಗಳು ಬೇಕಿದ್ದಾಗ ಸ್ಮೃತಿ ಮಂದಾನ 41 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 87 ರನ್‌ ಸಿಡಿಸಿ ಔಟಾದರು. ಅವರ ಈ ಸಾಹಸಮಯ ಇನಿಂಗ್ಸ್‌ಗೆ ಅರ್ಹವಾಗಿಯೇ ‘ಪಂದ್ಯಶ್ರೇಷ್ಠ’ ಗೌರವ ಒಲಿಯಿತು. ಅಂತಿಮವಾಗಿ ಆರ್‌ಸಿಬಿ ತಂಡವು ಡೆಲ್ಲಿ ವಿರುದ್ಧ ಗೆದ್ದು, 2ನೇ ಬಾರಿಗೆ ಡಬ್ಲ್ಯುಪಿಎಲ್‌ ಟ್ರೋಫಿಗೆ ಮುತ್ತಿಕ್ಕಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...

ಏಷ್ಯನ್ ಗೇಮ್ಸ್ 2026: ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ, 3ಕ್ಕೇರಿದ ಪದಕಗಳ ಸಂಖ್ಯೆ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಪದಕ...

ಅಫ್ಘಾನ್ ವಿರುದ್ಧ ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್: ಶತಕದೊಂದಿಗೆ ಸೂರ್ಯವಂಶಿ ದಾಖಲೆ ಹಿಂದಿಕ್ಕಿದ ಅಭಿಷೇಕ್

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೂರನೇ ಹಾಗೂ ಅಂತಿಮ...