ಏಕದಿನದಲ್ಲಿ ವಿಶ್ವದಾಖಲೆಯ 574 ರನ್: ವೈಭವ್ ಸೇರಿ ಮೂವರ ಶತಕ, ಸಿಕ್ಸರ್‌ಗಳ ಸುರಿಮಳೆ

Date:

ಹದಿನಾಲ್ಕು ವರ್ಷದ ಬಾಲ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಸಹ ಆಟಗಾರರ ಶತಕದ ನೆರವಿನಿಂದ ಬಿಹಾರ ತಂಡವು ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬುಧವಾರ ನಡೆದ ವಿಜಯ್‌ ಹಜಾರೆ ಟೂರ್ನಿಯ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ಬೌಲರ್‌ಗಳನ್ನು ಚಂಡಾಡಿದ ಬಿಹಾರ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 574 ರನ್ ಕಲೆಹಾಕುವ ಮೂಲಕ ನೂತನ ವಿಶ್ವದಾಖಲೆ ಬರೆದಿದೆ.

- Advertisement -

​ಈ ಮೂಲಕ 2022ರಲ್ಲಿ ಅರುಣಾಚಲ ಪ್ರದೇಶದ ವಿರುದ್ಧವೇ ತಮಿಳುನಾಡು ತಂಡ ನಿರ್ಮಿಸಿದ್ದ 506 ರನ್‌ಗಳ (506/2) ವಿಶ್ವದಾಖಲೆಯನ್ನು ಬಿಹಾರ ಮುರಿದು ಅಗ್ರಸ್ಥಾನಕ್ಕೇರಿದೆ.
​
ವೈಭವ್ ಸೂರ್ಯವಂಶಿ ಸ್ಫೋಟಕ ಆಟ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಬಿಹಾರದ ಈ ಐತಿಹಾಸಿಕ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು 14 ವರ್ಷದ ಎಡಗೈ ಬ್ಯಾಟರ್ ವೈಭವ್ ಸೂರ್ಯವಂಶಿ. ಪವರ್‌ಪ್ಲೇನಲ್ಲೇ ಅಬ್ಬರಿಸಿದ ವೈಭವ್, ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿದರು. ಇವರ ಈ ಸ್ಫೋಟಕ ಇನಿಂಗ್ಸ್‌ನಲ್ಲಿ ಬರೋಬ್ಬರಿ 15 ಸಿಕ್ಸರ್‌ಗಳು ಸೇರಿದ್ದವು. ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಭಾರತೀಯ ಆಟಗಾರನೊಬ್ಬ ಬಾರಿಸಿದ ಎರಡನೇ ಅತಿ ವೇಗದ ಶತಕ ಎಂಬ ಖ್ಯಾತಿಗೆ ಪಾತ್ರರಾದರು. ವೈಭವ್ ನಿರ್ಗಮಿಸುವ ಹೊತ್ತಿಗೆ ಬಿಹಾರ ತಂಡ ಕೇವಲ 27 ಓವರ್‌ಗಳಲ್ಲಿ 260 ರನ್ ಗಡಿ ದಾಟಿತ್ತು.

​ಎಬಿ ಡಿವಿಲಿಯರ್ಸ್ ದಾಖಲೆ ಪತನ

ಈ ಇನಿಂಗ್ಸ್ ಮೂಲಕ ರಾಜಸ್ಥಾನ್ ರಾಯಲ್ಸ್ ಆಟಗಾರ ವೈಭವ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರಲ್ಲದೆ, ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ‘ಅತ್ಯಂತ ವೇಗದ 150 ರನ್’ ದಾಖಲೆಯನ್ನೂ ಮುರಿದರು.

ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಗಿಲ್‌ಗೆ ಕೊಕ್, ಇಶಾನ್ ಕಿಶನ್‌ಗೆ ಮಣೆ; ಅಕ್ಷರ್ ಪಟೇಲ್ ಉಪನಾಯಕ
​
ಶತಕಗಳ ಸುರಿಮಳೆ: ಸಕಿಬುಲ್, ಆಯುಷ್ ಸಾಥ್

ವೈಭವ್ ಅವರ ಅಬ್ಬರಕ್ಕೆ ಪೂರಕವಾಗಿ ಪಿಯೂಷ್ ಕುಮಾರ್ ಸಿಂಗ್ (77), ವಿಕೆಟ್ ಕೀಪರ್ ಆಯುಷ್ ಲೋಹರುಕಾ (116) ಮತ್ತು ನಾಯಕ ಸಕಿಬುಲ್ ಗನಿ (128) ತಂಡದ ಮೊತ್ತವನ್ನು ಹಿಗ್ಗಿಸಿದರು.

ಆಯುಷ್ ಲೋಹರುಕಾ 56 ಎಸೆತಗಳಲ್ಲಿ 116 ರನ್ ಸಿಡಿಸಿದರೆ, ನಂತರ ಬಂದ ನಾಯಕ ಸಕಿಬುಲ್ ಗನಿ ಮತ್ತೊಂದು ದಾಖಲೆ ಬರೆದರು. ಕೇವಲ 32 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಸಕಿಬುಲ್, ಅನ್ಮೋಲ್‌ಪ್ರೀತ್ ಸಿಂಗ್ (35 ಎಸೆತ) ಅವರ ದಾಖಲೆ ಮುರಿದು, ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿಪಿನ್ ಸೌರಭ್ ಜೊತೆಗೂಡಿದ ಸಕಿಬುಲ್ ಗನಿ, 46ನೇ ಓವರ್‌ನಲ್ಲೇ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು.

ಈ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ ದಾಖಲಾಯಿತು. ಇದು ಏಕದಿನ ಪಂದ್ಯದಲ್ಲಿ ಅತೀ ಹೆಚ್ಚಿನ ಸಿಕ್ಸರ್‌ಗಳಾಗಿದೆ. ಹಾಗೆಯೇ 49 ಬೌಂಡರಿಗಳು ದಾಖಲಾದವು.

​ಲಿಸ್ಟ್-ಎ ಕ್ರಿಕೆಟ್‌ನ ಟಾಪ್ 10 ತಂಡದ ಮೊತ್ತಗಳು:
​574/6 – ಬಿಹಾರ vs ಅರುಣಾಚಲ ಪ್ರದೇಶ (ರಾಂಚಿ, 2025)
​506/2 – ತಮಿಳುನಾಡು vs ಅರುಣಾಚಲ ಪ್ರದೇಶ (ಬೆಂಗಳೂರು, 2022)
​498/4 – ಇಂಗ್ಲೆಂಡ್ vs ನೆದರ್ಲ್ಯಾಂಡ್ಸ್ (ಆಮ್‌ಸ್ಟಲ್ವೀನ್, 2022) – ಏಕದಿನ ಮಾದರಿಯ ವಿಶ್ವದಾಖಲೆ
​481/6 – ಇಂಗ್ಲೆಂಡ್ vs ಆಸ್ಟ್ರೇಲಿಯಾ (ನಾಟಿಂಗ್ಹ್ಯಾಮ್, 2018)
​458/4 – ಇಂಡಿಯಾ ‘ಎ’ vs ಲೀಸೆಸ್ಟರ್‌ಶೈರ್ (ಲೀಸೆಸ್ಟರ್, 2018)
​453/3 – ಟೈಟಾನ್ಸ್ vs ನಾರ್ತ್ ವೆಸ್ಟ್ (ಪೋಚೆಫ್‌ಸ್ಟ್ರೂಮ್, 2022)
​445/8 – ನಾಟಿಂಗ್ಹ್ಯಾಮ್‌ಶೈರ್ vs ನಾರ್ಥಾಂಪ್ಟನ್‌ಶೈರ್ (ನಾಟಿಂಗ್ಹ್ಯಾಮ್, 2016)
​444/3 – ಇಂಗ್ಲೆಂಡ್ vs ಪಾಕಿಸ್ತಾನ (ನಾಟಿಂಗ್ಹ್ಯಾಮ್, 2016)
​443/9 – ಶ್ರೀಲಂಕಾ vs ನೆದರ್ಲ್ಯಾಂಡ್ಸ್ (ಆಮ್‌ಸ್ಟಲ್ವೀನ್, 2006)
​439/2 – ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಜೋಹಾನ್ಸ್‌ಬರ್ಗ್, 2015)

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...

ಏಷ್ಯನ್ ಗೇಮ್ಸ್ 2026: ಶೂಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ, 3ಕ್ಕೇರಿದ ಪದಕಗಳ ಸಂಖ್ಯೆ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಪದಕ...

ಅಫ್ಘಾನ್ ವಿರುದ್ಧ ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್: ಶತಕದೊಂದಿಗೆ ಸೂರ್ಯವಂಶಿ ದಾಖಲೆ ಹಿಂದಿಕ್ಕಿದ ಅಭಿಷೇಕ್

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೂರನೇ ಹಾಗೂ ಅಂತಿಮ...