148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ವಿಶ್ವ ದಾಖಲೆ ಬರೆದ ತೆಂಬಾ ಬವುಮಾ

Date:

ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ನಿರ್ಮಿಸಿದ್ದಾರೆ.

- Advertisement -

ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡವು 2-0 ಅಂತರದಿಂದ ಸಂಪೂರ್ಣ ಸರಣಿ ಕೈವಶ ಮಾಡಿದ ಬೆನ್ನಲ್ಲೇ ಸೋಲಿಲ್ಲದ ಸರದಾರನಾಗಿ ಟೆಸ್ಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ತೆಂಬಾ ಬವುಮಾ ಪಾಲಾಗಿದೆ. ಅಂದರೆ ತೆಂಬಾ ಬವುಮಾ ನಾಯಕನಾದ ಮೇಲೆ ದಕ್ಷಿಣ ಆಫ್ರಿಕಾ ತಂಡ ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಹೀಗೆ ಸತತ ಗೆಲುವುಗಳ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೇ ಅತ್ಯಧಿಕ ಪಂದ್ಯಗಳನ್ನು ಗೆದ್ದ ನಾಯಕನೆಂಬ ವಿಶ್ವ ದಾಖಲೆ ತೆಂಬಾ ಬವುಮಾ ಪಾಲಾಗಿದೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಇಂಗ್ಲೆಂಡ್ ತಂಡದ ಮೈಕ್ ಬ್ರಿಯಾರ್ಲಿ ಹೆಸರಿನಲ್ಲಿತ್ತು.

ಇದನ್ನು ಓದಿದ್ದೀರಾ? ಪೂರ್ವಜರ ನಾಡಿನಲ್ಲಿ ‘ಫ್ರೀಡಂ ಬೇಬಿ’ಯ ಐತಿಹಾಸಿಕ ಶತಕ: ಹರಿಣಗಳ ನಾಡಿನ ‘ಸೆನುರಾನ್ ಮುತ್ತುಸ್ವಾಮಿ’ ಹಿನ್ನಲೆಯೇ ರೋಚಕ

1977 – 1979 ರ ನಡುವೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಮೈಕ್ ಬ್ರಿಯಾರ್ಲಿ ಮೊದಲ 15 ಪಂದ್ಯಗಳಲ್ಲಿ 10 ಗೆಲುವು ದಾಖಲಿಸಿದ್ದರು. ಇನ್ನುಳಿದ ಐದು ಪಂದ್ಯಗಳು ಡ್ರಾ ಆಗಿತ್ತು. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಸೋಲಿಲ್ಲದೆ 10 ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ತೆಂಬಾ ಬವುಮಾ ಅಳಿಸಿ ಹಾಕಿದ್ದಾರೆ. 12 ಟೆಸ್ಟ್​ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ತೆಂಬಾ ಬವುಮಾ ಒಟ್ಟು 11 ಪಂದ್ಯಗಳಲ್ಲಿ ಗೆಲುವಿವನ್ನು ದಾಖಲಿಸಿದ್ದಾರೆ. ಇನ್ನು ಒಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಸೋಲಿಲ್ಲದೆ ಹತ್ತಕ್ಕಿಂತ ಅಧಿಕ ಪಂದ್ಯಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ವಿಶ್ವ ದಾಖಲೆಯನ್ನು ತೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಲೀಪ್ ಟ್ರೋಫಿ ಫೈನಲ್: 13 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿದ ಪೂರ್ವ ವಲಯ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ 'ದುಲೀಪ್ ಟ್ರೋಫಿ 2026'ರ ಫೈನಲ್...

ಮಹಿಳಾ ಟಿ20 ಇತಿಹಾಸದಲ್ಲೇ ಮೊದಲು: ಏಷ್ಯಾಕಪ್‌ನಲ್ಲಿ ಲಂಕಾ, ಪಾಕ್ ಸ್ಪಿನ್ನರ್‌ಗಳ ವಿಕ್ರಮ

ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಸಂಪೂರ್ಣ...

ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ‘ಮ್ಯಾಚ್ ಫಿಕ್ಸಿಂಗ್’ ಕಳಂಕ: 7 ಮಂದಿ ತಂಡದಿಂದ ಔಟ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಡುವೆಯೇ ಪಾಕಿಸ್ತಾನ...

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...