ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?

Date:

2007ರಲ್ಲಿ ರಾಹುಲ್ ದ್ರಾವಿಡ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವ ಹೊತ್ತಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಸಿದ್ದರಾಗಿದ್ದರು. ಮಹೇಂದ್ರ ಸಿಂಗ್ ಧೋನಿ ಕೆಳಗಿಳಿಯುವ ಹೊತ್ತಿಗೆ ವಿರಾಟ್ ಕೊಹ್ಲಿ, ಅವರು ಸ್ಥಾನ ತೆರವು ಮಾಡುವ ಹೊತ್ತಿಗೆ ರೋಹಿತ್ ಶರ್ಮಾ ತಯಾರಾಗಿದ್ದರು. ಆದರೆ, ಸದ್ಯ ರೋಹಿತ್ ಸ್ಥಾನಕ್ಕೆ ಇನ್ನೂ ಯಾರೂ ಸಜ್ಜುಗೊಂಡಿಲ್ಲ.

ವಿಶ್ವಕಪ್‌ ಮುಗಿದಿದೆ. ಆದರೆ, ಅದರ ಸುತ್ತಲಿನ ಚರ್ಚೆ, ವಿಶ್ಲೇಷಣೆಗಳು ಇನ್ನೂ ಮುಗಿದಿಲ್ಲ. ಅದರ ಜೊತೆಗೆ ಹಲವು ಸುದ್ದಿಗಳೂ ಹರಿದಾಡುತ್ತಿವೆ. ಅವುಗಳಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವರೇ ಎಂಬುದೂ ಒಂದು.

ಹಿಟ್ ಮ್ಯಾನ್ ಎಂದೇ ಪ್ರಸಿದ್ಧರಾಗಿರುವವರು ರೋಹಿತ್ ಶರ್ಮಾ. ಯಾವ ವಿಶೇಷ ಪ್ರಯತ್ನವೂ ಇಲ್ಲದೇ ಸಲೀಸಾಗಿ ಸಿಕ್ಸ್ ಹೊಡೆಯಬಲ್ಲ ತಮ್ಮ ಚಾತುರ್ಯದಿಂದ ಭಾರತದ ಕ್ರಿಕೆಟ್ ಪ್ರಿಯರ ಡಾರ್ಲಿಂಗ್ ಆದವರು ಶರ್ಮಾ. ಮೂರು ಬಾರಿ ದ್ವಿಶತಕ ಹೊಡೆದಿರುವ ರೋಹಿತ ಶರ್ಮಾ ಭಾರತದ ರನ್ ಮಷೀನ್ ಎಂದೇ ಖ್ಯಾತರು.
ಸಚಿನ್ ತೆಂಡೂಲ್ಕರ್ ನಿವೃತ್ತರಾದ ನಂತರ ಭಾರತದ ಆರಂಭಿಕ ಬ್ಯಾಟಿಂಗ್‌ಗೆ ಬಲ ತುಂಬಿದ್ದೇ ರೋಹಿತ್ ಶರ್ಮಾ. ಒಬ್ಬ ಕ್ಯಾಪ್ಟನ್ ಆಗಿಯೂ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಅವರದ್ದು. ಎರಡು ಪಂದ್ಯಗಳಲ್ಲಿ ಒಂದಂಕಿಗೆ ಔಟಾಗಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ರೋಹಿತ್ ತಂಡಕ್ಕೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಒದಗಿಸಿದ್ದರು; ಫೈನಲ್‌ನಲ್ಲೂ ಕೂಡ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರಿಂದ ಭಾರತ ಸೋಲುವಂತಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅದೇನೇ ಇದ್ದರೂ ಒಬ್ಬ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ, ವಿಶ್ವಕಪ್‌ನ ಉಳಿದ ತಂಡಗಳ ಕ್ಯಾಪ್ಟನ್‌ಗಳಿಗಿಂತಲೂ ಹೆಚ್ಚು ಅಂಕ ಪಡೆದಿದ್ದಾರೆ. ಪ್ರಾಯಶಃ ಅದೇ ಕಾರಣಕ್ಕೆ ಐಸಿಸಿಯ ಕನಸಿನ ತಂಡಕ್ಕೆ ರೋಹಿತ್ ಅವರನ್ನೆ ಕ್ಯಾಪ್ಟನ್ ಆಗಿ ಆರಿಸಲಾಗಿದೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಂಸನ್, ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮುಂತಾದ ಕ್ಯಾಪ್ಟನ್‌ಗಳ ನಡುವೆ ರೋಹಿತ್‌ಗೆ ಈ ಗೌರವ ದಕ್ಕಿರುವುದು ಅವರ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ.

ವಿಶ್ವಕಪ್ ಆಡಿದ ಟೀಮ್ ಇಂಡಿಯಾದ ಬಹುತೇಕರು ವಿಶ್ರಾಂತಿ ಪಡೆಯುತ್ತಿರುವುದರಿಂದ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಆದರೆ, ಸದ್ಯ ರೋಹಿತ್ ಶರ್ಮಾ ಅವರನ್ನು ಬಿಟ್ಟು ಬೇರೆ ಕ್ಯಾಪ್ಟನ್‌ನೊಂದಿಗೆ ಭಾರತ ತಂಡವನ್ನು ಊಹಿಸಿಕೊಳ್ಳುವುದೇ ಕಷ್ಟವಾಗಿದೆ.

2007ರಲ್ಲಿ ರಾಹುಲ್ ದ್ರಾವಿಡ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವ ಹೊತ್ತಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಸಿದ್ದರಾಗಿದ್ದರು. ಮಹೇಂದ್ರ ಸಿಂಗ್ ಧೋನಿ ಕೆಳಗಿಳಿಯುವ ಹೊತ್ತಿಗೆ ವಿರಾಟ್ ಕೊಹ್ಲಿ, ಅವರು ಸ್ಥಾನ ತೆರವು ಮಾಡುವ ಹೊತ್ತಿಗೆ ರೋಹಿತ್ ಶರ್ಮಾ ತಯಾರಾಗಿದ್ದರು. ಆದರೆ, ಸದ್ಯ ರೋಹಿತ್ ಸ್ಥಾನಕ್ಕೆ ಇನ್ನೂ ಯಾರೂ ಸಜ್ಜುಗೊಂಡಿಲ್ಲ.

ವಿಶ್ವಕಪ್ ರೋಹಿತ್ ಟೀಮ್ ಇಂಡಿಯಾದ ನಾಯಕನಾಗಿದ್ದರೆ, ಉಪನಾಯಕರಾಗಿದ್ದವರು ಹಾರ್ದಿಕ್ ಪಾಂಡ್ಯ. ಈಗೇನಾದರೂ ರೋಹಿತ್ ನಾಯಕತ್ವ ತ್ಯಜಿಸಿದರೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕನ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವಿದೆಯೇ ಎನ್ನುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಫಿಟ್‌ನೆಸ್ ಸಮಸ್ಯೆ ಕೂಡ ಆಗಾಗ ಎದುರಾಗುತ್ತಿರುತ್ತದೆ. ಇಂಥವರು ಕ್ಯಾಪ್ಟನ್ ಆಗಿ ಹೇಗೆ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗುವುದಿಲ್ಲ.

ಇನ್ನು ಕೆ ಎಲ್ ರಾಹುಲ್ ಕೂಡ ಹಲವು ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದವರು. ಕೀಪರ್ ಆಗಿ ಹಾಗೂ ಬ್ಯಾಟರ್ ಆಗಿ ಅವರು ಇತ್ತೀಚೆಗೆ ತಂಡಕ್ಕೆ ಹೆಚ್ಚು ಉಪಯುಕ್ತರಾಗಿದ್ದಾರೆ, ನಿಜ. ಆದರೆ, ಅವರಲ್ಲಿ ನಾಯಕನಿಗೆ ಬೇಕಾದ ಪ್ರಬುದ್ಧತೆ ಇಲ್ಲ ಎನ್ನುವುದು ಹಲವರ ಅಭಿಪ್ರಾಯ. ಹಾಗೆಯೇ ಜಸ್‌ಪ್ರೀತ್ ಬೂಮ್ರಾ ಕೂಡ ಹಲವು ಬಾರಿ ಕ್ಯಾಪ್ಟನ್ ಜವಾಬ್ದಾರಿ ನಿಭಾಯಿಸಿದ್ದರೂ ತಂಡವನ್ನು ಕಠಿಣ ಸಂದರ್ಭಗಳಲ್ಲಿ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆಯೇ ಎನ್ನುವ ಬಗ್ಗೆ ಸಂಶಯವಿದೆ. ರೋಹಿತ್ ಮತ್ತು ಕೊಹ್ಲಿ ಬಿಟ್ಟರೆ ಉಳಿದ ಆಟಗಾರರು ಅನುಭವದಲ್ಲೂ, ವಯಸ್ಸಿನಲ್ಲೂ ಕಿರಿಯರು. ನಾಯಕತ್ವ ಜವಾಬ್ದಾರಿ ಹೊರುವಷ್ಟು ಸಾಮರ್ಥ್ಯ ಅವರಿಗಿಲ್ಲ.
ರೋಹಿತ್ ಡ್ರೆಸ್ಸಿಂಗ್ ರೂಮ್‌ನಲ್ಲಿ ತನ್ನ ತಂಡದ ಸದಸ್ಯರನ್ನು ಎಷ್ಟು ಚೆನ್ನಾಗಿ ಚಿಯರ್ ಅಪ್ ಮಾಡುತ್ತಿದ್ದರು ಎಂದು ಹಲವು ಬಾರಿ ಕೋಚ್ ರಾಹುಲ್ ದ್ರಾವಿಡ್ ಹಂಚಿಕೊಂಡಿದ್ದಾರೆ. ಮೇಲಾಗಿ ಅನುಭವಿ. ವೈಯಕ್ತಿಕವಾಗಿಯೂ ಚೆನ್ನಾಗಿ ಆಡುತ್ತಾರೆ. ಆಟಗಾರನಾಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ: ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಭಾರತ ತಂಡ ಪ್ರಕಟ: ಸಂಪೂರ್ಣ ಹೊಸ ತಂಡ , ಕೊನೆಯ ಪಂದ್ಯ ಬೆಂಗಳೂರಿನಲ್ಲಿ

ಮುಂದಿನ ಎರಡು ವರ್ಷಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವು ಟೂರ್ನಮೆಂಟ್‌ಗಳಿವೆ. ಹಾಗಾಗಿ ರೋಹಿತ್ ಇನ್ನು ಕನಿಷ್ಠ ಎರಡು ವರ್ಷವಾದರೂ ತಂಡದ ಕ್ಯಾಪ್ಟನ್ ಆಗಿರಲಿ ಎನ್ನುವುದು ತಂಡದ ಹಿರಿಯರ ಆಶಯ. ಆದರೆ, ವಿಶ್ವಕಪ್ ಸೋಲಿನಿಂದ ಮಾನಸಿಕವಾಗಿ ಜರ್ಜರಿತರಾಗಿರುವ ರೋಹಿತ್, ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆಯೇ ಎನ್ನುವುದು ಸದ್ಯದ ಪ್ರಶ್ನೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಪೈರ್ ಜೊತೆ ವಾಗ್ವಾದ: ಕೊಹ್ಲಿಗೆ ಶೇ.50 ರಷ್ಟು ದಂಡ

ಐಪಿಎಲ್‌ ಟೂರ್ನಿಯಲ್ಲಿ ಕೆಕೆಆರ್‌ ತಂಡದ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ ವಿರುದ್ಧ ವಾಗ್ವಾದ...

ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ 17ರ ಹರೆಯದ ಭಾರತೀಯ ಡಿ ಗುಕೇಶ್

ಭಾರತದ 17 ವರ್ಷದ ಗ್ರ್ಯಾಂಡ್‌ ಮಾಸ್ಟರ್ ಡಿ ಗುಕೇಶ್ ಟೊರೊಂಟೊದಲ್ಲಿ ನಡೆದ...

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...