ಐಪಿಎಲ್ | 10 ಕೋಟಿ ಎತ್ತಿಟ್ಟಿದ್ದ ಆರ್‌ಆರ್; 157 ಕಿ.ಮೀ ವೇಗದ ಪರೀಕ್ಷೆ ಗೆದ್ದಿದ್ದ 15ರ ಕ್ರಿಕೆಟಿಗ ವೈಭವ್!

Date:

12ನೇ ವಯಸ್ಸಿಗೆ ಬಿಹಾರ ಪರ ಮೊದಲ ದರ್ಜೆ ಕ್ರಿಕೆಟ್, 13ನೇ ವಯಸ್ಸಿಗೆ ₹1.1 ಕೋಟಿಗೆ ಐಪಿಎಲ್‌ಗೆ ಎಂಟ್ರಿ, 14ನೇ ವಯಸ್ಸಿಗೆ ಚೊಚ್ಚಲ ಐಪಿಎಲ್‌ನಲ್ಲೇ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ! ಇಂದು ತಮ್ಮ 15ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವೈಭವ್ ಸೂರ್ಯವಂಶಿ, ಆಗಲೇ ಕ್ರಿಕೆಟ್ ಲೋಕದ ದಿಗ್ಗಜನಂತೆ ಬೆಳೆದು ನಿಂತಿದ್ದಾರೆ.

- Advertisement -

ಇತ್ತೀಚೆಗಷ್ಟೇ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ 80 ಎಸೆತಗಳಿಗೆ 175 ರನ್ ಚಚ್ಚಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಗೆದ್ದಿರುವ ಈ ಯುವಕ, ಇದೀಗ ಭಾರೀ ನಿರೀಕ್ಷೆಗಳೊಂದಿಗೆ ತಮ್ಮ ಎರಡನೇ ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅವರ ಮೇಲಿರುವ ನಿರೀಕ್ಷೆಯ ಭಾರ ಅಷ್ಟಿಷ್ಟಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಪ್ರತಿಭೆ ಅರಳಿ ನಿಲ್ಲುತ್ತದೆ. ವೈಭವ್ ಬಳಿ ಅಂಥದ್ದೇ ಅಸಾಧಾರಣ ಪ್ರತಿಭೆಯಿದೆ. 2024ರ ಅಕ್ಟೋಬರ್‌ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ (ಟ್ರಯಲ್ಸ್) ನೋಡಿದ್ದೇ ತಡ, ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಜುಬಿನ್ ಭರೂಚಾ ದಂಗಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠ ಬ್ಯಾಟಿಂಗ್ ಪ್ರತಿಭೆ ಇವನೇ ಎಂದು ತೀರ್ಮಾನಿಸಿದ ಅವರು, ಹರಾಜಿನಲ್ಲಿ ವೈಭವ್‌ಗಾಗಿ ಬರೋಬ್ಬರಿ ₹10 ಕೋಟಿ ಮೀಸಲಿಡುವಂತೆ ತಂಡಕ್ಕೆ ಸೂಚಿಸಿದ್ದರು. ಈ ಅಚ್ಚರಿಯ ವಿಷಯವನ್ನು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಭರೂಚಾ ಹಂಚಿಕೊಂಡಿದ್ದಾರೆ. ಕೇವಲ ₹30 ಲಕ್ಷ ಮೂಲಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ವೈಭವ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತೀವ್ರ ಪೈಪೋಟಿ ನಡೆಸಿತ್ತು. ಆದರೆ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಕೇವಲ ₹1.1 ಕೋಟಿಗೆ ಈ ಭರವಸೆಯ ಯುವಕನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.

ಭರೂಚಾ ಅವರ ಈ ನಿರ್ಧಾರ ಈಗ ಅತ್ಯಂತ ಜಾಣ್ಮೆಯ ಹೂಡಿಕೆ ಎನಿಸುತ್ತಿದೆ. ವಿಶ್ವದ ದಿಗ್ಗಜ ಬ್ಯಾಟರ್‌ಗಳಿಗೆ ಸರಿಸಾಟಿಯಾದ ಬಲ ಹಾಗೂ ಚೆಂಡನ್ನು ಬಡಿದಟ್ಟುವ ತಾಕತ್ತು ವೈಭವ್‌ಗಿದೆ. ವಯಸ್ಸು ಮತ್ತು ಅನುಭವ ಹೆಚ್ಚಾದಂತೆ ಅವರ ಆಟ ಮತ್ತಷ್ಟು ಅದ್ಭುತವಾಗುವುದರಲ್ಲಿ ಅನುಮಾನವಿಲ್ಲ. ನಾಗ್ಪುರ ಬಳಿಯ ತಾಲೇಗಾಂವ್ ಅಕಾಡೆಮಿಯಲ್ಲಿ ನಡೆದ ಟ್ರಯಲ್ಸ್‌ನಲ್ಲಿ, ವೈಭವ್ ಮೊದಲ ಎಸೆತ ಎದುರಿಸಿದಾಗಲೇ ಭರೂಚಾ ಅವರಿಗೆ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ನೆನಪಾಗಿದ್ದರಂತೆ. ಜೈಸ್ವಾಲ್ ಮತ್ತು ಸಂಜು ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಭಿನ್ನವಾದದ್ದನ್ನು ಮಾಡಿದ್ದರು; ಜೈಸ್ವಾಲ್ ಫ್ಲಿಕ್ ಮಾಡಿ ಬೌಂಡರಿ ಬಾರಿಸಿದರೆ, ಸಂಜು ಬೌನ್ಸರ್‌ಗೆ ಭರ್ಜರಿ ಸಿಕ್ಸರ್ ಅಟ್ಟಿದ್ದರು. ಅದರಂತೆಯೇ ವೈಭವ್ ಕೂಡ ತಮ್ಮ ಮೊದಲ ಎಸೆತದಲ್ಲೇ ವಿಶೇಷವಾದದ್ದನ್ನೇ ಮಾಡಿದರು ಎಂದು ಭರೂಚಾ ವಿವರಿಸಿದರು.

Advertisements

ಇದನ್ನು ಓದಿದ್ದೀರಾ? ಐಪಿಎಲ್ 2026 | ಕ್ಯಾಚ್‌ ನಿಯಮದ ಬಗ್ಗೆ ನಾಯಕರಿಗೆ ಬಿಸಿಸಿಐ ಕಟ್ಟುನಿಟ್ಟಿನ ಎಚ್ಚರಿಕೆ; ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಮುಂದುವರಿಕೆ

ವೈಭವ್ ಸಾಮರ್ಥ್ಯ ಪರೀಕ್ಷಿಸಲು ಭರೂಚಾ ಅತಿ ವೇಗದ ಬೌಲರ್‌ಗಳನ್ನು ಕಣಕ್ಕಿಳಿಸಿದ್ದರು. ಆದರೆ ಆ ವೇಗಕ್ಕೂ ವೈಭವ್ ಕಿಂಚಿತ್ತೂ ಅಳುಕಲಿಲ್ಲ. ಮೊದಲ ಕೆಲವು ಎಸೆತಗಳನ್ನು ಆತ ಬಹಳ ಆರಾಮವಾಗಿ ವಿಕೆಟ್ ಕೀಪರ್ ಕಡೆಗೆ ಬಿಟ್ಟ. ಆತ ಚೆಂಡನ್ನು ಬಿಡುತ್ತಿದ್ದ ರೀತಿ ನೋಡಿದರೆ ಆ ಎಸೆತಗಳಲ್ಲಿ ವೇಗವೇ ಇಲ್ಲವೇನೋ ಎನಿಸುತ್ತಿತ್ತು. ಕೀಪರ್ 30 ಗಜಗಳಷ್ಟು ಹಿಂದಿದ್ದರೂ ವೈಭವ್ ಎದುರಾಳಿ ವೇಗಿಗಳನ್ನು ಬಹಳ ನಿರಾಯಾಸವಾಗಿ ಎದುರಿಸಿದರು ಎಂದು ಭರೂಚಾ ಅಚ್ಚರಿ ವ್ಯಕ್ತಪಡಿಸಿದರು.

ಎಲ್ಲರಂತಲ್ಲ ಈ ಪೋರ ಎನಿಸಿದ್ದು ಆತನ ಸಿಕ್ಸರ್ ಸಿಡಿಸುವ ಸಾಮರ್ಥ್ಯ. ಬೌಲರ್ ಒಬ್ಬರು ವೇಗವಾಗಿ ಪಿಚ್ ಮೇಲೆ ಚೆಂಡನ್ನು ಅಪ್ಪಳಿಸಿದಾಗ, ವೈಭವ್ ಅದನ್ನು ನೇರವಾಗಿ ಸೈಟ್-ಸ್ಕ್ರೀನ್ ಮೇಲಿಂದ ದೈತ್ಯ ಸಿಕ್ಸರ್‌ಗೆ ಅಟ್ಟಿದರು. ಆ ಎಸೆತದ ವೇಗ ಎಷ್ಟಿತ್ತು ಎಂದು ಪರಿಶೀಲಿಸಿದಾಗ, ಅದು ಗಂಟೆಗೆ 157 ಕಿ.ಮೀ ಇತ್ತು! ಇದು ನಿಜಕ್ಕೂ ಸಾಮಾನ್ಯ ವಿಷಯವಲ್ಲ. 4-5ನೇ ಎಸೆತದಲ್ಲೇ ಇಷ್ಟು ವೇಗದ ಬೌಲಿಂಗ್ ಎದುರಿಸಿ ಸಿಕ್ಸರ್ ಬಾರಿಸಿದಾಗಲೇ, ಈತ ಅಸಾಮಾನ್ಯ ಪ್ರತಿಭೆ ಎಂಬುದು ಭರೂಚಾ ಅವರಿಗೆ ಖಾತ್ರಿಯಾಯಿತು.

ಕಳೆದ 10 ತಿಂಗಳಲ್ಲಿ ವೈಭವ್ ಅನುಭವವಿಲ್ಲದವರು ಮಾತ್ರವಲ್ಲ ಅನುಭವಿ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ಬೃಹತ್ ಶತಕಗಳು, ಸಿಕ್ಸರ್‌ಗಳ ಮಳೆ ಸುರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ದೊಡ್ಡ ಸವಾಲಿದೆ. ಐಪಿಎಲ್‌ನಲ್ಲಿರುವ ಎದುರಾಳಿ ತಂಡಗಳು ಇವರ ಬ್ಯಾಟಿಂಗ್ ತಂತ್ರಗಳನ್ನು ಅಧ್ಯಯನ ಮಾಡಿಕೊಂಡು, ಕಟ್ಟಿಹಾಕಲು ಸಂಪೂರ್ಣ ಸಿದ್ಧರಾಗಿಯೇ ಬರುತ್ತವೆ. ಶ್ರೇಷ್ಠ ಆಟಗಾರರು ಇಂಥ ಸವಾಲುಗಳನ್ನು ಮೆಟ್ಟಿನಿಂತು, ಎದುರಾಳಿಗಳ ತಂತ್ರಗಳ ನಡುವೆಯೂ ರನ್ ಗಳಿಸುವ ದಾರಿ ಕಂಡುಕೊಳ್ಳುತ್ತಾರೆ. ಕೇವಲ 15ರ ಹರೆಯದ ವೈಭವ್ ಸೂರ್ಯವಂಶಿ ಮುಂದೆಯೂ ಈಗ ಇಂಥದ್ದೇ ದೊಡ್ಡ ಪರೀಕ್ಷೆ ಎದುರಿಸಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...