ಶುಭಮನ್‌, ಇಶಾನ್ ಭರ್ಜರಿ ಶತಕ; ಅಫ್ಘಾನ್‌ಗೆ 403 ರನ್‌ ಗುರಿ ನೀಡಿದ ಭಾರತ

Date:

ಅಫ್ಘಾನಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ, ನಾಯಕ ಶುಭಮನ್‌ ಗಿಲ್ ಹಾಗೂ ಇಶಾನ್‌ ಕಿಶನ್‌ ಅವರ ಭರ್ಜರಿ ಶತಕಗಳ ನೆರವಿನಿಂದ 49.5 ಓವರ್‌ಗಳಲ್ಲಿ 402 ರನ್‌ಗಳ ಭರ್ಜರಿ ಮೊತ್ತ ಪೇರಿಸಿದೆ.

- Advertisement -

ಲಖನೌದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ತಾನದ ತಂಡದ ನಾಯಕ ಹಷ್ಮತುಲ್ಲಾ ಶಾಹಿದಿ ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (4) ಬೇಗನೆ ವಿಕೆಟ್ ಕಳೆದುಕೊಂಡರು ನಾಯಕ ಶುಭಮನ್‌ ಗಿಲ್‌ ಸ್ಫೋಟಕ ಆಟಗಾರ ರೋಹಿತ್‌ ಶರ್ಮಾ ಜೊತೆ ಆಟ ಆರಂಭಿಸಿದರು. 13ನೇ ಓವರ್‌ನಲ್ಲಿ ರೋಹಿತ್ ಶರ್ಮಾ 48 ರನ್‌ ಗಳಿಸಿ ರಶೀದ್‌ ಬೌಲಿಂಗ್‌ನಲ್ಲಿ ಪೆವಿಲಿಯನ್‌ಗೆ ತೆರಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ...

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ...

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ನಂತರ ಮಧ್ಯಮ ಕ್ರಮಾಂಕದ ಆಟಗಾರ ಇಶಾನ್‌ ಕಿಶನ್‌ ಜೊತೆಗೂಡಿದ ಶುಭ್‌ಮನ್‌ ಸಿಕ್ಸರ್‌, ಬೌಂಡರಿಗಳ ಮೂಲಕ ರನ್‌ಗಳ ಸುರಿಮಳೆ ಹರಿಸಿದರು. ಇವರಿಬ್ಬರು 4 ವಿಕೆಟ್‌ ಜೊತೆಯಾಟದಲ್ಲಿ 224 ರನ್‌ ಸಿಡಿಸಿದರು. 125 ರನ್‌ ಗಳಿಸಿದ್ದ ಇಶಾನ್‌ ಕಿಶನ್‌ 37ನೇ ಓವರ್‌ನಲ್ಲಿ ಕರೋಟೆ ಬೌಲಿಂಗ್‌ನಲ್ಲಿ ಔಟಾದರು. ಅವರ 79 ಎಸೆತಗಳ ಸೊಗಸಾದ ಆಟದಲ್ಲಿ 14 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳಿದ್ದವು.

ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ

ನಂತರ ಶ್ರೇಯಸ್‌ ಅಯ್ಯರ್ ಜೊತೆ ಆಟ ಮುಂದುವರೆಸಿದ ಶುಭಮನ್‌ ಕೇವಲ 110 ಚೆಂಡುಗಳಲ್ಲಿ ಭರ್ಜರಿ 154 ರನ್‌ ಪೇರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್‌ನಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. 43ನೇ ಓವರ್‌ನಲ್ಲಿ ಕರೋಟೆ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್‌ ಹೊಡೆಯಲು ಹೋಗಿ ಔಟಾದರು. ಆನಂತರ ಬಂದ ಉಳಿದ ಬ್ಯಾಟರ್‌ಗಳ್ಯಾರು ಉತ್ತಮ ಆಟವಾಡಲಿಲ್ಲ.

ಶ್ರೈಯಸ್‌(26), ವಾಷಿಂಗ್ಟನ್‌ ಸುಂದರ್‌(19) ಬಿಟ್ಟರೆ ಉಳಿದವರು 10ರ ಗಡಿ ದಾಟಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ಅಫ್ಘಾನ್‌ಗೆ 403 ರನ್‌ಗಳ ಗುರಿ ನೀಡಿದೆ. ಅಫ್ಘಾನಿಸ್ತಾನದ ಪರ ಕರೋಟೆ 76/4, ರಶೀದ್‌ ಖಾನ್‌ 48/3 ವಿಕೆಟ್‌ ಕಬಳಿಸಿ ಅತ್ಯುತ್ತಮ ಬೌಲರ್‌ಗಳೆನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಲ್ಲಿ 14,500 ಮಕ್ಕಳು ನಾಪತ್ತೆ: ಎಫ್‌ಐಆರ್ ವಿಳಂಬಕ್ಕೆ ಪೊಲೀಸರ ವಿರುದ್ಧ ಹೈಕೋರ್ಟ್‌ ಗರಂ

ನಳಂದಾ ಜಿಲ್ಲೆಯ ಆಸ್ಪತ್ರೆಯೊಂದರಿಂದ ನವಜಾತ ಶಿಶು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್...

ಇಸ್ಲಾಂಗೆ ಯುವಕ ಮತಾಂತರ; ‘ಬ್ರೇನ್‌ವಾಶ್’ ಆರೋಪ: ಇಷ್ಟದ ಧರ್ಮ ಅನುಸರಿಸುವ ಸ್ವಾತಂತ್ರ್ಯವಿದೆ ಎಂದ ಹೈಕೋರ್ಟ್

ವಯಸ್ಕನಾದ ವ್ಯಕ್ತಿಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ...

ಧಾರವಾಡ | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್ ಸಚ್ಚಿದಾನಂದ

ಭೂ ದಾಖಲೆಗಳ ತಿದ್ದುಪಡಿ ಮತ್ತು 'ಖರಾಬು' ಜಮೀನಿನ ಮಾರ್ಪಾಟು ಮಾಡಿಕೊಡಲು ಬರೋಬ್ಬರಿ...

ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ- ಪಾಕ್ ಯುದ್ಧನೌಕೆಗಳು ಢಿಕ್ಕಿ ಹೊಡೆದ ಕತೆಯೇನು?

ಅರಬ್ಬಿ ಸಮುದ್ರದ ಉತ್ತರ ಭಾಗದ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ ಮತ್ತು ಪಾಕಿಸ್ತಾನದ...