ಟಿ20 ವಿಶ್ವಕಪ್ | ನೇಪಾಳಕ್ಕೆ ಆಘಾತ; 1 ರನ್‌ನಿಂದ ಸೌತ್ ಆಫ್ರಿಕಾ ವಿರುದ್ಧ ವಿರೋಚಿತ ಸೋಲು

Date:

ಏಡೆನ್ ಮಾರ್ಕರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು 115 ರನ್‌ಗಳಿಗೆ ಕಟ್ಟಿ ಹಾಕಿದ್ದ ನೇಪಾಳ, ಚೇಸಿಂಗ್‌ ಮಾಡುವಾಗ ಎಡವಿದೆ.

ಕೊನೆಯ ಬಾಲ್‌ನಲ್ಲಿ ಗೆಲ್ಲಲು ಎರಡು ರನ್‌ಗಳ ಅವಶ್ಯಕತೆ ಇದ್ದಾಗ ಅನಿರೀಕ್ಷತವಾಗಿ ರನೌಟ್ ಆದ ಪರಿಣಾಮ, ಹರಿಣಗಳ ಪಡೆ ಎದುರು ಕೇವಲ ಒಂದು ರನ್‌ನಿಂದ ಪಂದ್ಯವನ್ನು ನೇಪಾಳ ಕಳೆದುಕೊಂಡಿತು. ಅನಿರೀಕ್ಷಿತ ಸೋಲಿನಿಂದ ನೇಪಾಳ ತಂಡ ಹಾಗೂ ತಂಡದ ಅಭಿಮಾನಿಗಳು ಆಘಾತಕ್ಕೊಳಗಾದರು. ಒಂದು ವೇಳೆ ರನ್ ಪೂರ್ತಿಯಾಗಿದ್ದಿದ್ದರೆ ಸೂಪರ್ ಓವರ್ ಆಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟ ನೇಪಾಳದ ಕಡೆಗೆ ವಾಲಲಿಲ್ಲ.

ಈಗಾಗಲೇ ಸೂಪರ್‌-8ರ ಘಟಕ್ಕೆ ಆರ್ಹತೆ ಪಡೆದಿದ್ದ ದಕ್ಷಿಣ ಆಫ್ರಿಕಾ, ನೇಪಾಳ ವಿರುದ್ಧ ರೋಚಕವಾಗಿ ಗೆಲ್ಲುವ ಮೂಲಕ ಗುಂಪು ಹಂತದಲ್ಲಿ ಆಡಿದ 4 ಪಂದ್ಯಗಳನ್ನು ಗೆದ್ದಿರುವ ಸಾಧಿನೆ ಮಾಡಿದೆ. ನೇಪಾಳ ತಂಡ ಟೂರ್ನಿಯಿಂದ ಔಟ್‌ ಆದರೆ, ಬಾಂಗ್ಲಾದೇಶ ಸೂಪರ್‌-8 ಸುತ್ತಿಗೆ ಆರ್ಹತೆ ಪಡೆಯುವುದು ಬಹುತೇಕ ಖಚಿತವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ರನೌಟ್ ಆದ ಕ್ಷಣ

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಅವರು ದಕ್ಷಿಣ ಆಫ್ರಿಕಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಜೋಡಿ ಉತ್ತಮ ಅಡಿಪಾಯ ಹಾಕಲಿಲ್ಲ. ಕ್ವಿಂಟನ್ ಡಿ ಕಾಕ್ 10 ರನ್‌ಗೆ ಔಟ್‌ ಆದರೆ, ಬಳಿಕ ಬಂದ ನಾಯಕ ಐಡೆನ್ ಮಾರ್ಕ್ರಾಮ್ (15), ಹೆನ್ರಿಚ್ ಕ್ಲಾಸೆನ್ (3) ಮತ್ತು ಡೇವಿಡ್ ಮಿಲ್ಲರ್ (7) ನೇಪಾಳ ಬೌಲರ್‌ಗಳ ಎದುರು ತಂಡದ ಪರ ಅತಿಹೆಚ್ಚು ರನ್‌ ಗಳಿಸದೆ ವಿಕೆಟ್‌ ಕಳೆದುಕೊಂಡರು. ಕುಸಿದ ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ ಜವಾಬ್ದಾರಿಯುತ ಇನ್ನಿಂಗ್ಸ್‌ ಆಡಿದರು.

ಹೆಂಡ್ರಿಕ್ಸ್‌ ಎದುರಿಸಿದ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 43 ರನ್‌ಗಳನ್ನು ಹೊಡೆದು ವಿಕೆಟ್‌ ಕಳೆದುಕೊಂಡರು. ನಂತರ ಮಾರ್ಕೊ ಜಾನ್ಸೆನ್ (1) ಮತ್ತು ಕಗಿಸೊ ರಬಾಡಾ ಶೂನ್ಯಕ್ಕೆ ಔಟ್‌ ಆದರು ಇಂತಹ ಪರಿಸ್ಥಿತಿಯಲ್ಲಿ ಯುವ ಬ್ಯಾಟರ್‌ ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ ಅಜೇಯ 27 ರನ್‌ ಬಾರಿಸಿದರು. ಹೀಗಾಗಿ ದಕ್ಷಿಣ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 115 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.

ನೇಪಾಳ ಪರ ಕುಶಾಲ್ ಭುರ್ಟೆಲ್ 4 ವಿಕೆಟ್‌ ಉರುಳಿಸಿ ಮಿಂಚಿದರೆ, ದೀಪೇಂದ್ರ ಸಿಂಗ್ 3 ವಿಕೆಟ್‌ ಪಡೆದು ಸಂಭ್ರಮಿಸಿದರು.

ಹರಿಣಗಳ ಪಡೆ ನೀಡಿದ 116 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ಪರ ಆಸಿಫ್ ಶೇಖ್ ಮತ್ತು ಅನಿಲ್ ಸಾಹ್ ಉತ್ತಮ ಇನ್ನಿಂಗ್ಸ್‌ ಆಡಿದರು. ಆದರೆ ದಕ್ಷಿಣ ಆಫ್ರಿಕಾದ ತಬ್ರೈಝ್ ಶಮ್ಸಿ ಸ್ಪಿನ್‌ ಮೋಡಿಗೆ ಸಿಲುಕಿದ ನೇಪಾಳ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ವಿಕೆಟ್‌ ಕಳೆದುಕೊಂಡರು.

ಕುಶಾಲ್ ಭುರ್ಟೆಲ್ 13 ರನ್ ಗಳಿಸಿದರೆ ಹಾಗೂ ನಾಯಕ ರೋಹಿತ್ ಪೌಡೆಲ್ ಶೂನ್ಯಕ್ಕೆ ಔಟ್‌ ಅದರು. ಬಳಿಕ ಒಂದಾದ ಆಸಿಫ್ ಶೇಖ್ ಮತ್ತು ಅನಿಲ್ ಸಾಹ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು.

ಆಸಿಫ್ ಶೇಖ್ 49 ಎಸೆತಗಲ್ಲಿ 4 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 41 ರನ್‌ಗಳಿಸಿ ಔಟ್‌ ಆದರೆ, ‌ಅನಿಲ್ ಸಾಹ್ 24 ಎಸೆತಗಳನ್ನು 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 27 ರನ್ ‌ಹೊಡೆದು ವಿಕೆಟ್‌ ಕಳೆದುಕೊಂಡರು. ಬಳಿಕ ಕ್ರೀಸ್‌ಗೆ ಬಂದ ಯಾವುದೇ ಬ್ಯಾಟರ್‌ಗಳು ನೇಪಾಳ ತಂಡದ ಗೆಲುವಿಗೆ ಶ್ರಮಿಸಲಿಲ್ಲ.

ಕುಶಾಲ್ ಮಲ್ಲಾ(1), ದೀಪೇಂದ್ರ ಸಿಂಗ್ ಐರಿ (6) ಔಟ್‌ ಆದರೆ, ಗುಲ್ಸನ್ ಝಾ (6) ಕೊನೆಯಲ್ಲಿ ತಂಡದ ಗೆಲುವಿಗೆ 1 ಎಸೆತದಲ್ಲಿ ಎರಡು ರನ್‌ ಬೇಕಿದಾಗ ದುರದೃಷ್ಟಕರ ರನೌಟ್‌ ಆದರು. ಈ ಮೂಲಕ ಹರಿಣಗಳ ಪಡೆ 1 ರನ್‌ನಿಂದ ರೋಚಕ ಪಂದ್ಯವನ್ನು ಗೆದ್ದು ಬೀಗಿತು.

ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಐರ್ಲ್ಯಾಂಡ್-ಯುಎಸ್‌ಎ ಪಂದ್ಯ ಮಳೆಗಾಹುತಿ; ಟೂರ್ನಿಯಿಂದಲೇ ಔಟಾದ ಪಾಕಿಸ್ತಾನ!

ಸೌತ್ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ತಬ್ರೈಝ್‌ ಶಮ್ಸಿ 19 ರನ್‌ ನೀಡಿ 4 ಕಬಳಿಸಿದರೆ, ಆನ್ರಿಚ್ ನಾರ್ಟ್ಜೆ ಮತ್ತು ಐಡೆನ್ ಮಾರ್ಕ್ರಾಮ್ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಂಬಲ್ಡನ್ ಛಾಂಪಿಯನ್ ಕಾರ್ಲೋಸ್ ಅಲ್ಕರಾಜ್ – ವಿಶ್ವ ಟೆನಿಸ್ ಯುಗದ ಅದ್ಭುತ ಪ್ರತಿಭೆ

ವಿಶ್ವ ಟೆನಿಸ್ ಯುಗದಲ್ಲಿ ಮತ್ತೊಂದು ಹೊಸದೊಂದು ಪ್ರತಿಭೆ ಪ್ರಜ್ವಲಿಸುತ್ತಿದೆ. 21 ವರ್ಷದ...

ಸ್ಪೇನ್‌ಗೆ ನಾಲ್ಕನೇ ಬಾರಿ ಯೂರೋ ಕಪ್; ಸತತ 2ನೇ ಬಾರಿ ಸೋತ ಇಂಗ್ಲೆಂಡ್

ಯುರೋಪ್‌ನ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿ ಯೂರೋ ಕಪ್‌ ಪ್ರಶಸ್ತಿಯನ್ನು ಸ್ಪೇನ್‌...

ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ...

ಸಾಂಘಿಕ ಹೋರಾಟದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: ಟೀಂ ಇಂಡಿಯಾಗೆ 4-1 ಟಿ20 ಸರಣಿ

ಭಾರತ ತಂಡ ಜಿಂಬಾಬ್ವೆ ವಿರುದ್ಧದ ಐದನೇ ಪಂದ್ಯದಲ್ಲಿ 42 ರನ್‌ಗಳ ಅಂತರದಲ್ಲಿ...