ಮೂರನೇ ಟ್ರೋಫಿಯ ಫ್ರಾನ್ಸ್ ಕನಸು ನುಚ್ಚುನೂರು; ಭರ್ಜರಿ ಜಯದೊಂದಿಗೆ ಫೈನಲ್‌ಗೆ ಸ್ಪೇನ್

Date:

ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದ ಬಲಿಷ್ಠ ಫ್ರಾನ್ಸ್ ತಂಡದ ತಂತ್ರಗಳಿಗೆ ಮೌನವಾಗಿಸಿದ ಯುರೋಪ್ ಚಾಂಪಿಯನ್ ಸ್ಪೇನ್, 2026ರ ಫಿಫಾ ವಿಶ್ವಕಪ್‌ನ ರೋಮಾಂಚಕ ಸೆಮಿಫೈನಲ್‌ನಲ್ಲಿ 2-0 ಗೋಲುಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಫ್ರಾನ್ಸ್‌ನ ಕನಸು ಭಗ್ನಗೊಂಡಿದೆ.

- Advertisement -

ಅಮೆರಿಕದ ಡಲ್ಲಾಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪೇನ್ ತನ್ನ ಸಾಂಪ್ರದಾಯಿಕ ಮತ್ತು ಆಕರ್ಷಕ ಪಾಸ್‌ಗಳ ಆಟದ ಮೂಲಕ ಪೂರ್ಣ ಹಿಡಿತ ಸಾಧಿಸಿತು. ಭಾನುವಾರ ನಡೆಯಲಿರುವ ಮಹಾಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ. 16 ವರ್ಷಗಳ ಹಿಂದೆ (2010ರಲ್ಲಿ) ವಿಸೆಂಟೆ ಡೆಲ್ ಬೊಸ್ಕ್ ನೇತೃತ್ವದಲ್ಲಿ ಚಾಂಪಿಯನ್ ಆಗಿದ್ದ ಸ್ಪೇನ್, ಇದೀಗ ಇತಿಹಾಸ ಪುನರಾವರ್ತಿಸಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ಅಹಿಂದ, ದಲಿತ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

ಪಂದ್ಯದ ಮೊದಲಾರ್ಧದ ಮಧ್ಯಭಾಗದಲ್ಲಿ ಸ್ಪೇನ್‌ನ ವಿಂಗರ್ ಲ್ಯಾಮೈನ್ ಯಮಾಲ್ ಅವರನ್ನು ಫ್ರಾನ್ಸ್‌ನ ಲೆಫ್ಟ್-ಬ್ಯಾಕ್ ಆಟಗಾರ ಲ್ಯೂಕಾಸ್ ದಿಗ್ನೆ ಫೌಲ್ ಮಾಡಿದರು. ತಕ್ಷಣವೇ ಸಾಲ್ವಡಾರ್‌ನ ರೆಫರಿ ಇವಾನ್ ಬಾರ್ಟನ್ ಪೆನಾಲ್ಟಿ ಅವಕಾಶ ನೀಡಿದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಮೈಕೆಲ್ ಒಯರ್ಜಬಲ್, ಫ್ರಾನ್ಸ್ ಗೋಲ್‌ಕೀಪರ್ ಮೈಕ್ ಮೈಗ್ನಾನ್ ಅವರನ್ನು ವಂಚಿಸಿ ಚೆಂಡನ್ನು ನೆಟ್‌ಗೆ ತಳ್ಳಿದರು. ಇದು ಒಯರ್ಜಬಲ್ ಅವರ ಪ್ರಸಕ್ತ ವಿಶ್ವಕಪ್‌ನ 5ನೇ ಗೋಲಾಗಿದೆ. ಇದರ ಬೆನ್ನಲ್ಲೇ ಫ್ರಾನ್ಸ್‌ನ ಸ್ಟಾರ್ ಡಿಫೆಂಡರ್ ವಿಲಿಯಂ ಸಾಲಿಬಾ ಬೆನ್ನುನೋವಿನ ಕಾರಣ ಮೈದಾನ ತೊರೆದಿದ್ದು ಆ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಮೊದಲಾರ್ಧದಲ್ಲಿ ಫ್ರಾನ್ಸ್ ತಂಡಕ್ಕೆ ಸ್ಪೇನ್ ಗೋಲ್ ಪೆಟ್ಟಿಗೆಯ ಕಡೆಗೆ ಒಂದು ಶಾಟ್ ಬಾರಿಸಲೂ ಸಾಧ್ಯವಾಗಲಿಲ್ಲ.

ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಕೋಚ್ ಡಿಡಿಯರ್ ಡೆಸ್ಚಾಂಪ್ಸ್ ದಾಳಿ ವಿಭಾಗವನ್ನು ಚುರುಕುಗೊಳಿಸಲು ಬ್ರಾಡ್ಲಿ ಬಾರ್ಕೋಲಾ ಬದಲಿಗೆ ಡೆಸಿರೆ ಡೌ ಅವರನ್ನು ಕಣಕ್ಕಿಳಿಸಿದರು. ಆದರೆ, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಲೂಯಿಸ್ ಡಿ ಲಾ ಫ್ಯುಯೆಂಟೆ ಮಾರ್ಗದರ್ಶನದ ಸ್ಪೇನ್ 58ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸಿತು. ಡಿಫೆಂಡರ್ ಪೆಡ್ರೊ ಪೋರ್ಲೊ ಅವರು ಡ್ಯಾನಿ ಓಲ್ಮೊಗೆ ನೀಡಿದ ತೀಕ್ಷ್ಣವಾದ ಪಾಸ್ ಅನ್ನು ಮರಳಿ ಪಡೆದು, ಅತ್ಯಂತ ಚಾಕಚಕ್ಯತೆಯಿಂದ ಗೋಲಾಗಿ ಪರಿವರ್ತಿಸಿ 2-0 ಮುನ್ನಡೆ ತಂದುಕೊಟ್ಟರು.

ಕಿಲಿಯನ್ ಎಂಬಾಪೆ, ಉಸ್ಮಾನ್ ಡೆಂಬೆಲೆ ಮತ್ತು ಮೈಕೇಲ್ ಒಲಿಸೆ ಅವರಂತಹ ವಿಶ್ವದ ಅತ್ಯುತ್ತಮ ಫಾರ್ವರ್ಡ್ ಆಟಗಾರರನ್ನು ಹೊಂದಿದ್ದರೂ ಸ್ಪೇನ್‌ನ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ಫ್ರಾನ್ಸ್‌ಗೆ ಸಾಧ್ಯವಾಗಲಿಲ್ಲ. ಇಡೀ ಟೂರ್ನಿಯಲ್ಲಿ ಕೇವಲ ಒಂದು ಗೋಲು ಬಿಟ್ಟುಕೊಟ್ಟಿರುವ ಸ್ಪೇನ್‌ನ ಡಿಫೆಂಡರ್‌ಗಳು ಪಂದ್ಯದ ಕೊನೆಯವರೆಗೂ ಫ್ರಾನ್ಸ್‌ಗೆ ಯಾವುದೇ ಅವಕಾಶ ನೀಡಲಿಲ್ಲ.

ಈ ಸೋಲು ಫ್ರಾನ್ಸ್ ತಂಡಕ್ಕೆ ತೀವ್ರ ಆಘಾತ ನೀಡಿದೆ. ಇದರೊಂದಿಗೆ ಕಳೆದ 14 ವರ್ಷಗಳಿಂದ ಫ್ರಾನ್ಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿಡಿಯರ್ ಡೆಸ್ಚಾಂಪ್ಸ್ ಅವರ ಸುದೀರ್ಘ ಅವಧಿಯು ನಿರಾಶಾದಾಯಕವಾಗಿ ಅಂತ್ಯಗೊಂಡಿದ್ದು, ಅವರು ಟೂರ್ನಿಯ ನಂತರ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಸೋತ ಫ್ರಾನ್ಸ್ ತಂಡ ಇನ್ನು ತೃತೀಯ ಸ್ಥಾನಕ್ಕಾಗಿ ಹೋರಾಡಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಿಲಿಮಿಟೇಶನ್ | ‘ಸಹೋದರ’ ಸ್ಟಾಲಿನ್ ಮನವೊಲಿಕೆಗೆ ಮುಂದಾದ ರಾಹುಲ್ ಗಾಂಧಿ; ದೃಢ ನಿರ್ಧಾರ ಪ್ರಕಟಿಸಿದ ಡಿಎಂಕೆ ನಾಯಕ!

ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ ಡಿಎಂಕೆ...

BREAKING NEWS | ಗೌರವಧನ ಹೆಚ್ಚಳಕ್ಕೆ ಸರ್ಕಾರದ ಲಿಖಿತ ಆದೇಶ: 13 ದಿನಗಳ ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ

ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ...

ಬಾಗಲಕೋಟೆ | ಸರ್ವರ್‌ ಸಮಸ್ಯೆ : ಪಡಿತರಕ್ಕಾಗಿ ನಡುರಾತ್ರಿವರೆಗೂ ಕಾದ ಗ್ರಾಮಸ್ಥರು

ಬಡ ಕುಟುಂಬಗಳಿಗೆ ಸಿಗಬೇಕಾದ ಪಡಿತರ ಪಡೆಯುವುದೇ ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ....

ಬಾಗಲಕೋಟೆ | ರಸ್ತೆ ಅಪಘಾತ : ಗಾಯಗೊಂಡಿದ್ದ ಯುವಕ ಸಾವು

ರಬಕವಿ-ಬನಹಟ್ಟಿ: ಮಹಾಲಿಂಗಪುರ–ರಬಕವಿ ಮಧ್ಯೆ ಕವಟಿ ಅವರ ತೋಟದ ಸಮೀಪ ಸಂಭವಿಸಿದ ರಸ್ತೆ...