ಏಕದಿನ ವಿಶ್ವಕಪ್ 2023 | ಕೇನ್ – ಡೇರಿಲ್ ಭರ್ಜರಿ ಆಟ: ನ್ಯೂಜಿಲೆಂಡ್‌ಗೆ ಹ್ಯಾಟ್ರಿಕ್ ಗೆಲುವು

0
291
ಏಕದಿನ ವಿಶ್ವಕಪ್
Newzealand cricket

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ 11ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಜಯದ ಓಟವನ್ನು ಮುಂದುವರಿಸಿದ್ದು, ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಮಣಿಸಿತು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ 246 ರನ್‌ಗಳ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಕೇನ್‌ ವಿಲಿಯಮ್ಸ್‌ನ್ ಹಾಗೂ ಡೇರಿಲ್‌ ಮಿಚೆಲ್ ಅವರ ಭರ್ಜರಿ ಆಟದಿಂದ 43 ಎಸೆತಗಳು (42.5 ಓವರ್) ಬಾಕಿಯಿರುವಂತೆಯೆ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ಮುಟ್ಟಿತು.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದೆ. ಈ ಮೊದಲು ತನ್ನ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ ಹಾಗೂ ನೆದರ್‌ಲ್ಯಾಂಡ್ಸ್‌ ತಂಡಗಳನ್ನು ಸೋಲಿಸಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಫೋಟಕ ಆಟಗಾರ ಡೇರಿಲ್‌ ಮಿಚೆಲ್ 67 ಚೆಂಡುಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಯೊಂದಿಗೆ ಅಜೇಯ 89 ರನ್‌ ಗಳಿಸಿದರೆ, ನಾಯಕ ಕೇನ್‌ ವಿಲಿಯಮ್ಸ್‌ನ್ 107 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನೊಂದಿಗೆ 78 ರನ್‌ ಗಳಿಸಿ ಗೆಲುವಿನ ರೂವಾರಿಗಳಾದರು. ಆರಂಭಿಕ ಆಟಗಾರ ಡೆವೊನ್ ಕಾನ್ವೇ ಕೂಡ 45 ರನ್‌ ಕಲೆ ಹಾಕಿದರು.

ಈ ಸುದ್ದಿ ಓದಿದ್ದೀರಾ? ಒಲಿಂಪಿಕ್ಸ್‌: ಟಿ20 ಸೇರ್ಪಡೆಗೆ ಅನುಮತಿ ನೀಡಿದ ಐಒಸಿ

ಈ ಮೊದಲು ಟಾಸ್‌ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸ್‌ನ್ ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್‌ ಆಹ್ವಾನಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಶಕೀಬ್‌ ಅಲ್‌ ಹಸನ್‌ ಪಡೆ, 9 ವಿಕೆಟ್‌ ಕಳೆದುಕೊಂಡು 245 ರನ್‌ ಕಲೆ ಹಾಕಿತು.

ನಾಯಕ ಶಕೀಬ್‌ ಅಲ್‌ ಹಸನ್‌ (40), ಮುಶ್ಫಿಕರ್‌ ರೆಹಮಾನ್ (66) ಹಾಗೂ ಮಹಮದುಲ್ಲಾ(41) ರನ್‌ ಗಳಿಸುವುದರೊಂದಿಗೆ ಬಾಂಗ್ಲಾದೇಶ ಗೌರಾವಾನ್ವಿತ ಮೊತ್ತ ಕಲೆ ಹಾಕಲು ಕಾರಣರಾದರು.

ನ್ಯೂಜಿಲೆಂಡ್‌ ಪರ ಲಾಕಿ ಫರ್ಗ್ಯುಸನ್‌ 3 ವಿಕೆಟ್‌ ಪಡೆದರೆ, ಟ್ರೆಂಟ್‌ ಬೋಲ್ಟ್‌ ಮತ್ತು ಮ್ಯಾಟ್‌ ಹೆನ್ರಿ ತಲಾ 2 ವಿಕೆಟ್‌ ಕಬಳಿಸಿದರು.

LEAVE A REPLY

Please enter your comment!
Please enter your name here