8 ಎಸೆತ, 6 ಸಿಕ್ಸರ್, 13 ಎಸೆತಗಳಲ್ಲಿ 50: LSG ವಿರುದ್ಧ ಅಬ್ಬರಿಸಿ ಇತಿಹಾಸ ಬರೆದ ಉರ್ವಿಲ್ ಪಟೇಲ್

Date:

ಲಖನೌ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಐಪಿಎಲ್ 2026 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಆಟಗಾರ ಉರ್ವಿಲ್ ಪಟೇಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಠಿಣವಾದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ CSK ತಂಡಕ್ಕೆ ಆಸರೆಯಾದ ಉರ್ವಿಲ್, ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧ ಶತಕದ (13 ಎಸೆತಗಳು) ದಾಖಲೆಯನ್ನು ಸರಿದೂಗಿಸಿದ್ದಾರೆ.

- Advertisement -

ಪಂದ್ಯದಲ್ಲಿ ಸಿಎಸ್‌ಕೆ ಆರಂಭ ಭರಪೂರವಾಗಿತ್ತು. ಮೊದಲನೇ ವಿಕೆಟ್‌ಗೆ 45 ರನ್ ಕೂಡಿಹಾಕಿದ ನಂತರ, ದಿಗ್ವೇಶ್ ಸಿಂಗ್ ರಾಠಿ ಅವರಿಗೆ ಬಲಿಯಾಗಿ ಸಂಜು ಸ್ಯಾಮ್ಸನ್ (14 ಎಸೆತಗಳಲ್ಲಿ 28 ರನ್) ಹೊರನಡೆದರು. ಈ ಸಮಯದಲ್ಲಿ ಎಲ್‌ಎಸ್‌ಜಿ ತಂಡಕ್ಕೆ ಪಂದ್ಯ ಗೆಲ್ಲುವ ಆಸೆ ಚಿಗುರಿತ್ತು. ಆದರೆ ನಂತರ ಕ್ರೀಸ್‌ಗೆ ಇಳಿದ ಉರ್ವಿಲ್ ಪಟೇಲ್ ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಐದು ಮತ್ತು ಆರನೇ ಓವರ್‌ಗಳಲ್ಲಿ ಉರ್ವಿಲ್ ಪಟೇಲ್ ಎಲ್‌ಎಸ್‌ಜಿ ಬೌಲರ್‌ಗಳಿಗೆ ಸಿಂಹಸ್ವಪ್ನವಾದರು. 5ನೇ ಓವರ್‌ನಲ್ಲಿ ಆವೇಶ್ ಖಾನ್ ಬೌಲಿಂಗ್‌ನಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ, ಆ ಓವರ್‌ನಲ್ಲಿ 25 ರನ್ ಸೂರೆಗೊಂಡರು. ಅದೇ ರೀತಿ ಪವರ್‌ಪ್ಲೇನ ಅಂತಿಮವಾದ 6ನೇ ಓವರ್‌ನಲ್ಲಿ ದಿಗ್ವೇಶ್ ರಾಠಿ ಬೌಲಿಂಗ್‌ನಲ್ಲಿ ಕೂಡ 98 ಮೀಟರ್ ದೂರದ ಬೃಹತ್ ಸಿಕ್ಸರ್ ಸೇರಿದಂತೆ ನಿರಂತರ ಬೌಂಡರಿಗಳನ್ನು ಬಾರಿಸಿ 25 ರನ್ ಪೇರಿಸಿದರು.

ಇದನ್ನು ಓದಿದ್ದೀರಾ? IPL ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಶಾಸಕರ ಉಚಿತ ಪಾಸ್ ದುರಾಸೆಗೆ ಬೆಂಗಳೂರಿನ ಕೈತಪ್ಪಿತೆ ಫೈನಲ್ ಆತಿಥ್ಯ?

ಉರ್ವಿಲ್ ಪಟೇಲ್ ತಮ್ಮ ಇನಿಂಗ್ಸ್‌ನ ಮೊದಲ 8 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ ಐಪಿಎಲ್ ಇತಿಹಾಸದ ಮೊದಲ ಆಟಗಾರ ಎಂದು ದಾಖಲೆ ಬರೆದಿದ್ದಾರೆ. 8 ಎಸೆತಗಳಲ್ಲಿ 41 ರನ್ ಗಳಿಸುವುದರೊಂದಿಗೆ, ಇದಕ್ಕೂ ಮುನ್ನ ಇದ್ದ 33 ರನ್‌ಗಳ ದಾಖಲೆಯನ್ನು ಮುರಿದುಹಾಕಿದರು. ಅಂತಿಮವಾಗಿ ಕೇವಲ 13 ಎಸೆತಗಳಲ್ಲಿ 50 ರನ್ ಪೂರೈಸಿದ ಉರ್ವಿಲ್, 2023 ರಲ್ಲಿ ಕೆಕೆಆರ್ ವಿರುದ್ಧ ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್) ನಿರ್ಮಿಸಿದ್ದ ಅತಿ ವೇಗದ ಐಪಿಎಲ್ ಅರ್ಧ ಶತಕದ ದಾಖಲೆಯನ್ನು ಸರಿದೂಗಿಸಿದರು.

ಐಪಿಎಲ್ ನಲ್ಲಿ ಅತಿ ವೇಗದ ಅರ್ಧ ಶತಕಗಳು :
13 ಎಸೆತಗಳು – ಯಶಸ್ವಿ ಜೈಸ್ವಾಲ್ (RR) vs KKR, ಕೋಲ್ಕತ್ತಾ, 2023
13 ಎಸೆತಗಳು – ಉರ್ವಿಲ್ ಪಟೇಲ್ (CSK) vs LSG, ಲಖನೌ, 2026
14 ಎಸೆತಗಳು – ಕೆ.ಎಲ್. ರಾಹುಲ್ (PBKS) vs DC, ಮೊಹಾಲಿ, 2018
14 ಎಸೆತಗಳು – ಪ್ಯಾಟ್ ಕಮಿನ್ಸ್ (KKR) vs MI, ಪುಣೆ, 2022
14 ಎಸೆತಗಳು – ರೊಮಾರಿಯೋ ಶೆಫರ್ಡ್ (RCB) vs CSK, ಬೆಂಗಳೂರು, 2025

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...