ಸಹಕಾರಿ ವ್ಯವಸ್ಥೆ ಬಲವರ್ಧನೆಗೆ ಆಡಳಿತ ಯಂತ್ರದ ರಾಜಕಾರಣ ದೂರವಿಡಬೇಕು : ಸಿಎಂಆರ್ ಶ್ರೀನಾಥ್
ಕೋಲಾರ: ತಾಲೂಕಿನ ಅರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಅಧಿಕಾರವನ್ನು ಬಳಸಿಕೊಂಡು ಸರ್ಕಾರದಿಂದ ನಾಮ ನಿರ್ದೇಶಕ ಸ್ಥಾನವನ್ನು ಪಡೆದು ಚುನಾವಣೆ ಎದುರಿಸಿದರು ಸಹ ಮೈತ್ರಿ ಪಕ್ಷವು ಮೊಟ್ಟ ಮೊದಲ ಬಾರಿಗೆ ಅಧಿಕಾರ ಕೊಡುವ ಮೂಲಕ ರಮೇಶ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ಅರಹಳ್ಳಿ ಡೇರಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಅವರನ್ನು ಸಂಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು ನೇತೃತ್ವದಲ್ಲಿ ಸನ್ಮಾನಿಸಿ ಮಾತನಾಡಿದ ಅವರು ಅರಹಳ್ಳಿ ಡೇರಿ ಪ್ರಾರಂಭದ ದಿನಗಳಿಂದಲೂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿ ಇತ್ತು ಇದೇ ಮೊದಲ ಬಾರಿಗೆ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಆಡಳಿತದ ಚುಕ್ಕಾಣಿ ಹಿಡಿದೆ ಸಹಕಾರಿ ಕ್ಷೇತ್ರದಲ್ಲಿ ವಿನಾಕಾರಣ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಪಕ್ಷಕ್ಕೆ ಅರಹಳ್ಳಿ ಹಾಲು ಉತ್ಪಾದಕರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತಪರ ಕಾಳಜಿಯಿಂದ ರೈತರ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡುವ ಮೂಲಕ ಶಾಶ್ವತವಾಗಿ ನೆಮ್ಮದಿ ದೊರಕಿಸಿ ಕೊಟ್ಟಿದ್ದಾರೆ ರೈತರ 25 ಸಾವಿರ ಕೋಟಿ ಸಾಲಮನ್ನಾ, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಅಂತಹ ವ್ಯಕ್ತಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವಂತಾಗಲು ಈ ಸಹಕಾರಿ ಕ್ಷೇತ್ರದ ಜನರ ಬೆಂಬಲ ಅಗತ್ಯವಾಗಿದೆ ಎಂದರು.
ಇದನ್ನು ಓದಿದ್ದೀರಾ..? ಚಿಂತಾಮಣಿ | ಕಾಗತಿ ಗ್ರಾಮದಲ್ಲಿ ರೈತರಿಗೆ ಒಂದು ದಿನದ ತೋಟಗಾರಿಕೆ ತರಬೇತಿ ಕಾರ್ಯಕ್ರಮ
ಈ ಕೋಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಷ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಬಾಬು ಮೌನಿ, ಗ್ರಾಪಂ ಮಾಜಿ ಸದಸ್ಯ ಛತ್ರಕೋಡಿಹಳ್ಳಿ ಕುಮಾರ್, ಮುಖಂಡರಾದ ಸಿ ಅಶ್ವಥ್ ನಾರಾಯಣ್, ಎಂ ಶ್ರೀನಿವಾಸಯ್ಯ, ಸತ್ಯ ನಾರಾಯಣ್ ಡೇರಿ ನಿರ್ದೇಶಕರಾದ ಬಿಜೆಪಿ ನಾರಾಯಣಸ್ವಾಮಿ, ಶಿವಕುಮಾರ್, ಗೋಪಾಲಪ್ಪ. ಸಿ ಮಹೇಶ್, ನಾಗರಾಜ್, ವೆಂಕಟೇಶಪ್ಪ, ಎನ್.ಕವಿತಾ, ಮಂಜುಳಮ್ಮ, ಬಾಬು, ಮುನಿನಾರಾಯಣ ಮುಂತಾದವರು ಇದ್ದರು.




