ICC ಮಹಿಳಾ ಟಿ20 ವಿಶ್ವಕಪ್‌ನ 10ನೇ ಆವೃತ್ತಿಯ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಕ್ರೀಡಾಕೂಟವು ಇಂದಿನಿಂದ (ಜೂನ್ 12) ಜುಲೈ 5 ರವರೆಗೆ ನಡೆಯಲಿದೆ. ಈ ಚುಟುಕು ಕ್ರಿಕೆಟ್‌ನ ಟ್ರೋಫಿಗಾಗಿ 12 ತಂಡಗಳು, 7 ಕ್ರೀಡಾಂಗಣಗಳಲ್ಲಿ ಒಟ್ಟು 33 ಪಂದ್ಯಗಳಲ್ಲಿ ಸೆಣಸಾಡಲಿವೆ. ಪ್ರಸ್ತುತ ಚಾಂಪಿಯನ್ ನ್ಯೂಜಿಲೆಂಡ್ ತನ್ನ ಕಿರೀಟವನ್ನು ಉಳಿಸಿಕೊಳ್ಳುವ ಎದುರು ನೋಡುತ್ತಿದ್ದರೆ, ಆರು ಬಾರಿಯ ವಿಜೇತ ಆಸ್ಟ್ರೇಲಿಯಾ ಮತ್ತೊಮ್ಮೆ ಗೆಲುವಿನ ಗರಿಯನ್ನು ತನ್ನದಾಗಿಸಿಕೊಳ್ಳಲು ತವಕದಲ್ಲಿದೆ.
2009ರಲ್ಲಿ ಆರಂಭವಾದ ಮಹಿಳಾ ಟಿ20 ವಿಶ್ವಕಪ್, ಪ್ರಸ್ತುತ, ಜಾಗತಿಕ ಕ್ರಿಕೆಟ್‌ನ ಪ್ರಮುಖ ಈವೆಂಟ್‌ಗಳಲ್ಲಿ ಒಂದಾಗಿ ಬೆಳೆದಿದೆ. 2009ರ ಚೊಚ್ಚಲ ಆವೃತ್ತಿಯನ್ನು ಇಂಗ್ಲೆಂಡ್ ಗೆದ್ದುಕೊಂಡರೆ, ಆಸ್ಟ್ರೇಲಿಯಾ ತಂಡವು (2010, 2012, 2014, 2018, 2020 ಮತ್ತು 2023) ಆರು ಪ್ರಶಸ್ತಿಗಳೊಂದಿಗೆ ಟೂರ್ನಿಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. 2016ರಲ್ಲಿ ವೆಸ್ಟ್ ಇಂಡೀಸ್ ಟ್ರೋಫಿ ಮುಡಿಗೇರಿಸಿಕೊಂಡರೆ, 2024ರಲ್ಲಿ ನ್ಯೂಜಿಲೆಂಡ್ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದು ವಿಜೇತರ ಪಟ್ಟಿಗೆ ಸೇರಿಕೊಂಡಿದೆ. ಇನ್ನಾವುದೇ ತಂಡಗಳು ಈವರೆಗೆ ಟ್ರೋಫಿ ಗೆಲ್ಲಲಾಗಿಲ್ಲ. ಈವರೆಗೆ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲದೆ, ಕಪ್‌ನಿಂದ ದೂರ ಉಳಿದಿರುವ ಭಾರತ ತಂಡ, ಈ ಬಾರಿಯಾದರೂ ಗೆಲುವಿನ ನಗೆ ಬೀರಬೇಕೆಂದು ಸಜ್ಜಾಗಿದೆ.
ಮಹಿಳಾ ಟಿ20 ವಿಶ್ವಕಪ್-2026ರ ತಂಡಗಳು ಮತ್ತು ಅರ್ಹತೆ
ಹಿಂದಿನ ಆವೃತ್ತಿಗಳಲ್ಲಿ 10 ತಂಡಗಳಿದ್ದವು. ಆದರೆ, ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಾಖಲೆಯ 12 ತಂಡಗಳು ಸ್ಪರ್ಧಿಸುತ್ತಿವೆ. 2030ರಿಂದ ಈ ಸಂಖ್ಯೆಯನ್ನು 16ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಆತಿಥೇಯ ದೇಶವಾಗಿ ಇಂಗ್ಲೆಂಡ್ ನೇರ ಅರ್ಹತೆ ಪಡೆದರೆ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 2024ರ ವಿಶ್ವಕಪ್‌ನಲ್ಲಿನ ತಮ್ಮ ಪ್ರದರ್ಶನದ ಆಧಾರದ ಮೇಲೆ ಸ್ಥಾನ ಭದ್ರಪಡಿಸಿಕೊಂಡಿವೆ. ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ (ICC) ರ್‍ಯಾಂಕಿಂಗ್ ಮೂಲಕ ಪ್ರವೇಶ ಪಡೆದರೆ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಪದಾರ್ಪಣೆ ಮಾಡುತ್ತಿರುವ ನೆದರ್‌ಲ್ಯಾಂಡ್ಸ್ ತಂಡಗಳು ಗ್ಲೋಬಲ್ ಕ್ವಾಲಿಫೈಯರ್ ಮೂಲಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.
ಈ ಟೂರ್ನಿಯಲ್ಲಿ, ಒಟ್ಟು 12 ತಂಡಗಳನ್ನು ತಲಾ ಆರು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಐದು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
- ಗುಂಪು 1ರಲ್ಲಿ; ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭಾರತ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಿವೆ.
- ಗುಂಪು 2ರಲ್ಲಿ; ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ತಂಡಗಳಿವೆ.
ಭಾರತದ ತಂಡದಲ್ಲಿ; ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್ ಆಡಲಿದ್ದಾರೆ.
ಬಹುಮಾನದ ಹಣ
ಐಸಿಸಿ ಈ ಬಾರಿ ದಾಖಲೆಯ ಒಟ್ಟು 87,64,615 ಡಾಲರ್ (8.7 ಮಿಲಿಯನ್ ಡಾಲರ್) ಬಹುಮಾನದ ಹಣ ಘೋಷಿಸಿದೆ. ಇದು ಹಿಂದಿನ ಆವೃತ್ತಿಗಿಂತ 10%ರಷ್ಟು ಹೆಚ್ಚಾಗಿದೆ. ಪುರುಷರ ಮತ್ತು ಮಹಿಳೆಯರ ಜಾಗತಿಕ ಕ್ರಿಕೆಟ್ ಟೂರ್ನಿಗಳಿಗೆ ಸಮಾನ ಬಹುಮಾನದ ಹಣವನ್ನು ನೀಡುವ ಐಸಿಸಿಯ ನೀತಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
- ವಿಜೇತ ತಂಡ (ಚಾಂಪಿಯನ್ಸ್): 2.34 ಮಿಲಿಯನ್ ಡಾಲರ್
- ರನ್ನರ್ಸ್-ಅಪ್ (ದ್ವಿತೀಯ ಸ್ಥಾನ): 1.17 ಮಿಲಿಯನ್ ಡಾಲರ್
- ಸೆಮಿಫೈನಲ್‌ನಲ್ಲಿ ಸೋತ ತಂಡಗಳು: 6,75,000 ಡಾಲರ್
- ಗುಂಪು ಹಂತದ ಪ್ರತಿ ಗೆಲುವಿಗೆ: 31,154 ಡಾಲರ್
- ಪ್ರತಿ ತಂಡಕ್ಕೆ ಖಾತರಿಯ ಕನಿಷ್ಠ ಮೊತ್ತ: 2,47,500 ಡಾಲರ್
ಪಂದ್ಯಗಳು ನಡೆಯುವ ಕ್ರೀಡಾಂಗಣಗಳು
ಇಂಗ್ಲೆಂಡ್‌ನ 7 ಪ್ರಮುಖ ಕ್ರೀಡಾಂಗಣಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ:
- ಲಾರ್ಡ್ಸ್, ಲಂಡನ್ – ಸಾಮರ್ಥ್ಯ 31,100
- ದಿ ಓವಲ್, ಲಂಡನ್ – ಸಾಮರ್ಥ್ಯ 27,500
- ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ – ಸಾಮರ್ಥ್ಯ 26,000
- ಎಡ್ಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್ – ಸಾಮರ್ಥ್ಯ 25,000
- ಹ್ಯಾಂಪ್‌ಶೈರ್ ಬೌಲ್, ಸೌತಾಂಪ್ಟನ್ – ಸಾಮರ್ಥ್ಯ 25,000
- ಹೆಡಿಂಗ್ಲಿ, ಲೀಡ್ಸ್ – ಸಾಮರ್ಥ್ಯ 18,350
- ಬ್ರಿಸ್ಟಲ್ ಕೌಂಟಿ ಗ್ರೌಂಡ್, ಬ್ರಿಸ್ಟಲ್ – ಸಾಮರ್ಥ್ಯ 17,500
ಟೂರ್ನಿಯ ವೇಳಾಪಟ್ಟಿ (ಭಾರತೀಯ ಕಾಲಮಾನದಲ್ಲಿ)
ಟೂರ್ನಿಯ ಉದ್ಘಾಟನಾ ಪಂದ್ಯವು ಇಂದು (ಜೂನ್ 12-ಶುಕ್ರವಾರ) ಎಡ್ಜ್‌ಬಾಸ್ಟನ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಜೂನ್ 30 ಮತ್ತು ಜುಲೈ 2 ರಂದು ‘ದಿ ಓವಲ್’ ಮೈದಾನದಲ್ಲಿ ನಡೆಯಲಿದ್ದು, ಜುಲೈ 5ರಂದು ಲಾರ್ಡ್ಸ್ ಮೈದಾನದಲ್ಲಿ ಫೈನಲ್ ನಡೆಯಲಿದೆ.
- ಜೂನ್ 12: ಇಂಗ್ಲೆಂಡ್ ವರ್ಸಸ್ ಶ್ರೀಲಂಕಾ (ಎಡ್ಜ್‌ಬಾಸ್ಟನ್) – ರಾತ್ರಿ 11:00
- ಜೂನ್ 13: ಸ್ಕಾಟ್ಲೆಂಡ್ ವರ್ಸಸ್ ಐರ್ಲೆಂಡ್ (ಓಲ್ಡ್ ಟ್ರಾಫರ್ಡ್) – ಮಧ್ಯಾಹ್ನ 3:00
- ಜೂನ್ 13: ಆಸ್ಟ್ರೇಲಿಯಾ ವರ್ಸಸ್ ದಕ್ಷಿಣ ಆಫ್ರಿಕಾ (ಓಲ್ಡ್ ಟ್ರಾಫರ್ಡ್) – ಸಂಜೆ 7:00
- ಜೂನ್ 13: ವೆಸ್ಟ್ ಇಂಡೀಸ್ ವರ್ಸಸ್ ನ್ಯೂಜಿಲೆಂಡ್ (ಹ್ಯಾಂಪ್‌ಶೈರ್ ಬೌಲ್) – ರಾತ್ರಿ 11:00
- ಜೂನ್ 14: ಬಾಂಗ್ಲಾದೇಶ ವರ್ಸಸ್ ನೆದರ್‌ಲ್ಯಾಂಡ್ಸ್ (ಎಡ್ಜ್‌ಬಾಸ್ಟನ್) – ಮಧ್ಯಾಹ್ನ 3:00
- ಜೂನ್ 14: ಭಾರತ ವರ್ಸಸ್ ಪಾಕಿಸ್ತಾನ (ಎಡ್ಜ್‌ಬಾಸ್ಟನ್) – ಸಂಜೆ 7:00
- ಜೂನ್ 16: ನ್ಯೂಜಿಲೆಂಡ್ ವರ್ಸಸ್ ಶ್ರೀಲಂಕಾ (ಹ್ಯಾಂಪ್‌ಶೈರ್ ಬೌಲ್) – ಸಂಜೆ 7:00
- ಜೂನ್ 16: ಇಂಗ್ಲೆಂಡ್ ವರ್ಸಸ್ ಐರ್ಲೆಂಡ್ (ಹ್ಯಾಂಪ್‌ಶೈರ್ ಬೌಲ್) – ರಾತ್ರಿ 11:00
- ಜೂನ್ 17: ಆಸ್ಟ್ರೇಲಿಯಾ ವರ್ಸಸ್ ಬಾಂಗ್ಲಾದೇಶ (ಹೆಡಿಂಗ್ಲಿ) – ಮಧ್ಯಾಹ್ನ 3:00
- ಜೂನ್ 17: ಭಾರತ ವರ್ಸಸ್ ನೆದರ್‌ಲ್ಯಾಂಡ್ಸ್ (ಹೆಡಿಂಗ್ಲಿ) – ಸಂಜೆ 7:00
- ಜೂನ್ 17: ದಕ್ಷಿಣ ಆಫ್ರಿಕಾ ವರ್ಸಸ್ ಪಾಕಿಸ್ತಾನ (ಎಡ್ಜ್‌ಬಾಸ್ಟನ್) – ರಾತ್ರಿ 11:00
- ಜೂನ್ 18: ವೆಸ್ಟ್ ಇಂಡೀಸ್ ವರ್ಸಸ್ ಸ್ಕಾಟ್ಲೆಂಡ್ (ಹೆಡಿಂಗ್ಲಿ) – ರಾತ್ರಿ 11:00
- ಜೂನ್ 19: ನ್ಯೂಜಿಲೆಂಡ್ ವರ್ಸಸ್ ಐರ್ಲೆಂಡ್ (ಹ್ಯಾಂಪ್‌ಶೈರ್ ಬೌಲ್) – ರಾತ್ರಿ 11:00
- ಜೂನ್ 20: ಆಸ್ಟ್ರೇಲಿಯಾ ವರ್ಸಸ್ ನೆದರ್‌ಲ್ಯಾಂಡ್ಸ್ – ಮಧ್ಯಾಹ್ನ 3:00
- ಜೂನ್ 20: ಪಾಕಿಸ್ತಾನ ವರ್ಸಸ್ ಬಾಂಗ್ಲಾದೇಶ – ಸಂಜೆ 7:00
- ಜೂನ್ 20: ಇಂಗ್ಲೆಂಡ್ ವರ್ಸಸ್ ಸ್ಕಾಟ್ಲೆಂಡ್ – ರಾತ್ರಿ 11:00
- ಜೂನ್ 21: West Indies ವರ್ಸಸ್ ಶ್ರೀಲಂಕಾ – ಮಧ್ಯಾಹ್ನ 3:00
- ಜೂನ್ 21: ದಕ್ಷಿಣ ಆಫ್ರಿಕಾ ವರ್ಸಸ್ ಭಾರತ – ಸಂಜೆ 7:00
- ಜೂನ್ 23: ನ್ಯೂಜಿಲೆಂಡ್ ವರ್ಸಸ್ ಸ್ಕಾಟ್ಲೆಂಡ್ – ಮಧ್ಯಾಹ್ನ 3:00
- ಜೂನ್ 23: ಶ್ರೀಲಂಕಾ ವರ್ಸಸ್ ಐರ್ಲೆಂಡ್ – ಸಂಜೆ 7:00
- ಜೂನ್ 23: ಆಸ್ಟ್ರೇಲಿಯಾ ವರ್ಸಸ್ ಪಾಕಿಸ್ತಾನ – ರಾತ್ರಿ 11:00
- ಜೂನ್ 24: ಇಂಗ್ಲೆಂಡ್ ವರ್ಸಸ್ ವೆಸ್ಟ್ ಇಂಡೀಸ್ (ಲಾರ್ಡ್ಸ್) – ರಾತ್ರಿ 11:00
- ಜೂನ್ 25: ಭಾರತ ವರ್ಸಸ್ ಬಾಂಗ್ಲಾದೇಶ – ಸಂಜೆ 7:00
- ಜೂನ್ 25: ದಕ್ಷಿಣ ಆಫ್ರಿಕಾ ವರ್ಸಸ್ ನೆದರ್‌ಲ್ಯಾಂಡ್ಸ್ – ರಾತ್ರಿ 11:00
- ಜೂನ್ 26: ಶ್ರೀಲಂಕಾ ವರ್ಸಸ್ ಸ್ಕಾಟ್ಲೆಂಡ್ – ರಾತ್ರಿ 11:00
- ಜೂನ್ 27: ಪಾಕಿಸ್ತಾನ ವರ್ಸಸ್ ನೆದರ್‌ಲ್ಯಾಂಡ್ಸ್ – ಮಧ್ಯಾಹ್ನ 3:00
- ಜೂನ್ 27: ವೆಸ್ಟ್ ಇಂಡೀಸ್ ವರ್ಸಸ್ ಐರ್ಲೆಂಡ್ – ಸಂಜೆ 7:00
- ಜೂನ್ 27: ಇಂಗ್ಲೆಂಡ್ ವರ್ಸಸ್ ನ್ಯೂಜಿಲೆಂಡ್ – ರಾತ್ರಿ 11:00
- ಜೂನ್ 28: ದಕ್ಷಿಣ ಆಫ್ರಿಕಾ ವರ್ಸಸ್ ಬಾಂಗ್ಲಾದೇಶ – ಮಧ್ಯಾಹ್ನ 3:00
- ಜೂನ್ 28: ಆಸ್ಟ್ರೇಲಿಯಾ ವರ್ಸಸ್ ಭಾರತ – ಸಂಜೆ 7:00
- ಜೂನ್ 30: ಸೆಮಿಫೈನಲ್ 1 (ದಿ ಓವಲ್) – ಸಂಜೆ 7:00
- ಜುಲೈ 2: ಸೆಮಿಫೈನಲ್ 2 (ದಿ ಓವಲ್) – ರಾತ್ರಿ 11:00
- ಜುಲೈ 5: ಫೈನಲ್ (ಲಾರ್ಡ್ಸ್) – ಸಂಜೆ 7:00




