ಬಡತನ, ತಂದೆಯ ಕ್ಯಾನ್ಸರ್‌ ನೋವು ಮೆಟ್ಟಿ ನಿಂತು ಇತಿಹಾಸ ನಿರ್ಮಾಣ; ಬೆಳ್ಳಿ ಗೆದ್ದ ರಿಷಿಕಾಂತ ಭಾರತದ ಹೆಮ್ಮೆ

Date:

ಭಾನುವಾರ ಗ್ಲಾಸ್ಗೋದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ 60 ಕೆ.ಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಿಷಿಕಾಂತ ಸಿಂಗ್ ಚನಂಬಮ್ ಕಣಕ್ಕಿಳಿದಾಗ, ಸುಮಾರು 7,000 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಬಾಡ್ಮೇರ್‌ನ ಉತ್ತರಲೈನಲ್ಲಿ ಅವರ ಅತಿದೊಡ್ಡ ಬೆಂಬಲಿಗರು ಮೊಬೈಲ್ ಫೋನ್‌ನತ್ತ ಕಣ್ಣು ನೆಟ್ಟಿದ್ದರು. ಒಟ್ಟು 264 ಕೆ.ಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ರಿಷಿಕಾಂತ ಅವರ ಈ ಸಾಧನೆ, ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಅವರ ತಂದೆಯ ನೋವಿನ ನಡುವೆಯೂ ಇಡೀ ಕುಟುಂಬದಲ್ಲಿ ಮಂದಹಾಸ ಮೂಡಿಸಿದೆ.

- Advertisement -

ಮೂಲತಃ ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ನ್ಗೈರಾಂಗ್‌ಬಮ್ ಮಖಾ ಮನಿಂಗ್ ಲೈಕೈ ಗ್ರಾಮದವರಾದ ರಿಷಿಕಾಂತ ಅವರ ಪೋಷಕರು, ಕಳೆದ ಕೆಲವು ತಿಂಗಳುಗಳಿಂದ ರಾಜಸ್ಥಾನದಲ್ಲಿ ಹಿರಿಯ ಸಹೋದರ ಅಮರ್‌ಜಿತ್ ಸಿಂಗ್ ಅವರೊಂದಿಗೆ ವಾಸಿಸುತ್ತಿದ್ದಾರೆ. ರಿಷಿಕಾಂತ ಅವರ ತಂದೆ ಪ್ರಸ್ತುತ ಜೋಧ್‌ಪುರದ ಏಮ್ಸ್ (AIIMS) ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಈಗಾಗಲೇ ಮೂರು ಸುತ್ತಿನ ಕೀಮೋಥೆರಪಿ ಪೂರ್ಣಗೊಂಡಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬೆಳ್ಳಿ ಪದಕ ಗೆದ್ದ ಸಂಭ್ರಮದ ನಡುವೆಯೂ ರಿಷಿಕಾಂತ ಅವರ ಮನಸ್ಸಿನಲ್ಲಿ ತಂದೆಯ ಆರೋಗ್ಯದ ಬಗ್ಗೆಯೇ ಚಿಂತೆಯಿತ್ತು. “ನಾವು ಅತ್ಯಂತ ಕಷ್ಟಕರವಾದ ಜೀವನವನ್ನು ಎದುರಿಸಿದ್ದೇವೆ. ತಂದೆಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದ ಕಾರಣ, ಅವರನ್ನು ಸದಾ ನಗಿಸಲು ನಾನು ಪ್ರಯತ್ನಿಸುತ್ತಿದ್ದೆ. ಕೊನೆಯ ಬಾರಿ ಊರಿಗೆ ಹೋದಾಗ, ಅವರಿಗೊಂದು ಸ್ಕೂಟರ್ ಕೊಡಿಸುವ ಉದ್ದೇಶದಿಂದ ಶೋರೂಮ್‌ಗೂ ಕರೆದೊಯ್ದಿದ್ದೆ” ಎಂದು 28 ವರ್ಷದ ರಿಷಿಕಾಂತ ಮಾಧ್ಯಮದ ಮುಂದೆ ಭಾವುಕರಾದರು.

12125

ಬಾಲ್ಯದಿಂದಲೂ ಕುಟುಂಬದ ಜವಾಬ್ದಾರಿ ಹೊರುವುದು ರಿಷಿಕಾಂತ ಅವರ ಆದ್ಯತೆಯಾಗಿತ್ತು. “ನನ್ನ ಸ್ನೇಹಿತರಂತೆ ನಾನೂ ಖಾಸಗಿ ಶಾಲೆಯಲ್ಲಿ ಓದಬೇಕು ಎಂಬ ಆಸೆಯಿಂದ ಹಣ ಸಂಪಾದಿಸಲು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೆ. ದಿನಕ್ಕೆ ಕೇವಲ 150 ರೂಪಾಯಿ ಕೂಲಿ ಸಿಗುತ್ತಿತ್ತು. ಆದರೆ ಮನೆಯ ಆರ್ಥಿಕ ಸಂಕಷ್ಟ ಹೆಚ್ಚಾದಂತೆ, ನಾನು ಸಂಪಾದಿಸಿದ ಆ ಅಲ್ಪ ಹಣವೂ ಕುಟುಂಬದ ನಿರ್ವಹಣೆಗೆ ಬಳಕೆಯಾಗುತ್ತಿತ್ತು” ಎಂದು ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

ಅವರ ಪೋಷಕರಿಬ್ಬರೂ ಇತರರ ಜಮೀನುಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದಾಯ ಹೆಚ್ಚಿಸಿಕೊಳ್ಳಲು ತಂದೆ ಟ್ಯಾಕ್ಸಿ ಚಾಲಕರಾಗಿಯೂ ದುಡಿದಿದ್ದರು. ಪೋಷಕರು, ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದ ಆರು ಜನರ ಕುಟುಂಬವನ್ನು ನಿರ್ವಹಿಸುವುದು ಅವರಿಗೆ ಸವಾಲಾಗಿತ್ತು.

“ನಮಗೆ ಕೃಷಿ ಮಾಡಲು ಸ್ವಂತ ಜಮೀನು ಕೂಡ ಇಲ್ಲ, ಅಪ್ಪ-ಅಮ್ಮ ಬೇರೆಯವರ ಹೊಲಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು” ಎನ್ನುತ್ತಾರೆ 2012ರಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಣ್ಣ ಅಮರ್‌ಜಿತ್.

ಅಮರ್‌ಜಿತ್‌ಗೆ ಉದ್ಯೋಗ ಸಿಕ್ಕ ಬಳಿಕವೇ ಈ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆರಂಭಿಸಿತು. ಅಲ್ಲಿಯವರೆಗೂ ಪ್ರತಿಯೊಂದು ರೂಪಾಯಿಯೂ ಅವರಿಗೆ ಅಮೂಲ್ಯವಾಗಿತ್ತು. ರಿಷಿಕಾಂತ ಅವರ ಕ್ರೀಡಾ ಕನಸುಗಳು ಸಂಪೂರ್ಣವಾಗಿ ಅಣ್ಣನ ಬೆಂಬಲದ ಮೇಲೆಯೇ ನಿಂತಿತ್ತು. “ನನ್ನ ಹಿರಿಯ ಸಹೋದರ ನನಗೆ ಎರಡನೇ ತಂದೆಯಿದ್ದಂತೆ. ನನಗೆ ಯಾವುದೇ ಆದಾಯವಿಲ್ಲದಿದ್ದಾಗ ಅವರೇ ನನ್ನ ತರಬೇತಿ ಮತ್ತು ಕ್ರೀಡಾಕೂಟಗಳಿಗೆ ಆರ್ಥಿಕ ನೆರವು ನೀಡಿದರು. ನಾನಿಂದು ಏನಾಗಿದ್ದೇನೋ ಅದಕ್ಕೆ ಸಂಪೂರ್ಣವಾಗಿ ಅವರೇ ಕಾರಣ” ಎಂದು ರಿಷಿಕಾಂತ ತಮ್ಮ ಅಣ್ಣನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬೀದರ್‌ | ನ.1ರಂದು ಸಚಿವ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಬೀದರ್‌ ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು...

ಬೀದರ್‌ | ವಾಲ್ಮೀಕಿ ರಾಮಾಯಣ ಮಾನವ ಸಂಬಂಧಗಳ ಮೌಲ್ಯ ಸಾರುತ್ತದೆ: ನಾ.ಗೀತಾಚಾರ್ಯ

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವ ಸಂಬಂಧಗಳ ಮಹತ್ವ, ಕುಟುಂಬದ ಜವಾಬ್ದಾರಿ,...