ಅಂಧ ವನಿತೆಯರ ಟಿ20 ವಿಶ್ವಕಪ್: ಪಾಕ್ ಆಟಗಾರ್ತಿಯರ ಕೈಕುಲುಕಿ ಕ್ರೀಡಾ ಸ್ಫೂರ್ತಿ ಮೆರೆದ ಟೀಂ ಇಂಡಿಯಾ

Date:

ಅಂಧ ವನಿತೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಎಂಟು ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು. ಎದುರಾಳಿಗಳು ನೀಡಿದ 136 ರನ್‍ಗಳ ಸವಾಲನ್ನು ಕೇವಲ 10 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪುವ ಮೂಲಕ ಟೂರ್ನಿಯಲ್ಲಿ ಸತತ ಐದನೇ ಜಯ ದಾಖಲಿಸಿತು.

- Advertisement -

ಅಗ್ರ ಕ್ರಮಾಂಕದ ಆಟಗಾರರ ಕಳಪೆ ಪ್ರದರ್ಶನದಿಂದ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ 23 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆದರೆ ಮೆಹ್ರೀನ್ ಅಲಿ (66) ಮತ್ತು ಬುಶ್ರಾ ಅಶ್ರಫ್ (44) ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಭಾರತ ಈ ಪಂದ್ಯದಲ್ಲಿ ಏಳು ರನೌಟ್ ಮಾಡುವ ಮೂಲಕ ಗಮನ ಸೆಳೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಎಐ ಕರಾಳ ಮುಖ: ಮುಂದಿನ ಹತ್ತು ವರ್ಷಗಳಲ್ಲಿ ನಾಗರಿಕತೆಗೆ...

ಎಐ ಸೇರಿದಂತೆ ತಂತ್ರಜ್ಞಾನದ ಅಭಿವೃದ್ಧಿ ಮಾನವನ ಕಲ್ಯಾಣಕ್ಕಾಗಿರಬೇಕೇ ಹೊರತು, ಮಾನವ ಜನಾಂಗದ ವಿನಾಶಕ್ಕಾಗಿಯಲ್ಲ. ಅಷ್ಟಕ್ಕೂ ಮುಂದಿನ ಒಂದು ದಶಕವು ಮಾನವ ನಾಗರಿಕತೆಯ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಅವಧಿಯಾಗಲಿದೆ ಎಂಬುದು ಖಚಿತ. ಸಾಕಷ್ಟು...

ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಭಾರತದ ಪರ ನಾಯಕಿ ದೀಪಿಕಾ ಟಿಸಿ (45) ಮತ್ತು ಅನೇಖಾ ದೇವಿ (ಅಜೇಯ 64) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅನೇಖಾ ಅವರ ಭರ್ಜರಿ ಪ್ರದರ್ಶನದಿಂದ ಭಾರತ ಸೆಮೀಸ್ ಅರ್ಹತೆ ಸಂಪಾದಿಸಿತು.

ಇದನ್ನು ಓದಿದ್ದೀರಾ? ಐಪಿಎಲ್ 2026 | ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆ, ರವೀಂದ್ರ ಜಡೇಜಾ ರಾಜಸ್ಥಾನಕ್ಕೆ ವಾಪಸ್

ಉಭಯ ದೇಶಗಳ ನಡುವಿನ ಹಳಸಿದ ಸಂಬಂಧದ ನಡುವೆ ಗಮನ ಸೆಳೆದ ಅಂಶವೆಂದರೆ, ಉಭಯ ತಂಡಗಳ ಆಟಗಾರ್ತಿಯರು ಪರಸ್ಪರ ಹಸ್ತಲಾಘವ ನೀಡಿ ಕ್ರೀಡಾಸ್ಫೂರ್ತಿ ಮೆರೆದದ್ದು. ಟಾಸ್ ಸಂದರ್ಭದಲ್ಲಿ ಹ್ಯಾಂಡ್‍ಶೇಕ್ ಇಲ್ಲದಿದ್ದರೂ, ಪಂದ್ಯದ ಬಳಿಕ ಭಾರತ ತಂಡದ ಆಟಗಾರ್ತಿಯರು ಹಸ್ತಲಾಘವ ನೀಡಿದರು.

ಇತ್ತೀಚೆಗೆ ನಡೆದ ಏಷ್ಯಾ ಕಪ್, ವನಿತಾ ವಿಶ್ವಕಪ್ ಹಾಗೂ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಪಂದ್ಯಗಳಲ್ಲಿ ಉಭಯ ತಂಡಗಳ ಆಟಗಾರರು ಹಸ್ತಲಾಘವ ನೀಡಿರಲಿಲ್ಲ ಎನ್ನುವುದು ಗಮನಾರ್ಹ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಲೀಪ್ ಟ್ರೋಫಿ ಫೈನಲ್: 13 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿದ ಪೂರ್ವ ವಲಯ

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ 'ದುಲೀಪ್ ಟ್ರೋಫಿ 2026'ರ ಫೈನಲ್...

ಮಹಿಳಾ ಟಿ20 ಇತಿಹಾಸದಲ್ಲೇ ಮೊದಲು: ಏಷ್ಯಾಕಪ್‌ನಲ್ಲಿ ಲಂಕಾ, ಪಾಕ್ ಸ್ಪಿನ್ನರ್‌ಗಳ ವಿಕ್ರಮ

ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳು ಸಂಪೂರ್ಣ...

ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೆ ‘ಮ್ಯಾಚ್ ಫಿಕ್ಸಿಂಗ್’ ಕಳಂಕ: 7 ಮಂದಿ ತಂಡದಿಂದ ಔಟ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಡುವೆಯೇ ಪಾಕಿಸ್ತಾನ...

3 ಗಂಟೆಗಳ ರೋಚಕ ಹೋರಾಟ: ಯುಎಸ್ ಓಪನ್ ಮೊದಲ ಸುತ್ತಿನಲ್ಲೇ ವಿಲಿಯಮ್ಸ್ ಸಹೋದರಿಯರಿಗೆ ಸೋಲು

ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಸ್ಮಯಕಾರಿ ಪುನರಾಗಮನದ ನಿರೀಕ್ಷೆಯಲ್ಲಿದ್ದ ಲೆಜೆಂಡರಿ ಜೋಡಿ...