ಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲು ತಹಶಿಲ್ದಾರ್ ಹಾಗೂ ಪುರಸಬಾ ಮುಖ್ಯಾಧಿಕಾರಿಗಳಿಗೆ ತಾಲ್ಲೂಕು ರೆಡ್ ಪ್ಲಾಗ್ ಪಕ್ಷದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಬಾಗೇಪಲ್ಲಿಯ ಕಸಬಾ ಹೋಬಳಿ ಪಾತಬಾಗೇಪಲ್ಲಿ ಸರ್ವೇ ನಂಬರ್37 ರಲ್ಲಿ ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಜಾಗವನ್ನು ಬಡವರಿಗೆ ನಿವೇಶನ ನೀಡುವಂತೆ ರೆಡ್ ಪ್ಲ್ಯಾಗ್ ಹಾಗೂ ಅಖಿಲ ಭಾರತ ಕಿಸಾನ್ ಸಂಘಟನೆ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಹಾಗೂ ತಾಲ್ಲೂಕು ತಹಶಿಲ್ದಾರ್ ಮನೀಷಾ ಎನ್ ಪತ್ರಿ ವರಿಗೆ ಮನವಿ ಪತ್ರ ನೀಡಿ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಮನವಿ ಸಲ್ಲಿಸಿದರು.
ತದನಂತರ ರೆಡ್ ಪ್ಲ್ಯಾಗ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ.ರಾಮಚಂದ್ರ ಮಾತನಾಡಿ ಬಾಗೇಪಲ್ಲಿ ಕಸಬಾ ಹೋಬಳಿ ಪಾತಬಾಗೇಪಲ್ಲಿ ಸರ್ವೆ ನಂಬರ್ 37ರಲ್ಲಿ ಸರ್ಕಾರದ ವತಿಯಿಂದ ಬಡವರಿಗೆ ನೀವೇಶನ ರಹಿತರಿಗೆ ಮೀಸಲು ಇಟ್ಟಿರುವಂತ ಜಾಗವನ್ನು ರಾಜ್ಯ ಸರ್ಕಾರದ ನೀತಿ ನಿಯಮಗಳ ಅನುಸಾರದಂತೆ ನಿವೇಶನ ರಹಿತರು ಆನ್ ಲೈನ್ ತಂತ್ರಾಂಶಗಳ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿತ್ತು. ಹಾಗೂ ಮ್ಯಾನುವಲ್ ಅರ್ಜಿಗಳನ್ನು ಸಹ ಸಲ್ಲಿಸಲಾಗಿತ್ತು ಆದರೆ ಸರ್ಕಾರದಿಂದ ನಿವೇಶನ ಮಂಜೂರು ಪ್ರಕ್ರಿಯೆ ತುಂಬಾ ವಿಳಂಬವಾಗಿದೆ ಆದ್ದರಿಂದ ನಿವೇಶನ ರಹಿತ ಸಾರ್ವಜನಿಕರು ಮನೆ ಬಾಡಿಗೆಗಳನ್ನು ಕಟ್ಟಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.ಅದರ ಜೊತೆಗೆ ದಿನ ನಿತ್ಯ ವಸ್ತುಗಳನ್ನು ಬೆಲೆ ಏರಿಕೆಯಾಗಿದೆ ಆದ್ದರಿಂದ ಕಡುಬಡವರು ಜೀವನ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳಿಗೆ ಈ ವಿಷಯಕ್ಕೂ ನಮಗೂ ಯಾವ ಸಂಭಂದ ಇಲ್ಲದಂತೆ ಸುಮ್ಮನೆ ಕೂತಿದ್ದಾರೆ ಹಾಗಾಗಿ ಕೊಟ್ಟ ಮಾತಿನಂತೆ ತಹಸೀಲ್ದಾರ್ ಹಾಗೂ ಪುರಸಭಾ ಮುಖ್ಯ ಅಧಿಕಾರಿಗಳು ನಿವೇಶನ ರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ಪ್ರೀತಿವಿಶ್ವಾಸದಿಂದ ಮನಸ್ಸು ಗೆಲ್ಲುವ ದಾರಿಯನ್ನು ಹುಡುಕಬೇಕು : ವಕ್ಕಲೇರಿ ರಾಜಪ್ಪ – ಈ ದಿನ.ಕಾಮ್
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮುನೀರ್ ಖಾನ್ ಆದಿಶೇಷು ರಾಮರೆಡ್ಡಿ, ವೆಂಕಟರಮಣಪ್ಪ ಜಿ ವೆಂಕಟೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು




