ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ | ಭಾರತಕ್ಕೆ ಕಾದಿದೆ ಆಸೀಸ್‌ ಕಠಿಣ ಸವಾಲು

Date:

ಐಪಿಎಲ್‌ ಅಬ್ಬರ ಮುಗಿದಿದೆ. ಎರಡು ತಿಂಗಳುಗಳ ಕಾಲ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದ್ದ ಚುಟುಕು ಟೂರ್ನಿಯಲ್ಲಿ ಚೆನ್ನೈ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ʻಹೊಡಿ-ಬಡಿ ಆಟʼದಲ್ಲಿ ಯಶಸ್ಸು ಕಂಡಿರುವ ಟೀಮ್‌ ಇಂಡಿಯಾ ಆಟಗಾರರಿಗೆ ಇದೀಗ ನಿಜವಾದ ʻಟೆಸ್ಟ್‌ʼ ಸಮಯ. ಬುಧವಾರದಿಂದ (ಜೂನ್ 7) ಲಂಡ​ನ್‌ನ ದಿ ಓವಲ್‌ ಕ್ರೀಡಾಂಗ​ಣದಲ್ಲಿ ಪ್ರತಿಷ್ಠಿತ ʻವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ʼ ಪಂದ್ಯ ಆರಂಭವಾಗಲಿದೆ. 143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಮೈದಾನದನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುತ್ತಿದೆ.

ಸತತ ಎರಡನೇ ಬಾರಿಗೆ ಫೈನಲ್‌ ಪ್ರವೇಶಿಸಿರುವ ಭಾರತ, ಈ ಬಾರಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ಸವಾಲನ್ನು ಎದುರಿಸಬೇಕಾಗಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ಇಂಗ್ಲೆಂಡ್‌ ತಲುಪಿದ್ದು, ಕಠಿಣ ಅಭ್ಯಾ​ಸ​ದಲ್ಲಿ ನಿರ​ತ​ರಾ​ಗಿ​ದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅನುಭವಿ ಬ್ಯಾಟಿಂಗ್‌ vs ಬಲಿಷ್ಠ ಬೌಲಿಂಗ್‌

ಅನುಭವಿ ಬ್ಯಾಟಿಂಗ್‌ ಪಡೆ ಮತ್ತು ಬಲಿಷ್ಠ ಬೌಲಿಂಗ್‌ ವಿಭಾಗಗಳ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಈ ಬಾರಿಯ ಡಬ್ಲ್ಯೂಟಿಸಿ ಫೈನಲ್‌ ಸಾಕ್ಷಿಯಾಗುವ ನಿರೀಕ್ಷೆ ಇದೆ. ನಾಯಕ ರೋಹಿತ್ ಶರ್ಮಾ,  ಶುಭಮನ್‌ ಗಿಲ್, ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿಯನ್ನು ಒಳಗೊಂಡಿರುವ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಅಗ್ರ ಕ್ರಮಾಂಕವು ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲೇ ಅತ್ಯುತ್ತಮವಾಗಿದೆ.

ಇತ್ತೀಚೆಗೆ ಮುಗಿದ ಐಪಿಎಲ್‌ನಲ್ಲಿ ಮೂರು ಶತಕಗಳ ಜೊತೆ, ಟೂರ್ನಿಯಲಿ ಅತಿಹೆಚ್ಚು ರನ್‌ (16 ಪಂದ್ಯಗಳಿಂದ 890 ರನ್‌) ಸರದಾರ ಎನಿಸಿಕೊಂಡಿದ್ದ ಶುಭಮನ್‌ ಗಿಲ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್‌  ಪರ ಪುಜಾರ ಭರ್ಜರಿಯಾಗಿ ಬ್ಯಾಟ್‌ ಬೀಸುತ್ತಿದ್ದಾರೆ. ಎರಡು ಶತಕಗಳ ಮೂಲಕ ಕೊಹ್ಲಿ(639 ರನ್‌) ಕೂಡ ಐಪಿಎಲ್‌ ಮಿಂಚಿದ್ದರು. ಆದರೆ ನಾಯಕ ರೋಹಿತ್ ಮಾತ್ರ ಫಾರ್ಮ್‌ ಕಂಡುಕೊಳ್ಳಬೇಕಿದೆ. ಕಮ್ ಬ್ಯಾಕ್ ಹಾದಿಯಲ್ಲಿರುವ ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬುವ ನಿರೀಕ್ಷೆಯಿದೆ. ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ಕೆಎಸ್ ಭರತ್ ಅಥವಾ ಇಶನ್‌ ಕಿಶನ್‌ ವಿಕೆಟ್ ಕೀಪಿಂಗ್‌ ಅವಕಾಶ ಪಡೆಯಲಿದ್ದಾರೆ.

ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಂಡದ ಪ್ರಧಾನ ಆಟಗಾರರಾಗಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗವನ್ನು ಮುಹಮದ್ ಶಮಿ, ಮುಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್ ನಿರ್ವಹಿಸಲಿದ್ದಾರೆ.

ನಾಲ್ಕು ವೇಗದ ಬೌಲರ್‌ಗಳನ್ನು ಆಡಿಸಲು ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ, ರವಿಚಂದ್ರನ್ ಅಶ್ವಿನ್ ಅನಿವಾರ್ಯವಾಗಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ.

ಹೇಜ​ಲ್‌​ವುಡ್‌ ಅಲ​ಭ್ಯ!

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಆಸೀ​ಸ್‌ಗೆ ಆಘಾತ ಎದು​ರಾ​ಗಿದೆ. ತಂಡದ ಪ್ರಮುಖ ವೇಗಿ ಜೋಸ್‌ ಹೇಜ​ಲ್‌​ವುಡ್‌ ಗಾಯ​ದಿಂದಾಗಿ ಪಂದ್ಯ​ದಿಂದ ಹೊರ​ಬಿ​ದ್ದಿ​ದ್ದಾರೆ. ಐಪಿ​ಎಲ್‌ ವೇಳೆ ಗಾಯ​ಗೊಂಡಿದ್ದ ಹೇಜ​ಲ್‌​ವುಡ್‌ ಇನ್ನೂ ಸಂಪೂರ್ಣ ಗುಣ​ಮು​ಖ​ರಾ​ಗಿಲ್ಲ. ಹೇಜ​ಲ್‌​ವುಡ್‌ ಬದಲು ವೇಗಿ ಮೈಕಲ್‌ ನೆಸೆರ್‌ ತಂಡ​ವನ್ನು ಕೂಡಿ​ಕೊಂಡಿ​ದ್ದಾರೆ ಎಂದು ಕ್ರಿಕೆಟ್‌ ಆಸ್ಪ್ರೇ​ಲಿಯಾ ಮಾಹಿತಿ ನೀಡಿದೆ.

ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌ ಫೈನಲ್‌ನ ಮೊದಳ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಭಾರತ, ನ್ಯೂಜಿಲೆಂಡ್‌ ತಂಡಕ್ಕೆ ಶರಣಾಗಿತ್ತು. ಇದೀಗ ಸತತ ಎರಡನೇ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೊಂದಿದೆ.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್‌.ಭರತ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌, ಮುಹಮದ್‌ ಶಮಿ, ಮುಹಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜಯದೇವ್‌ ಉನಾದ್ಕತ್‌, ಇಶಾನ್‌ ಕಿಶನ್‌.

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್‌, ಮುಕೇಶ್‌ ಕುಮಾರ್‌, ಸೂರ್ಯಕುಮಾರ್‌ ಯಾದವ್‌.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್‌(ನಾಯಕ), ಡೇವಿಡ್ ವಾರ್ನರ್‌, ಉಸ್ಮಾನ್ ಖವಾಜ, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್‌, ಮಾರ್ನಸ್ ಲಬುಶೇನ್‌, ಸ್ಟೀವ್ ಸ್ಮಿತ್‌, ಟ್ರಾವಿಸ್ ಹೆಡ್‌, ಕ್ಯಾಮರೋನ್ ಗ್ರೀನ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರ್ರಿ, ಜೋಶ್ ಇಂಗ್ಲಿಸ್‌, ಮಿಚೆಲ್ ಸ್ಟಾರ್ಕ್, ಸ್ಕಾಟ್‌ ಬೋಲೆಂಡ್‌, ನೇಥನ್ ಲಯನ್‌, ಟೋಡ್ ಮರ್ಫಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ವಾಲಿಫೈಯರ್ 2: ಸಂಘಟಿತ ಬೌಲಿಂಗ್ ಮೂಲಕ ಹೈದರಾಬಾದ್‌ ಅನ್ನು ಕಟ್ಟಿ ಹಾಕಿದ ರಾಜಸ್ಥಾನ್ ರಾಯಲ್ಸ್‌

ಐಪಿಎಲ್‌ 2024ರಲ್ಲಿ ಮೇ 24ರ ಶುಕ್ರವಾರ ಎರಡನೇ ಕ್ವಾಲಿಫೈಯರ್‌ ಪಂದ್ಯ ನಡೆಯುತ್ತಿದೆ....

2025ರ ಐಪಿಎಲ್‌ನಲ್ಲೂ ಎಂಎಸ್ ಧೋನಿ ಆಡುವುದು ಅವರಿಗೆ ಬಿಟ್ಟ ವಿಚಾರ: ಚೆನ್ನೈ ಸಿಇಓ ಕಾಸಿ ವಿಶ್ವನಾಥನ್

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ...

ಭಾರತ – ಪಾಕ್ ಟಿ20 ವಿಶ್ವಕಪ್ ಪಂದ್ಯದ ಪ್ರತಿ ಟಿಕೆಟ್ ಬೆಲೆ ಬರೋಬ್ಬರಿ 17 ಲಕ್ಷ ರೂ!

ಐಪಿಎಲ್ ಮುಗಿಯುತ್ತಾ ಬಂತು, ಇನ್ನೇನಿದ್ದರೂ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಹುಚ್ಚು...