ಏಕದಿನ ವಿಶ್ವಕಪ್ 2023 | ಬ್ಯಾಟಿಂಗ್ ವೈಫಲ್ಯ: ಸೌತ್ ಆಫ್ರಿಕಾದೆದುರು ಹೀನಾಯ ಸೋಲುಂಡ ಇಂಗ್ಲೆಂಡ್

Date:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್​ನ 20ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ನೀಡಿದ್ದ 400 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಕೇವಲ 170 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.

- Advertisement -

ಮೊದಲು ಬ್ಯಾಟಿಂಗ್ ನಡೆಸಿದ್ದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ, 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು. ಈ ಬೃಹತ್ ಗುರಿ ಬೆನ್ನಟ್ಟಲು ಹೊರಟ ಹಾಲಿ ಚಾಂಪಿಯನ್ನರು, 22 ಓವರ್‌ಗಳಾಗುವಷ್ಟರಲ್ಲಿ 170 ರನ್‌ಗಳನ್ನಷ್ಟೇ ಕಲೆ ಹಾಕಿತು. ಆ ಮೂಲಕ 229 ರನ್‌ಗಳಿಂದ ಸೋಲು ಕಂಡಿದೆ. ಗಾಯಾಳು ಬೌಲರ್ ಕ್ರಿಸ್ ಟೋಪ್ಲಿ ಬ್ಯಾಟಿಂಗ್ ನಡೆಸಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ದಕ್ಷಿಣ ಆಫ್ರಿಕಾದ ಬಿಗು ಬೌಲಿಂಗ್‌ಗೆ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ತಂಡ, ಆರಂಭದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಈ ಹೀನಾಯ ಸೋಲು ಕಂಡಿದೆ.

ಇಂಗ್ಲೆಂಡ್ ಪರ ಬೈರ್ ಸ್ಟೋ 10, ಹ್ಯಾರಿ ಬ್ರೂಕ್ 17, ಜೋಸ್ ಬಟ್ಲರ್ 15 ರನ್ ಗಳಿಸಿದರು. ಕ್ರೀಸ್‌ಗೆ ಬಂದ ಬಳಿಕ ಬಟ್ಲರ್ ಕೇವಲ 7 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ಅಬ್ಬರಿಸಲು ಯತ್ನಿಸಿದರು. ಆದರೆ ಬಂದಷ್ಟೇ ವೇಗದಲ್ಲಿ ಜೆರಾಲ್ಡ್ ಕೊಯೆಟ್‌ಝೀ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ತೆರಳಿದರು. ಕೇವಲ 100 ರನ್ ಗಳಿಸುವಷ್ಟರಲ್ಲೇ ಇಂಗ್ಲೆಂಡ್‌ 8 ವಿಕೆಟ್ ಕಳೆದುಕೊಂಡಿತ್ತು.

ಕೊನೆಯಲ್ಲಿ ಬೌಲರ್‌ಗಳಾದ ಮಾರ್ಕ್ ವುಡ್ ಹಾಗೂ ಅಟ್ಕಿನ್‌ಸನ್ ಭರ್ಜರಿ ಹೊಡೆತಗಳ ಮೂಲಕ 69 ರನ್‌ಗಳ ಜೊತೆಯಾಟ ನಡೆಸಿದರು. ಮಾರ್ಕ್ ವುಡ್ 17 ಎಸೆತಗಳಲ್ಲಿ 43 ರನ್(5 ಸಿಕ್ಸ್, 2 ಬೌಂಡರಿ) ಗಳಿಸಿ ಅಜೇಯರಾಗುಳಿದರೆ, ಅಟ್ಕಿನ್‌ಸನ್ 21 ಎಸೆತಗಳಲ್ಲಿ 35 ರನ್(7 ಬೌಂಡರಿ) ಬಾರಿಸಿ, ಕೇಶವ್ ಮಹಾರಾಜ್ ಎಸೆತದಲ್ಲಿ ಬೌಲ್ಡ್ ಆದರು.

ಈ ಸೋಲಿನ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಆಡಿರುವ 4 ಪಂದ್ಯದಲ್ಲಿ ಕೇವಲ 1 ಜಯ ಗಳಿಸಿದ್ದು, ಮೂರು ಸೋಲಿನೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಾರಿದೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಜಾನ್‌ಸೆನ್ 2, ಜೆರಾಲ್ಡ್ ಕೊಯೆಟ್‌ಝೀ 3, ಲುಂಗಿ ಎನ್‌ಗಿಡಿ 2, ರಬಾಡ ಹಾಗೂ ಕೇಶವ್ ಮಹಾರಾಜ್  ತಲಾ ಒಂದು ವಿಕೆಟ್ ಗಳಿಸಿದರು.

ಬೃಹತ್ ಮೊತ್ತದ ಪೇರಿಸಿದ್ದ ಸೌತ್ ಆಫ್ರಿಕಾ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಪರವಾಗಿ 67 ಎಸೆತಗಳನ್ನು ಎದುರಿಸಿದ ಹೆನ್ರಿಕ್ ಕ್ಲಾಸೆನ್ 4 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 107 ರನ್ ಬಾರಿಸಿ ಔಟಾದರು.

ಕೊನೆಯಲ್ಲಿ ಮಾರ್ಕೊ ಯಾನ್ಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 42 ಎಸೆತಗಳನ್ನು ಎದುರಿಸಿದ ಯಾನ್ಸೆನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಇಲ್ಲ: ಬಡತನ ಮೆಟ್ಟಿ ನಿಂತು ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ನೀರು ದಂಡಾ

ಮನೆಯಲ್ಲಿ ಸ್ಮಾರ್ಟ್‌ಫೋನ್, ಟಿವಿ ಸೇರಿದಂತೆ ಯಾವೊಂದು ಸೌಕರ್ಯವೂ ಇಲ್ಲ. ಕೈಯಲ್ಲಿ ಬಿಪಿಎಲ್...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ವಿರಾಟ್ ‘ವಿಶ್ವ’ರೂಪ: 15 ಸಾವಿರ ರನ್ ಗಡಿ ದಾಟಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಕೇರಳದ ತಿರುವನಂತಪುರದಲ್ಲಿರುವ ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್...